For faster navigation, this Iframe is preloading the Wikiwand page for ರಂಜನಿ ರಾಘವನ್.

ರಂಜನಿ ರಾಘವನ್

ರಂಜನಿ ರಾಘವನ್
ಜನನ
ರಾಷ್ಟ್ರೀಯತೆಭಾರತೀಯ
ವೃತ್ತಿ(ಗಳು)ನಟಿ, ಲೇಖಕಿ, ನಿರ್ದೇಶಕಿ

ರಂಜನಿ ರಾಘವನ್ ಅವರು ಬೆಂಗಳೂರಿನಲ್ಲಿ ಜನಿಸಿದರು. ಅವರು ರೂಪಾಂತರಾ ಅಮೇಚರ್ ಥಿಯೇಟರ್ ತಂಡದ ನಿರ್ದೇಶನದ ಮತ್ತು ನಿರ್ಮಾಣದ ಅನೇಕ ನಾಟಕಗಳಲ್ಲಿ ನಟಿಸಿದ ಒಬ್ಬ ದೂರದರ್ಶನ ಮತ್ತು ಸಿನಿಮಾ ನಟಿ."ಪುಟ್ಟಗೌರಿ ಮದುವೆ" ಎಂಬ ಹೆಸರಿನ ಕನ್ನಡ ಟವಿ ಧಾರವಾಹಿಯಲ್ಲಿ ಅವರು ಅಭಿನಯಸಿದ್ದಾರೆ.

ಆರಂಭಿಕ ಜೀವನ

[ಬದಲಾಯಿಸಿ]

ರಂಜನಿ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದವರು.ಅವರು ಲಲಿತ ಕಲೆ ಮತ್ತು ಸಾಹಿತ್ಯದಲ್ಲಿ ಬಹಳ ಅಸಕ್ತಿ ಹೊಂದಿದ್ದರು.ಅವರು ಗುರು ವಿದ್ವಾನ್,ಚಿಂತಾಲ್ಪಲ್ಲಿ ಶ್ರೀನಿವಾಸ್ ಮತ್ತು ಆಶಾ ವಿಶ್ವನಾಥರಿಂದ ಎಂಟನೆಯ ವಯಸ್ಸಿನಲ್ಲಿ ಕರ್ನಾಟಿಕ್ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಅವರು ವಿದ್ಯಾರ್ಥಿಯಾಗಿ, ಅನೇಕ ರಾಜ್ಯ ಮತ್ತು ಜಿಲ್ಲೆಯ ಮಟ್ಟದ ಹಾಡುಗಾರಿಕೆ ಮತ್ತು ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡರು ಮತ್ತು ಬಹುಮಾನಗಳನ್ನು ಗೆದ್ದರು.[]

ಶಿಕ್ಷಣ

[ಬದಲಾಯಿಸಿ]

ರಂಜನಿ ಶೇಷಾದ್ರಿಪುರಂ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಹಾಗೂ ಸರ್.ಎಮ್.ವಿ.ಐ.ಟಿ ಕಾಲೇಜಿನಲ್ಲಿ ಎಂ.ಬಿ.ಎ(ಎಚ್.ಆರ್ ಮತ್ತು ಮಾರ್ಕೆಟಿಂಗ್) ಮಾಡಿದ್ದಾರೆ.

ವೃತ್ತಿ ಜೀವನ

[ಬದಲಾಯಿಸಿ]

ರಂಜನಿ ತಮ್ಮ ನಟನಾ ವೃತ್ತಿಯನ್ನು 'ಆಕಾಶದೀಪ'ಎಂಬ ಧಾರವಾಹಿಯ ಮೂಲಕ ಪ್ರಾರಂಭಿಸಿದರು.ನಂತರ 'ಕೆಳದಿ ಚೆನ್ನಮ್ಮ'ದಲ್ಲಿಯೂ ಅಭಿನಯಿಸಿದರು.'ಪುಟ್ಟಗೌರಿ ಮದುವೆ' ಎಂಬ ಧಾರವಾಹಿಯಿಂದ, ಸಣ್ಣ ಪರದೆಯಲ್ಲಿ ತಮ್ಮ ದೊಡ್ಡ ಖ್ಯಾತಿ ಮತ್ತು ಯಶಸ್ಸನ್ನು ಗಳಿಸಿದರು.ಅಲ್ಲಿ ಅವರು ಶೀರ್ಷಿಕೆ ಪಾತ್ರವಾದ ಗೌರಿ ಪಾತ್ರವನ್ನು ನಿರ್ವಹಿಸಿದ್ದಾರೆ.ನಂತರದಲ್ಲಿ ೨೦೧೭ ರಲ್ಲಿ ಜಡೇಶ್ ಕುಮಾರ್ ಹಂಪಿ ನಿರ್ದೇಶಿಸಿದ 'ರಾಜಹಂಸ'ಚಿತ್ರದಲ್ಲಿ ಅಭಿನಯಿಸಿದರು.ಟಕ್ಕರ್ ಅವರ ಎರಡನೆಯ ಚಿತ್ರ.ಇದಲ್ಲದೇ 'ಟ್ರೇನ್ ಟು ಪಾಕಿಸ್ತಾನ್','ಕರ್ವಾಲೋ','ರಾಮಧಾನ್ಯ','ಯಹೂದಿ ಹುಡುಗಿ'ಮುಂತಾದ ನಾಟಕಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.[]. ಇವರು "ಕತೆ ಡಬ್ಬಿ" ಎನ್ನುವ ಕತಾಸಂಕಲನವನ್ನು ಪ್ರಕಟಿಸಿದ್ದಾರೆ. [] []

ಧಾರವಾಹಿಗಳು

[ಬದಲಾಯಿಸಿ]

೨೦೧೩ ರಲ್ಲಿ ಆಕಾಶದೀಪದಲ್ಲಿ ಅಮ್ರತ ಪಾತ್ರದಲ್ಲಿ, ೨೦೧೪ ರಲ್ಲಿ ಕೆಳದಿ ಚೆನ್ನಮ್ಮದಲ್ಲಿ ನಾಗವೇಣಿ ಪಾತ್ರದಲ್ಲಿ ಹಾಗೂ ನಂತರದಲ್ಲಿ ಪುಟ್ಟಗೌರಿ ಮದುವೆಯಲ್ಲಿ ಗೌರಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.[]ರಂಜನಿಯವರು ಪೌರ್ಣಮಿ ತಿಂಕಲ್ ಎಂಬ ಮಲಯಾಳಂ ಧಾರವಾಹಿಯಲ್ಲಿ ಪೌರ್ಣಮಿ ಎಂಬ ಪಾತ್ರದಲ್ಲಿ ಅಭಿನಯಿಸಿದ್ದಾರೆ.[]೨೦೧೯ ರಲ್ಲಿ ಇಷ್ಟದೇವತೆ ಧಾರವಾಹಿಯ ಸಹ ನಿರ್ಮಾಪಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.ಪ್ರಸ್ತುತ ಅವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಕನ್ನಡತಿ'ಧಾರವಾಹಿಯಲ್ಲಿ ಭುವನೇಶ್ವರಿ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಪ್ರಶಸ್ತಿಗಳು ಮತ್ತು ಗೌರವಗಳು

[ಬದಲಾಯಿಸಿ]

೨೦೧೫,೨೦೧೬,೨೦೧೭ ರಲ್ಲಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನ ಮನೆ ಮೆಚ್ಚಿದ ಸೊಸೆ, ೨೦೧೬ ರಲ್ಲಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನ ಜನ ಮೆಚ್ಚಿದ ನಾಯಕಿ, ೨೦೧೭ ರಲ್ಲಿ ಮಿಸ್ ಸೂಪರ್ ಮಾದರಿ ಬೆಂಗಳೂರು, ೨೦೧೭ ರಲ್ಲಿ ರಾಜಹಂಸ ಚಿತ್ರಕ್ಕೆ ಭರವಸೆಯ ನಾಯಕಿಯ ಹೆಗ್ಗಳಿಕೆ ಕೂಡ ಇವರಿಗಿದೆ.[]

ರಂಜನಿ ರಾಘವನ್ ಅವರ ಅಭಿನಯದ ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ಕೀಲಿ
Films that have not yet been released ಇನ್ನೂ ಬಿಡುಗಡೆಯಾಗದ ಚಲನಚಿತ್ರಗಳನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಾಯಕ ನಟ ನಿರ್ದೇಶಕ ಭಾಷೆ ಟಿಪ್ಪಣಿಗಳು ಉಲ್ಲೇಖಗಳು
೨೦೧೭ ರಾಜಹಂಸ ಹಂಸ ಜಡೇಶ್ ಕುಮಾರ್ ಹಂಪಿ ಕನ್ನಡ
೨೦೧೮ ಟಕ್ಕರ್ [] ಪುಣ್ಯ ಮನೋಜ್ ರಘು ಶಾಸ್ತ್ರಿ ಕನ್ನಡ
೨೦೨೧ ಸತ್ಯಂ ಗೀತಾ ಸಂತೋಷ್ ಬಲರಾಜ್ ಅಶೋಕ್ ಕಡಬ [] ಕನ್ನಡ
ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸೌಮ್ಯ ದಿಗಂತ್ ಮಂಚಾಲೆ ವಿನಾಯಕ್ ಕೋಡ್ಸರ ಕನ್ನಡ
ಹಾಕೋಣ ಬಾ ತಾಳ ಕಿಶೋರ್ ಮೂಡಬಿದ್ರೆ ಕನ್ನಡ ವೆಬ್ ಸೀರೀಸ್

ಉಲ್ಲೇಖಗಳು

[ಬದಲಾಯಿಸಿ]
  1. https://timesofindia.indiatimes.com/topic/Ranjani-Raghavan
  2. https://in.bookmyshow.com/person/ranjani-raghavan/1074827
  3. ಫೇಸ್ಬುಕ್ಕಿನ ರಂಜನಿ ರಾಘವನ್ ಅವರ ಅಧಿಕೃತ ಪುಟದಿಂದ ಕತಾಸಂಕಲನದ ಬಗೆಗಿನ ಮಾಹಿತಿ
  4. "ಸಿನಿಬಜ್ ತಾಣದಲ್ಲಿ ಕತಾಡಬ್ಬಿ ಸಂಕಲನದ ಬಗೆಗಿನ ಮಾಹಿತಿ". Archived from the original on 2021-09-28. Retrieved 2021-09-28.
  5. "ಆರ್ಕೈವ್ ನಕಲು". Archived from the original on 2019-01-25. Retrieved 2019-02-05.
  6. https://timesofindia.indiatimes.com/tv/news/malayalam/pournamithinkal-a-new-serial/articleshow/69098319.cms
  7. https://kannada.filmibeat.com/tv/actress-ranjani-raghavan-exits-from-puttagowri-maduve-seria-033817.html
  8. ರಂಜನಿ ರಾಘವನ್ ಅವರ ಟಕ್ಕರ್ ಚಿತ್ರದ ಬಗೆಗಿನ ಮಾಹಿತಿ
  9. ರಂಜನಿ ರಾಘವನ್ ಅವರ ಸತ್ಯಂ ಚಿತ್ರದ ಬಗೆಗಿನ ಮಾಹಿತಿ

ಬಾಹ್ಯ ಕೊಂಡಿಗಳು

[ಬದಲಾಯಿಸಿ]


{{bottomLinkPreText}} {{bottomLinkText}}
ರಂಜನಿ ರಾಘವನ್
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?