For faster navigation, this Iframe is preloading the Wikiwand page for ಭಾರತ ಚೀನಾ ಸಂಬಂಧಗಳು.

ಭಾರತ ಚೀನಾ ಸಂಬಂಧಗಳು

ಭಾರತ ಮತ್ತು ಚೀನಾ, ಜಗತ್ತಿನಲ್ಲಿ ಸನ್ನಿವೇಶ ಮತ್ತು ವಿಸ್ತೀರ್ಣ

ಭಾರತದಿಂದ ಮೊಟ್ಟಮೊದಲು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ (ಕಮ್ಉನಿಸ್ಟ್)ಸರ್ಕಾರಕ್ಕೆ ಮನ್ನಣೆ

[ಬದಲಾಯಿಸಿ]
ಭಾರತದ ಪ್ರಧಾನಿ ನರೇಂದ್ರಮೋದಿ ಮತ್ತು ಚೀನಾದ ರಾಷ್ಟ್ರಾಧ್ಯಕ್ಷ ಜಿ ಜಿಂಪಿಂಗ್, ಸೆಪ್ಟೆಂಬರ್ 2014 ರ ಭಾರತಕ್ಕೆ ಭೇಟಿ ನೀಡಿದಾಗ - ಭಾರತದಲ್ಲಿ.
  • ಚೀನಾ-ಇಂಡಿಯಾ ಸಂಬಂಧಗಳು, ಸಿನೊ-ಇಂಡಿಯನ್ ಸಂಬಂಧಗಳು ಅಥವಾ ಇಂಡೋ-ಚೀನಾ ಸಂಬಂಧಗಳು ಎಂದು ಕರೆಯಲ್ಪಡುತ್ತವೆ, ಇದು ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ಮತ್ತು ರಿಪಬ್ಲಿಕ್ ಆಫ್ ಇಂಡಿಯಾ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಉಲ್ಲೇಖಿಸುತ್ತದೆ. ಐತಿಹಾಸಿಕವಾಗಿ,ಭಾರತಮತ್ತು ಚೀನಾವು 2,000 ಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ಸಂಬಂಧವನ್ನು ಹೊಂದಿದ್ದವು, ಆದರೆ ಆಧುನಿಕ ಸಂಬಂಧವು 1950 ರಲ್ಲಿ ಚೀನಾ (ತೈವಾನ್) ನೊಂದಿಗೆ ಔಪಚಾರಿಕ ಸಂಬಂಧಗಳನ್ನು ಕೊನೆಗೊಳಿಸುವ ಮೊದಲ ರಾಷ್ಟ್ರಗಳಲ್ಲಿ ಆಗಿದ್ದು, ಮೊಟ್ಟಮೊದಲಿಗೆ ಭಾರತವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಅನ್ನು ಮುಖ್ಯ ಭೂಭಾಗದ ಸರ್ಕಾರವೇ ಕಾನೂನುಬದ್ಧ ಸರ್ಕಾರವೆಂದು ಗುರುತಿಸಿತು. ಚೀನಾ ಮತ್ತು ಭಾರತವು ಎರಡುೂ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳು ಮತ್ತು ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಾಗಿವೆ. ರಾಜತಾಂತ್ರಿಕ ಮತ್ತು ಆರ್ಥಿಕ ಪ್ರಭಾವದಲ್ಲಿ ಬೆಳವಣಿಗೆ ತಮ್ಮ ದ್ವಿಪಕ್ಷೀಯ ಸಂಬಂಧದ ಮಹತ್ವವನ್ನು ಹೆಚ್ಚಿಸಿದೆ.

ಪ್ರಾಚೀನ ಸಂಬಂದ

[ಬದಲಾಯಿಸಿ]
[Silk route]ಹಿಂದೆ ಚೀನಾದಿಂದ ರೇಷ್ಮೆ ವ್ಯಾಪಾರಕ್ಕೆ ಉಪಯೋಗಿಸುತ್ತದ್ದ "ಸಿಲ್ಕ್ ರೂಟ್. ಕೆಂಪು ಬಣ್ಣದ್ದು ಭೂ ಮಾರ್ಗ: ನೀಲಿಗೆರೆ ಜಲ ಮಾರ್ಗ
  • ಚೀನಾ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಬಂಧಗಳು ಪ್ರಾಚೀನ ಕಾಲದಿಂದಲೂ ಬಂದಿದೆ. ಸಿಲ್ಕ್ ರೋಡ್ ಭಾರತ ಮತ್ತು ಚೀನಾ ನಡುವಿನ ಒಂದು ಪ್ರಮುಖ ವ್ಯಾಪಾರ ಮಾರ್ಗವಾಗಿ ಕಾರ್ಯನಿರ್ವಹಿಸಿದೆ, ಅದೇ ಭಾರತದಿಂದ ಪೂರ್ವ ಏಷ್ಯಾಕ್ಕೆ ಬೌದ್ಧ ಧರ್ಮದ ಹರಡುವಿಕೆಯ ಕೊಡಿಗಡ ಭಾರತಕ್ಕೆ ಸಲ್ಲುತ್ತದೆ. 19 ನೇ ಶತಮಾನದ ಅವಧಿಯಲ್ಲಿ, ಬ್ರಿಟಿಷ್ ರಾಜ್ಯದಂದಿಗಿನ ಚೀನಾದ ಬೆಳೆಯುತ್ತಿರುವ ಅಫೀಮು ವ್ಯಾಪಾರವು ಮೊದಲ ಮತ್ತು ಎರಡನೆಯ ಒಪಿಯಮ್ ಯುದ್ಧಳನ್ನು ಪ್ರಚೋದಿಸಿತು. ವಿಶ್ವ ಸಮರ 2 ರ ಸಂದರ್ಭದಲ್ಲಿ, ಇಂಪೀರಿಯಲ್ ಜಪಾನ್ನ ಪ್ರಗತಿಯನ್ನು ಸ್ಥಗಿತಗೊಳಿಸುವಲ್ಲಿ ಭಾರತ ಮತ್ತು ಚೀನಾ ಎರಡೂ ಪ್ರಮುಖ ಪಾತ್ರವಹಿಸಿದವು. []
  • ಸಮಕಾಲೀನ ಚೀನಾ ಮತ್ತು ಭಾರತ ನಡುವಿನ ಸಂಬಂಧವನ್ನು ಗಡಿ ವಿವಾದಗಳಿಂದ ನಿರೂಪಿಸಲಾಗಿದೆ, ಮೂರು ಮಿಲಿಟರಿ ಘರ್ಷಣೆಗಳು - 1962 ರ ಸಿನೋ-ಇಂಡಿಯನ್ ಯುದ್ಧ, 1967 ರಲ್ಲಿ ಚೋಲಾ ಘಟನೆ, ಮತ್ತು 1987 ಸಿನೋ-ಇಂಡಿಯನ್ ಚಕಮಕಿ. ಆದಾಗ್ಯೂ, 1980 ರ ದಶಕದ ಅಂತ್ಯದಿಂದ, ಎರಡೂ ರಾಷ್ಟ್ರಗಳು ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧಗಳನ್ನು ಯಶಸ್ವಿಯಾಗಿ ಮರುನಿರ್ಮಿಸಿವೆ. 2008 ರಲ್ಲಿ, ಚೀನಾ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಾದರು ಮತ್ತು ಎರಡೂ ದೇಶಗಳು ತಮ್ಮ ಕಾರ್ಯತಂತ್ರ ಮತ್ತು ಮಿಲಿಟರಿ ಸಂಬಂಧಗಳನ್ನು ವಿಸ್ತರಿಸಿವೆ. []

ಚೀನಾದ ನಿಲುವು ೨೦೧೬-೧೭

[ಬದಲಾಯಿಸಿ]
  • ಭಾರತ ವಿರೋಧಿ ನಿಲುವು
  • ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ಸತತವಾಗಿ ಪ್ರಯತ್ನಿಸುತ್ತಿದೆ. ಆದರೆ 48 ದೇಶಗಳ ಗುಂಪಿನಲ್ಲಿ ಸದಸ್ಯತ್ವ ಹೊಂದಿರುವ ಚೀನಾ, ಭಾರತದ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣ ಮುಂದೊಡ್ಡಿ ಅಡ್ಡಿಪಡಿಸುತ್ತಲೇ ಇದೆ. ಭಾರತದ ಸದಸ್ಯತ್ವಕ್ಕೆ ಅಡ್ಡಿಪಡಿಸುವ ಮೂಲಕ ಪಾಕಿಸ್ತಾನಕ್ಕೂ ಸದಸ್ಯತ್ವ ದೊರಕಿಸಿಕೊಡುವುದು ಚೀನಾದ ಉದ್ದೇಶ ಎಂದು ವಿಶ್ಲೇಷಕರು ಹೇಳುತ್ತಾರೆ.
  • ಚೀನಾ ಗಡಿನೀತಿ
  • ಚೀನಾವು 14 ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಗಡಿ ಗುರುತಿಸುವಿಕೆ ವಿಚಾರದಲ್ಲಿ ಬಹುತೇಕ ಎಲ್ಲ ನೆರೆ ರಾಷ್ಟ್ರಗಳ ಜತೆ ಅದು ಸಂಘರ್ಷಕ್ಕೆ ಇಳಿದಿದೆ. ಅಫ್ಗಾನಿಸ್ತಾನ, ಕಜಾಕಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌, ರಷ್ಯಾ ಮತ್ತು ತಾಜಿಕಿಸ್ತಾನಗಳೊಂದಿಗಿನ ಗಡಿ ವಿವಾದಗಳನ್ನು ಅದು ಬಗೆಹರಿಸಿಕೊಂಡಿದೆ. ಜಲ ಗಡಿ ವಿಚಾರವಾಗಿಯೂ ಚೀನಾ ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಕಟ್ಟಿಕೊಂಡಿದೆ. ಅದು ಜಪಾನ್‌, ದಕ್ಷಿಣ ಕೊರಿಯ, ವಿಯೆಟ್ನಾಂ, ತೈವಾನ್‌ ಮತ್ತು ಫಿಲಿಪ್ಪೀನ್ಸ್‌ಗಳೊಂದಿಗೆ ಜಲ ಗಡಿ ಹಂಚಿ ಕೊಂಡಿದ್ದು, ಎಲ್ಲ ಗಡಿಗಳೂ ವಿವಾದದಲ್ಲಿವೆ.

ಎನ್‌ಎಸ್‌ಜಿಗೆ ಅಡ್ಡಗಾಲು

[ಬದಲಾಯಿಸಿ]
  • ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ಸತತವಾಗಿ ಪ್ರಯತ್ನಿಸುತ್ತಿದೆ. ಆದರೆ 48 ದೇಶಗಳ ಗುಂಪಿನಲ್ಲಿ ಸದಸ್ಯತ್ವ ಹೊಂದಿರುವ ಚೀನಾ, ಭಾರತದ ಪ್ರವೇಶಕ್ಕೆ ಒಂದಲ್ಲ ಒಂದು ಕಾರಣ ಮುಂದೊಡ್ಡಿ ಅಡ್ಡಿಪಡಿಸುತ್ತಲೇ ಇದೆ. ಭಾರತದ ಸದಸ್ಯತ್ವಕ್ಕೆ ಅಡ್ಡಿಪಡಿಸುವ ಮೂಲಕ ಪಾಕಿಸ್ತಾನಕ್ಕೂ ಸದಸ್ಯತ್ವ ದೊರಕಿಸಿಕೊಡುವುದು ಚೀನಾದ ಉದ್ದೇಶ ಎಂದು ವಿಶ್ಲೇಷಕರು ಹೇಳುತ್ತಾರೆ

ಗಡಿ ಹಂಚಿಕೊಂಡ ಎಲ್ಲಾ ದೇಶಗಳ ಜತೆಗೂ ವಿವಾದ

[ಬದಲಾಯಿಸಿ]
  • ಚೀನಾವು 14 ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಗಡಿ ಗುರುತಿಸುವಿಕೆ ವಿಚಾರದಲ್ಲಿ ಬಹುತೇಕ ಎಲ್ಲ ನೆರೆ ರಾಷ್ಟ್ರಗಳ ಜತೆ ಅದು ಸಂಘರ್ಷಕ್ಕೆ ಇಳಿದಿದೆ. ಅಫ್ಗಾನಿಸ್ತಾನ, ಕಜಾಕಿಸ್ತಾನ, ಪಾಕಿಸ್ತಾನ, ಮ್ಯಾನ್ಮಾರ್‌, ರಷ್ಯಾ ಮತ್ತು ತಾಜಿಕಿಸ್ತಾನಗಳೊಂದಿಗಿನ ಗಡಿ ವಿವಾದಗಳನ್ನು ಅದು ಬಗೆಹರಿಸಿಕೊಂಡಿದೆ. ಭೂಮಿ ಮಾತ್ರ ಅಲ್ಲ; ಜಲ ಗಡಿ ವಿಚಾರವಾಗಿಯೂ ಚೀನಾ ನೆರೆ ರಾಷ್ಟ್ರಗಳೊಂದಿಗೆ ವೈಮನಸ್ಸು ಕಟ್ಟಿಕೊಂಡಿದೆ. ಅದು ಜಪಾನ್‌, ದಕ್ಷಿಣ ಕೊರಿಯ, ವಿಯೆಟ್ನಾಂ, ತೈವಾನ್‌ ಮತ್ತು ಫಿಲಿಪ್ಪೀನ್ಸ್‌ಗಳೊಂದಿಗೆ ಜಲ ಗಡಿ ಹಂಚಿ ಕೊಂಡಿದ್ದು, ಎಲ್ಲ ಗಡಿಗಳೂ ವಿವಾದದಲ್ಲಿವೆ. ಲಾವೋಸ್‌, ಕಾಂಬೋಡಿಯಾ, ವಿಯೆಟ್ನಾಂ, ಥಾಯ್ಲೆಂಡ್‌ ಸೇರಿ ನದಿ ಹರಿದು ಹೋಗುವ ನೆರೆಯ ಎಲ್ಲ ದೇಶಗಳ ಜತೆಗೂ ನೀರು ಹಂಚಿಕೆ ವಿವಾದವನ್ನು ಚೀನಾ ಹೊಂದಿದೆ.

ಬ್ರಹ್ಮಪುತ್ರ ನದಿ ವಿವಾದ

[ಬದಲಾಯಿಸಿ]
  • ಬ್ರಹ್ಮಪುತ್ರ ನದಿ ನೀರು ಹಂಚಿಕೆ ಭಾರತ–ಚೀನಾ ನಡುವಣ ದೊಡ್ಡ ವಿವಾದ. ಟಿಬೆಟ್‌ನಲ್ಲಿ ಬ್ರಹ್ಮಪುತ್ರವನ್ನು ತ್ಸಾಂಗ್‌ಪೊ ಎಂದು ಕರೆಯುತ್ತಾರೆ. ನದಿಯ ಮೇಲಿನ ಪ್ರದೇಶದಲ್ಲಿ ಹಲವು ಅಣೆಕಟ್ಟೆಗಳನ್ನು ಚೀನಾ ನಿರ್ಮಿಸಿದೆ.
  • ಭಾರತ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದೆ. ಆದರೆ ನೀರು ಹಂಚಿಕೆಗೆ ಯಾವುದೇ ಒಪ್ಪಂದ ಇಲ್ಲ. ಟಿಬೆಟ್‌ ಭಾಗದಲ್ಲಿರುವ ಬ್ರಹ್ಮಪುತ್ರದ ನೀರಿನ ಮಟ್ಟದ ಬಗ್ಗೆಯೂ ಚೀನಾ ಮಾಹಿತಿ ಬಹಿರಂಗಪಡಿಸುವುದಿಲ್ಲ. ಹಾಗಾಗಿ, ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ವಿಸ್ತಾರ ಪ್ರದೇಶಗಳು ಹಠಾತ್‌ ಪ್ರವಾಹದ ಭೀತಿಯಲ್ಲಿಯೇ ಇರುತ್ತವೆ. ಪ್ರವಾಹ ಸಮಸ್ಯೆ ಪರಿಹಾರಕ್ಕಾಗಿಯೇ ಸುಮಾರು 25 ಅಣೆಕಟ್ಟೆಗಳನ್ನು ನಿರ್ಮಿಸುವ ಯೋಜನೆಯನ್ನು ಭಾರತ ರೂಪಿಸಿದೆ.

ಹತ್ತು ಅಣೆಕಟ್ಟುಗಳನ್ನು ನಿರ್ಮಿಸಿದೆ

[ಬದಲಾಯಿಸಿ]
  • ಚೀನಾದ ನೀರು-ತಿರುವು, ಅಣೆಕಟ್ಟು ನಿರ್ಮಾಣ ಮತ್ತು ಅಂತರ-ನದಿ ಯೋಜನೆಗಳ ಬಗ್ಗೆ ಭಾರತಕ್ಕೆ ಕಾಳಜಿ ಇದೆ. ಮೊರೆಸೊ, ಸಂಘರ್ಷದಲ್ಲಿ, ಚೀನಾ ನದಿಗಳನ್ನು ಹತೋಟಿಯಾಗಿ ಬಳಸಬಹುದು ಎಂದು ಭಾರತ ಭಯಪಡುತ್ತದೆ. ಚೀನಾ ಈಗಾಗಲೇ ಭರಮಪುತ್ರ ಮತ್ತು ಅದರ ಉಪನದಿಗಳಾದ ಜಾಂಗ್ಮು ಅಣೆಕಟ್ಟಿನ ಮೇಲೆ ಹತ್ತು ಅಣೆಕಟ್ಟುಗಳನ್ನು ನಿರ್ಮಿಸಿದೆ ಮತ್ತು ಮೋಟು ಅಣೆಕಟ್ಟು ಎಂದು ಕರೆಯಲ್ಪಡುವ "ದೊಡ್ಡ ಬೆಂಡ್" (ತಿರುವಿನಲ್ಲಿ)ನಲ್ಲಿ ಚೀನಾ ಮೆಗಾ-ಅಣೆಕಟ್ಟು ನಿರ್ಮಿಸುವ ಬಗ್ಗೆ ಚರ್ಚೆಯಾಗಿದೆ. ನೀರಿನ ಹಂಚಿಕೆಯ ಮೇಲೆ ಪರಿಣಾಮ ಬೀರುವ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಮಯೋಚಿತವಾಗಿ ಹಂಚಿಕೊಳ್ಳಲು ಚೀನಾ ಸಹಕರಿಸುವುದಿಲ್ಲ ಎಂಬ ಅಂಶದಿಂದ ಭಾರತದಲ್ಲಿ ಕಳವಳಗಳು ಹುಟ್ಟಿಕೊಂಡಿವೆ; ಅಣೆಕಟ್ಟು ಸ್ಥಳಗಳಿಗೆ ಭೇಟಿ ನೀಡಲು ಚೀನಾ ಭಾರತೀಯ ತಜ್ಞರಿಗೆ ಅವಕಾಶ ನೀಡುವುದಿಲ್ಲ. ತುರ್ತುಸ್ಥಿತಿ ನಿರ್ವಹಣೆ ಸೇರಿದಂತೆ ಬ್ರಹ್ಮಪುತ್ರಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ಜಲವಿಜ್ಞಾನ ದತ್ತಾಂಶ ಹಂಚಿಕೆ ಕುರಿತು ಹಲವಾರು MOU ಗಳಿವೆ. [153]
  • ಕೆಲವು (ಭಾರತೀಯ) ಪತ್ರಿಕೆಗಳು ಹರಡಿದ ತಪ್ಪು ಮಾಹಿತಿ" ಮತ್ತು ಬ್ರಹ್ಮಪುತ್ರದ ನೀರಿಗೆ ಸಂಬಂಧಿಸಿದಂತೆ ಪರ್ಯಾಯ ದೃಷ್ಟಿಕೋನವನ್ನು ಸಹ ಪ್ರಸ್ತುತಪಡಿಸಲಾಗಿದೆ - "ಬ್ರಹ್ಮಪುತ್ರದ 80 ಪ್ರತಿಶತ ನೀರು ಚೀನಾದಲ್ಲಿ ಹಿಮಾಲಯದ ಉತ್ತರ ಭಾಗದಿಂದ ಹೊರಹೊಮ್ಮುತ್ತದೆ ಮತ್ತು ಆ ದೇಶವು ಅಂತರರಾಷ್ಟ್ರೀಯ ನೀರಿನ ಏಕೈಕ ಮಧ್ಯಸ್ಥಗಾರರಾಗಲು ಸಾಧ್ಯವಿಲ್ಲ.- ಅದರೆ ಇದು ಸರಿಯಲ್ಲ. ದೊಡ್ಡ ಬ್ರಹ್ಮಪುತ್ರದ ಶೇಕಡಾ ಎಂಭತ್ತರಷ್ಟು ನೀರನ್ನು ಭಾರತಕ್ಕೆ ಪ್ರವೇಶಿಸಿದ ನಂತರ ಅದು ತೆಗೆದುಕೊಳ್ಳಲಾಗುತ್ತದೆ "ಮತ್ತು ಈಶಾನ್ಯದಲ್ಲಿ ವಾರ್ಷಿಕ ಪ್ರವಾಹದ ತೀವ್ರತೆಯನ್ನು ಕಡಿಮೆ ಮಾಡುವ ಮೂಲಕ ಚೀನಾದ ಚಟುವಟಿಕೆಗಳು ಭಾರತಕ್ಕೆ ಸಹಾಯ ಮಾಡಿವೆ. [][]

ಪಾಕಿಸ್ತಾನಕ್ಕೆ ನಿರಂತರ ಬೆಂಬಲ

[ಬದಲಾಯಿಸಿ]
  • ಪಾಕಿಸ್ತಾನದ ನೆಲದಿಂದ ಉಂಟಾಗುವ ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯಗಳನ್ನು ಭಾರತ ಖಂಡಿಸುತ್ತಲೇ ಬಂದಿದೆ. ಆದರೆ ಅಂತರರಾಷ್ಟ್ರೀಯ ಮಟ್ಟದ ಪ್ರತಿ ವೇದಿಕೆಯಲ್ಲಿಯೂ ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿದೆ.
  • ಜೈಷ್‌–ಎ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌ನ ಮೇಲೆ ವಿಶ್ವಸಂಸ್ಥೆಯ ಮೂಲಕ ನಿಷೇಧ ಹೇರಲು ಭಾರತ ಯತ್ನಿಸುತ್ತಿದೆ. ಭಾರತದ ಮೇಲೆ ಈತ ಹಲವು ಭಯೋತ್ಪಾದನಾ ದಾಳಿ ನಡೆಸಿದ್ದಾನೆ ಎಂದು ಭಾರತ ಹೇಳುತ್ತಿದೆ. ಆದರೆ ನಿಷೇಧ ಹೇರದಂತೆ ಚೀನಾ ಸದಾ ತಡೆಯುತ್ತಲೇ ಇದೆ.
  • ಚೀನಾಕ್ಕೆ ಪಾಕಿಸ್ತಾನ ಅತ್ಯಂತ ನೆಚ್ಚಿನ ರಾಷ್ಟ್ರ (ಸಿಪಿಇಸಿ). ಆ ದೇಶದಲ್ಲಿ ಚೀನಾ ಭಾರಿ ಹೂಡಿಕೆಯನ್ನೂ ಮಾಡಿದೆ. ಚೀನಾ–ಪಾಕಿಸ್ತಾನ ಆರ್ಥಿಕ ಕಾರಿಡಾರ್‌ (ಸಿಪಿಇಸಿ) ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗಲಿದೆ. ಇದನ್ನು ಭಾರತ ವಿರೋಧಿಸುತ್ತಿದೆ. ಭಾರತದ ಭೂಪ್ರದೇಶದ ಮೇಲೆ ಸಿಪಿಇಸಿ ಮೂಲಕ ಚೀನಾ ಅತಿಕ್ರಮಣ ನಡೆಸುತ್ತಿದೆ ಎಂದು ಭಾರತ ಹೇಳುತ್ತಿದೆ. ಆದರೆ ಚೀನಾ ಇದಕ್ಕೆ ಬೆಲೆಯನ್ನೇ ಕೊಟ್ಟಿಲ್ಲ.
  • ಗ್ವಾದರ್‌ನಲ್ಲಿ ನೆಲೆ: ಕರಾಚಿ ಸಮೀಪದ ಗ್ವಾದರ್‌ ಬಂದರನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ. ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ಜತೆ ವ್ಯಾಪಾರ ನಡೆಸಲು ಇದು ಚೀನಾಕ್ಕೆ ಸಹಕಾರಿ. ಅದಕ್ಕಿಂತ ಮುಖ್ಯವಾಗಿ, ಭಾರತದ ಗಡಿಗಳ ಸಮೀಪ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ಚೀನಾಕ್ಕೆ ನೌಕಾ ನೆಲೆಯೊಂದು ದೊರೆಯುತ್ತದೆ.

ಚೀನಾದ ಸುತ್ತುವರಿಯುವ ಉದ್ದೇಶ

[ಬದಲಾಯಿಸಿ]
  • ಭಾರತದ ಜಲಗಡಿಗಳ ಸುತ್ತಲೂ ತನ್ನ ನೆಲೆ ಸ್ಥಾಪಿಸುವುದು ಚೀನಾದ ಅಘೋಷಿತ ನೀತಿ. ಹಿಂದೂ ಮಹಾಸಾಗರದಲ್ಲಿ ಬಹಳ ಹಿಂದಿನಿಂದಲೂ ಚೀನಾದ ಉಪಸ್ಥಿತಿ ಇದೆ. ಈಗ ಮ್ಯಾನ್ಮಾರ್‌ನ ಕೊಕೋಸ್‌ ದ್ವೀಪ, ಬಾಂಗ್ಲಾದೇಶದ ಚಿತ್ತಗಾಂಗ್‌, ಶ್ರೀಲಂಕಾದ ಹಂಬಂತೋಟ, ಮಾಲ್ಡೀವ್ಸ್‌ನ ಮರಾವೊ ಅಟಾಲ್‌, ಪಾಕಿಸ್ತಾನದ ಗ್ವಾದರ್‌ಗಳಲ್ಲಿ ಚೀನಾ ನೌಕಾ ನೆಲೆಗಳನ್ನು ಹೊಂದಿದೆ. ಮಾಲೆಯಲ್ಲಿ ಸಂಪೂರ್ಣ ಸಕ್ರಿಯವಾಗಿರುವ ರಾಯಭಾರ ಕಚೇರಿಗಳನ್ನು ಹೊಂದಿರುವ ದೇಶಗಳು ಭಾರತ ಮತ್ತು ಚೀನಾ ಮಾತ್ರ. ಆದರೆ,ಚೀನಾದ ಸುತ್ತಲಿನ ದೇಶಗಳ ಜತೆ ಉತ್ತಮ ಸಂಬಂಧ ಹೊಂದುವ ನೀತಿಯನ್ನು ಭಾರತ ಅನುಸರಿಸುತ್ತಿದೆ. ಜಪಾನ್‌, ದಕ್ಷಿಣ ಕೊರಿಯ ಮತ್ತು ವಿಯೆಟ್ನಾಂ ಜತೆಗೆ ಭಾರತ ಒಳ್ಳೆಯ ಬಾಂಧವ್ಯ ಹೊಂದಿದೆ. ಅದಲ್ಲದೆ, ಚೀನಾದ ಮಧ್ಯ ಏಷ್ಯಾದ ನೆರೆ ದೇಶಗಳ (ಅಫ್ಗಾನಿಸ್ತಾನ, ಕಜಾಕಿಸ್ತಾನ, ಕಿರ್ಗಿಸ್ತಾನ, ಉಜ್ಬೆಕಿಸ್ತಾನ, ತಾಜಿಕಿಸ್ತಾನ, ತುರ್ಕಮೆನಿಸ್ತಾನ) ಜತೆಗೂ ಉತ್ತಮ ಸಂಬಂಧ ಹೊಂದಿದೆ.

ದಲೈಲಾಮಾ ಮತ್ತು ಟಿಬೆಟ್

[ಬದಲಾಯಿಸಿ]
  • ಟಿಬೆಟನ್ನು 1950ರಲ್ಲಿ ಚೀನಾ ವಶಪಡಿಸಿಕೊಂಡಿತು. 1913ರಲ್ಲಿಯೇ ಚೀನಾದಿಂದ ಟಿಬೆಟ್‌ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು. ಏಳು ಅಂಶಗಳ ಒಪ್ಪಂದದ ಮೂಲಕ ಟಿಬೆಟನ್ನು ಚೀನಾದ ಜತೆಗೆ ವಿಲೀನಗೊಳಿಸಲಾಯಿತು. 2003ರಲ್ಲಿ ಭಾರತ ಇದಕ್ಕೆ ಮಾನ್ಯತೆ ನೀಡಿದೆ. ಆಗಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಚೀನಾಕ್ಕೆ ಭೇಟಿ ಕೊಟ್ಟಾಗ ಇದನ್ನು ಅಧಿಕೃತವಾಗಿ ಘೋಷಿಸಿದರು.
  • ಟಿಬೆಟ್‌ನ ಮೇಲೆ ಚೀನಾದ ಆಕ್ರಮಣ ಅಲ್ಲಿನ ಜನರಿಗೆ ಬೇಕಿರಲಿಲ್ಲ. ಅಲ್ಲಿ ದೊಡ್ಡ ಬಂಡಾಯ ಆರಂಭವಾಯಿತು. ಚೀನಾ ಅದನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಿತು. ಟಿಬೆಟ್‌ನ ಧಾರ್ಮಿಕ ಮತ್ತು ರಾಜಕೀಯ ನಾಯಕ 14ನೇ ದಲೈಲಾಮಾ 1959ರಲ್ಲಿ ಭಾರತಕ್ಕೆ ಪಲಾಯನ ಮಾಡಿದರು. ದಲೈಲಾಮಾ ಮತ್ತು ಅವರ ಅನುಯಾಯಿಗಳಿಗೆ ಭಾರತ ರಾಜಕೀಯ ಆಶ್ರಯ ನೀಡಿತು. ಟಿಬೆಟ್‌ನಲ್ಲಿ ರಾಜಕೀಯ ಸಂಘರ್ಷಕ್ಕೆ ಭಾರತವೇ ಕುಮ್ಮಕ್ಕು ನೀಡುತ್ತಿದೆ ಎಂದು ಚೀನಾ ಆರೋಪಿಸುತ್ತಿದೆ.
  • ದಲೈಲಾಮಾ ಅವರು ಟಿಬೆಟ್‌ನ ದೇಶಭ್ರಷ್ಟ ಸರ್ಕಾರ ರಚಿಸಿಕೊಂಡಿದ್ದಾರೆ. ಇದಕ್ಕೆ ಯಾವುದೇ ಅಧಿಕಾರ ಅಥವಾ ಕಾರ್ಯವ್ಯಾಪ್ತಿ ಇಲ್ಲ. ಭಾರತ ಮತ್ತು ಇತರ ಹಲವು ದೇಶಗಳಲ್ಲಿ ಟಿಬೆಟ್‌ನ ಜನರು ಚೀನಾ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ದಲೈಲಾಮಾ ಅವರು ಭಾರತದಲ್ಲಿ ಮುಕ್ತವಾಗಿ ಓಡಾಡುತ್ತಿರುವುದಕ್ಕೂ ಚೀನಾ ಆಕ್ಷೇಪಿಸಿದೆ. ಇತ್ತೀಚೆಗೆ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿದೆ.[]

ಭೌಗೋಳಿಕ ಅವಲೋಕನ

[ಬದಲಾಯಿಸಿ]
  • ಚೀನಾ ಮತ್ತು ಭಾರತವನ್ನು ಹಿಮಾಲಯದಿಂದ ಬೇರ್ಪಡಿಸಲಾಗಿದೆ. ಚೀನಾ ಮತ್ತು ಭಾರತವು ಇಂದು ನೇಪಾಳ ಮತ್ತು ಭೂತಾನ್ ದೇಶಗಳೊಂದಿಗೆ ಬಫರ್ ರಾಜ್ಯಗಳಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತವು ಪ್ರತಿಪಾದಿಸಿದ ವಿವಾದಿತ ಕಾಶ್ಮೀರ ಪ್ರದೇಶದ ಭಾಗಗಳನ್ನು ಪಾಕಿಸ್ತಾನ (ಆಜಾದ್ ಕಾಶ್ಮೀರ ಮತ್ತು ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್) ಅಥವಾ ಪಿಆರ್ಸಿ (ಅಕ್ಸಾಯ್ ಚಿನ್) ನಿಂದ ನಿರ್ವಹಿಸಲಾಗುತ್ತಿದೆ. ಅದರ ನಕ್ಷೆಗಳಲ್ಲಿ ಪಾಕಿಸ್ತಾನ ಸರ್ಕಾರವು ಅಕ್ಸಾಯ್ ಚಿನ್ ಪ್ರದೇಶವನ್ನು ಹೆಚ್ಚಾಗಿ ಚೀನಾದಲ್ಲಿ ತೋರಿಸುತ್ತದೆ ಮತ್ತು ಅಕ್ಸಾಯ್ ಚಿನ್ ಪಿಆರ್ಸಿನಿಂದ ಕಾನೂನುಬಾಹಿರವಾಗಿ ಆಕ್ರಮಿಸಲ್ಪಟ್ಟಿರುವುದನ್ನು ಭಾರತ ಹೊಂದಿದೆ ಎಂದು ಗಡಿರೇಖೆಯನ್ನು "ಫ್ರಾಂಟಿಯರ್ ಅನ್ಡಿಫೈನ್ಡ್" ಎಂದು ಲೇಬಲ್ ಮಾಡಿದೆ.
  • ಚೀನಾ ಮತ್ತು ಭಾರತವು ಅರುಣಾಚಲಪ್ರದೇಶದ ಬಹುಪಾಲು ವಿವಾದವನ್ನು ಹೊಂದಿವೆ. ಆದಾಗ್ಯೂ, ಎರಡೂ ರಾಷ್ಟ್ರಗಳು ನೈಜ ನಿಯಂತ್ರಣದ ರೇಖೆಯನ್ನು ಗೌರವಿಸಲು ಒಪ್ಪಿಕೊಂಡಿವೆ.

೨೦೧೭ ರ ಗಡಿ ವಿವಾದ ಬೆಳವಣಿಗೆ

[ಬದಲಾಯಿಸಿ]
  • ಚೀನಾ–ಭಾರತ– ಭೂತಾನ್ ಗಡಿ ಸೇರುವ ಭಾಗದಲ್ಲಿ ರಸ್ತೆ ನಿರ್ಮಿಸುವ ಚೀನಾ ಉದ್ದೇಶದಿಂದಾಗಿ ಗಡಿಯಲ್ಲಿಯ ಯಥಾಸ್ಥಿತಿಗೆ ಧಕ್ಕೆ ತರುತ್ತಿದೆ. ಆದರೆ ಜಗತ್ತಿನ ಎಲ್ಲ ದೇಶಗಳು ಭಾರತದ ನಿಲುವನ್ನು ಬೆಂಬಲಿಸುತ್ತಿವೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ೨೦-೭-೨೦೧೭ ಗುರುವಾರ ರಾಜ್ಯಸಭೆಗೆ ತಿಳಿಸಿದರು.
  • ದೋಕಲಾ ಪ್ರಸ್ಥಭೂಮಿಯಲ್ಲಿ ಭಾರತ ಮತ್ತು ಚೀನಾ ಸೇನೆ ಎದುರುಬದುರಾಗಿ ನಿಂತು 33 ದಿನ ಕಳೆದ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಈ ಬಗ್ಗೆ ಅವರು ಹೇಳಿಕೆ ನೀಡಿದರು.
(ಉತ್ತರದಲ್ಲಿ ಗೆರೆ ಹಾಕಿದ ಸ್ಥಳ-ವಿವಾದಿತ);ಭೂತಾನ್ ನಕ್ಷೆ. ಮೇಲೆ ತೋರಿಸಿದ ಚಂಬಿ ಕಣಿವೆಯ ದಕ್ಷಿಣ ಭಾಗದಲ್ಲಿ ದೊಕ್ಲಾಮ್ ಪ್ರದೇಶವಿದೆ. ಇದನ್ನು ಮೇಲೆ ಲೇಬಲ್ ಮಾಡಲಾಗಿಲ್ಲ, ಆದರೆ ಈ ನಕ್ಷೆಯಲ್ಲಿ ಗುರುತಿಸಲಾಗಿದೆ.
  • ‘ಸಣ್ಣ ದೇಶವಾದ ಭೂತಾನ್ ವಿರುದ್ಧ ಚೀನಾ ತಳೆದಿರುವ ಆಕ್ರಮಣಕಾರಿ ನಡೆಯನ್ನು ಇಡೀ ಅಂತರರಾಷ್ಟ್ರೀಯ ಸಮುದಾಯ ಗಮನಿಸುತ್ತಿದೆ’ ಎಂದರು. ದೋಕಲಾದಲ್ಲಿ ಚೀನಾದ ಸೇನೆ ರಸ್ತೆ ನಿರ್ಮಿಸುತ್ತಿರುವ ಬಗ್ಗೆ ಭಾರತದಲ್ಲಿಯ ಭೂತಾನ್ ರಾಯಭಾರಿ ಲಿಖಿತ ಪ್ರತಿಭಟನೆ ದಾಖಲಿಸಿದ್ದಾರೆ ಎಂದೂ ಸುಷ್ಮಾ ಅವರು ತಿಳಿಸಿದರು.
  • ದೋಕಲಾದಲ್ಲಿ ಚೀನಾ ಸೇನೆಯು ರಸ್ತೆ ನಿರ್ಮಿಸುವುದನ್ನು ತಡೆಯಲು ಭಾರತದ ಸೇನೆ ಜೂನ್ 18ರಂದು ಅಲ್ಲಿಗೆ ತೆರಳಿದ ನಂತರ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಗಡಿ ವಿವಾದದ ಬಗ್ಗೆ ಚೀನಾ ಮತ್ತು ಭೂತಾನ್ ಮಾತುಕತೆ ನಡೆಸುತ್ತಿವೆ. ಅದೇ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ವಿಶೇಷ ಪ್ರತಿನಿಧಿಗಳು ಸಹ ಮಾತುಕತೆ ನಡೆಸುತ್ತಿದ್ದಾರೆ. ಮೂರು ದೇಶಗಳ ಗಡಿ ಕೂಡುವ ಭಾಗದಲ್ಲಿಯ ವಿವಾದವನ್ನು ಭೂತಾನ್ ಸಲಹೆ ಪಡೆದು ಭಾರತದ ಜತೆ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಲು ಚೀನಾ 2012ರಲ್ಲಿ ಒಪ್ಪಿಕೊಂಡಿದೆ. ಆದರೂ ಚೀನಾ ಸೇನೆ ಈಗ ಅಲ್ಲಿ ಭರದಿಂದ ರಸ್ತೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ.
  • ಚೀನಾದ ಈ ಆಕ್ರಮಣಕಾರಿ ಕ್ರಮವು ಭೂತಾನ್ ಮತ್ತು ಭಾರತದ ಭದ್ರತೆಗೆ ಆತಂಕ ಒಡ್ಡಿದೆ. ಎರಡೂ ಕಡೆಯ ಸೈನಿಕರು ವಾಪಸಾಗಬೇಕು ಎಂದು ಭಾರತ ಸಲಹೆ ಮಾಡಿದೆ. ಭಾರತ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದೆ.[]

ಚೀನಾದ ಬೆದರಿಕೆ

[ಬದಲಾಯಿಸಿ]
  • ಚೀನಾದ ದಿನ ಪತ್ರಿಕೆ ‘ದಿ ಗ್ಲೋಬಲ್‌ ಟೈಮ್ಸ್‌’,ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಳ್ಳು ಹೇಳುತ್ತಿದ್ದಾರೆ. ವಿಶ್ವದ ಹಲವು ದೇಶಗಳು ತಮಗೆ ಬೆಂಬಲ ನೀಡುತ್ತವೆ ಎಂದು ಸಂಸತ್ತಿನಲ್ಲಿ ಮಾತನಾಡುತ್ತಿದ್ದಾರೆ. ಭಾರತದ ಉದ್ದೇಶ ಚೀನಾ ಭೂಪ್ರದೇಶವನ್ನು ಆತಿಕ್ರಮಿಸುವುದೇ ಆಗಿದೆ. ಅದು ನೀಡುತ್ತಿರುವ ಪ್ರಚೋದನೆ ಅಂತರರಾಷ್ಟ್ರೀಯ ಸಮುದಾಯದ ಗಮನಕ್ಕೂ ಬಂದಿದ್ದು, ಯಾವ ದೇಶವೂ ಭಾರತಕ್ಕೆ ಬೆಂಬಲ ನೀಡುವುದಿಲ್ಲ’ ಎಂದು ತನ್ನ ವರದಿಯಲ್ಲಿ ಅದು ಉಲ್ಲೇಖಿಸಿದೆ. ‘ಭಾರತ ಚೀನಾದ ತಾಳ್ಮೆ ಪರೀಕ್ಷಿಸುತ್ತಿದೆ. ಒಂದು ವೇಳೆ ದೋಕಲಾನಿಂದ ತನ್ನ ಸೇನೆಯನ್ನು ವಾಪಸ್ಸು ಕರೆಯಿಸಿಕೊಳ್ಳದಿದ್ದರೆ ಯುದ್ಧಕ್ಕೆ ಸಿದ್ಧವಾಗಬೇಕಾಗುತ್ತದೆ’ ಎಂದು ಈ ರೀತಿ ಬರೆದುಕೊಂಡಿದೆ.
  • ಟಿಬೆಟ್‌ನಲ್ಲಿ ನಾವು ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ಹಾಗೂ ಸೇನಾ ಕವಾಯತು ನಡೆಸುತ್ತಿರುವುದು ಕೇವಲ ತೋರಿಸಿಕೊಳ್ಳುವುದಕ್ಕಲ್ಲ’ ಎಂದೂ ಹೇಳಿರುವ ‘ಟೈಮ್ಸ್‌’, ‘ಭಾರತ ಇದೇ ನಡೆಯನ್ನು ಮುಂದುವರಿಸಿದರೆ ಯುದ್ಧ ಸಂಭವಿಸಲಿದೆ. ಯುದ್ಧದಲ್ಲಿ ಸೋತು ತನ್ನ ಸ್ವಂತ ಭೂಪ್ರದೇಶವನ್ನೂ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದೆ.[]

ಹಿಂದೂ ರಾಷ್ಟ್ರೀಯವಾದವು ಭಾರತ–ಚೀನಾ ಯುದ್ಧ ಬಯಸುತ್ತಿದೆ ಎಂದು ಚೀನಾ ಹೇಳಿಕೆ

[ಬದಲಾಯಿಸಿ]
  • ಉಭಯ ದೇಶಗಳ ನಡುವಣ ಗಡಿ ಸಮಸ್ಯೆ ಆರಂಭವಾದಾಗಿನಿಂದ ಭಾರತದ ರಾಷ್ಟ್ರೀಯವಾದಿ ಮನಸ್ಥಿತಿಯು ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದೆ. ಇದಕ್ಕೆ ಪ್ರಧಾನ ಮಂತ್ರಿ ಚುನಾವಣೆ ಬಳಿಕ ಪ್ರೋತ್ಸಾಹ ಸಿಕ್ಕಂತಾಗಿದೆ’ ಎಂದು ಹೇಳಿಕೊಂಡಿದೆ. ಭಾರತ ರಾಜತಾಂತ್ರಿಕವಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ, ವಿಶೇಷವಾಗಿ ಚೀನಾ ಹಾಗೂ ಪಾಕಿಸ್ತಾನಗಳ ವಿಚಾರದಲ್ಲಿ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಮಂದಾಗಿದೆ ಎಂದು ಸಹ ಅಭಿಪ್ರಾಯಪಟ್ಟಿದೆ. ‘ದೋಕಲಾ ಪ್ರದೇಶದಲ್ಲಿ ಉಂಟಾಗಿರುವ ಗಡಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಹಿಂದೂ ರಾಷ್ಟ್ರೀಯ ವಾದಿಗಳು ಚೀನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಡುತ್ತಿದ್ದಾರೆ. ಧಾರ್ಮಿಕ ರಾಷ್ಟ್ರೀಯವಾದಿಗಳ ಹೋರಾಟ ತೀವ್ರವಾದರೆ ಮೋದಿ ಸರ್ಕಾರದಿಂದ ಅವರನ್ನು ತಡೆಯಲು ಸಾಧ್ಯವಿಲ್ಲ.

ಚೀನಾ ಹೇಳಿಕೆಗಳು

[ಬದಲಾಯಿಸಿ]
  • ರಾಜಕೀಯಕ್ಕಾಗಿ ಅತಿಕ್ರಮಣ ಬೇಡ
  • ‘ಭಾರತೀಯ ಸೇನೆಯ ಸಾಮರ್ಥ್ಯ ಚೀನಾ ಸೇನೆಗಿಂತ ಬಹಳಷ್ಟು ಹಿಂದುಳಿದಿದ್ದು, ಯುದ್ಧವನ್ನು ಬಯಸುವುದಾದರೆ ಭಾರತಕ್ಕೆ ಸೋಲು ಖಂಡಿತ’ ಎಂದು ಬರೆದುಕೊಂಡಿದೆ.[]

(ಚೀನಾ ಸೇನಾಪಡೆಯಿಂದ ಟಿಬೆಟ್‌ಗೆ ಯುದ್ಧ ಸಾಮಗ್ರಿ ಸಾಗಣೆ)

ಭಾರತ ಮತ್ತು ಚೀನಾಗಳ ಹೋಲಿಕೆ

[ಬದಲಾಯಿಸಿ]
ವಿವರ ಭಾರತಗಣರಾಜ್ಯ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಟಿಪ್ಪಣಿ
ಜನಸಂಖ್ಯೆ 1,337,364,960 1,386,301,390 4,89,36,430 ಹೆಚ್ಚು; ಏರಿಕೆ ಸ್ಥಗಿತವಾಗಿದೆ.
ಪ್ರದೇಶ 3,287,240 km²(ಚ.ಕಿಮೀ) (1,269,210 ಚದರ ಮೈಲಿ) 9,640,821 ಚದರ ಕಿ.ಮೀ (3,704,427 ಚದರ ಮೈಲಿ) ಭಾರತದ 2.93 /3ರಷ್ಟು ದೊಡ್ಡದು
ಜನ ಸಾಂದ್ರತೆ 452 / km² 148 / km² ಜನಸಾಂದ್ರತೆ ಬಾರತಕ್ಕಿಂತ ಬಹಳ ಕಡಿಮೆ.
ರಾಜಧಾನಿ ದೆಹಲಿ ಬೀಜಿಂಗ್
ಅತಿದೊಡ್ಡ ನಗರ ಮುಂಬೈ ಶಾಂಘೈ
ಸರ್ಕಾರ ಫೆಡರಲ್ ಗಣರಾಜ್ಯ, ಸಂಸದೀಯ ಪ್ರಜಾಪ್ರಭುತ್ವ ಸಮಾಜವಾದಿ, ಒಂದೇ-ಪಕ್ಷದ ರಾಜ್ಯ
ಮೊದಲ ನಾಯಕ ಜವಾಹರಲಾಲ್ ನೆಹರೂ ಮಾವೋ ಝೆಡಾಂಗ್
ಪ್ರಸ್ತುತ ನಾಯಕ ನರೇಂದ್ರ ಮೋದಿ ಕ್ಸಿ ಜಿಂಪಿಂಗ್
ಅಧಿಕೃತ ಭಾಷೆ ಹಿಂದಿ, ಇಂಗ್ಲೀಷ್, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮರಾಠಿ, ಮೈಟಿ, ನೇಪಾಳಿ, ಓಡಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಮೈಥಿಲಿ, ಡೋಗ್ರಿ, ಸಂತಾಲಿ, ಬೊಡೋ ಮತ್ತು ಉರ್ದು ಭಾರತದಲ್ಲಿ ಅಧಿಕೃತ ಸ್ಥಾನಮಾನದೊಂದಿಗೆ) ಸ್ಟ್ಯಾಂಡರ್ಡ್ ಚೈನೀಸ್ (ಮ್ಯಾಂಡರಿನ್), ಮಂಗೋಲಿಯನ್, ಟಿಬೆಟಿಯನ್, ಉಯ್ಘರ್, ಝುವಾಂಗ್
ಮುಖ್ಯ ಧರ್ಮಗಳು ಹಿಂದೂ ಧರ್ಮ (79.8%), ಇಸ್ಲಾಂ ಧರ್ಮ (14.2%), ಕ್ರಿಶ್ಚಿಯನ್ ಧರ್ಮ (2.5%), ಸಿಖ್ ಧರ್ಮ (1.9%) ಬೌದ್ಧಧರ್ಮ (0.8%), ಜೈನ ಧರ್ಮ (0.4%) ಇತರ ಧರ್ಮಗಳು (0.6%) 10% ಪ್ರತಿಯೊಂದು: ಧಾರ್ಮಿಕ-ಅಲ್ಲದ, ಜಾನಪದ ಧರ್ಮಗಳು ಮತ್ತು ಟಾವೊ ತತ್ತ್ವ, ಬೌದ್ಧ ಧರ್ಮ. <10% ಪ್ರತಿ: ಇಸ್ಲಾಂ ಧರ್ಮ, ಕ್ರಿಶ್ಚಿಯನ್ ಧರ್ಮ, ಬಾನ್.
ಜಿಡಿಪಿ (ನಾಮಮಾತ್ರ) (2016) ಯುಎಸ್ $ 2.26 ಟ್ರಿಲಿಯನ್ ಯುಎಸ್ $ 11.22 ಟ್ರಿಲಿಯನ್ ಭಾರತದೇಶದ ಆದಾಯದ 5 ರಷ್ಟು ಹೆಚ್ಚು
ಜಿಡಿಪಿ (ನಾಮಮಾತ್ರದ) ತಲಾವಾರು (2016) ಯುಎಸ್ $ 1,723 ಯುಎಸ್ $ 8,113 ತಲಾವಾರು ಆದಾಯ ಭಾರತಕ್ಕಿಂತ 4.5 ರಷ್ಟು ಹೆಚ್ಚು
ಜಿಡಿಪಿ ವಿನಿಮಯ ದರದ ಜಿಡಿಪಿ (ಪಿಪಿಪಿ) (2016) ಯುಎಸ್ $ 8.720 ಟ್ರಿಲಿಯನ್ ಯುಎಸ್ $ 21.26 ಟ್ರಿಲಿಯನ್
ಮಾನವ ಅಭಿವೃದ್ಧಿ ಸೂಚ್ಯಂಕ (2015) 0.624 (ಮಧ್ಯಮ) 0.738 (ಅಧಿಕ)
ವಿದೇಶಿ ವಿನಿಮಯ ನಿಕ್ಷೇಪಗಳು (ಸೆಪ್ಟೆಂಬರ್ 2016) ಯುಎಸ್ $ 350,584 ಮಿಲಿಯನ್ ಯುಎಸ್ $ 3,185,916 ಮಿಲಿಯನ್ ಭಾರತಕ್ಕಿಂತ ಸುಮಾರು 9 ರಷ್ಟು ಹೆಚ್ಚು
ಮಿಲಿಟರಿ ವೆಚ್ಚ 45.785 ಶತಕೋಟಿ USD (2.5% ಜಿಡಿಪಿ) ಯುಎಸ್ $ 166.107 ಶತಕೋಟಿ (2012) (ಜಿಡಿಪಿ ಯ 2.0%) ಭಾರತಕ್ಕಿಂತ ಸುಮಾರು ನಾಲ್ಕರಷ್ಟು ಹೆಚ್ಚು
ಸಕ್ರಿಯ ಸೈನಿಕರು: 13,25,000 (21,42,821 ಮೀಸಲು ಸಿಬ್ಬಂದಿ) ಸಕ್ರಿಯ ಪಡೆಗಳು: ಸುಮಾರು 22,85,000 (8,00,000 ಮೀಸಲು ಸಿಬ್ಬಂದಿ) ವಿಶ್ವದಲ್ಲೇ ದೊಡ್ಡ ಪಡೆ
ಆಧಾರ: ಇಂಗ್ಲಿಷ್ ವಿಕಿಯಿಂದ

ಭಾರತ ಮತ್ತು ಚೀನಾಗಳ ಸೇನಾಬಲ- ಮಾರ್ಚಿ,2೦21

[ಬದಲಾಯಿಸಿ]
  • ಮಾರ್ಚಿ,2೦21 ರಲ್ಲಿ ‘ಮಿಲಿಟರಿ ಡೈರೆಕ್ಟ್‌’ ವೆಬ್‌ಸೈಟ್‌ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ ಜಗತ್ತಿನಲ್ಲೇ ಚೀನಾ ಅತ್ಯಂತ ಬಲಿಷ್ಠ ಮಿಲಿಟರಿ ಪಡೆಯನ್ನು ಹೊಂದಿ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದೆ.ಭಾರತ ನಾಲ್ಕನೇ ಸ್ಥಾನದಲ್ಲಿದೆ. ಮಿಲಿಟರಿ ಬಜೆಟ್‌ನಲ್ಲಿನ ಮೊತ್ತ,ಸಕ್ರಿಯ ಸೇನಾ ಸಿಬ್ಬಂದಿ, ವಾಯುಪಡೆ, ಭೂಸೇನೆ ಮತ್ತು ನೌಕಾಪಡೆಯ ಸಾಮರ್ಥ್ಯಗಳು, ಪರಮಾಣು ಸಂಪನ್ಮೂಲಗಳು, ಸರಾಸರಿ ವೇತನ ಮತ್ತು ಉಪಕರಣಗಳ ತೂಕ ಮುಂತಾದ ಹಲವಾರು ಅಂಶಗಳನ್ನು ಪರಿಗಣಿಸಿ ‘ಮಿಲಿಟರಿ ಶಕ್ತಿ ಸೂಚ್ಯಂಕ’ ಸಿದ್ಧಪಡಿಸಲಾಗಿದೆ. ಈ ಸೂಚ್ಯಂಕದ ಅನ್ವಯ ರಾಷ್ಟ್ರಗಳಿಗೆ ಅಂಕಗಳನ್ನು ನೀಡಲಾಗಿದೆ ಎಂದು ಆ ವರದಿ ತಿಳಿಸಿದೆ.
  • ಸೂಚ್ಯಂಕದ ಅನ್ವಯ ಚೀನಾದೇಶ 100 ಅಂಕಗಳಿಗೆ 82 ಅಂಕಗಳನ್ನು ಗಳಿಸಿದೆ. ಪ್ರತಿ ವರ್ಷ 732 ಶತಕೋಟಿ ಡಾಲರ್‌ (ರೂ.53.02 ಲಕ್ಷ ಕೋಟಿ) ಖರ್ಚು ಮಾಡುವ ಅಮೆರಿಕ, ಜಗತ್ತಿನಲ್ಲೇ ಮಿಲಿಟರಿಗಾಗಿ ಅತಿ ಹೆಚ್ಚು ವೆಚ್ಚ ಮಾಡುವ ದೇಶವಾಗಿದೆ. ಚೀನಾ 261 ಶತಕೋಟಿ ಡಾಲರ್‌ (ರೂ.18.90 ಲಕ್ಷ ಕೋಟಿ) ಮತ್ತು ಭಾರತ 71 ಶತಕೋಟಿ ಡಾಲರ್‌ (ರೂ.5.143 ಲಕ್ಷ ಕೋಟಿ)ವೆಚ್ಚ ಮಾಡುತ್ತದೆ.
  • ಜಗತ್ತಿನಲ್ಲಿ ಹೋಲಿಕೆಗೆ ಚೀನಾದ ನೌಕಾಪಡೆ ಬಲಿಷ್ಠವಾದುದು. ಅಮೇರಿಕಾದ ವಾಯುಪಡೆ ಬಲಿಷ್ಠವಾದುದು. ರಷ್ಯಾದ ಭೂಸೇನೆ ಬಲಿಷ್ಟವಾದುದು.
  • ವರದಯಂತೆ ‘ಏರ್‌ಶಿಪ್‌’ಗಳ ಸಾಮರ್ಥ್ಯ ಅಮೆರಿಕ ಬಳಿ ಒಟ್ಟು 14,141 ‘ಏರ್‌ಶಿಪ್‌’ಗಳಿವೆ. ರಷ್ಯಾ ಬಳಿ 4,682; ಹಾಗೂ ಚೀನಾ ಬಳಿ 3,587 ‘ಏರ್‌ಶಿಪ್‌’ಗಳಿವೆ. []

ಅಮದು ರಫ್ತು

[ಬದಲಾಯಿಸಿ]
  • 2014 ರಲ್ಲಿ ಭಾರತದಿಂದ ಚೀನಾದ ಆಮದು 16.4 ಬಿಲಿಯನ್‍ ಡಾಲರ್ (1312೦೦ ಕೋಟಿ ರೂ. ) ಅಥವಾ ಅದರ ಒಟ್ಟಾರೆ ಚೀನಾದ ಆಮದಿನ 0.8%,ಭಾರತದ ಅಮದು ಮತ್ತು ಭಾರತದ ಒಟ್ಟಾರೆ ರಫ್ತಿನ 4.2%.ರಷ್ಟು ಚೀನಾದ ರಪ್ತು ಇದೆ .
  • ಚೀನಾದಿಂದ ಭಾರತಕ್ಕೆ ರಫ್ತು ಪ್ರಮಾಣ 76.9 ಬಿಲಿಯನ್ ಡಾಲರ್, (6152೦೦ಕೋಟಿ ರೂ. ಅಥವಾ ಅದರ ಒಟ್ಟಾರೆ ರಫ್ತಿನ 3.1%.[೧೦][೧೧][೧೨]
  • ಮಾರ್ಚ್ 2020 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಭಾರತವು ಚೀನಾದಿಂದ 65.3 $ ಬಿಲಿಯನ್ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಮತ್ತು 16.6 $ ಬಿಲಿಯನ್ ರಫ್ತು ಮಾಡಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. ಹೀಗೆ ಚೀನಾವು ವಿದೇಶ ವ್ಯಾಪಾರದಲ್ಲಿ ಭಾರತವನ್ನು ವಿನಿಮಯ ಕೊರತೆಯ ದೇಶವನ್ನಾಗಿ ಮಾಡಿದೆ. [೧೩]

ಹೆಚ್ಚಿನ ಮಾಹಿತಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. Buddhism, Diplomacy, and Trade: The Realignment of Sino-Indian Relations ...
  2. "Why Indo-China ties will be more favourable than Sino-Pak". Archived from the original on 2010-10-19. Retrieved 2017-07-05.
  3. [Bhattacharji, Romesh (4 December 2009). "Where is the dam?". The Hindu. Frontline. Retrieved 4 November 2020.-151]
  4. ಆಳ-ಅಗಲ | ಚೀನಾದಿಂದ ಮತ್ತೆ ಉಪಟಳ: ಗಡಿ ಸನಿಹ ಅಣೆಕಟ್ಟೆ;;;ಪ್ರಜಾವಾಣಿ ವಾರ್ತೆ Updated: 13 ಮಾರ್ಚ್ 2021,
  5. ಭಾರತ–ಚೀನಾ ಬಾಂಧವ್ಯ: ವೃದ್ಧಿಯಾಗದ ವಿಶ್ವಾಸ;ಪ್ರಜಾವಾಣಿ ವಾರ್ತೆ;4 Jul, 2017
  6. ಸುಷ್ಮಾ ಹೇಳಿಕೆ ;ಸಿಕ್ಕಿಂ ಬಿಕ್ಕಟ್ಟು ಭಾರತಕ್ಕೆ ಬೆಂಬಲ;ಪಿಟಿಐ;21 Jul, 2017[ಶಾಶ್ವತವಾಗಿ ಮಡಿದ ಕೊಂಡಿ]
  7. ಭಾರತ–ಚೀನಾ ಸೇನೆಗಳ ಹೋಲಿಕೆ ಹಾಸ್ಯಾಸ್ಪದ: ಟಿಬೆಟ್‌ನಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿರುವುದು ತೋರಿಕೆಗಲ್ಲ;21 Jul, 2017
  8. ಹಿಂದೂ ರಾಷ್ಟ್ರೀಯವಾದವು ಭಾರತ–ಚೀನಾ ಯುದ್ಧ ಬಯಸುತ್ತಿದೆ: ಚೀನಾ ಪತ್ರಿಕೆ ವರದಿ;ಏಜೆನ್ಸಿಸ್‌;20 Jul, 2017
  9. ಬಲಿಷ್ಠ ಸೇನೆ: ಚೀನಾ ಮೊದಲು, ಭಾರತಕ್ಕೆ ನಾಲ್ಕನೇ ಸ್ಥಾನ;;ಪಿಟಿಐ Updated: 21 ಮಾರ್ಚ್ 2021
  10. [Http://www.worldsrichestcountries.com/top_china_exports.html ಡಾಲರ್ 16.4 ಬಿಲಿಯನ್ ಅಥವಾ ಅದರ ಒಟ್ಟಾರೆ ರಫ್ತಿನ 5.1%.]
  11. 2016 ಅಮದು ರಫ್ತು2016
  12. 2016 ಅಮದು ರಫ್ತು2016
  13. Trade Statistics, India Department of Commerce".156
{{bottomLinkPreText}} {{bottomLinkText}}
ಭಾರತ ಚೀನಾ ಸಂಬಂಧಗಳು
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?