For faster navigation, this Iframe is preloading the Wikiwand page for ರಫ್ಲೀಸಿಯ.

ರಫ್ಲೀಸಿಯ

ರಫ್ಲೀಸಿಯ
Rafflesia arnoldii flowers in Bengkulu, Indonesia
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ರೋಸಿಡ್ಸ್
ಗಣ: ಮ್ಯಾಲ್ಪಿಘಿಯಾಲೆಸ್
ಕುಟುಂಬ: ರಫ್ಲೀಸಿಯೇಸೀ
ಕುಲ: ರಫ್ಲೀಸಿಯ
R.Br. ex Thomson bis[೧]
Type species
Rafflesia arnoldii
Species

See Classification section

ರಫ್ಲೀಸಿಯ ಆವೃತಬೀಜಸಸ್ಯಗಳ (ಆಂಜಿಯೋಸ್ಪರ್ಮ್ಸ್) ಪೈಕಿ ರಫ್ಲೀಸಿಯೇಸಿ ಕುಟುಂಬಕ್ಕೆ ಸೇರಿರುವ ಸಸ್ಯ.[೨]: 2 [೩] ಇದರ ಜೈವಿತಾಮ ರಫ್ಲೀಸಿಯ ಒಂದು ವೈವಿಧ್ಯಮಯ ಹಾಗೂ ವಿಚಿತ್ರ ಸಸ್ಯ. ಮಲಯ ದ್ವೀಪಸಮೂಹಗಳಲ್ಲಿ ಮಾತ್ರ ಕಂಡುಬರುವ ಈ ಸಸ್ಯ ಒಂದು ಪರಾವಲಂಬಿ ಸಸ್ಯ. ವಿವಿಧ ಜಾತಿಯ ಸಸ್ಯಗಳ ಮೇಲೆ ಇದು ಪರಾವಲಂಬಿ ಜೀವನ ನಡೆಸಬಲ್ಲದು. ಆವೃತಬೀಜಸಸ್ಯಗಳ ಮುಖ್ಯ ಭಾಗಗಳಾದ ಬೇರು, ಕಾಂಡ, ಎಲೆಗಳಾವುವೂ ಈ ಸಸ್ಯದಲ್ಲಿ ಇರುವುದಿಲ್ಲ. ಪ್ರಬುದ್ಧಸಸ್ಯ ಬಿಳಿಯ ಸೂಕ್ಷ್ಮನಾಳಗಳ ತಂತುಜಾಲದಂತಿದ್ದು ಆತಿಥೇಯ ಸಸ್ಯದ ಒಳಭಾಗದಲ್ಲಿ ಹರಡಿಕೊಂಡಿರುತ್ತದೆ.[೪] ಹೀಗಾಗಿ ಹೊರನೋಟಕ್ಕೆ ಸಸ್ಯದ ಇರುವಿಕೆಯ ಅರಿವೇ ಆಗುವುದಿಲ್ಲ. ಹೂ ಅರಳಿದ ಅನಂತರವೇ ಸಸ್ಯದ ಇರುವಿಕೆಯ ಅರಿವಾಗುತ್ತದೆ. ಅರಳಿದ ಹೂ ಕೊಳೆತಮಾಂಸದ ವಾಸನೆ ಬೀರುವುದರಿಂದ ಸಸ್ಯವನ್ನು ಸುಲಭವಾಗಿ ಪತ್ತೆಮಾಡಬಹುದು.

ಪರಾವಲಂಬನಕ್ಕೆ ಹೊಂದಿಕೊಳ್ಳಲು ಈ ಸಸ್ಯ ತನ್ನ ವಿಕಾಸಕ್ರಮದಲ್ಲಿ ಬೇರು, ಕಾಂಡ, ಎಲೆಗಳನ್ನು ಕಳೆದುಕೊಂಡಿತು. ರಚನೆಯಲ್ಲಿ ಶಿಲೀಂಧ್ರಗಳನ್ನು ಹೋಲುವಂತೆ ಮಾರ್ಪಾಡಾಯಿತು. ಆದರೆ ಮೂಲಗುಣವಾದ ಆವೃತಬೀಜವನ್ನು ಉತ್ಪಾದಿಸಲು ಅರಳುವ ಪುಷ್ಪ ಮಾತ್ರ ಉಳಿದು ಬಂತು.

ಹೂವುಗಳ ವಿವರ

[ಬದಲಾಯಿಸಿ]

ಸಸ್ಯದ ರಚನೆ ಎಷ್ಟು ಭಿನ್ನವೊ ಅದರ ಹೂ ಕೂಡ ಅಷ್ಟೇ ವಿಶಿಷ್ಟವಾದ್ದು. ಈ ಹೂ ಸಸ್ಯಪ್ರಪಂಚದಲ್ಲಿಯೇ ಅತಿದೊಡ್ಡದೆಂದು ಹೇಳಲಾಗುತ್ತದೆ. ಸಸ್ಯದ ವ್ಯಾಸ ಸುಮಾರು 80 ಸೆಂಮೀ. ಹೂವಿನ ಸುತ್ತ ಪುಷ್ಪಪಾತ್ರೆಯಿರುತ್ತದೆ; ಪುಷ್ಪದಳಗಳಿರುವುದಿಲ್ಲ. ಹೂಗಳಲ್ಲಿ ಗಂಡು ಹೆಣ್ಣುಗಳೆಂಬ ಭೇಧವಿದೆ. ಗಂಡುಹೂಗಳಲ್ಲಿರುವುದು ಕೇಸರಗಳು ಮಾತ್ರ. ಅಗಣಿತ ಸಂಖ್ಯೆಯಲ್ಲಿರುವ ಕೇಸರಗಳ ತುದಿಯಲ್ಲಿ ಎರಡು ಪರಾಗಕೋಶಗಳಿವೆ. ಅವುಗಳ ಮೇಲ್ಭಾಗದಲ್ಲಿರುವ ರಂಧ್ರಗಳ ಮೂಲಕ ಪರಾಗರೇಣು ಹೊರಬೀಳುತ್ತದೆ. ಕೀಟಗಳಿಂದ ಪರಾಗಸ್ಪರ್ಶಕ್ರಿಯೆ ನಡೆಯುತ್ತದೆ.

ಹೆಣ್ಣುಹೂವಿನಲ್ಲಿ ಒಂದು ಶಲಾಕೆ ಮಾತ್ರ ಇರುತ್ತದೆ. ಅಂಡಾಶಯ ಶಲಾಕ ಸ್ಥಿತಿಯಲ್ಲಿಯೇ ಇದ್ದು ಅದರಲ್ಲಿ ಒಂದು ಕೋಣೆ ಮಾತ್ರ ಇರುತ್ತದೆ. ಕಾರ್ಪೆಲ್‌ಗಳ ಒಳಭಿತ್ತಿಯ ಮೇಲೆ ಭ್ರೂಣ ಬೆಳೆಯುತ್ತದೆ. ಶಲಾಕನಳಿಕೆಯ ತುದಿಯಲ್ಲಿ ಶಲಾಕಾಗ್ರವಿರುತ್ತದೆ. ಈ ಪುಷ್ಪದಿಂದ ಬೆಳೆಯುವ ಹಣ್ಣು ರಸಭರಿತ ಬರ‍್ರಿ ಮಾದರಿಯದು.

ಛಾಯಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Rafflesia". International Plant Names Index. The Royal Botanic Gardens, Kew, Harvard University Herbaria & Libraries and Australian National Botanic Gardens. Retrieved 29 October 2020.
  2. Willem, Meijer (1997). "Rafflesiaceae". Flora Malesiana. Vol. 13. Leiden: Hortus Botanicus Leiden, under auspices of Foundation Flora Malesiana. pp. 1–42. ISBN 90-71236-33-1.
  3. "Rafflesia R.Br. ex Gray". Plants of the World Online. Board of Trustees of the Royal Botanic Gardens, Kew. 2022. Retrieved 29 November 2022.
  4. Shaw, Jonathan (March–April 2017). "Colossal Blossom: Pursuing the peculiar genetics of a parasitic plant". Harvard Magazine. Retrieved 27 June 2017.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
{{bottomLinkPreText}} {{bottomLinkText}}
ರಫ್ಲೀಸಿಯ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?