For faster navigation, this Iframe is preloading the Wikiwand page for ಹರಿವೆ ಬೀಜ.

ಹರಿವೆ ಬೀಜ

ಬಿಳಿ ಹರಿವೆ ಗಿಡ
ಕೆಂಪು ಹರಿವೆ ಗಿಡ

ಹರಿವೆ ಬೀಜ

[ಬದಲಾಯಿಸಿ]

ಆರೋಗ್ಯವರ್ಧಕಬೀಜ ಎಂದೇ ಹೆಸರುವಾಸಿಯಾದ ಹರಿವೆ ದಂಟು ನೂರಕ್ಕೆ ಎಪ್ಪತ್ತೆರಡು ಅಂಕ ಪಡೆದಿದೆ. ವಿಶ್ವಆರೋಗ್ಯ ಸಂಸ್ಥೆಯವರು ನಿಗಧಿಪಡಿಸಿದ ಆದರ್ಶ ಆಹಾರದ ಪಟ್ಟಿಯಲ್ಲಿ ಈ ಬೀಜಕ್ಕೆ ಉನ್ನತ ಸ್ಥಾನವಿದೆ.[] ಹರಿವೆಯಲ್ಲಿ ಸುಮಾರು ಅರವತ್ತು ಪ್ರಭೇದಗಳಿವೆ ಎಂಬುದೇ ಅಚ್ಚರಿಯ ವಿಷಯ. ಇಲ್ಲಿ ಸೊಪ್ಪಿನ ಪ್ರಭೇದಗಳೇ ಬೇರೆ, ಬೀಜದ ಪ್ರಭೇದಗಳೇ ಬೇರೆ. ಸೊಪ್ಪಿಗಾಗಿ ಬೆಳೆಸುವ ಹರಿವೆಯಲ್ಲಿ ಕಾಳಿನ ಉತ್ಪಾದನೆ ಅತ್ಯಲ್ಪ. ಬಹಳ ಸಣ್ಣ ತೆನೆ. ಅದರೆ ಕೆಲವು ಪ್ರಭೇದಗಳಲ್ಲಿ ಅರ್ಧಮೀಟರ್‍ ಉದ್ದದ ಹಲವಾರು ತೆನೆಗಳಿವೆ. ಒಂದೂಂದು ತೆನೆಯಲ್ಲೂಅರ್ಧಲಕ್ಷಕ್ಕೂ ಹೆಚ್ಚಿನ ಕಾಳು ಬೆಳೆಯುತ್ತದೆ. ಈ ಪ್ರಭೇದ ಬೀಜದ ಕಾಳು ಅಥವಾ ಬೀಜದ ಹರಿವೆ ಎಂಬ ಹೆಸರಿನಿಂದ ನಾಮಕರಣವಾಗಿದ್ದು, ಹರಿವೆ ಬೀಜ ಹೋಗಿ ಬೀಜದ ಹರಿವೆ ಆಗಿದೆ.

ವಿಶ್ವವ್ಯಾಪಿ ಆಸಕ್ತಿ

[ಬದಲಾಯಿಸಿ]

ಸುಮಾರು ಮೂರು ಸಾವಿರ ಸಸ್ಯಗಳನ್ನು ಆಹಾರಕ್ಕಾಗಿ ಬಳಸುವ ಸಾಧ್ಯತೆ ಇದ್ದರೂ, ನಾವು ಬಳಸುವುದು ಬಳಸುವುದು ಬೆರಳೆಣಿಕೆಯಷ್ಟು ಮಾತ್ರ, ಅಂದರೆ ಅಕ್ಕಿ, ಗೋಧಿ, ಜೋಳ, ನೆಲಗಡಲೆ, ಆಲೂಗೆಡ್ಡೆ, ಕಬ್ಬು, ಬಾಳೆ ಇತ್ಯಾದಿ. ಈ ಸೀಮಿತ ಬೆಳೆಗಳ ಅವಲಂಬನೆಯ ಅಪಾಯವನ್ನರಿತ ಕೃಷಿ ವಿಜ್ಞಾನಿಗಳಿಂದ ಪರ್ಯಾಯ ಬೆಳೆಗಳ ಕುರಿತಚಿಂತನೆ ಆರಂಭವಾಯಿತು. ಪ್ರಾಚೀನ ಆಚ್‍ಟೆಕ್‍ ಜನಾಂಗ ಪ್ರಮುಖವಾಗಿ ಈ ಹರಿವೆ ಬೀಜದೆಡೆಗೆ ಗಮನ ಹರಿಸಿತು, ಪ್ರಸ್ತುತ ವಿಶ್ವದ ಗಮನ ಇದರತ್ತ ಕೇಂದ್ರೀಕೃತವಾಗಿದೆ.[] ದಂಟಿನ ಬೀಜ ನಮಗೆ ಹೊಸತಾಗಿರಬಹುದು, ಆದರೆ ಇತಿಹಾಸತುಂಬಾ ಹಳತು. ಆಗಿನ ಕೊಲಂಬಿಯನ್ನರಿಗೆ ಸರಿಸುಮಾರು 20,000 ಟನ್ ನಷ್ಟು ಜೋಳ, ಹರಿವೆ ಕಾಳು ಮತ್ತು ಹರಿವೆ ದಂಟಿನ ಬೀಜ 17 ಪ್ರಾಂತ್ಯಗಳಿಗೆ ಪೂರೈಕೆಯಾಗುತ್ತಿತ್ತು. ಈ ಸಾಮ್ರಾಜ್ಯವನ್ನು ಆಕ್ರಮಿಸಿದ ಕೆಲವು ಆಕ್ರಮಣಕಾರರಿಂದಾಗಿ ದಂಟಿನ ಬೀಜದ ಬಳಕೆಯ ನಿಷೇಧವಾಯಿತು. ಹರಿವೆ ಕಾಳು ಜನಮಾನಸದಿಂದ ಕಣ್ಮರೆಯಾಯಿತು. ಆದರೆ ಪ್ರಸ್ತುತಇದರ ಮಹತ್ವವನ್ನರಿತ ನಂತರ ಹರಿವೆ ಬೀಜಕ್ಕೆ ಅಗ್ರಸ್ಥಾನವಿದೆ. ಅಮರಾಂತೇಸಿ ಕುಟುಂಬಕ್ಕೆ ಸೇರಿದ ಬೀಜದ ಹರಿವೆಗೆ ಆಂಗ್ಲಭಾಷೆಯಲ್ಲಿ ಗ್ರೈನ್‍ ಅಮರಾಂತಸ್‍ಎಂದುಕರೆಯುವರು. ಮೆಕ್ಸಿಕೋ ಇದರ ಮೂಲನೆಲೆ. ಇದು ಮೆಕ್ಸಿಕೋದ ಜನಪ್ರಿಯ ಬೆಳೆ ಕೂಡಾ. ಕೊಲಂಬಸ್‍ನ ಕಾಲದಲ್ಲಿ ಅಮೇರಿಕಾದಿಂದ ಏಷ್ಯಾಕ್ಕೆ ಬಂದ ಬೀಜದ ಹರಿವೆ ಇಂದು ಭಾರತ, ನೇಪಾಳ, ಪಾಕಿಸ್ತಾನ, ಚೀನಾದಲ್ಲಿ ಪ್ರಸಿದ್ಧಿಯಾಗುತ್ತಿದೆ. ಹಿಮಾಲಯದ ತಪ್ಪಲಿನ ಹಲವು ಗ್ರಾಮಗಳಲ್ಲಿ ಮುಖ್ಯ ಬೆಳೆ. ಮಳೆಯಾಧಾರಿತ ಬೆಳೆಯಾಗಿರುವ ಕಾರಣ ಈಶಾನ್ಯ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿಯೂ ಯಶಸ್ವಿಯಾಗುತ್ತಿದೆ. ಕರ್ನಾಟಕದಲ್ಲಿ ರಾಗಿ ಹೇಗೆ ಸಾಂಪ್ರದಾಯಿಕ ಬೆಳೆಯೋ ಅದೇ ರೀತಿ ಈ ಬೀಜದ ಹರಿವೆ ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ತಾನಗಳಲ್ಲಿ ಸಾಂಪ್ರದಾಯಿಕ ಬೆಳೆಯಾಗಿದೆ.ದಕ್ಷಿಣ ಭಾರತದಲ್ಲಿ ರಾಮದಾಸ್, ರಾಜನೀತಿ, ಮತ್ತು ಕೀರೆ ಇತ್ಯಾದಿ ಹೆಸರಿನಿಂದ ಕರೆಸಿಕೊಳ್ಳುವ ಇದು ಊಟಿಯಲ್ಲಿಯ ಬುಡಕಟ್ಟು ಜನಾಂಗದವರ ಪ್ರಮುಖ ಬೆಳೆಯಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಕೋಲಾರ, ತುಮಕೂರು, ಬೆಂಗಳೂರು, ಹಾಸನ ಜಿಲ್ಲೆಗಳಲ್ಲಿ ಇದರ ಕೃಷಿಯಾಗುತ್ತಿದೆ. ಹರಿವೆ ಕಾಳಿನ ಕುರಿತ ಪ್ರಚಾರದಲ್ಲಿಅಮೆರಿಕದ ರೂರೆಲ್ ಪ್ರೆಸ್ ಪ್ರಮುಖ ಪಾತ್ರ ವಹಿಸುತ್ತಿದೆ. ಅಮೆರಿಕನ್‍ ಅಮರಾಂಥಸ್ ಸಂಸ್ಥೆ ಕೂಡಾ ಪ್ರಚಾರದಲ್ಲಿ ಭಾಗಿಯಾಗಿದೆ.ಅಲ್ಲದೆ, ಜಾಗತಿಕ ಬ್ಯಾಂಕ್‍ನ ಕೃಷಿ ವಿಭಾಗವೂ ಕೂಡಾ ಮಾಹಿತಿ ಹಾಗೂ ಬೀಜ ಹಂಚುವ ಕೆಲಸದಲ್ಲಿ ಮಗ್ನವಾಗಿದೆ.

ಉಪಯೋಗ

[ಬದಲಾಯಿಸಿ]

ಬೀಜದ ಹರಿವೆ ಹಲವಾರು ರೀತಿಯಲ್ಲಿಉಪಯೋಗಕಾರಿಯಾಗಿದೆ. ಕೇವಲ ಆಹಾರ ಪದಾರ್ಥವಾಗಿರುವುದಲ್ಲದೇ ಆರೋಗ್ಯಕರ ಬೆಳವಣಿಗೆಗೂ ಸಹಕಾರಿ. ಇಡೀ ಬೀಜದಿಂದ ಪಾಯಸ, ಗಂಜಿ ಇತ್ಯಾದಿ ತಯಾರಿ ಸಾಧ್ಯ. ಜೋಳ, ರಾಗಿ, ಗೋಧಿಯೊಂದಿಗೆ ಇದರ ಹಿಟ್ಟು ಬೆರೆಸಿ ರೊಟ್ಟಿ, ನಿಪ್ಪಟ್ಟು, ಬಿಸ್ಕೆಟ್‍ ಇತ್ಯಾದಿ ತಯಾರಿಕೆ ಸಾಧ್ಯವಿದೆ. ಪೌಷ್ಟಿಕತೆಯ ಮೌಲ್ಯ ವರ್ಧಿಸುವುದರಿಂದ ದಿನನಿತ್ಯದ ಆಹಾರದಲ್ಲಿ ಪೂರಕವಾಗಿ ಇದನ್ನು ಬಳಸಬಹುದು. ಜೊತೆಗೆ ಇದರ ಹಿಟ್ಟನ್ನು ಬ್ರೆಡ್, ಹಲ್ವಾ, ಲಾಡು, ಐಸ್‍ಕ್ರೀಮ್, ಕೇಕ್‍ ಇನ್ನಿತರ ಬೇಕರಿ ಪದಾರ್ಥಗಳ ತಯಾರಿಕೆಗೂ ಬಳಸಬಹುದು. ಈ ಹಿಟ್ಟನ್ನು ಶಿಶು ಆಹಾರವಾಗಿಯೂ ಬಳಸಬಹುದು. ಮಗುವಿಗೆ ನಾಲ್ಕು ತಿಂಗಳ ಮೇಲಷ್ಟೆ ಬೀಜದ ಮಿಠಾಯಿ ಕೊಡುವುದು ಉತ್ತಮ. ಬೀಜ ಹುರಿದ ನಂತರ ಬರುವ ಅರಳನ್ನು ಮಿಠಾಯಿ ತಯಾರಿಕೆಗೆ ಬಳಸಬಹುದು ಅಲ್ಲದೆ ಈ ಅರಳನ್ನು ಹಿಟ್ಟು ಮಾಡಿ ಪಾನೀಯ ಕೂಡಾ ತಯಾರಿಸಬಹುದು. ಇವೆಲ್ಲದರ ಜೊತೆಗೆ ಮುಖ್ಯವಾಗಿ ದಂಟಿನ ಬೀಜದಿಂದ ರುಚಿಕರ ಮಾಲ್ಟ್ ತಯಾರಿಸಬಹುದು.

ವಾಣಿಜ್ಯ ಬೆಳೆ

[ಬದಲಾಯಿಸಿ]

ಬರೀ ಆಹಾರ ಪದಾರ್ಥವಾಗಿ ಅಲ್ಲದೇ, ಮಹತ್ವದ ವಾಣಿಜ್ಯ ಬೆಳೆಯಾಗಿ ರೂಪುಗೊಳ್ಳುವ ಸಾಮಥ್ಯ‌ ಇದಕ್ಕಿದೆ. ಕಂಪ್ಯೂಟರ್ ಫ್ಲಾಪಿ ಕೀಲಿಗೈಯಾಗಿ ಸ್ಕ್ವಾಲಿನ್ ಎಂಬ ರಾಸಾಯನಿಕ ವಸ್ತುವನ್ನು ಬಳಸಲಾಗುತ್ತದೆ. ಇದನ್ನು ಶಾರ್ಕ್ ಮೀನಿನಿಂದ ಪ್ರತ್ಯೇಕಿಸಲಾಗುತ್ತದೆ. ಇದನ್ನು ಪ್ರತ್ಯೇಕಿಸುವುದು ಕಷ್ಟದ ಕೆಲಸ ಜೊತೆಗೆ ದುಬಾರಿ ಕೂಡ. ಅದ್ದರಿಂದ ಇದಕ್ಕೆ ಹರಿವೆ ಬಳಸುವುದು ಕಡಿಮೆ ಖರ್ಚು ಹಾಗೂ ಸುಲಭದ ದಾರಿ. ಅತಿಸೂಕ್ಷ್ಮ ಕಣಗಳಿಂದ ಕೂಡಿದ ದಂಟಿನ ಪಿಷ್ಟ, ಔಷಧ ತಯಾರಿಕೆಯಲ್ಲಿ ಉಪಯೋಗಕಾರಿಯಾಗಿದೆ. ಮುಖ ಬಿಳಿಯಾಗಿಸಲು ಈ ಬೀಜವನ್ನು ಬಳಸಬಹುದು. ಬಿಸ್ಕೆಟ್‍ ತಯಾರಿಕೆಯಲ್ಲಿ ಬೀಜದ ಹಿರಿಮೆಯ ಪಾಲಿದೆ. ಬೀಜದ ಹರಿವೆ ಹಾಗೂ ಗೋಧಿ ಮಿಶ್ರಣದಿ ಮದ ತಯಾರಿಸಿದ ಆಹಾರ ಅಮರ್‍ಲ್ಯಾಕ್ ಮತ್ತುಅಮರ್‍ಮೀರ್‍ ಇತ್ಯಾದಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಕೃತಕ ರಾಸಾಯನಿಕಗಳಿಂದ ಹೊರತಾಗಿದೆ. ಶೃಂಗಾರ ಪ್ರಸಾಧನಗಳ ತಯಾರಿಕೆಯಲ್ಲಿ, ನೈಸರ್ಗಿಕ ವರ್ಣಗಳ ತಯಾರಿಕೆಯಲ್ಲಿ ಬೀಜದ ಹರಿವೆಯನ್ನು ಬಳಸಲಾಗುತ್ತದೆ. ಪರಿಸರ ಸ್ನೇಹಿ ಪ್ಲಾಸ್ಟಿಕ್ ತಯಾರಿಕೆಯಲ್ಲಿಉಪಯೋಗಕಾರಿಯಾಗಿದೆ. ಪಾನೀಯಗಳಿಗೆ ಬಣ್ಣ ಕೊಡಲು ಉಪಯುಕ್ತ. ಬೀಜದಲ್ಲಿ ಶೇಕಡಾ 20ರಷ್ಟು ತೈಲಾಂಶ ಇರುವುದರಿಂದ ಖಾದ್ಯ ತೈಲ ಮೂಲವಾಗಿಯೂ ಬಳಸಬಹುದು.[] ಬೀಜದ ಹರಿವೆಗೆ ಹಲವಾರುಔಷಧಿಯ ಗುಣಗಳಿವೆ. ಹಿಮಾಲಯದತಪ್ಪಲು ಪ್ರದೇಶಗಳಲ್ಲಿ ಸಿಡುಬು ಹಾಗೂ ದಡಾರ(ಅಮ್ಮ) ಪೀಡಿತ ಮಕ್ಕಳನ್ನು ಬೀಜದ ಹರಿವೆಯ ಹಾಸಿಗೆ ಮೇಲೆ ಮಲಗಿಸುತ್ತಾರೆ. ಪರಿಣಾಮವಾಗಿ ದೇಹದಉಷ್ಣತೆ ಕಡಿಮೆಯಾಗಿ ರೋಗಿ ಗುಣಮುಖನಾಗುತ್ತಾನೆ ಎಂಬ ನಂಬಿಕೆ. ಬೀಜದ ಸಾರ ಜಾನುವಾರುಗಳ ಭೀಕರ ಕಾಲುಬಾಯಿ ರೋಗಕ್ಕೆ ಔಷಧಿಯಾಗಿ ಬಳಕೆಯಾಗುತ್ತದೆ. ಹಾವಿನ ಕಡಿತಕ್ಕೂ ಔಷಧಿ, ಮಲಬಧ್ಧತೆ ನಿವಾರಖವಾಗಿ ಕಾರ್ಯ ನಿರ್ವಹಿಸತ್ತದೆ. ಹಾಗೆಯೇ ದೃಷ್ಟಿ ಮಾಂದ್ಯತೆಗೆ ಔಷಧಿ. ಸಾಮಾನ್ಯ ಸಮಸ್ಯೆಗಳಾದ ರಕ್ತದೊತ್ತಡ, ಪಿತ್ತ, ಉದ್ವೇಗ ಕಡಿಮೆ ಮಾಡುವ ಗುಣ ಇದಕ್ಕಿದೆ. ಬೀಜದ ಹರಿವೆಯಿಂದಾಗುವಇನ್ನಿತರೆ ಉಪಯೋಗಗಳೆಂದರೆ, ಇದನ್ನು ಪಶು ಆಹಾರವಾಗಿ ಬಳಸಬಹುದು, ಹಸಿರೆಲೆ ಗೊಬ್ಬರಕ್ಕೆ ಬಳಸಬಹುದು. ಹಿಮಾಚಲ ಪ್ರದೇಶದಲ್ಲಿ ಜೋಳದ ಸುತ್ತ ಬೆಳೆಸುವ ಕೆಲವು ತೆನೆಬಿಡುವ ಬೀಜದ ಹರಿವೆ ತಳಿಯೂ ಪಕ್ಷಿಗಳನ್ನು ಓಡಿಸುವಲ್ಲಿ ಸಹಕಾರಿಯಾಗಿದೆ. ಮಾಂಸ ಹಾಗೂ ಸೇಬಿನ ಸಂರಕ್ಷಣೆಗಾಗಿ ಬೀಜದ ಹರಿವೆಯನ್ನುಅದರಜೊತೆಯಲ್ಲಿಡಲಾಗುತ್ತದೆ.

ಉಲ್ಲೇಖ

[ಬದಲಾಯಿಸಿ]
  1. https://www.collinsdictionary.com/us/dictionary/english/globe
  2. "ಆರ್ಕೈವ್ ನಕಲು". Archived from the original on 2019-02-14. Retrieved 2019-03-02. ((cite web)): More than one of |archivedate= and |archive-date= specified (help); More than one of |archiveurl= and |archive-url= specified (help)
  3. http://mason.gmu.edu/~rhanson/infomkts.html
{{bottomLinkPreText}} {{bottomLinkText}}
ಹರಿವೆ ಬೀಜ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?