For faster navigation, this Iframe is preloading the Wikiwand page for ಜೋಸೆಫ್ ಹೆನ್ರಿ.

ಜೋಸೆಫ್ ಹೆನ್ರಿ

ಜೋಸೆಫ್ ಹೆನ್ರಿ

ಜೋಸೆಫ್ ಹೆನ್ರಿ (1797-1878) ಒಬ್ಬ ಅಮೆರಿಕನ್ ಭೌತವಿಜ್ಞಾನಿ.

ಆಲ್ಬನಿಯ ಕಡುಬಡ ಕುಟುಂಬದಲ್ಲಿ 1797 ಡಿಸೆಂಬರ್ 17ರಂದು ಜನಿಸಿದ.[][] ತಂದೆ ದಿನಗೂಲಿ. ಜೀವನೋಪಾಯಕ್ಕಾಗಿ ಗಾಲ್ವೆ ಎಂಬಲ್ಲಿಗೆ ಕುಟುಂಬ ವಲಸೆ ಬಂತು (1804). ಶಾಲಾಶಿಕ್ಷಣ ಪೂರ್ತಿಗೊಳಿಸಲಾಗದೆ ಗಡಿಯಾರ ತಯಾರಕನೊಬ್ಬನ ಬಳಿ ನೌಕರಿ ಮಾಡಿದ. ರಜೆಯಲ್ಲಿ ಬಂಧುಗೃಹಕ್ಕೆ ಹೋಗಿದ್ದಾಗ ಆಕಸ್ಮಿಕವಾಗಿ ‘ಲೆಕ್ಚರ್ಸ್ ಆನ್ ಎಕ್ಸ್‌ಪೆರಿಮೆಂಟಲ್ ಫಿಲಾಸಫಿ’ ಎಂಬ ಪುಸ್ತಕದಿಂದ ಪ್ರೇರಿತನಾಗಿ ಶಾಲೆಗೆ ಮರಳಿದನೆಂದು ಪ್ರತೀತಿ. ಆಲ್ಬನಿ ಅಕಾಡೆಮಿಗೆ ದಾಖಲಾತಿ ಪಡೆದ (1819). ವೈದ್ಯನಾಗಬೇಕೆಂಬ ಆಸೆಯಿಂದ ನೈಸರ್ಗಿಕ ವಿಜ್ಞಾನಗಳ ಅಧ್ಯಯನ ಮಾಡಿದ. ಶಾಲಾಶುಲ್ಕ ಭರಿಸಲೋಸುಗ ಗ್ರಾಮೀಣ ಶಾಲೆಗಳಲ್ಲಿ ಉಪಾಧ್ಯಾಯ ವೃತ್ತಿ ಮತ್ತು ಖಾಸಗಿ ಮನೆಪಾಠ ಆರಂಭಿಸಿದ. ಸ್ನಾತಕ ಪದವಿ ಗಳಿಸಿದ (1822). ರಾಜ್ಯ ಹೆದ್ದಾರಿಯೊಂದರ ಮೋಜಣಿ ಮಾಡುವ ಅಸಿಸ್ಟೆಂಟ್ ಎಂಜಿನಿಯರ್ ಆಗಿ ನೇಮಕನಾದ (1824). ಈ ಅನುಭವದಿಂದ ಪ್ರೇರಿತನಾಗಿ ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರ್ ಆಗುವ ಬಯಕೆ ಉಂಟಾಯಿತು. ಆಲ್ಬನಿ ಅಕಾಡೆಮಿಯಲ್ಲಿ ಗಣಿತ ಮತ್ತು ನ್ಯಾಚುರಲ್ ಫಿಲಾಸಫಿ ಪ್ರಾಧ್ಯಾಪಕನಾಗಿ ನೇಮಕಾತಿ ದೊರಕಿತು (1826-32).[] ವಿದ್ಯುತ್ಕಾಂತತ್ವ ಕುರಿತು ಸಂಶೋಧನಾರಂಭ ಮಾಡಿದ (1827). ಆಲ್ಬನಿ ಇನ್‌ಸ್ಟಿಟ್ಯೂಟನಲ್ಲಿ ಗ್ರಂಥಪಾಲಕನ ಜವಾಬ್ದಾರಿ ನಿರ್ವಹಣೆ (1829). ಅದೇ ವರ್ಷ ಯೂನಿಯನ್ ಕಾಲೇಜಿನಿಂದ ಗೌರವ ಎ. ಎಮ್. ಪದವಿ. ಹ್ಯಾರಿಯೆಟ್ ಅಲೆಕ್ಸಾಂಡರ್ (1808-82) ಎಂಬಾಕೆಯೊಂದಿಗೆ ವಿವಾಹ (1830). ಸಿಲ್ಲಿಮ್ಯಾನ್ಸ್ ಜರ್ನಲ್‌ನ ಜನವರಿ ಸಂಚಿಕೆಯಲ್ಲಿ ವಿದ್ಯುತ್ಕಾಂತತ್ವ ಮತ್ತು ಜುಲೈ ಸಂಚಿಕೆಯಲ್ಲಿ ವಿದ್ಯುತ್ ಮೋಟರ್ ಕುರಿತು ಸಂಶೋಧನ ಪ್ರಬಂಧ ಪ್ರಕಟಣೆ (1831). ಅದೇ ವರ್ಷ ದೂರಲೇಖ (ಟೆಲಿಗ್ರಾಫ್) ಯಂತ್ರದ ಆದಿಮ ಪ್ರರೂಪ ಪ್ರದರ್ಶನ. ಪ್ರಿನ್‌ಸ್ಟನ್‌ನ ಕಾಲೇಜ್ ಆಫ್ ನ್ಯೂಜರ್ಸಿಯಲ್ಲಿ ನ್ಯಾಚುರಲ್ ಫಿಲಾಸಫಿ ಪ್ರಾಧ್ಯಾಪಕ ಹುದ್ದೆ (1832-48).[][] ಸ್ಮಿತ್ಸೋನಿಯನ್ ಇನ್‌ಸ್ಟಿಟ್ಯೂಶನ್‌ನ ಮೊದಲನೆಯ ಕಾರ್ಯದರ್ಶಿಯಾಗಿ ಆಯ್ಕೆ (1846-78). ಸ್ಮಿತ್ಸೋನಿಯನ್ ಪವನ ವಿಜ್ಞಾನ ವೀಕ್ಷಣಾಲಯ ಜಾಲ ಸ್ಥಾಪನೆ (1848). ಅಮೆರಿಕನ್ ಅಸೋಸಿಯೇಷನ್ ಫಾರ್ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್‌ನ ಅಧ್ಯಕ್ಷನಾಗಿ ಆಯ್ಕೆ (1849-50). ಹಾರ್ವರ್ಡ್‌ನಿಂದ ಗೌರವ ಎಲ್‌ಎಲ್‌ಡಿ ಪದವಿಯ ಪುರಸ್ಕಾರ (1851). ನ್ಯಾಶನಲ್ ಅಕ್ಯಾಡೆಮಿ ಆಫ್ ಸೈನ್ಸಸ್ ಅಧ್ಯಕ್ಷನಾಗಿ ಆಯ್ಕೆ (1868-78). ಯುಎಸ್ ಲೈಟ್‌ಹೌಸ್ ಬೋರ್ಡ್‌ನ ಸದಸ್ಯನಾಗಿಯೂ ಮುಂದೆ ಅಧ್ಯಕ್ಷನಾಗಿಯೂ ಸೇವೆ (1852-78). ಫಿಲಾಸಫಿಕಲ್ ಸೊಸೈಟಿ ಆಫ್ ವಾಷಿಂಗ್ಟನ್ ಡಿಸಿಯ ಅಧ್ಯಕ್ಷನಾಗಿ ಆಯ್ಕೆ (1871). 1878 ಮೇ 14ರಂದು ವಾಷಿಂಗ್ಟನ್ ಡಿಸಿಯಲ್ಲಿ ನಿಧನನಾದ. ಇದು ಈ ಮೇಧಾವಿ ವಿಜ್ಞಾನಿಯ ಜೀವನಗತಿಯ ಪಕ್ಷಿನೋಟ. ಇದರಷ್ಟೇ ವೈವಿಧ್ಯಮಯ ಸಾಧನೆ ಈತನದ್ದು.

ಸಾಧನೆಗಳು

[ಬದಲಾಯಿಸಿ]

ಆಲ್ಬನಿ ಅಕಾಡೆಮಿಯಲ್ಲಿದ್ದಾಗ ಹ್ಯಾನ್ಸ್ ಕ್ರಿಶ್ಚಿಯನ್ ಆರ್ಸ್ಟೆಡ್‌ನ (1777-1851) ಪ್ರಯೋಗಗಳಿಂದ ಆಕರ್ಷಿತನಾದ ಈತ ವಿದ್ಯುತ್ ಸಂಬಂಧಿತ ಮಹತ್ತ್ವದ ಪ್ರಯೋಗಗಳನ್ನು ಮಾಡತೊಡಗಿದ ಎರಡನೆಯ ಅಮೆರಿಕನ್ ವಿಜ್ಞಾನಿ (ಬೆಂಜಮಿನ್ ಫ್ರ‍್ಯಾಂಕ್ಲಿನ್, 1706-90 ಮೊದಲನೆಯವ). ಆರ್ಸ್ಟೆಡ್ ಆವಿಷ್ಕೃತ ತತ್ತ್ವಾಧಾರಿತ ವಿದ್ಯುತ್ಕಾಂತವನ್ನು ಬ್ರಿಟಿಷ್ ಭೌತವಿಜ್ಞಾನಿ ವಿಲಿಯಮ್ ಸ್ಟರ್ಜಿಯನ್ (1783-1850) ತಯಾರಿಸಿದ್ದನೆಂಬ ಸುದ್ದಿ ಕೇಳಿದ (1829) ಈತ ಸ್ಟರ್ಜಿಯನ್ ತಯಾರಿಸಿದ್ದಕ್ಕಿಂತ (ಅದು 4 ಕೆಜಿ ಭಾರ ಎತ್ತಬಲ್ಲದಾಗಿತ್ತು) ಉತ್ತಮವಾದ ವಿದ್ಯುತ್ಕಾಂತ ತಯಾರಿಸತೊಡಗಿದ. ಯಾವುದೇ ವಿದ್ಯುತ್ಕಾಂತದ ಬಲ ಅದರ ಸುರುಳಿಯಲ್ಲಿ ವಿದ್ಯುತ್ವಾಹಕದ ಸುತ್ತುಗಳ ಸಂಖ್ಯೆಯನ್ನು ಅವಲಂಬಿಸಿದೆ ಎಂಬುದನ್ನು ಊಹಿಸಿ ಆ ದಿಶೆಯಲ್ಲಿ ಕಾರ್ಯೋನ್ಮುಖನಾದ. ಉತ್ತಮ ವಿದ್ಯುನ್ನಿರೋಧಕಗಳು ಸುಲಭಲಭ್ಯವಿಲ್ಲದ ಆ ಕಾಲದಲ್ಲಿ ಸುರುಳಿಯಲ್ಲಿ ಹ್ರಸ್ವಮಂಡಲ ಉಂಟಾಗದಂತೆ ಮಾಡಲು ಪತ್ನಿಯ ರೇಷ್ಮೆ ಲಂಗಗಳನ್ನು ಹರಿದು ಅದನ್ನೇ ನಿರೋಧಕವಾಗಿ ಬಳಸಿದ. ಕೊನೆಗೂ 340 ಕೆಜಿ ಭಾರ ಎತ್ತಬಲ್ಲ ವಿದ್ಯುತ್ಕಾಂತ ತಯಾರಿಸಿದ (1831). ಅದೇ ವರ್ಷ ಯೇಲ್ ವಿಶ್ವವಿದ್ಯಾಲಯದಲ್ಲಿ ಒಂದು ಟನ್ನಿಗಿಂತಲೂ ಹೆಚ್ಚು ಭಾರ ಎತ್ತಬಲ್ಲ ಸಾಮಾನ್ಯ ಬ್ಯಾಟರಿಚಾಲಿತ ವಿದ್ಯುತ್ಕಾಂತವನ್ನು ಪ್ರದರ್ಶಿಸಿದ. ವಿದ್ಯುತ್ಕಾಂತ ತತ್ತ್ವವನ್ನು ಅನ್ವಯಿಸುವ ದೂರಲೇಖದ ತತ್ತ್ವವನ್ನು ಆವಿಷ್ಕರಿಸಿದ (1831) ಈತ ಅದರ ಬಳಕೆಯಲ್ಲಿ ಓಮ್‌ನ ನಿಯಮಾನುಸಾರ ಉದ್ಭವಿಸುತ್ತಿದ್ದ ತಾಂತ್ರಿಕ ಅಡಚಣೆಯನ್ನು ನಿವಾರಿಸಲೋಸುಗ ವಿದ್ಯುತ್ ರಿಲೇ (ಟಪ್ಪೆ) ತತ್ತ್ವ ಆವಿಷ್ಕರಿಸಿದ (1835).[] ವಿಜ್ಞಾನವಿರುವುದೇ ಮನುಕುಲದ ಒಳಿತಿಗಾಗಿ ಎಂದು ನಂಬಿದ್ದ ಈತ ತಾನು ಉಪಜ್ಞಿಸಿದ ಸಾಧನಗಳಿಗೆ ಏಕಸ್ವಾಮ್ಯ ಪಡೆಯಲಿಲ್ಲ. ತತ್ಪರಿಣಾಮವಾಗಿ ಸಾರ್ವಜನಿಕ ಉಪಯೋಗಕ್ಕಾಗಿ ದೂರಲೇಖವನ್ನು ಮೊದಲು ಸ್ಥಾಪಿಸಿದ (1844) ಸ್ಯಾಮ್ಯುಯೆಲ್ ಫಿನ್ಲೆ ಬ್ರೀಸ್ ಮಾರ್ಸ್‌ನಿಗೆ (1791-1872) ಆ ಖ್ಯಾತಿ ಸಂದಿತು. ಇಂಗ್ಲೆಂಡಿನ ಭೌತವಿಜ್ಞಾನಿ ಚಾರ್ಲ್ಸ್ ವೀಟ್‌ಸ್ಟನ್ (1802-75) ಕೂಡ ಈತನ ನೆರವಿನಿಂದ ದೂರಲೇಖ ತಯಾರಿಸಿದ (1837). ಇವರೀರ್ವರೂ ಈತನ ಸಹಾಯ ಪಡೆದದ್ದನ್ನು ಸಾರ್ವಜನಿಕವಾಗಿ ಸ್ಮರಿಸದೇ ಇದ್ದುದೂ ಇವನನ್ನು ಪ್ರಭಾವಿಸಲಿಲ್ಲ. ಆಲ್ಬನಿ ಅಕಾಡೆಮಿಯ ಬೋಧನ ಕಾರ್ಯಭಾರದಿಂದಾಗಿ ಆಗಸ್ಟ್ ತಿಂಗಳು ಲಭ್ಯವಿದ್ದ ರಜೆ ದಿನಗಳಲ್ಲಿ ಮಾತ್ರ ಈತ ಸಂಶೋಧನನಿರತನಾಗುತ್ತಿದ್ದ. ಎಂದೇ, ಆಗಸ್ಟ್ 1830ರಲ್ಲಿ ಆವಿಷ್ಕರಿಸಿದ ವಿದ್ಯುತ್‌ಪ್ರೇರಣೆತತ್ತ್ವಸಂಬಂಧಿತ ಸಂಶೋಧನೆಯನ್ನು ಪೂರ್ಣಗೊಳಿಸಲಾಗದೆ ಅದನ್ನು ಮುಂದಿನ ಆಗಸ್ಟಿಗೆ ಮುಂದೂಡಿದ. ಈ ನಿಟ್ಟಿನಲ್ಲಿ ಪ್ರಯೋಗನಿರತನಾಗಿದ್ದ ಮೈಕೆಲ್ ಫ್ಯಾರಡೆ (1791-1867) ತನ್ನ ಪ್ರಯೋಗ ಫಲಿತಾಂಶಗಳನ್ನು ಪ್ರಕಟಿಸಿದ್ದರಿಂದ ಈತ ಈ ಖ್ಯಾತಿಯಿಂದಲೂ ವಂಚಿತನಾದ.[][][] ತದನಂತರ ತನ್ನ ಪ್ರಯೋಗಗಳನ್ನು ಕುರಿತು ಈತ ಪ್ರಕಟಿಸಿದ ಪ್ರಬಂಧದಲ್ಲಿ ಸ್ವಯಂಪ್ರೇರಿತ ವಿದ್ಯುತ್ತಿನ ವಿವರಣೆ ಇತ್ತು. ಎಂದೇ, ಫ್ಯಾರಡೆ 1834ರಲ್ಲಿ ಪ್ರಕಟಿಸಿದ ಲೇಖನದಲ್ಲಿ ಇದರ ಉಲ್ಲೇಖವಿದ್ದರೂ ಆವಿಷ್ಕಾರದ ಖ್ಯಾತಿ ನ್ಯಾಯಯುತವಾಗಿ ಇವನಿಗೆ ಸಂದಿತು. ಈತ ಮಾಡಿದ ವಿದ್ಯುತ್ ಮೋಟರ್‌ನ ಉಪಜ್ಞೆ (1831) ಫ್ಯಾರಡೆ ಉಪಜ್ಞಿಸಿದ್ದ ವಿದ್ಯುಜ್ಜನಕದ ಉಪಯುಕ್ತತೆಯ ವ್ಯಾಪ್ತಿಯನ್ನು ಹಿಗ್ಗಿಸಿತು. ಸೂರ್ಯಬಿಂಬವನ್ನು ಬಿಳಿ ಪರದೆಯ ಮೇಲೆ ಪ್ರಕ್ಷೇಪಿಸಿ ಉಷ್ಣದ ಸೂಕ್ಷ್ಮ ಮಾಪನೆಗಳ ನೆರವಿನಿಂದ ಸೌರಕಲೆಗಳ ಭಾಗದಲ್ಲಿ ತಾಪ ಸಾಪೇಕ್ಷವಾಗಿ ಕಡಿಮೆ ಇರುವುದನ್ನು ಸಿದ್ಧಪಡಿಸಿದವ (1848).[೧೦][೧೧] ಈತ ಸ್ಮಿತ್ಸೋನಿಯನ್ ಇನ್‌ಸ್ಟಿಟ್ಯೂಶನ್‌ನ ಕಾರ್ಯದರ್ಶಿಯಾಗಿ ವೈಜ್ಞಾನಿಕ ಜ್ಞಾನದ ಅಂತಾರಾಷ್ಟ್ರೀಯ ಸಂವಹನವನ್ನು ಉತ್ತೇಜಿಸಿದ. ಪವನವಿಜ್ಞಾನದಂಥ ಹೊಸ ವಿಜ್ಞಾನ ಶಾಖೆಗಳ ಹುಟ್ಟಿಗೆ ಕಾರಣನಾದ. ಯುನೈಟೆಡ್ ಸ್ಟೇಟ್ಸ್ ವೆದರ್ ಬ್ಯೂರೊ ಈತ ರೂಪಿಸಿದ ವ್ಯವಸ್ಥೆಯನ್ನಾಧರಿಸಿ ಕಾರ್ಯನಿರ್ವಹಿಸುತ್ತಿದೆ.

ಈತನ ಕೊಡುಗೆಗಳಿಗೆ ರಾಷ್ಟ್ರದ ಕೃತಜ್ಞತೆಯ ದ್ಯೋತಕವಾಗಿ ಈ ದಕ್ಷ ವಿಜ್ಞಾನ ಆಡಳಿತಗಾರ ಮರಣಿಸಿದಾಗ ಯುನೈಟೆಡ್ ಸ್ಟೇಟ್ಸಿನ ಅಧ್ಯಕ್ಷರು ಶವಸಂಸ್ಕಾರ ಸಂದರ್ಭದಲ್ಲಿ ಹಾಜರಿದ್ದು ಗೌರವ ಸಲ್ಲಿಸಿದರು. ದೂರಲೇಖ ಉಪಜ್ಞೆಯ ಮತ್ತು ವಿದ್ಯುತ್ ಪ್ರೇರಣ ತತ್ತ್ವದ ಆವಿಷ್ಕಾರ ಖ್ಯಾತಿಯಿಂದ ತಾಂತ್ರಿಕ ಕಾರಣಗಳಿಗಾಗಿ ವಂಚಿತನಾದರೂ ಪ್ರೇರಕತೆಯ ಏಕಮಾನವನ್ನು ಹೆನ್ರಿ ಎಂದು ಹೆಸರಿಸಿ[೧೨] ಈ ಸಾಮಾಜಿಕ ಕಳಕಳಿಯಿದ್ದ ವಿಜ್ಞಾನಿಯ ಕೊಡುಗೆಗಳನ್ನು ಪ್ರಪಂಚದ ವಿಜ್ಞಾನಿ ಸಮುದಾಯ ಗುರುತಿಸಿದೆ.

ಉಲ್ಲೇಖಗಳು

[ಬದಲಾಯಿಸಿ]
  1. According Keith Laidler there is some doubt about the year of his birth, with strong evidence from a member of his family that he was born in 1799.
  2. Laidler, Keith J. (1993). To Light such a Candle. Oxford University Press. p. 136.
  3.  Baird, Spencer Fullerton (1911). "Henry, Joseph" . In Chisholm, Hugh (ed.). Encyclopædia Britannica. Vol. 13 (11th ed.). Cambridge University Press. pp. 299–300. ((cite encyclopedia)): Cite has empty unknown parameters: |HIDE_PARAMETER= and |separator= (help)
  4. Grummitt, Julia (November 6, 2017). "Joseph Henry and Sam Parker". The Princeton & Slavery Project. Retrieved December 18, 2017.
  5. Grummitt, Julia (November 8, 2017). "Princeton and Slavery: The Scientist's Assistant". Princeton Alumni Weekly. Retrieved December 18, 2017.
  6. "The electromechanical relay of Joseph Henry". Georgi Dalakov. 4 January 2021.
  7. "A Brief History of Electromagnetism" (PDF).
  8. Ulaby, Fawwaz (2001-01-31). Fundamentals of Applied Electromagnetics (2nd ed.). Prentice Hall. p. 232. ISBN 978-0-13-032931-8.
  9. "Joseph Henry". Distinguished Members Gallery, National Academy of Sciences. Archived from the original on 2006-12-09. Retrieved 2006-11-30.
  10. Henry, Joseph (1845). "On the Relative Radiation of Heat by the Solar Spots". Proceedings of the American Philosophical Society. 4: 173–176.
  11. Magie, W. F. (1931). "Joseph Henry". Reviews of Modern Physics. 3 (4): 465–495. Bibcode:1931RvMP....3..465M. doi:10.1103/RevModPhys.3.465.
  12. "Henry | Definition & Facts".

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
{{bottomLinkPreText}} {{bottomLinkText}}
ಜೋಸೆಫ್ ಹೆನ್ರಿ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?