For faster navigation, this Iframe is preloading the Wikiwand page for ಪಾರ್ಸಿಕರು.

ಪಾರ್ಸಿಕರು

ಚಿತ್ರ:Parsee girl.jpg
'ಪಾರ್ಸಿ ಹುಡುಗಿ'

ನವ್ ಸಾರಿ ಮತ್ತು ಮುಂಬಯಿ ಗೂ, ಹಾಗೂ ಪಾರ್ಸಿಗಳಿಗೂ, ಒಂದು ಅಪೂರ್ವಸಂಬಂಧ.[] ಆಗ ಮುಂಬಯಿನ ೭ ದ್ವೀಪಗಳು ಪೋರ್ಚುಗೀಸರ ಅಳ್ವಿಕೆಯಲ್ಲಿದ್ದವು. ದೊರಾಬ್ಜಿ ನಾನಾಭಾಯ್ ಎನ್ನುವ ಪಾರ್ಸಿ ಗೃಹಸ್ತ ೧೬೪೦ ರಲ್ಲಿ, ಮುಂಬಯಿನಲ್ಲಿ ನೆಲೆಸಲು ಬಂದ ಪ್ರಥಮ ಪಾರ್ಸಿ. ಮುಂಬಯಿ, ೧೬೬೧ ರಲ್ಲಿ ಬ್ರಿಟಿಷರ ಅಧೀನಕ್ಕೆ ಬಂತು. ಬ್ರಿಟಿಷರು ಮುಂಬಯಿನ ಪಾರ್ಸಿಗಳಿಗೆ ಮೊದಲು ದಖ್ಮಾ ಅಥವಾ Tower of Silence , ಸ್ಥಳವನ್ನು ಬಿಟ್ಟುಕೊಟ್ಟರು. ಲೊವ್ಜಿ ನುಝರ್ವಾನ್ಜಿ ವಾಡಿಯ, ಸೂರತ್ ಬಂದರಲ್ಲಿ ಫೋರ್ಮನ್ ಆಗಿ ಕೆಲಸಮಾಡುತ್ತಿದ್ದರು.ಬ್ರಿಟಿಷರ ಆಹ್ವಾನದ ಮೇರೆಗೆ, ಮುಂಬಯಿಗೆ ಬಂದರು. ಇನ್ನೊಬ್ಬ ಪ್ರಮುಖ ಪಾರ್ಸಿಉದ್ಯೋಗಪತಿ, ಕವಾಸ್ ಜಿ ನಾನಾಭಾಯ್ ದಾವರ್ ಸ್ಥಾಪಿಸಿದ, ಪ್ರಥಮ ಟೆಕ್ಸ್ ಟೈಲ್ ಮಿಲ್ , The Bombay Textile Mills, ೧೮೫೪ ರಲ್ಲಿ ಪ್ರಾರಂಭವಾಯಿತು. ಆಗ ಮುಂಬಯಿನಲ್ಲಿ (೧೮೭೦) ರಲ್ಲಿ ೧೩ ಮಿಲ್ ಇತ್ತು. (೧೮೯೫) ನಲ್ಲಿ ೭೦ , (೧೯೧೫) ರಲ್ಲಿ ೮೩, ಎರಡನೆಯ ವಿಶ್ವಯುದ್ಧದ ನಂತರ, ಜಪಾನ್ ದೇಶದ ಔದ್ಯೋಗಿಕ ಪ್ರಗತಿಯಿಂದಾಗಿ, ೫೩ ಮಿಲ್ ಮಾತ್ರ. ೧೮೬೦ ಯಲ್ಲಿ ಪಾರ್ಸಿ ಹೆಣ್ಣುಮಕ್ಲಳು ವಿದ್ಯೆಯಲ್ಲಿ ಮುಂದಿರುವುದಲ್ಲದೆ, ಅವರ ಪತಿಯಜೊತೆಯಲ್ಲಿ ಕೂಡಿ ಊಟಮಾಡುತ್ತಿದ್ದರು. ನಂತರವಲ್ಲ. ಸ್ವತಂತ್ರಸಮರದಲ್ಲಿ, ಮೆಡಮ್ ಕಾಮಾ, ಸರ್ ಫಿರೋಜ್ ಶಾ ಮೆಹ್ತ ಮುಂತಾದವರು ದುಡಿದರು. ಪಾರ್ಸಿಗಳು ಮುಂಬಯಿನ ರಸ್ತೆಗಳು, ಕೊಲಾಬಾದ ಕಾಸ್ ವೇ ಹಾಗೂ ಹಲವಾರು ಕಟ್ಟಡಗಳನ್ನು ಕಟ್ಟಲು ಸಹಾಯಮಾಡಿದರು.

ಚಿತ್ರ:Parsee fire temple.jpg
'ಅಗ್ನಿ ದೇವತೆ'

'ಇರಾನ್' ದೇಶದಿಂದ ವಲಸೆಬಂದರು

[ಬದಲಾಯಿಸಿ]

'ಇರಾನ್' ದೇಶದಿಂದ ತಲೆಮರಸಿಕೊಂಡು ಶತಮಾನಗಳ ಹಿಂದೆ ವಲಸೆ ಬಂದ ಪಾರ್ಸಿಗಳು, ಭಾರತೀಯರ ಜೊತೆಸೇರಿ, ತಾವೂ ಭಾರತೀಯರಾದರು. ಭಾರತದ ಬಗ್ಗೆ ಅವರಿಗೆ, ಅಪಾರ ಪ್ರೀತಿ, ಗೌರವ. ಮತಾಂತರದ ಭೀತಿಯಿಂದ ತಮ್ಮ ನಾಡು, 'ಇರಾನ್' ನಿಂದ ಓಡಿಬಂದ ಪಾರ್ಸಿಗಳು ಗುಜರಾತ್ ದೊರೆಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಅವರಿಂದ ಭಾರತದ ಸರ್ವತೋಮುಖ ಬೆಳವಣಿಗೆಯಾಗಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಅವರ ಕೊಡುಗೆ ಅನನ್ಯ. ಭಾರತದಲ್ಲಿ ಪಾರ್ಸಿಗಳ ಸುಮಾರು ೧೦೦೦ ವರ್ಷಗಳ ಸುದೀರ್ಘ ಇತಿಹಾಸವಿದೆ. ಭಾರತದಲಿ ಮೊಟ್ಟಮೊದಲು ಕಾರ್ಖಾನೆಗಳನ್ನು ಸ್ಥಾಪಿಸಿ, ಸ್ಥಳೀಯಜನರಿಗೆ ಉದ್ಯೋಗಗಾವಕಾಶಗಳನ್ನು ಕಲ್ಪಿಸಿಕೊಡುವುದರ ಜೊತೆಗೆ, ದೇಶದ ಆರ್ಥಿಕ ಪ್ರಗತಿಯಲ್ಲಿ ತಮ್ಮ ಕಾಣಿಕೆಯನ್ನು ನೀಡಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ತನುಮನಧನಗಳನ್ನು ತ್ಯಾಗಮಾಡಿ ದುಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದೇಶದ ಸ್ವಾತಂತ್ರ್ಯಕ್ಕಾಗಿ, ಬ್ರಿತಿಷ್ ಸತ್ತೆಯ ವಿರುದ್ಧ ಹೋರಾಡಿದ ನಮ್ಮ ನೆಚ್ಚಿನ ಮುಖಂಡರಾಗಿದ್ದ, 'ಮಹಾತ್ಮಗಾಂಧಿ', 'ಲೊಕಮಾನ್ಯ ತಿಳಕ್', 'ಗೋಪಾಲಕೃಷ್ಣ ಗೋಖಲೆ' ಮುಂತಾದವರ ಅಸಹಕಾರ ಚಳುವಳಿಗೆ ಸ್ವಯಂ ಇಚ್ಛೆಯಿಂದ ಅಪಾರಹಣಸಹಾಯವನ್ನು 'ಸರ್ ರತನ್ ಟಾಟಾ' ರವರು ಮಾಡಿದ್ದರು. 'ಟಾಟ ಟ್ರಸ್ಟ್' ನಿಂದ ಮಿಲಿಯಗಟ್ಟಲೆ ಹಣವನ್ನು ದೀನರ, ಆರ್ತರ ಸಹಾಯಕ್ಕೆ, ಟಾಟ ಸಂಸ್ಥೆಯ ಮಹಾನಿರ್ದೇಶಕರೆಲ್ಲಾ ವಿನಿಯೋಗಿಸುತ್ತಲೇ ಬಂದಿದ್ದಾರೆ. ಇನ್ನೂ ಹಲವಾರು ಹೆಸರಾಂತ ಪಾರ್ಸಿಗಳು ತಮ್ಮ ಯೋಗದಾನವನ್ನು ಅನೇಕ ಕ್ಷೇತ್ರಗಳಲ್ಲಿ ಧನಸಹಾಯಮಾಡುವ ಮೂಲಕ ಮಾಡುತ್ತಾ ಬಂದಿದ್ದಾರೆ. ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ಸಂಶೋಧನಾಲಯಗಳು, ದೇಶದಾದ್ಯಂತ 'ಟಾಟ' ರವರ ಮೂಲಧ್ಯೇಯವನ್ನು ಪರಿಪಾಲಿಸುವಲ್ಲಿ ಸಕ್ರಿಯವಾಗಿವೆ.

ಆರ್ತರಿಗೆ ಬಡವರಿಗೆ, ಟಾಟ ಸಂಸ್ಥೆ ಸದಾ ಆರ್ಥಿಕ ನೆರವು ಕೊಡುತ್ತಾ ಬಂದಿದೆ

[ಬದಲಾಯಿಸಿ]

'ಪಾರ್ಸಿಗಳು' ವಿಶೇಷತಃ ಶಾಂತಿಪ್ರಿಯರು, ವಿದ್ಯಾವಂತರು, ಸಹಾಯಮಾಡಲು ಯಾವಾಗಲೂ ಸಿದ್ಧರಾಗುವರು, ಮತ್ತು ಎಲ್ಲದರಲ್ಲೂ ಮುಂದಾಳುಗಳು. ಹಲವಾರು ಪ್ರಥಮಗಳನ್ನು ತಮ್ಮ ಕಾರ್ಯವಿಧಿಯಲ್ಲಿ ಮಾಡಿತೋರಿಸಿದ್ದಾರೆ. ಮುಂಬಯಿನ ಪ್ರಥಮ ಬಟ್ಟೆಗಿರಣಿಯನ್ನು ೧೮೫೪ ರಲ್ಲೇ, ಕವಾಸ್ ಜಿ ದಾವರ್ ಎಂಬ ಪಾರ್ಸಿ ಉದ್ಯೋಗಪತಿ ಪ್ರಾರಂಭಿಸಿದರು. ಮುಂಬಯಿನ ಪ್ರಥಮ ಹೋಟೆಲ್ ತಾಜ್ ನ ನಿರ್ಮಾಣವನ್ನು ಮಾಡಿದ ಖ್ಯಾತಿ ಜಮ್ ಸೆಟ್ ಜಿ ನುಝರ್ವಾನ್ ಜಿ ಟಾಟಾ ರವರದು. ಜೆ. ಆರ್. ಡಿ ಟಾಟಾರವರು, ವಾಯುಯಾನವನ್ನು ಅಭ್ಯಾಸಮಾಡಿ, ಅದನ್ನು ಭಾರತದಲ್ಲಿ ಶುರುಮಾಡಿದ ಪ್ರಥಮರು. ಪಾರ್ಸಿಗಳು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಅತ್ಯಂತ ಪರಿಶ್ರಮ ಹಾಗೂ ಮುಂದಾಳತ್ವದಿಂದ, ದೇಶದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕೆಲವು ಪ್ರಮುಖಪಾರಸಿಗಳನ್ನು ಇಲ್ಲಿ ಹೆಸರಿಸುವುದು ಸೂಕ್ತ : ಸೋರಾಬ್ ಜಿ, ಮೋದಿ, ಕಾಮ, ವಾಡಿಯ, ಜೀಜಿಭಾಯ್, ರೆಡಿಮನಿ, ಡ್ಯಾಡಿ ಸೇಠ್, ಪೆಟಿಟ್, ಪಟೇಲ್, ಮೆಹ್ತಾ, ಆಲ್ ಬ್ಲೆಸ್, ಬಿ. ಪಿ. ವಾಡಿಯ, ಟಾಟಾ, ದಾದಾಭಾಯ್ ನವರೋಜಿ, ಸರ್ ಮೋದಿ, ಅರ್ದೇಶಿರ್ ದಲಾಲ್, ಗೋದ್ರೆಜ್, ನಾನಿ ಪಾಲ್ಖಿವಾಲ, ಜನರಲ್. ಮಾಣಿಕ್ ಶಾ, ನಾರಿ ಕಂಟ್ರಾಕ್ಟರ್, ಪಾಲಿ ಉಮ್ರೀಗರ್, ಝುಬಿನ್ ಮೆಹ್ತಾ, ಡಾ. ದಾರುವಾಲ, ಸೋಲಿ ಸೊಹ್ರಾಬ್ ಜಿ, ಆರ್. ಡಿ ಮರ್ಝ್ಬಾನ್, ರಾನಿ ಸ್ಕ್ರೂ ವಾಲ, ಬೇಝಾನ್ ದಾರುವಾಲ, ಪರ್ಸಿಸ್ ಖಂಬಾಟ, ಫರೂಕ್ ಎಂಜಿನೀರ್, ಮೆಹರ್ ಜೆಸ್ಸಿಯ, ಡಾ. ಭಾಭಾ, ಮುಂತಾದವರು. ಇಂತಹ ಪಾರ್ಸಿಗಳ ಪೂರ್ವ ವೃತ್ತಾಂತವನ್ನು ತಿಳಿಯುವುದು ಅತ್ಯವಶ್ಯಕ.

ಸೈರಸ್ ದಿ ಗ್ರೇಟ್, ಆರ್ಕೆಮೇನಿಯ ಸಾಮ್ರಾಜ್ಯಸ್ಥಾಪಕನ ಆಳ್ವಿಕೆ, ನಂತರ ಡೇರಿಯಸ್ ನ ರಾಜ್ಯಾಡಳಿತ :

[ಬದಲಾಯಿಸಿ]

ಪರ್ಶಿಯದ ಮೂಲದವರಾದ ಪಾರ್ಸಿಗಳು, ಒಂದುಕಾಲದಲ್ಲಿ, ಆರ್ಕೆಮೇನಿಯ ಸಾಮ್ರಾಜ್ಯದಲ್ಲಿ ಅತ್ಯಂತ ಸುಖಿಗಳಾಗಿ ಬದುಕಿ-ಬಾಳಿದವರು. ಪರ್ಸೆಪೋಲಿಸ್ ನ ವಿಶಾಲ ರದೇಶದಲ್ಲಿ ಎತ್ತರದ ಕಂಬಗಳಮೇಲೆ ನಿಂತಿರುವ ಛಾವಣಿಯಮೇಲಿರುವ ಸೌಧದ ಶಿಥಿಲವಾದ ಭಾಗವನ್ನು ನಾವು ಇಂದಿಗೂ ಕಾಣಬಹುದು. ಇದು ಆಗಿನ ಕಾಲದ ರಾಜಗೃಹದ ಯಾವುದೋ ಒಂದು ತುಣುಕು. ಇವು ಡೇರಿಯಸ್ ಮಹಾರಾಜ, ನಿರ್ಮಿಸಿದ ಅರಮನೆಯ ಭಾಗಗಳೆಂದು ಚರಿತ್ರಾಕಾರರು ಗುರುತಿಸಿದ್ದಾರೆ. ಈತನ ನಂತರ ಬಂದವರೆಲ್ಲಾಸಾಮ್ರಾಜ್ಯವನ್ನು ಮುಂದೆ ನಡೆಸಿಕೊಂಡು ಹೋಗಿದ್ದಾರೆ. ಮಹಲ್ ಒಳಗೆ ಕಾಲಿಟ್ಟರೆ, ವೃತ್ತಾಕಾರದ ರೀತಿಯಲ್ಲಿ ಮೇಲಕ್ಕೇರುವ ಮೆಟ್ಟಿಲುಗಳು ಕಣ್ಣಿಗೆ ಗೋಚರಿಸುತ್ತವೆ. ಇಂದಿಗೂ ಇದು ಇಷ್ಟರಮಟ್ಟಿಗೆ ಜೀವಂತವಾಗಿರುವುದೆ ಅಚ್ಚರಿಯೇ ಸರಿ. ೨೫೦೦ ವರ್ಷಗಳ ಇತಿಹಾಸವನ್ನು ಬದಿಯ ಕಟ್ಟೆಯಮೇಲೆ ಕೆತ್ತಿರುವ ಭಿತ್ತಿಚಿತ್ರಗಳು ಸಾರಿ ಹೇಳುತ್ತವೆ. ಮಹಾರಾಜನಿಗೆ ಸಾಮಂತರು ಕಪ್ಪ ಕಾಣಿಕೆಗಳನ್ನು ಅರ್ಪಿಸುವ ದೃಷ್ಯವನ್ನು ತೋರಿಸುತ್ತವೆ. ಪರ್ಶಿಯನ್ ಸಾಮ್ರಾಜ್ಯ ವಿಶಾಲವಾಗಿತ್ತು. ಇಜಿಪ್ಟ್ ನಿಂದ ಸಿಂಧು ದೇಶದವರೆಗೆ, ಮೆಡಿಟರೇನಿಯನ್ ಸಮುದ್ರದಿಂದ ಅರಬ್ಬಿ ಸಮುದ್ರದವರೆಗೆ ಹಬ್ಬಿತ್ತೆಂದು ತಿಳಿದುಬರುತ್ತದೆ. ಡೇರಿನ್ ಚಕ್ರವರ್ತಿ, " ನಾನು ಸಜ್ಜನರಿಗೆ ಯಾವಾಗಲೂ ಸಹಾಯಮಾಡಲು ಸಿದ್ಧ. ಕೆಟ್ಟದ್ದನ್ನು ನಾನು ಪ್ರೋತ್ಸಾಹಿಸುವುದಿಲ್ಲ. ನನ್ನ ಆಳ್ವಿಕೆಯ ಸಮಯದಲ್ಲಿ ಪ್ರಜೆಗಳೆಲ್ಲಾ ನೆಮ್ಮದಿಯಿಂದ ಇರಬೇಕೆಂಬುದೆ ನನ್ನ ಆಸೆ. 'ಪರ್ಸೆ ಪೋಲಿಸ್' ನ ಮಹಲ್ ನ ಗೋಡೆಯ ಮೇಲೆ ಮಹಾರಾಜನೊಬ್ಬನು ದುಷ್ಟನೋರ್ವನನ್ನು ದಂಡಿಸಿ ಕೊಲ್ಲುತ್ತಿರುವ ಚಿತ್ರವಿದೆ. ಸೈರಸ್ ಮಹಾರಾಜನ ಕಾಲದಲ್ಲಿ ಮಾನವ ಹಕ್ಕುಬಾಧ್ಯತೆಗಳನ್ನು ಮತ್ತು ಉತ್ತಮ ನಡವಳಿಕೆಯನ್ನು ತಿಳಿಸುವ ವಿವರಗಳನ್ನೊಳಗೊಂಡ ಮಣ್ಣಿನ ಶಾಸನ, ಭೂಗರ್ಭಶಾಸ್ತ್ರದ ಇಲಾಖೆಯವರ ಶೋಧನೆಯ ಕಾಲದಲ್ಲಿ ತಿಳಿಯಿತು.

'ಸೈರಸ್ ಚಕ್ರವರ್ತಿ'ಯ 'ಗೋರಿ'ಯಮೇಲೆ ಬರೆದ ಮಾತುಗಳು

[ಬದಲಾಯಿಸಿ]

ಇನ್ನೊಂದು ಸಂಗತಿ, ಸೈರಸ್ ಮಹಾಚಕ್ರವರ್ತಿಯ ಶಿಥಿಲವಾದ ಗೋರಿಯಮೇಲೆ, ಬರೆದ ಮಾತುಗಳು ಹೀಗಿವೆ. " ನಾನು ಪರ್ಶಿಯದ ಸಾಮ್ರಾಜ್ಯಸ್ಥಾಪಕ, ಈ ಹುದಿಮಣ್ಣಿನಲ್ಲಿ ನನ್ನದೇಹ ಆಡಗಿದೆ. ನನ್ನನ್ನು ಹಗೆಯಿಂದು ಪರಿಗಣಿಸಬೇಡಿ. ೨೦೦ ವರ್ಷದ ನಂತರ, ಆರ್ಕೆಮೇನಿಯನ್ ವಂಶದ ಸ್ಥಾಪಕ ಸೈರಸ್ ನನ್ನು, ಅಲೆಕ್ಸಾಂಡರ್ ಭೂಪತಿ, ಸೋಲಿಸಿ, ಹೊಡೆಡಿಸುತ್ತಾನೆ. ಮುಂದೆ ೭ ನೆ ಶತಮಾನದ ಹೊತ್ತಿಗೆ, ಬಿದಿಗೆಚಂದ್ರ ಮತ್ತು ಕತ್ತಿಯ ಲಾಂಛನ ದ ವಂಶದವರು, ಪರ್ಶಿಯವನ್ನು ಆಳುತ್ತಾರೆ, ಆಗ ಆರ್ಮೇನಿಯನ್ ಪಂಗಡದವರಿಗೆ ಇದ್ದ ಆಯ್ಕೆ ಎರಡು. ಒಂದು ತಲೆತಪ್ಪಿಸಿಕೊಂಡು ದೇಷ ತ್ಯಜಿಸಿ, ಓಡಿಹೋಗುವುದು ; ಇಲ್ಲವೆ ಕೆಲವು ಸಾಹಸಿಗಳು ವಿಶಾಲವಾದ ಕಡಲಮೇಲೆ ದೀರ್ಘ ಯಾನಮಾಡಿ ಭಾರತಕ್ಕೆ ಹೋಗುವುದು. ಹಾಗೆ ಬಂದು ಭಾರತದ ಪಶ್ಚಿಮ, ಗುಜರಾತ್ ರಾಜ್ಯದಲ್ಲಿ ತಳಊರಿದ ವಲಸೆಗಾರರಿಗೆ, ಪ್ರವೇಶಿಸಲು ಅನುಮತಿ ಕೊಡದೆ, ಒಂದು ಪಾತ್ರೆಯಲ್ಲಿ ಹಾಲನ್ನು ಕಳಿಸಿ ದಣಿವಾರಿದ ಮೇಲೆ ಮುಂದೆ ಪ್ರಯಾಣಮಾಡಲು ತಿಳಿಸಿದ ರಾಜನಿಗೆ, 'ಝೊರಾಸ್ಟ್ರಿಯನ್' ಪ್ರಮುಖ ಭರವಸೆಯ ಮಾತಾಡುತ್ತಾರೆ. ಆಹಾಲಿಗೆ ಸಕ್ಕರೆಯನ್ನು ಹಾಕಿ, ಅದು ಚೆಲ್ಲದಂತೆ ಜಾಗ್ರತೆವಹಿಸಿದ ಆತ, ನಾವು ಈ ಹಾಲಿನತರಹ, ನಿಮ್ಮ ದೇಶದ ಸಂಸ್ಕೃತಿಯಲ್ಲಿ ಬೆರೆತು, ಅದರಲ್ಲಿ ಸಿಹಿಯನ್ನು ತಂದುಕೊಡುತ್ತೇವೆ, ನಂಬಿ," ಯೆಂದು ಬೇಡಿಕೊಂಡರು. ಹಾಗೆ ಅವರ ಪ್ರವೇಶ ಮುಂದುವರೆದು, ಹಲವಾರು ದೋಣಿಗಳಲ್ಲಿ 'ಪಾರ್ಸಿ ಸಮುದಾಯ' 'ಗುಜರಾತ್' ರಾಜ್ಯದ ಗಡಿ ತಲುಪಿತು.

’ಆರ್ಕೆಮೇನಿಯ ಪ್ರಭುತ್ವ,’ ದ ವಿವರಗಳು :

[ಬದಲಾಯಿಸಿ]

ಏಸುಕ್ರಿಸ್ತನ ಕಾಲಕ್ಕಿಂತ ಪ್ರಾಚೀನ ಕಾಲದಲ್ಲಿ ಇದ್ದವರು ಇವರು. ’ಏಜಿಯನ್ ದ ಬ್ಲಾಕ್’, ”ದ ಕ್ಯಾಸ್ಪಿಯನ್’, ’ದ ಇಂಡಿಯನ್’, ”ದಿ ಪರ್ಶಿಯನ”, ಮತ್ತು ’ಕೆಂಪುಸಮುದ್ರ’, ”ಮೆಡಿಟರೇನಿಯನ್ ಸಮುದ್ರ’ ದ ವರೆಗೆ. ವಿಶ್ವದ ಅತಿಭಾರಿ ನದಿಗಳು ಇದರ ಮಧ್ಯೆ ಪ್ರವಹಿಸುತ್ತಿದ್ದವು. ’ಇಫ್ರೇಟಸ್ ಮತ್ತು, ಟೈಗ್ರಿಸ”, ’ಜ್ಯಾಕ್ಸಾಕಟಸ”, ’ಓಕ್ಸಸ್, ಹಾಗೂ”ನೈಲ್ ನದಿ’. ”ಸೈರಸ್,’ ಚಿಕ್ಕ ಸುಬೇದಾರನಾಗಿದ್ದವನು, ಒಂದು ಬೃಹತ್ ಸಾ ಸ್ಥಾಪಕನದನು. ಈ ಭೂಭಾಗದಲ್ಲೇ ವಿಶ್ವದ ಪ್ರಥಮವಾಗಿ ಪೂರ್ವ ಮತ್ತು ಪಶ್ಚಿಮಗಳು ಸೇರಿದವು. ಬ್ಯಾಬಿಲೋನಿಯ ಸಾ ವನ್ನು ಸೆರೆಹಿಡಿದು ಅದನ್ನು ಮತ್ತೆ ಮುಕ್ತಗೊಳಿಸಿ ಅಲ್ಲಿನ ಜ್ಯೂ ಗಳನ್ನು ಬಿಡುಗಡೆಮಾಡಿ ಅವರನ್ನು ಪ್ಯಾಲೆಸ್ಟೈನ್ ಗೆ ಹೋಗಲು ವ್ಯವಸ್ಥೆ ಮಾಡಲಾಯಿತು. ದ upAph ಸೈರುಸ್, ಗ್ರೀಕ ಬರಹಗಾರ xenophon, ಕ್ರಿ. ಪೂ. (೪೩೦-೩೫೫] ಹೇಳುವಂತೆ, ಡೇರಿಯಸ್ ಆತನ ನಂತರ ಬಂದ. ಸರಿಯಾಗಿ ವ್ಯವಸ್ಥಿತವಾಗಿ ಆಳುತ್ತಾನೆ. ಏಶ್ಯಾಮೈನರ್, ಗ್ರೀಸ್ ನಕೆಲವು ಭಾಗಗಳು, ಆರ್ಮೇನಿಯ, ಅಝರ್ ಬೈಝಾನ್, ಸಿರಿಯ, ಪ್ಯಾಲೆಸ್ಟೈನ್, ಇಜಿಪ್ಟ್, ಉತ್ತರ. ಅರೇಬಿಯ, ಮೆಸೊಪೊಟೇಮಿಯ, ಪರ್ಶಿಯ, ಆಫ್ಘಾನಿಸ್ತಾನ್, ತುರ್ಕ್ ಮೆನಿಸ್ಥಾನ್, ಥ್ರೇಸ್, ಪ್ರಥಮವಾಗಿ ಅಂತರರಾಷ್ಟ್ರೀಯವಾಗಿ, ಆಡಳಿತನಡೆಸಿದ. ಪ್ರಥಮ ಆ. ರ್‍ಅ. ಸೈನ್ಯಾಧಿಪತಿ, ಆಡಂಬರದ ಜೀವನ, ಬೇರೆ ಕೆಂದ್ರಗಳಿಗೆ ಸಂಚಾರ ವ್ಯವಸ್ಥೆಗಾಗಿ ದೊಡ್ಡರಾಜಮಾರ್ಗವನ್ನು ಕಟ್ಟಿಸಿದ. ಆರ್ಕೆಮೇನಿಯಾ ಸಾಮ್ರಾಜ್ಯ ಕ್ರಿ. ಪೂ. [೫೫೯-೩೩೦ ] ಇದೊಂದು ಬೆಟ್ಟಪ್ರದೇಶ ಎತ್ತರದಲ್ಲಿದೆ. ದಕ್ಷಿಣ. ಪಶ್ಚಿಮ, ಇರಾನ್ ನ ಟ್ರೈಬಲ್ ಬುಡಕಟ್ಟಿನ ಜನ. ಸೈರಸ್ ಮತ್ತು ಡೇರಿಯಸ್ ಒಳ್ಳೆಯ ಸಮರ್ಥ ಆಡಳಿತಗಾರರು. ಪರಮತ ಸಹಿಷ್ಣುಗಳು. ಸೈರಸ್ ಬೇಬಿಲೋನಿಯವನ್ನು ಗೆದ್ದಾಗ ಒಂದು ಪ್ರಣಾಳಿಯನ್ನು ಹೊರಡಿಸಿದ್ದನು. ಆತನ ಧ್ಯೇಯ ಮತ್ತು ವಿಚಾರಧಾರೆಯನ್ನು ಸೂಚಿಸುತ್ತದೆ. ಇದನ್ನೇ ಪ್ರಥಮ ಮನುಷ್ಯಜನಾಂಗದ ಹಕ್ಕುಗಳು ಹಾಗೂ ಅಧಿಕಾರಗಳ ವಿವರಣೆಯೆಂದು ಹೇಳಲಾಗಿದೆ. ಇದರ ಪ್ರತಿ, ಅಮೆರಿಕದ ನ್ಯೂ ಯಾರ್ಕ್ ನಗರದ ಯು.ಎನ್ ಕಟ್ಟಡದಲ್ಲಿದೆ. ಮೂಲಪ್ರತಿಯನ್ನು ಒಂದು ಡಬ್ಬಿಯಲ್ಲಿ ಸುರಕ್ಷಿತವಾಗಿ ಬ್ರಿಟಿಷ್ ಮ್ಯೂಸಿಯಮ್ ನಲ್ಲಿಡಲಾಗಿದೆ. ಆರ್ಕೆಮೇನಿಯನ್ನರು, ಸಂತ ಝರತುಷ್ಟ್ರ, ಕ್ರಿ. ಪೂ [೬೨೮-೫೫೧ ] ರ ಅನುಯಾಯಿಗಳು ಮತ್ತು, ಅಗ್ನಿದೇವತೆಯ ಉಪಾಸಕರು.

ಝರತುರ್ಷ್ಟ್ರ, ಹಾಗೂ ಅಹಿರ ಮಝ್ದ

[ಬದಲಾಯಿಸಿ]

ಪಾರ್ಸಿಗಳ ಮತಸ್ಥಾಪಕ, ಝರತುಷ್ಟ್ರ ,[] ಹುಟ್ಟಿದ್ದು, ೧೫೦೦ ವರ್ಷಗಳ ಹಿಂದೆ, ಪ್ರಪಂಚದಲ್ಲಿ ಒಳ್ಳೆಯದನ್ನೇ ಮಾಡಬೇಕು ಅದೇ ಕೆಟ್ಟದರಮೇಲೆ ಜಯಸಾಧಿಸುತ್ತದೆ ಎನ್ನುವುದು ಅವರ ಅಭಿಮತ. ಅವರ ಮೊದಲ ಕರಡುಪ್ರತಿ ಅಲ್ಲಿನ ಮಣ್ಣಿನಲ್ಲಿ ಅಗೆದಾಗ ದೊರೆಯಿತು. ೨ ಶತಮಾನಗಳ ನಂತರ ಕೆಮೇನಿಯನ್ ಸಂತತಿ, ಸೈರಸ್ ದ ಗ್ರೇಟ್ ಸ್ಥಾಪಿಸಿದ, ಅಲೆಕ್ಸಾಂಡರ್ ಕಿತ್ತು ಬಿಸಾಡಿದ. ಬೇರೆ ಬೇರೆ ಸಂತತಿಗಳು ತಲೆ ಎತ್ತಿಕೊಂಡವು. ೭ ನೆಯ ಶತಮಾನದಲ್ಲಿ ಅರ್ಧಚಂದ್ರ ಮತ್ತು ಕತ್ತಿ ಅವರ ದೇಶದ ನೆಲದಮೇಲೆ ಹಾರಾಡಿತು. ಪರ್ಶಿಯನ್ ರಿಗೆಇದ್ದ ಆಯ್ಕೆಎಂದರೆ ಇಸ್ಲಾಮ್ ಮತವನ್ನು ಅಪ್ಪಿಕೊಳ್ಳದೆಹೋದರೆ, ತಲೆ ಕತ್ತರಿಸಲು ತಯಾರಾಗಬೇಕು. ಕೆಲವು ಯೋಧರು ಹತ್ತಿರದ ಬೆಟ್ಟಗುಡ್ಡಗಳಲ್ಲಿ ಅವಿತುಕೊಂಡು ತಲೆಮರೆಸಿಕೊಳ್ಳಲು ಯತ್ನಿಸಿದರು. ಇನ್ನು ಕೆಲವರು, ಚಿಕ್ಕ ದೋಣಿಗಳಲ್ಲಿ ಅವರ ಅಗ್ನಿದೇವತೆಯ ಪೂಜಾಸಾಮಗ್ರಿಗಳನ್ನು ತೆಗೆದುಕೊಂಡು, ಸಮುದ್ರಯಾನಮಾಡಿ, ಭಾರತದ ಪಶ್ಚಿಮ ದಡ, ಗುಜರಾತ್ ರಾಜ್ಯಕ್ಕೆ, ಬಂದಿಳಿದರು. ಇನ್ನೂ ಹಲವಾರು ದೋಣಿತುಂಬಿದ ಯಾತ್ರಿಗಳು ವಲಸೆಬಂದರು. ಈ ಪರದೇಶಿ ಅತಿಥೇಯ ವಲಸೆಗಾರರಿಗೆ, ತಾವು ಭಾರತೀಯಸಮಾಜದಲ್ಲಿ ಯಾವ ಗೊಂದಲವನ್ನೂ ಉಂಟುಮಾಡುವುದಿಲ್ಲವೆಂಬ ಮಾತಿನಮೇರೆಗೆ, ಪ್ರಮಾಣಮಾಡಿದಮೇಲೆ ದೊರೆಯ ಅಪ್ಪಣೆದೊರೆಯಿತು. ಆ ಮಾತನ್ನು ಇಂದಿಗೂ ನಡೆಸಿಕೊಂಡು ಬಂದಿದ್ದಾರೆ. ನವ್ ಸಾರಿಯಲ್ಲಿ ನಾಗಮಂಡಲದಲ್ಲಿ ಮೊದಲು ನೆಲೆಸಿದರು. ಈ ಹೊಸ ಪರಿಸರ, ಪರ್ಶಿಯದೇಶದಲ್ಲಿ ಸಾರಿ, ಎಂಬ ಜಾಗದ ನೆನಪು ತರುತ್ತಿತ್ತು. ಈ ಹೊಸಜಾಗವನ್ನು ಅವರು ನವ್ ಸಾರಿ, ಎಂದು ಕರೆದರು. ಅಲ್ಲಿನ ಯುವ ಪಾರ್ಸಿಗಳಿಗೆ ದೊರೆತ ಕೆಲಸವೆಂದರೆ, ಅರ್ಚಕವೃತ್ತಿ. ಹಾಗೆ ಕೆಲಸಮಾಡಿದವರಲ್ಲಿ, ಶ್ರೀ. ಜೆ . ಎನ್. ಟಾಟಾರವರೂ ಒಬ್ಬರು. ಭಾರತದಲ್ಲಿ ದಿನಬಳಕೆಗೆ ಬೇಕಾದ ಹಾಗೂ ಬೃಹತ್ ಕೈಗಾರಿಕೆಗಳಿಗೆ ನೆರವಾಗುವ ಬೃಹತ್ ಸಹಾಯಕ, ಇಂಥನ ತಯಾರಿಕೆಯ ಘಟಕಗಳನ್ನು, ಸಿಮೆಂಟ್ ಮುಂತಾದ ಕಟ್ಟಡ ನಿರ್ಮಾಣದಕಾರ್ಯದಲ್ಲಿ ಉಪಯೋಗಿಸಲ್ಪಡುವ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಭಾರತದೇಶಲ್ಲೇ ತಯಾರಿಸುವ ವ್ಯವಸ್ಥೆಯನ್ನು ಮಾಡಿದ ಶ್ರೇಯಸ್ಸು, ಪಾರ್ಸಿಪ್ರಮುಖ, ಶ್ರೀ.ಜಮ್ ಶೆಟ್ ಜಿ ಟಾಟಾರವರದು.

ಜಮ್ ಶೆಟ್ ಜಿ ಟಾಟಾ

[ಬದಲಾಯಿಸಿ]

ಜಮ್ ಶೆಟ್ ಜಿ ಟಾಟಾ ರವರ ದೂರಾಲೋಚನೆ, ಅಪಾರದೇಶಪ್ರೇಮ , ಹಾಗೂ ದೈತ್ಯಪ್ರತಿಭೆಯವ್ಯಕ್ತಿತ್ವದಿಂದಾಗಿ, ಭಾರತದಲ್ಲಿ ಪ್ರಪ್ರಥಮ ಸ್ಟೀಲ್ ಕಾರ್ಖಾನೆಯನ್ನು ಸ್ಥಾಪಿಸಿದರು, ಪ್ರಪ್ರಥಮ, ಹೈಡ್ರೊ ಎಕೆಕ್ಟ್ರಿಕ್ ಪ್ರಾಜೆಕ್ಟ್, ಇನ್ ಸ್ಟಿ ಟೂಟ್ ಆಫ್ ಸೈನ್ಸ್, ಬೆಂಗಳೂರಿನಲ್ಲಿ ಸ್ಥಾಪನೆ. ೧೯೧೨ ರಹೊತ್ತಿಗೆ, ಇವೆಲ್ಲಾ ಶುರುವಾಗಿತ್ತು. ಇಂತಹ ಘಟಕಗಳಲ್ಲಿ ದುಡಿಯಲು ಭಾರತೀಯರಿಗೆ ಸರಿಯಾದ ತರಬೇತಿ ಕೊಡುವ ಸಲುವಾಗಿ ವಿಶ್ವ ವಿಖ್ಯಾತ ತಂತ್ರಜ್ಞರ ನೆರವಿನಿಂದ ಒಂದು ಉಚ್ಚಸ್ತರದ ವಿಶ್ವವಿದ್ಯಾಲಯನ್ನು ಸ್ಥಾಪಿಸುವ ಕನಸು ಅವರದು. ದೇಶದಲ್ಲಿ ಭವಿಷ್ಯದಲ್ಲೂ ಬರಬಹುದಾದ ವಿನೂತನ ಕೈಗಾರಿಕೆಗಳಲ್ಲಿ ವಿದೇಶಿಯರಿಗೆ ಸರಿಸಮಾನವಾಗಿ ಕೆಲಸಮಾಡಲು ಸರಿಯಾದ ತಂತ್ರಜ್ಞಾನವನ್ನು ಹೇಳಿಕೊಡುವುದು ಅತಿ ಪ್ರಾಮುಖ್ಯವೆಂದು ಟಾಟರವರು ಎಂದೋ ಮನವರಿಕೆ, ಮಾಡಿ ಅದಕ್ಕೆ ತಕ್ಕ ವ್ಯವಸ್ಥೆಮಾಡಿದ್ದರು. ೧೯೦೩ ರ ಹೊತ್ತಿಗೆ ವಿಶ್ವದಾದ್ಯಂತ ಸುತ್ತಾಡಿ, ವಿದೇಶಿ ತಜ್ಞರನ್ನು (ಅಮೆರಿಕಾ ಹಾಗೂ ಜರ್ಮನಿಯ ) ಭೇಟಿಮಾಡಿ, ಅವರನ್ನು ನಮ್ಮದೇಶಕ್ಕೆ ಆಹ್ವಾನಿಸಿದ್ದರು. ಕೆಲವರು ಭಾರತಕ್ಕೆ ಬಂದು ಬಿಹಾರದ ಜಂಗಲ್ ನಲ್ಲಿ ಖನಿಜಗಳ ಸರ್ವೇಕ್ಷಣೆಯನ್ನೂ ಮಾಡಿದ್ದರು. ಜೆ.ಎನ್ ಟಾಟಾರವರು. ಒಂದು ಸುವ್ಯವಸ್ಥಿತ ನೀಲನಕ್ಷೆ, ಯನ್ನೂ ತಯಾರಿಸಿದ್ದರು. ಆದರೆ ಇದೆಲ್ಲಾ ಸಾಕಾರವಾಗುವ ಮೊದಲೆ ದೈವಾಧೀನರಾದರು. ಮಕ್ಕಳಿಗೆ, ಮತ್ತು ಆರ್. ಡಿ ಟಾಟಾ ರವರಿಗೆ ಇವನ್ನೆಲ್ಲಾ ಚೆನ್ನಾಗಿ ವಿವರಿಸಿ, ಒಟ್ಟಾಗಿ ದುಡಿದು ದೇಶದ ಸಂಪತ್ತನ್ನು ಹೆಚ್ಚಿಸಲು ಮನವಿಮಾಡಿದ್ದರು. ಹೀಗೆ ಎಲ್ಲಿಂದಲೋ ವಲಸೆಬಂದ ಪಾರ್ಸಿ ಜನಾಂಗದವರು ನಮ್ಮ ದೇಶದ ಅಭಿವೃದ್ಧಿಗೆ, ನೀಡಿರುವ ಸಹಕಾರ ಅನನ್ಯ.=='ಮುಂಬೈನಗರದ ಪಾರ್ಸಿಗಳು'==

ಚಿತ್ರ:Pft.JPG
'ಮುಂಬೈನ, ಮಾಟುಂಗಾ ಪಾರ್ಸಿಕಾಲೋನಿಯಲ್ಲಿರುವ ಮಂದಿರ'

ಭಾರತದಲ್ಲಿ ನೆಲೆಸಿರುವ 'ಪಾರ್ಸಿ ಜನಾಂಗದ ಸದಸ್ಯ'ರಲ್ಲಿ ಬಹುಪಾಲು ಮಂದಿ 'ಮಹಾರಾಷ್ಟ್ರ'ದಲ್ಲಿ ಅದರಲ್ಲೂ 'ಮುಂಬಯಿ|'ಮುಂಬೈನಗರದಲ್ಲಿ ನೆಲೆಸಿದ್ದಾರೆ. ಪಾರ್ಸಿಗಳ ಹೊಸವರ್ಷ ವನ್ನು 'ನವರೋಜ್' ಎನ್ನುತ್ತಾರೆ. ಆದಿನ ಪಾರ್ಸಿ ಸಮಾಜದವರು ಮುಂಜಾನೆ ಬೇಗ ಎದ್ದು, ಹೊಸ ವರ್ಷದ ತಯ್ಯಾರಿನಡೆಸುತ್ತಾರೆ. ಸನ್, ೨೦೧೦ ರ ಆಗಸ್ಟ್, ೧೯ ರಂದು ನವರೋಜ್ ಹಬ್ಬವನ್ನು ಆಚರಿಸಲಾಗಿತ್ತು. ಅಂದು ಬೆಳಿಗ್ಯೆ ಮನೆಯ ಮುಂದೆ 'ರಂಗೋಲಿ' ಹಾಕುತ್ತಾರೆ. 'ಶ್ರೀಗಂಧದ ತುಂಡು'ಗಳಿಂದ ಸಿಂಗರಿಸುತ್ತಾರೆ. ವಿಶೇಷ ಅಡುಗೆ ಯಾಗಿ 'ಸಜ್ಜಿಗೆಹಲ್ವಾ' ಮಾಡುತ್ತಾರೆ. ಇದನ್ನು 'ರಾವೋ' ಎನ್ನುತ್ತಾರೆ. ಅತಿಥಿಗಳಿಗೆ ತಿನ್ನಲು 'ಫಾಲೂಡಾ' ಕೊಡಲಾಗುತ್ತದೆ. 'ಪೈರ್ ಟೆಂಪಲ್ 'ನಲ್ಲಿ ಪ್ರಾರ್ಥನೆ ನಡೆಯುತ್ತದೆ. ಸಮುದಾಯದ ಸದಸ್ಯರ 'ದೀರ್ಘಾಯುಸ್ಸು' ಮತ್ತು 'ಸಂಮೃದ್ಧಿಯ ಜೀವನದ ಕಾಮನೆಯ ಪ್ರಾರ್ಥನೆ'ನಡೆಯುತ್ತದೆ. ದೇವರ ಮುಂದೆ ಮೇಣದ ಬತ್ತಿಯನ್ನು ಪ್ರಜ್ವಲಿಸುತ್ತಾರೆ. 'ಕನ್ನಡಿ, ಅಗರ್ ಬತ್ತಿ', 'ಫಲ-ಪುಷ್ಪಗಳು', 'ಸಕ್ಕರೆ', 'ನಾಣ್ಯ'ಗಳನ್ನೂ ಇಡುತ್ತಾರೆ. 'ನವರೋಜ್ ಹಬ್ಬ'ವನ್ನು 'ಫಾರಸ್ ರಾಜಾ', ' ಜಮ್ ಶೆಡ್ ಜೀ ಸ್ಮರಣಾರ್ಥವಾಗಿ' ಆಚರಿಸುತ್ತಾರೆ. ಈತನೇ 'ಫಾರಸಿ ಶಾಹ' 'ಜೆಮ್ ಶೇಡ್ ಜಿ' 'ಕ್ಯಾಲೆಂಡರ್ ರಚಿಸಿದ್ದ' ೧,೩೦೦ ವ ರ್ಷಗಳ ಹಿಂದೆ, 'ಭಾರತಕ್ಕೆ ಬಂದ ಪಾರಸಿಗಳು', (ಪಾರ್ಸಿ), 'ಸೂರ್ಯ,' ಮತ್ತು 'ಅಗ್ನಿ'ಯನ್ನು ಪೂಜಿಸುತ್ತಾರೆ.

ಭಾರತದಲ್ಲಿ ನೆಲೆಸಿರುವ 'ಪಾರ್ಸಿ ಬಾಂಧವರ ಸಂಖ್ಯೆ'

[ಬದಲಾಯಿಸಿ]
  • ಭಾರತದಲ್ಲಿ ೧, ೧೪, ೦೦೦ (೧೯೪೧ ನೆ ಇಸವಿಯ ಜನಗಣತಿಯ ಪ್ರಕಾರ)[]
  • ಈಗ, ಕೇವಲ, ೬೯, ೦೦೦
  • ಭಾರತ ಸರ್ಕಾರ, ಪಾರಸೀಗಳ ಸಂತಾನವನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Zoroastrianism
  2. ZOROASTRIANISM
  3. Homi Dastoor
{{bottomLinkPreText}} {{bottomLinkText}}
ಪಾರ್ಸಿಕರು
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?