For faster navigation, this Iframe is preloading the Wikiwand page for ಪಕ್ಷಿ.

ಪಕ್ಷಿ

ಪಕ್ಷಿಗಳು
Temporal range: ಕೊನೆ ಜುರಾಸಿಕ್ – ಈಗ
ಕೊರ್ಮೊರಾಂಟ್ ಪಕ್ಷಿ, Phalacrocorax auritus
Scientific classification
ಸಾಮ್ರಾಜ್ಯ:
ವಿಭಾಗ:
ಖೊರ್ಡೇಟ
ಉಪವಿಭಾಗ:
ವೆರ್ಟಿಬ್ರೇಟ
(ಶ್ರೇಣಿಯಿಲ್ಲದ್ದು):
ಆರ್ಕೊಸೌರಿಯ
ವರ್ಗ:
ಏವ್ಸ್

ಲಿನ್ನಿಯಸ್, 1758
Orders

ಸುಮಾರು ೨ ಡಜನ್


Birds
Temporal range:
Late Cretaceous - Present, 85–0 Ma
PreꞒ
O
S
D
C
P
T
J
K
Pg
N
Examples of various avian orders.

Row 1: Red-crested turaco, shoebill, white-tailed tropicbird
Row 2: Steller's sea eagle, grey crowned crane, common peafowl
Row 3: Mandarin duck, Anna's hummingbird, Atlantic puffin
Row 4: Southern cassowary, rainbow lorikeet, American flamingo
Row 5: Gentoo penguin, grey heron, blue-footed booby
Row 6: Bar-throated minla, Eurasian eagle-owl, keel-billed toucan

Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ಏಕಮೂಲ ವರ್ಗ: ಏವಿಯಾಲೇ
ವರ್ಗ: ಏವೀಸ್
Linnaeus, 1758[೧]
Subclasses
  • Neognathae
  • Palaeognathae
Synonyms
  • Neornithes Gadow, 1883

ಪಕ್ಷಿಗಳು ಎರಡು ಕಾಲುಳ್ಳ, ಮೊಟ್ಟೆ ಇಡುವ, ಬೆನ್ನೆಲುಬು ಹೊಂದಿರುವ ಜೀವ ಜಾತಿ. ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ "ಪಕ್ಷಿ" ಎಂಬ ಹೆಸರು ಬಂದಿದೆ. ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ. ಹಾರಾಟಕ್ಕೆ ಅನುಕೂಲವಾದ ರೆಕ್ಕೆ, ವಿಶಿಷ್ಟವಾದ ಕಾಲು, ಉಗುರು, ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ. ಪಕ್ಷಿಗಳ ಸ್ವಭಾವ, ಗುಣ, ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ. ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.

ಪಕ್ಷಿಗಳಲ್ಲಿ ರಕ್ತಪರಿಚಲನೆ ಮತ್ತು ಹೃದಯ

ಪಕ್ಷಿಗಳ ಹೃದಯದಲ್ಲಿ ಖಚಿತವಾದ ನಾಲ್ಕು ಕೋಣೆಗಳಿವೆ. ಶುದ್ಧ ಮತ್ತು ಮಲಿನ ರಕ್ತದ ಮಿಶ್ರಣಕ್ಕೆ ಯಾವುದೇ ಅವಕಾಶವೂ ಇಲ್ಲ. ಸೈನಸ್ ವಿನೋಸಸ್ ಇಲ್ಲವೆಂದೇ ಹೇಳಬಹುದು. ಇದರ ಬಹುತೇಕ ಭಾಗ ಬಲ ಹೃತ್ಕರ್ಣದಲ್ಲಿ ಸೇರಿಹೋಗಿದೆ. ಬಲ ಹೃತ್ಕುಕ್ಷಿಯನ್ನು ಸ್ವಲ್ಪ ಸುತ್ತುವರಿದಿದ್ದು ರಕ್ತವನ್ನು ಪಲ್ಮನರಿ ಅಪಧಮನಿಗೆ ಕಳುಹಿಸುತ್ತದೆ. ಎಡ ಹೃತ್ಕುಕ್ಷಿಯ ದ್ವಾರ ತೆಳುವಾದ ಕವಾಟದಿಂದ ರಕ್ಷಿತವಾಗಿದೆ. ಈ ಕವಾಟದ ಪದರಗಳು ಹೃತ್ಕುಕ್ಷಿಯ ಗೋಡೆಗೆ ತಂತುಸ್ತಂಭಗಳಿಂದ ಅಂಟಿಕೊಂಡಿದೆ. ಬಲಹೃತ್ಕರ್ಣ ಹೃತ್ಕುಕ್ಷಿಯ ಮಧ್ಯೆ ಇರುವ ಕವಾಟ ಅಗಲವಾದ ಮಾಂಸಲ ಪದರದಿಂದ ಕೂಡಿದೆ. ಬಲ ಹೃತ್ಕರ್ಣಕ್ಕೆ ಉನ್ನತ ಮತ್ತು ಅವನತ ಅಭಿಧಮನಿಗಳೂ ಎಡ ಹೃತ್ಕರ್ಣಕ್ಕೆ ಪಲ್ಮನರಿ ಅಭಿಧಮನಿಯೂ ಬಂದು ಸೇರುತ್ತವೆ. ಪಲ್ಮನರಿ ಅಪಧಮನಿ ಬಲಹೃತ್ಕುಕ್ಷಿಯಿಂದಲೂ ಅಯೋರ್ಟಿಕ್ ಮಹಾಪಧಮನಿ ಎಡಹೃತ್ಕುಕ್ಷಿಯಿಂದಲೂ ಹೊರಡುತ್ತವೆ. ಮೂರು ಅರ್ಧಚಂದ್ರಾಕೃತಿಯ ಕವಾಟಗಳು ಪಲ್ಮನರಿ ಅಪಧಮನಿ ಮತ್ತು ಬಲಹೃತ್ಕುಕ್ಷಿಯ ಮಧ್ಯೆಯೂ ಮತ್ತು ಎಡಹೃತ್ಕುಕ್ಷಿ ಮತ್ತು ಮಹಾಪಧಮನಿಯ ಮಧ್ಯೆಯೂ ಇವೆ. ಪಕ್ಷಿಗಳಲ್ಲಿ ಬಲ ಅಯೋಟಿಕ್ ಅಪಧಮನಿ (ಸಿಸ್ಟಮಿಕ್) ಮಾತ್ರ ಇದೆ. ಎಡ ಸಿಸ್ಟಮಿಕ್ ಅಪಧಮನಿ ಇಲ್ಲ. ಪಕ್ಷಿಗಳ ಹೃದಯ ಬಹು ವಿಶಿಷ್ಟವಾದರೂ ಇದು ಸರೀಸೃಪ ಮಾದರಿಯ ಹೃದಯದಿಂದ ಮಾರ್ಪಾಡಾದುದೆಂದು ಹೇಳಲಾಗಿದೆ.

ಪಕ್ಷಿಗಳ ಭಾಷೆ ಮತ್ತು ಗಾನ

ಕೋಗಿಲೆ ಜಾತಿಯ ಡೆನ್ಮಾರ್ಕಿನ ಹಾಡುಗಾರ ಗಂಡು ಹಕ್ಕಿ
  • ಪಕ್ಷಿಗಾನ-Bird vocalization
  • ಎಲ್ಲ ಬಗೆಯ ಹಕ್ಕಿಧ್ವನಿಗಳನ್ನೂ ಎರಡು ಸ್ಪಷ್ಟ, ಪ್ರತ್ಯೇಕ ವಿಧಗಳಲ್ಲಿ ವರ್ಗೀಕರಿಸಲಾಗಿದೆ: ‘ಕರೆ’ (ಕಾಲ್) ಮತ್ತು ‘ಗಾನ’ (ಸಾಂಗ್).ಎಲ್ಲ ಹಕ್ಕಿಗಳೂ ಹಾಡುವುದಿಲ್ಲ. ಅಷ್ಟೇ ಅಲ್ಲ, ಹಕ್ಕಿಗಳ ಕಂಠದಿಂದ ಹೊಮ್ಮುವ ಧ್ವನಿ–ಶಬ್ದಗಳೆಲ್ಲವೂ ಹಾಡುಗಳೂ ಅಲ್ಲ. ವಾಸ್ತವ ಏನೆಂದರೆ, ಪ್ರಸ್ತುತ ಧರೆಯಲ್ಲಿರುವ ಸುಮಾರು ಹತ್ತು ಸಾವಿರ ಖಗಪ್ರಭೇದಗಳು ಎಲ್ಲವೂ ಉಲಿಯುತ್ತವೆ, ಚಿಲಿಪಿಲಿಗುಟ್ಟುತ್ತವೆ, ಕರೆಯುತ್ತವೆ, ಕೂಗುತ್ತವೆ. ಆದರೆ ಅರ್ಧದಷ್ಟು ಪ್ರಭೇದಗಳಲ್ಲಿ ಗಂಡುಹಕ್ಕಿಗಳು ಮಾತ್ರ ಹಾಡುತ್ತವೆ.

ಹಕ್ಕಿಗಳ ಕಲರವ

  • ಎಲ್ಲ ಬಗೆಯ ಹಕ್ಕಿಧ್ವನಿಗಳನ್ನೂ ಎರಡು ಸ್ಪಷ್ಟ, ಪ್ರತ್ಯೇಕ ವಿಧಗಳಲ್ಲಿ ವರ್ಗೀಕರಿಸಲಾಗಿದೆ: ‘ಕರೆ’ (ಕಾಲ್) ಮತ್ತು ‘ಗಾನ’ (ಸಾಂಗ್). ತಮ್ಮದೇ ಪ್ರಭೇದದ ಇತರ ಹಕ್ಕಿಗಳನ್ನು ಗುರುತಿಸಿಕೊಳ್ಳಲು, ಒಂದೇ ಗುಂಪಿನ ಎಲ್ಲ ಹಕ್ಕಿಗಳೂ ಆಹಾರ ಹುಡುಕಲು ದೂರದೂರ ಚದುರಿ, ಒಂದರಿಂದ ಮತ್ತೊಂದು ಮರೆಯಾಗಿರುವಾಗಲೂ ಸಂಪರ್ಕದಲ್ಲಿರಲು, ಶತ್ರುಗಳ ಆಗಮನ–ನಿರ್ಗಮನಗಳನ್ನು ಪ್ರಚುರಪಡಿಸಲು, ದಿನದ ಅಂತ್ಯದಲ್ಲಿ ಮತ್ತೆ ಗುಂಪು ಸೇರಲು... ಹೀಗೆಲ್ಲ ನಾನಾ ಸ್ವರಕ್ಷಕ, ಜೀವನಾವಶ್ಯಕ ಉದ್ದೇಶಗಳಿಗೆ ಎಲ್ಲ ಹಕ್ಕಿಗಳೂ ‘ಕರೆ’ ಗಳನ್ನು ಬಳಸುತ್ತವೆ. ಹಕ್ಕಿಗಳ ಕಲರವ, ಚಿಲಿಪಿಲಿಗಳು ಇವೇ.

ಗಾನ

  • ಹಕ್ಕಿ ಕಲರವ ಬೇರೆ, ಹಾಡುಗಳ ಉದ್ದೇಶ ಬೇರೆ. ಹಕ್ಕಿ ಹಾಡು ಅದ್ಭುತ ಧ್ವನಿಸಂಯೋಜನೆ. ಹಕ್ಕಿಗಳ ಪ್ರತಿ ಗಾನವೂ ಮಂದ್ರ – ಮಧ್ಯಮ – ಏರಿಳಿಕೆಗಳ, ಹ್ರಸ್ವ–ದೀರ್ಘ ಸ್ವರಗಳ, ಸುಶ್ರಾವ್ಯ ರಚನೆಯಿಂದ ಕೂಡಿದೆ. ಪ್ರತಿ ಪ್ರಭೇದದ ಎಲ್ಲ ಹಕ್ಕಿಗಳ ಹಾಡುಗಳದೂ ಸ್ಥೂಲವಾಗಿ ಒಂದೇ ಸ್ವರೂಪ. ಆದರೂ, ಪ್ರತಿ ಹಕ್ಕಿಯೂ ತನ್ನದೇ ‘ವಿಶೇಷತೆ’ ಬೆರೆಸಿ ತನ್ನ ಹಾಡನ್ನು ವಿಶಿಷ್ಟಗೊಳಿಸುತ್ತದೆ. ತನ್ನದೇ ಪ್ರಭೇದದ ಇತರ ಗಂಡುಗಳ ಹಾಡುಗಳಿಂದ ವಿಭಿನ್ನವಾಗಿರುವಂತೆ, ಹೆಚ್ಚು ಆಕರ್ಷಕವಾಗಿರುವಂತೆ, ಸ್ಪರ್ಧಾತ್ಮಕವಾಗಿರುವಂತೆ ಸಂಯೋಜಿಸಿ ಹಾಡುತ್ತದೆ.
  • ಹಾಡುಗಾರ ಗಂಡು ಹಕ್ಕಿಗಳ ಗಾಯನಕ್ಕೆ ಎರಡು, ಬಹು ಮಹತ್ವದ, ಬೇರೆಬೇರೆ ಉದ್ದೇಶಗಳಿವೆ: ತಮ್ಮದೇ ಪ್ರಭೇದದ ಇತರೆಲ್ಲ ಗಂಡುಗಳಿಗೂ ತಮ್ಮ ಸರಹದ್ದಿನ ಸೀಮೆಯನ್ನು ಘೋಷಿಸಿ ಎಚ್ಚರಿಕೆ ನೀಡುವುದು ಮತ್ತು ಹೆಣ್ಣು ಹಕ್ಕಿಗಳ ಮನಸೆಳೆದು, ಮನಗೆದ್ದು, ಪ್ರಣಯಕ್ಕೆ ಒಲಿಸಿಕೊಳ್ಳುವುದು. ಈ ಉದ್ದೇಶಗಳಿಗೆ ಅನುಗುಣವಾಗಿ ಗಂಡು ಹಕ್ಕಿಗಳು ಹಾಡುವ ಹಾಡುಗಳೂ ಭಿನ್ನ ಭಿನ್ನ ರೀತಿಗಳಲ್ಲಿರುತ್ತವೆ. ಅಗತ್ಯಕ್ಕೆ ತಕ್ಕಂತೆ ಖಗ ಹಾಡುಗಾರರು ತಮ್ಮ ಕಲಿಕೆಯನ್ನನುಸರಿಸಿ, ತಮ್ಮ ಪ್ರತಿಭೆಯನ್ನೂ ಬಳಸಿ, ಅನುಭವ ಬೆರೆಸಿ, ಶಕ್ತಿ ವ್ಯಯಿಸಿ, ವಿಧವಿಧವಾಗಿ, ಎದೆ ತುಂಬಿ ಮೈಮರೆತು ಹಾಡುತ್ತವೆ.

Crane

  • ಹಕ್ಕಿ
  • ಹಾಡು ಸಂಕೀರ್ಣವಾದದ್ದರಿಂದ ಹಾಡುಗಾರ ಹಕ್ಕಿಗಳು ಗಾನಕಲೆಯನ್ನು ಕೇವಲ ಹುಟ್ಟರಿವಿನಿಂದ ಕಲಿಯುವುದಿಲ್ಲ. ಅವು ಮೊಟ್ಟೆಯಿಂದ ಹೊರಬಂದ ಕ್ಷಣದಿಂದ, ಹಾಡು ಹಕ್ಕಿಗಳು ತಮ್ಮ ತಂದೆಯ ಮತ್ತು ತಮ್ಮದೇ ಪ್ರಭೇದದ ಇತರ ಗಂಡುಹಕ್ಕಿಗಳ ಹಾಡುಗಳನ್ನು ಆಲಿಸಿ ಆಲಿಸಿ, ಅನುಕರಿಸಿ, ಅಭ್ಯಸಿಸಿ ತಾವೂ ಹಾಡಲು ಕಲಿಯುತ್ತವೆ. ತಮ್ಮದೇ ಪ್ರಭೇದದ ಹಾಡುಗಳನ್ನು ಇತರ ಪ್ರಭೇದಗಳಿಂದ ಪ್ರತ್ಯೇಕಿಸಿ ಗುರುತಿಸುವುದನ್ನೂ ಅರಿಯುತ್ತವೆ. ಸ್ಪಷ್ಟವಾಗಿಯೇ, ತಂದೆ–ತಾಯಿಯರ, ಸಹಚರರ ಸಾಂಗತ್ಯ ಸಿಗದ ಅನಾಥ ಹಕ್ಕಿಗಳಿಗೆ ಗಾನಕಲೆ ಸಿದ್ಧಿಸುವುದಿಲ್ಲ; ಹಾಡುಗಾರಿಕೆಯ ಕಲಿಯದ ಅಂತಹ ಹಾಡು ಹಕ್ಕಿಗಳು ಯಶಸ್ವೀ ಜೀವನ ನಡೆಸಲು ಸಾಧ್ಯವಾಗದು.
  • ಸಂಶೋಧನೆಗಳಿಂದ ತಿಳಿಯುವುದೇನೆಂದರೆ, ಹಾಡುಹಕ್ಕಿಗಳು ತಮ್ಮ ಪ್ರಭೇದದ ವಿಶಿಷ್ಟ ಹಾಡುಗಾರಿಕೆಯ ಮೂಲ ಪಾಠಗಳನ್ನೆಲ್ಲ ತಮ್ಮ ಬದುಕಿನ ಮೊದಲ ಅರವತ್ತು ದಿನಗಳಲ್ಲಿ ಕಲಿಯುತ್ತವೆ. ಮನುಷ್ಯರ ಮಕ್ಕಳು ತಮ್ಮ ತಾಯಿಯ ಮತ್ತು ಸುತ್ತಲಿನ ಇತರರ ಮಾತುಗಳನ್ನು ಆಲಿಸಿ, ಕೆಲವೇ ಪದಗಳ ತೊದಲುವಿಕೆಯಿಂದ ಆರಂಭಿಸಿ, ನಿರರ್ಗಳವಾಗಿ ಮಕ್ಕಳು ಮಾತನಾಡಲು ಕಲಿಯುವಂತೆಯೇ ಹಕ್ಕಿಮರಿಗಳೂ ಒಂದೊಂದೇ ಸ್ವರ ಗ್ರಹಿಸುತ್ತ, ಹಾಡಲು ಪ್ರಯತ್ನಿಸುತ್ತ, ಪರಿಶ್ರಮಪಟ್ಟು ಗಾನಕಲೆಯನ್ನು ಮೈಗೂಡಿಸಿಕೊಳ್ಳುತ್ತವೆ.
  • ಬದುಕಿನುದ್ದಕ್ಕೂ ಇತರ ಹಕ್ಕಿಗಳ ಹಾಡುಗಳನ್ನು ಕೇಳಿಕೇಳಿ, ತಮ್ಮ ಮನೋಧರ್ಮವನ್ನು ಅದಕ್ಕೆ ಬೆರೆಸುತ್ತ, ವರ್ಷದಿಂದ ವರ್ಷಕ್ಕೆ ತಮ್ಮ ಹಾಡುಗಾರಿಕೆಯನ್ನು ಉತ್ತಮಗೊಳಿಸಿಕೊಳ್ಳುತ್ತ, ಪರಿಣಿತ ಹಾಡುಗಾರರಾಗುತ್ತವೆ. ಕೋಗಿಲೆ, ಗುಬ್ಬಚ್ಚಿ, ಬುಲ್ ಬುಲ್, ಸಿಂಪಿಗ, ಸೂರಕ್ಕಿ, ಥ್ರಶ್, ರಾಬಿನ್, ಆರಿಯೋಲ್, ವಾರ್ಬ್ಲರ್, ಕಾಮೂಳಿ ಮೊದಲಾದವು ಹಾಡುಗಾರರು ಗಾನ ವಿಶಾರದರ ಪಟ್ಟಿಯಲ್ಲಿವೆ.[೨][೩]

ಹಕ್ಕಿಗಳ ದನಿಗೆ ಅನ್ಯಾಟಮಿ ಮತ್ತು ಶರೀರವಿಜ್ಞಾನ

  • 'ಏವಿಯನ್' ಎಮಗ ಗಂಟಲಲ್ಲಿರುವ ಗಾಯನ ಅಂಗವನ್ನು 'ಸಿರಿನಕ್ಸ್' (ದನಿಪೊರೆ) ಎಂದು ಕರೆಯಲಾಗುತ್ತದೆ; ಇದು ಶ್ವಾಸನಾಳದ ಕೆಳಭಾಗದಲ್ಲಿರುವ ಮೂಳೆಯ ರಚನೆ. (ಸಸ್ತನಿ ಶ್ವಾಸನಾಳದ ಮೇಲ್ಭಾಗದಲ್ಲಿರುವ ಲಾರಿಕ್ಸ್ ಎಂದರೆ ಧ್ವನಿಪೆಟ್ಟಿಗೆಗೆ ಬದಲಾಗಿ). ಸಿರಿನ್ಕ್ಸ್ ಮತ್ತು ಕೆಲವೊಮ್ಮೆ ಸುತ್ತಮುತ್ತಲಿನ ಗಾಳಿ ಚೀಲವು ಪದರಗಳಿಂದ ಧ್ವನಿಯನ್ನು ತರಲು -ಹೊರಡಿಸಲು ಅನುರಣಿಸುತ್ತದೆ. ಪಕ್ಷಿಯು ಪೊರೆಯ ಮೇಲೆ ಒತ್ತಡವನ್ನು ಬದಲಾಯಿಸುವ ಮೂಲಕ ಪಿಚ್- ದನಿಯ ಏರಿಳಿತವನ್ನು ನಿಯಂತ್ರಿಸುತ್ತದೆ ಮತ್ತು ಉಸಿರಾಟದ ಬಲವನ್ನು ಬದಲಿಸುವ ಮೂಲಕ ಪಿಚ್-ಶೃತಿ ಮತ್ತು ಪರಿಮಾಣವನ್ನು ನಿಯಂತ್ರಿಸುತ್ತದೆ. ಇದು ಸ್ವತಂತ್ರವಾಗಿ ಶ್ವಾಸನಾಳದ ಎರಡು ಬದಿಗಳನ್ನು ನಿಯಂತ್ರಿಸಬಹುದು, ಇದು, ಕೆಲವು ಪ್ರಭೇದಗಳು ಏಕಕಾಲದಲ್ಲಿ ಎರಡು ರಾಗಗಳನ್ನು ಉತ್ಪತ್ತಿ ಮಾಡಬಹುದಾದ ಬಗೆ. [೪]

ಭಾರತದ ಕೆಲವು ಪಕ್ಷಿ ಪ್ರಭೇದಗಳು

ಉಲ್ಲೇಖಗಳು

  1. Brands, Sheila (14 ಆಗಸ್ಟ್ 2008). "Systema Naturae 2000 / Classification, Class Aves". Project: The Taxonomicon. Retrieved 11 ಜೂನ್ 2012.
  2. "ಖಗ ಜಗದ ದ್ವಿವಿಧ ಸೋಜಿಗ;ಎನ್. ವಾಸುದೇವ್;21 May, 2017". Archived from the original on 26 ಮೇ 2017. Retrieved 22 ಮೇ 2017.
  3. Sexual selection and the evolution of bird song: A test of the Hamilton-Zuk hypothesis
  4. Attenborough, D. 1998. The Life of Birds. BBC publication.0563-38792-0
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
{{bottomLinkPreText}} {{bottomLinkText}}
ಪಕ್ಷಿ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?