For faster navigation, this Iframe is preloading the Wikiwand page for ಜೆನ್‌ಪ್ಯಾಕ್ಟ್‌.

ಜೆನ್‌ಪ್ಯಾಕ್ಟ್‌

Genpact International, LLC
ಸಂಸ್ಥೆಯ ಪ್ರಕಾರPublic (NYSE: G)
ಸ್ಥಾಪನೆ1997
ಮುಖ್ಯ ಕಾರ್ಯಾಲಯ Gurgaon, ಹರಿಯಾಣ, India
ಪ್ರಮುಖ ವ್ಯಕ್ತಿ(ಗಳು)Pramod Bhasin, President & CEO
ಉದ್ಯಮBusiness Process Management
ಆದಾಯ$1.04 billion (2009)
ಉದ್ಯೋಗಿಗಳು~37,500 (2009)
ಜಾಲತಾಣwww.genpact.com
ಚೀನಾದ ಡೇಲಿಯನ್‌ ಕೇಂದ್ರ. ಡೇಲಿಯನ್‌ ಸಾಫ್ಟ್‌ವೇರ್‌ ಪಾರ್ಕ್‌ನಲ್ಲಿ ನೆಲೆಗೊಂಡಿರುವ ಈ ಕೇಂದ್ರದಲ್ಲಿ 2-3,000 ಜನರು ಕೆಲಸ ಮಾಡುತ್ತಾರೆ.

ಜೆನ್‌ಪ್ಯಾಕ್ಟ್‌ (NYSEG Archived 2010-05-29 ವೇಬ್ಯಾಕ್ ಮೆಷಿನ್ ನಲ್ಲಿ.), ಎಂಬುದು ಭಾರತದ ಒಂದು BPO ಕಂಪನಿಯಾಗಿದೆ. ಇದಕ್ಕೂ ಮುಂಚಿತವಾಗಿ ಇದು GE ಕ್ಯಾಪಿಟಲ್‌ ಇಂಟರ್‌ನ್ಯಾಷನಲ್‌ ಸರ್ವೀಸಸ್‌ ಅಥವಾ GECIS ಎಂಬ ಹೆಸರಿನ GE ಸ್ವಾಮ್ಯದ ಒಂದು ಕಂಪನಿಯಾಗಿತ್ತು. ಭಾರತ, ಚೀನಾ, ಗ್ವಾಟೆಮಾಲಾ, ಹಂಗರಿ, ಮೆಕ್ಸಿಕೊ, ಮೊರಾಕೊ, ಫಿಲಿಪೀನ್ಸ್‌, ಪೋಲೆಂಡ್‌, ನೆದರ್ಲೆಂಡ್ಸ್‌, ರೊಮೇನಿಯಾ, ಸ್ಪೇನ್‌, ದಕ್ಷಿಣ ಆಫ್ರಿಕಾ, ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಂದ ಇದು ಕಾರ್ಯಾಚರಣೆಯನ್ನು ನಡೆಸುತ್ತದೆ. ಪ್ರಮೋದ್‌ ಭಾಸಿನ್‌ ಎಂಬಾತ ಜೆನ್‌ಪ್ಯಾಕ್ಟ್‌ನ ಅಧ್ಯಕ್ಷ ಮತ್ತು CEO ಆಗಿದ್ದಾನೆ.

ಪ್ರಸ್ತುತ ಈ ಕಂಪನಿಯು ವಿವಿಧ ತಾಣಗಳಲ್ಲಿ 37,000 ಜನರಿಗೆ[] ಉದ್ಯೋಗಾವಕಾಶವನ್ನು ಕಲ್ಪಿಸಿದ್ದು, 24/7ರ[] ಪರಿಕಲ್ಪನೆಯ ಆಧಾರವೊಂದರ ಮೇಲೆ 30 ಭಾಷೆಗಳಲ್ಲಿ ಇದು ಸೇವೆಯನ್ನು ಒದಗಿಸುತ್ತಿದೆ.

ಹಣಕಾಸು ಸೇವೆಗಳು, ಮಾರಾಟ ಮತ್ತು ಮಾರಾಟಗಾರಿಕೆ, ವಿಶ್ಲೇಷಣ ಶಾಸ್ತ್ರ, ಸರಬರಾಜು ಸರಪಳಿ, ಸಂಗ್ರಹಣೆಗಳು, ಗ್ರಾಹಕ ಸೇವೆಗಳು, ಮಾಹಿತಿ ತಂತ್ರಜ್ಞಾನ, ಆರೋಗ್ಯ ರಕ್ಷಣೆ ಹಾಗೂ ಕಲಿಕೆ ಮತ್ತು ವಾಸ್ತವಾಂಶದ ನಿರ್ವಹಣೆ (ಕಂಟೆಂಟ್‌ ಮ್ಯಾನೇಜ್‌ಮೆಂಟ್‌) ಇವೇ ಮೊದಲಾದ ಕ್ಷೇತ್ರಗಳು ಈ ಕಂಪನಿಯ ಸೇವೆಗಳ ವ್ಯಾಪ್ತಿಯಲ್ಲಿ ಬರುತ್ತವೆ.

ಇತಿಹಾಸ

[ಬದಲಾಯಿಸಿ]

ಜೆನ್‌ಪ್ಯಾಕ್ಟ್‌ ಕಂಪನಿಯು 2007ರ ಆಗಸ್ಟ್‌ 2ರಂದು "G" ಎಂಬ ಚಿಹ್ನೆಯಡಿಯಲ್ಲಿ NYSEಯಲ್ಲಿ ಸಾರ್ವಜನಿಕ ಷೇರುನೀಡಿಕೆಗೆ ಅಡಿಯಿಟ್ಟಿತು.[]. "G" ಎಂಬ NYSE ಚಿಹ್ನೆಯನ್ನು ಆರಂಭದಲ್ಲಿ ಜಿಲೆಟ್‌ ಕಂಪನಿಗೆ ಮಂಜೂರು ಮಾಡಲಾಗಿತ್ತು. ಜಿಲೆಟ್‌ ಕಂಪನಿಯನ್ನು ಪ್ರಾಕ್ಟರ್‌ ಅಂಡ್‌ ಗ್ಯಾಂಬ್ಲ್‌ ಕಂಪನಿಯು ಸ್ವಾಧೀನಪಡಿಸಿಕೊಂಡ ನಂತರ ಚಿಹ್ನೆಯು ಮುಕ್ತವಾಯಿತು ಹಾಗೂ ಜೆನ್‌ಪ್ಯಾಕ್ಟ್‌ ಮತ್ತು ಗೂಗಲ್‌ ಕಂಪನಿಗಳು ಇದನ್ನು ನಿಷ್ಕರ್ಷೆ ಮಾಡಿಕೊಳ್ಳಲು ಮುಂದಾದವು. ಅಂತಿಮವಾಗಿ ಜೆನ್‌ಪ್ಯಾಕ್ಟ್‌ ಕಂಪನಿಯು ತನ್ನ ಸ್ಟಾಕ್‌ ಚಿಹ್ನೆಯಾಗಿ Gಯನ್ನು ಇಟ್ಟುಕೊಳ್ಳಲು ಅವಕಾಶ ದೊರೆಯಿತು.ತನ್ನ ಕಾರ್ಯಾಚರಣೆಯ ಆರಂಭದ ದಿನಗಳಲ್ಲಿ, GECIS ಎಂಬ ಹೆಸರಿನಿಂದಷ್ಟೇ ಅಲ್ಲದೇ GECSI ಹಾಗೂ GECIBS ಎಂಬ ಹೆಸರುಗಳಿಂದಲೂ ಜೆನ್‌ಪ್ಯಾಕ್ಟ್‌ ಕಂಪನಿಯು ಚಿರಪರಿಚಿತವಾಗಿತ್ತು.

ವ್ಯವಸ್ಥಾಪನಾ ತಂಡ

[ಬದಲಾಯಿಸಿ]

GE ಕಂಪನಿಯೊಳಗೇ ಕಾರ್ಯನಿರ್ವಹಿಸುತ್ತಲೇ ತಂಡದ ಅನೇಕ ಸದಸ್ಯರು ತಮ್ಮ ನಿರ್ವಹಣಾ ಪರಿಣತಿಗಳನ್ನು ಬೆಳೆಸಿಕೊಂಡರು ಹಾಗೂ ಇಂದು ಅಸ್ತಿತ್ವದಲ್ಲಿರುವ ಸ್ವತಂತ್ರ ವಾಣಿಜ್ಯ ಉದ್ಯಮದ ಸ್ವರೂಪವಾಗಿ ಜೆನ್‌ಪ್ಯಾಕ್ಟ್‌ ಕಂಪನಿಯನ್ನು ರೂಪಿಸುವಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು.

ತಾಣಗಳು

[ಬದಲಾಯಿಸಿ]

ಏಷ್ಯಾ, ಪೂರ್ವದ ಯುರೋಪ್‌, ಉತ್ತರ ಭಾಗದ ಅಮೆರಿಕಾ, ಆಸ್ಟ್ರೇಲಿಯಾಗಳಿಂದ ಮತ್ತು ತೀರಾ ಇತ್ತೀಚೆಗೆ ಆಫ್ರಿಕಾದಿಂದಲೂ ಜೆನ್‌ಪ್ಯಾಕ್ಟ್‌ ಕಾರ್ಯಾಚರಣೆಯನ್ನು ನಡೆಸುತ್ತದೆ.

ಭಾರತದಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]
ಚಿತ್ರ:GENPACT Uppal Hyderabad India.jpg
ಜೆನ್‌ಪ್ಯಾಕ್ಟ್‌, ಉಪ್ಪಲ್‌ ಹೈದರಾಬಾದ್‌

ಭಾರತದಲ್ಲಿ ಇದು ಗುರ್‌ಗಾಂವ್‌, ದೆಹಲಿ, ಹೈದರಾಬಾದ್‌, ಜೈಪುರ, ಬೆಂಗಳೂರು ಮತ್ತು ಕೋಲ್ಕತಾ ಮೊದಲಾದ ತಾಣಗಳಿಂದ ಕಾರ್ಯಚಟುವಟಿಕೆಯನ್ನು ನಡೆಸುತ್ತದೆ. ಭಾರತದಲ್ಲಿನ ಇದರ ಕಾರ್ಯಾಚರಣೆಗಳಲ್ಲಿ ಹಣಕಾಸು ಹಾಗೂ ಲೆಕ್ಕಪತ್ರಗಾರಿಕೆ, ಮಾರಾಟ ಹಾಗೂ ಮಾರಾಟಗಾರಿಕೆ ವಿಶ್ಲೇಷಣ ಶಾಸ್ತ್ರ, ಗ್ರಾಹಕ ಸೇವೆಗಳು, ಹಣಕಾಸು ಸೇವೆಗಳು ಸಂಗ್ರಹಣೆಗಳು, ಸರಬರಾಜು ಸರಪಳಿ, ಮಾಹಿತಿ ತಂತ್ರಜ್ಞಾನ ಹಾಗೂ ವಿಮಾಗಣಿತದ & ವಾಸ್ತವಾಂಶ ಅಭಿವೃದ್ಧಿಯ ಕಲಿಕೆಯೊಂದಿಗಿನ ಇತರ ವಿಮಾ ಸೇವೆಗಳು ಸೇರಿಕೊಂಡಿವೆ. ಭುವನೇಶ್ವರ್‌‌ನಲ್ಲಿ ತನ್ನ SEZ ಕೇಂದ್ರವನ್ನು ತೆರೆಯಲು ಜೆನ್‌ಪ್ಯಾಕ್ಟ್‌ಗೆ ಅನುಮೋದನೆಯೊಂದು ದೊರೆತಿದೆ. NGEN ಮೀಡಿಯಾ ಸರ್ವೀಸಸ್‌ನಲ್ಲಿನ NDTVಯೊಂದಿಗೆ ಜೆನ್‌ಪ್ಯಾಕ್ಟ್‌ 50:50 ಅನುಪಾತದ ಒಂದು ಜಂಟಿ ಉದ್ಯಮವನ್ನು ಹೊಂದಿದೆ. ತರಬೇತಿ ಸಂಬಂಧಿತ ಸೇವೆಗಳನ್ನು ನೀಡುವುದಕ್ಕಾಗಿ ಇದು NIIT ಯೊಂದಿಗೂ ಒಪ್ಪಂದವನ್ನು ಮಾಡಿಕೊಂಡು ಸಂಬಂಧ ಬೆಳೆಸಿದೆ.

ಮೆಕ್ಸಿಕೊದಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

ಜೆನ್‌ಪ್ಯಾಕ್ಟ್‌ನ ಮೆಕ್ಸಿಕೊ ಘಟಕವು ದ್ವಿಭಾಷಾ ಇಂಗ್ಲಿಷ್‌ ಹಾಗೂ ಸ್ಪ್ಯಾನಿಷ್‌-ಭಾಷೆ ಆಧರಿತ ವ್ಯವಹಾರ ಸಂಬಂಧಿತ ಸೇವೆಗಳು, ಉತ್ತರ ಅಮೆರಿಕಾಕ್ಕೆ ನೀಡುವ ಕಡಲತೀರದ-ಸನಿಹದ ಸೇವೆಗಳು ಮತ್ತು ಒಂದು ಗಮನಾರ್ಹವಾದ ದಸ್ತಾವೇಜು ನಿರ್ವಹಣೆಯ ಸಾಮರ್ಥ್ಯವನ್ನು ಒದಗಿಸುತ್ತದೆ. ಮೆಕ್ಸಿಕೊ ಕಾರ್ಯಾಚರಣೆಗಳು ಮೂರು ತಾಣಗಳಲ್ಲಿ 2200 ಜನರನ್ನು ಹೊಂದಿದ್ದು, ಅವುಗಳ ಪೈಕಿ ಎರಡು ತಾಣಗಳು ಸಿಯುಡಾಡ್‌, ಜುವಾರೆಝ್‌ (TXನ ಎಲ್‌ ಪಾಸೊನ ಜೊತೆಯ ನಗರ) ಎಂಬಲ್ಲಿದ್ದರೆ, ಮತ್ತೊಂದು ತಾಣವು ಕಬೊರ್ಕಾದಲ್ಲಿದೆ. ಜೆನ್‌ಪ್ಯಾಕ್ಟ್‌ ಮೆಕ್ಸಿಕೊನ ಮುಖ್ಯ ವ್ಯವಹಾರದ ಕಾರ್ಯಸಾಮರ್ಥ್ಯಗಳು ಗ್ರಾಹಕ ಸೇವೆ, ಹಣಕಾಸು ಹಾಗೂ ಲೆಕ್ಕಪತ್ರಗಾರಿಕೆ, ಸಂಗ್ರಹಣೆಗಳು, ದಸ್ತಾವೇಜು ನಿರ್ವಹಣೆಯ ಕ್ಷೇತ್ರಗಳಲ್ಲಿ ಅಸ್ತಿತ್ವವನ್ನು ಕಂಡುಕೊಂಡಿವೆ. ದ್ವಿಭಾಷಾ ಕಾಲ್‌ ಸೆಂಟರ್‌ ಹಾಗೂ ಮುಖ್ಯವಾಗಿ ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿನ ಧ್ವನಿರಹಿತ ಸಾಮರ್ಥ್ಯಗಳನ್ನು ನಿರ್ವಹಿಸುವಲ್ಲಿ ಮೆಕ್ಸಿಕೊ ಒಂದು ಕಾರ್ಯಾನುಕೂಲದ ಅಥವಾ ಕಾರ್ಯತಂತ್ರದ ತಾಣವಾಗಿದೆ.

USAಯಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

ಇದರ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯು ಕ್ರೆಡಿಟೆಕ್‌ LLC ಎಂಬ ಹೆಸರಿನಿಂದ ಚಿರಪರಿಚಿತವಾಗಿತ್ತಾದರೂ, PAಯ ವಿಲ್ಕೆಸ್‌ ಬರ್ರೆ, TNನ ನ್ಯಾಶ್‌ವಿಲ್ಲೆ, ಮತ್ತು NJನ ಪರ್ಸಿಪ್ಪನಿಯಲ್ಲಿರುವ ಸೌಕರ್ಯಗಳ ನೆರವಿನಿಂದಾಗಿ ಜೆನ್‌ಪ್ಯಾಕ್ಟ್‌ ಕಂಪನಿಯು ಆರ್ಡರ್‌-ಟು-ಕ್ಯಾಶ್‌, ಪ್ರೊಕ್ಯೂರ್‌-ಟು-ಪೇ ಮತ್ತು ಫೋರ್‌ಕ್ಯಾಸ್ಟ್‌-ಟು-ಫುಲ್‌ಫಿಲ್‌‌ನಂಥ ವಿಶಿಷ್ಟ ಪ್ರಕ್ರಿಯೆಗಳಲ್ಲಿ ಹಣಕಾಸು & ಲೆಕ್ಕಪತ್ರಗಾರಿಕೆ ಪರಿಹಾರೋಪಾಯಗಳ ಆದಾಯ ಆವರ್ತನದ ನಿರ್ವಹಣೆ ಸೇವೆಗಳನ್ನು ಒದಗಿಸುತ್ತದೆ.ಹಿಂದೆ ಮನಿಲೈನ್‌ ಲೆಂಡಿಂಗ್‌ ಸರ್ವೀಸಸ್‌ ಎಂಬ ಹೆಸರನ್ನು ಹೊಂದಿದ್ದ ಜೆನ್‌ಪ್ಯಾಕ್ಟ್‌ ಮಾರ್ಟ್‌ಗೇಜ್‌ ಸರ್ವೀಸಸ್‌, ಖಾಸಗಿ-ಹಣೆಪಟ್ಟಿಯ, ಹೊರಗುತ್ತಿಗೆ ನೀಡಲಾದ ಅಡಮಾನದ ಪ್ರಾರಂಭಿಸುವಿಕೆ ಮತ್ತು ನೆರವೇರಿಸುವಿಕೆಯ ಸೇವೆಗಳು, ಹಾಗೂ ಹಣಕಾಸು ಸಂಸ್ಥೆಗಳು ಮತ್ತು ಇತರ ಅಡಮಾನ ಸಾಲನೀಡಿಕೆದಾರರಿಗಾಗಿರುವ ಸಂಕೀರ್ಣ ವ್ಯವಹಾರ ಪ್ರಕ್ರಿಯೆಯ ಹೊರಗುತ್ತಿಗೆ ಇವೇ ಮೊದಲಾದವುಗಳನ್ನು CAನ ಇರ್ವೀನ್‌ ಹಾಗೂ UTಯಲ್ಲಿನ ಸಾಲ್ಟ್‌ ಲೇಕ್‌ ಸಿಟಿಯಲ್ಲಿರುವ ತನ್ನ ಕೇಂದ್ರಗಳಿಂದ ಒದಗಿಸುತ್ತದೆ.

ಗ್ವಾಟೆಮಾಲಾದಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

ಗ್ವಾಟೆಮಾಲಾದಲ್ಲಿನ ಜೆನ್‌ಪ್ಯಾಕ್ಟ್‌ನ ಸೌಕರ್ಯವು 2008ರಲ್ಲಿ ಪ್ರಾರಂಭವಾಯಿತು ಹಾಗೂ ಇಂಗ್ಲಿಷ್‌ ಮಾತ್ರವೇ ಅಲ್ಲದೇ ಸ್ಪ್ಯಾನಿಷ್‌ ಭಾಷೆಯಲ್ಲಿನ ವ್ಯಹವಾರ ಪ್ರಕ್ರಿಯಾ ಸೇವೆಗಳನ್ನು ಈ ಸೌಕರ್ಯವು ಒದಗಿಸುತ್ತದೆ. ವಿತರಣಾ ಕೇಂದ್ರವು ಆರಂಭದಲ್ಲಿ 700ಕ್ಕಿಂತ ಹೆಚ್ಚಿನ ಕೆಲಸಗಾರರಿಗೆ ಅವಕಾಶವನ್ನು ಕಲ್ಪಿಸಲಿದ್ದು, ಈ ಸಂಖ್ಯೆಯು ಸರಿಸುಮಾರು 2,000ದವರೆಗೆ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಈ ಪ್ರದೇಶದ ಅತಿದೊಡ್ಡ ಸಾರ್ವಜನಿಕ ವಿಶ್ವವಿದ್ಯಾಲಯಕ್ಕೆ ಸದರಿ ಸೌಕರ್ಯವು ಅತ್ಯಂತ ಸಮೀಪದಲ್ಲಿರುವುದು ಮಹತ್ವದ ಅಥವಾ ಅತ್ಯಾವಶ್ಯಕವಾದ ಪ್ರತಿಭೆಗಳನ್ನು ಆಕರ್ಷಿಸುವುದಕ್ಕೆ ಸಂಬಂಧಿಸಿದಂತೆ ಒಂದು ಪ್ರಮುಖ ಪ್ರಯೋಜನವಾಗಿ ಪರಿಣಮಿಸಿದೆ.[]

ಹಂಗರಿಯಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

2002ರಲ್ಲಿ ಸಂಸ್ಥಾಪಿಸಲ್ಪಟ್ಟ ಜೆನ್‌ಪ್ಯಾಕ್ಟ್‌ ಹಂಗರಿ, ಬುಡಾಪೆಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಯುರೋಪ್‌ನ ಅಗ್ರಗಣ್ಯ ವ್ಯವಹಾರ ಸೇವೆಗಳು ಹಾಗೂ ತಂತ್ರಜ್ಞಾನ ಪರಿಹಾರೋಪಾಯಗಳನ್ನು ಒದಗಿಸುವವರ ಪೈಕಿ ಸ್ವತಃ ತನ್ನನ್ನು ಒಂದಾಗಿ ನೆಲೆಗೊಳಿಸಿಕೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಯುರೋಪ್‌ನಾದ್ಯಂತ ಇರುವ ಗ್ರಾಹಕರನ್ನು 15ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎರಡು ಡಜನ್‌ಗಿಂತಲೂ ಹೆಚ್ಚಿನ ದೇಶಗಳಿಗೆ ಸೇರಿರುವ ಸಿಬ್ಬಂದಿವರ್ಗವನ್ನು ಇದು ಪ್ರಸ್ತುತ ಹೊಂದಿದೆ.

=ನೆದರ್ಲೆಂಡ್ಸ್‌ & ಸ್ಪೇನ್‌ನಲ್ಲಿನ ಕಾರ್ಯಾಚರಣೆಗಳು

[ಬದಲಾಯಿಸಿ]

ICE ಎಂಟರ್‌‌ಪ್ರೈಸ್‌ ಸಲ್ಯೂಷನ್ಸ್‌ನ ಡಚ್‌ ಹಾಗೂ ಸ್ಪ್ಯಾನಿಷ್‌ ಘಟಕಗಳನ್ನು 2007ರಲ್ಲಿ ಕಾರ್ಯತಂತ್ರದ ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ, ನೆದರ್ಲೆಂಡ್ಸ್‌ ಹಾಗೂ ಸ್ಪೇನ್‌ನಲ್ಲಿರುವ ತನ್ನ ಕೇಂದ್ರಗಳ ಮೂಲಕ SAP ಸಂಬಂಧಿತ ಪರಿಹಾರೋಪಾಯಗಳನ್ನು ಜೆನ್‌ಪ್ಯಾಕ್ಟ್‌ ಒದಗಿಸುತ್ತಿದೆ. ICE ಕಂಪನಿಯು ನೆದರ್ಲೆಂಡ್ಸ್‌‌ನಲ್ಲಿ SAP ಸೇವೆಗಳ ಒಂದು ಪಾಲುದಾರ, ಸರ್ವೋಪಯೋಗಿ ಪಾಲುದಾರ, ಮತ್ತು BW/SEM ಪಾಲುದಾರನಾಗಿದೆ, ಹಾಗೂ ಸ್ಪೇನ್‌ನಲ್ಲಿ ಒಂದು SAP ಪಾಲುದಾರ ಹಾಗೂ ಸ್ಟ್ರೀಮ್‌ಸರ್ವ್‌ ಪಾಲುದಾರನಾಗಿದೆ. ಆದಾಗ್ಯೂ, ICE ಕಂಪನಿಯ ಸ್ವಾಧೀನ ಪ್ರಕ್ರಿಯೆಯಿಂದಾಗಿ ಕೆಲವೊಂದು ಅನಿರೀಕ್ಷಿತ ಘಟನೆಗಳು ಸಂಭವಿಸಿದವು. ICE ಕಂಪನಿಯು ಕೇವಲ ತನ್ನ ಸಮಾಲೋಚಕ ಪಾಲುದಾರರ (ಪಾಲುದಾರಿಕೆಯ ಒಂದು ದಸ್ತಾವೇಜು ಪತ್ರದ ಮೂಲಕ ICE ಕಂಪನಿಯೊಂದಿಗೆ ಸಂಬಂಧವನ್ನು ಹೊಂದಿದ್ದು, ತಮ್ಮ ಸ್ವಂತದ ಆದಾಯಗಳಿಗೆ ಜವಾಬ್ದಾರರಾಗಿದ್ದವರು) ಕಾರ್ಯಚಟುವಟಿಕೆಗಳನ್ನು ಅವಲಂಬಿಸಿದ ಒಂದು ಕಂಪನಿಯಾಗಿದ್ದರಿಂದ ಮತ್ತು ಈ ಸಮಾಲೋಚಕ ಪಾಲುದಾರರ ಪೈಕಿ ಬಹುಪಾಲು ಜನರು ಈ ವ್ಯವಹಾರದ ಮುಂಪಾವತಿಯಲ್ಲಿ ತೊಡಗಿಸಿಕೊಂಡಿರಲಿಲ್ಲವಾದ್ದರಿಂದ ಅಥವಾ ಅದರ ಕುರಿತು ಅವರಿಗೆ ಮಾಹಿತಿಯನ್ನು ನೀಡಿರಲಿಲ್ಲವಾದ್ದರಿಂದ (ಸದರಿ ವಿದ್ಯಮಾನವು ನಡೆದ ನಂತರವಷ್ಟೇ ಅವರಿಗೆ ಈ ಕುರಿತು ಮಾಹಿತಿ ನೀಡಲಾಯಿತು), ಕೆಲವೇ ತಿಂಗಳೊಳಗಾಗಿ ಸಮಾಲೋಚಕ ಪಾಲುದಾರರ ಪೈಕಿ ಸುಮಾರು 50%ನಷ್ಟು ಜನರು ಕಂಪನಿಯನ್ನು ತೊರೆದಿದ್ದರು.

ಪೋಲೆಂಡ್‌ನಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

2008ರ ಜೂನ್‌ನಲ್ಲಿ, ಪೂರ್ವದ ಪೋಲೆಂಡ್‌ನಲ್ಲಿನ ಒಂದು ಅತಿದೊಡ್ಡ ಪೋಲಿಷ್‌ ನಗರವಾದ ಲಬ್ಲಿನ್‌ನಲ್ಲಿ ಒಂದು ಹೊಸಕೇಂದ್ರವನ್ನು ಜೆನ್‌ಪ್ಯಾಕ್ಟ್‌ ಕಂಪನಿಯು ತೆರೆಯಿತು.

ಆಫ್ರಿಕಾದಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

2008ರಲ್ಲಿ, ಮೊರಾಕೊವಿನ, ಉತ್ತರ ಆಫ್ರಿಕಾದ ನಗರವಾದ ರಬಾಟ್‌ನಲ್ಲಿ ಜೆನ್‌ಪ್ಯಾಕ್ಟ್‌ ಕಂಪನಿಯು ಪಾದಾರ್ಪಣ ಮಾಡಿತು. 2009ರಲ್ಲಿ, ಸೌತ್‌ ಆಫ್ರಿಕನ್‌ ಬ್ರೂಯರೀಸ್‌ ಲಿಮಿಟೆಡ್‌ (SAB)[] ಕಂಪನಿಯೊಂದಿಗೆ ಒಂದು ಪಾಲುದಾರಿಕೆ ಒಪ್ಪಂದಕ್ಕೆ ಪ್ರವೇಶಿಸಿದ ಜೆನ್‌ಪ್ಯಾಕ್ಟ್‌, ದಕ್ಷಿಣ ಆಫ್ರಿಕಾದ ಜೋಹಾನ್ನೆಸ್‌ಬರ್ಗ್‌ನಲ್ಲಿನ ತನ್ನ ಹಂಚಿಕೆ ಮಾಡಲ್ಪಟ್ಟ ಸೇವೆಗಳ ಕೇಂದ್ರಕ್ಕೆ ಸಂಬಂಧಿಸಿದ ಹೊಣೆಗಾರಿಕೆಯನ್ನು ವಹಿಸಿಕೊಂಡಿತು.

ಚೀನಾದಲ್ಲಿನ ಕಾರ್ಯಾಚರಣೆ

[ಬದಲಾಯಿಸಿ]

ಚೀನಾದಲ್ಲಿ ಜೆನ್‌ಪ್ಯಾಕ್ಟ್‌ ಕಂಪನಿಯು ಜಿಯಾನ್‌ಬೈಟ್‌ (...Chinese: 简柏特ನಲ್ಲಿ) ಎಂದೇ ಹೆಸರಾಗಿದ್ದು, ಡೇಲಿಯಾನ್‌, ಚಾಂಗ್‌ಚುನ್‌ ಹಾಗೂ ಷಾಂಘೈಗಳಲ್ಲಿ ತನ್ನ ವಿತರಣಾ ಕೇಂದ್ರಗಳನ್ನು ಹೊಂದಿದೆ. ಅವುಗಳ ಪೈಕಿ, ಡೇಲಿಯಾನ್‌ನ ಡೇಲಿಯಾನ್‌ ಸಾಫ್ಟ್‌ವೇರ್‌ ಪಾರ್ಕ್‌ನಲ್ಲಿ ನೆಲೆಗೊಂಡಿರುವ ಕೇಂದ್ರವು ಅತ್ಯಂತ ದೊಡ್ಡದಾಗಿದ್ದು, ಸುಮಾರು 3,000 ಜನರಿಗೆ[] ಉದ್ಯೋಗಾವಕಾಶವನ್ನು ನೀಡಿದೆ ಮತ್ತು ಜಪಾನಿನ ವ್ಯಾಪಾರಿ ವಲಯಕ್ಕೆ ಸಂಬಂಧಿಸಿದಂತೆ ಗಮನಹರಿಸುತ್ತಿದೆ.

ಇವನ್ನೂ ನೋಡಿ

[ಬದಲಾಯಿಸಿ]
  • ಪ್ರಮೋದ್‌ ಭಾಸಿನ್‌
  • GECIS
  • GE
  • ಹೊರಗುತ್ತಿಗೆ
  • ಪ್ರಮುಖ IT ಸಮಾಲೋಚನಾ ಸಂಸ್ಥೆಗಳ ಪಟ್ಟಿ

ಆಕರಗಳು

[ಬದಲಾಯಿಸಿ]
  1. "ಜೆನ್‌ಪ್ಯಾಕ್ಟ್‌ ವಾಸ್ತವಾಂಶದ ಪುಟ‌‌" (PDF). Archived from the original (PDF) on 2010-03-31. Retrieved 2010-04-14.
  2. ಸೇವೆಗಳು ಮತ್ತು ತಾಣs
  3. http://www.thehindubusinessline.com/2006/01/12/stories/2006011202260400.htm
  4. "ಆರ್ಕೈವ್ ನಕಲು". Archived from the original on 2010-11-13. Retrieved 2010-04-14.
  5. "ಜೆನ್‌ಪ್ಯಾಕ್ಟ್‌ ಇಂಕ್ಸ್‌ ಸ್ಟ್ರಾಟೆಜಿಕ್‌ ಪ್ಯಾಕ್ಟ್‌ ವಿತ್‌ SAB". ಬಿಸಿನೆಸ್‌ ಸ್ಟಾಂಡರ್ಡ್‌. 2009-08-04.
  6. ಜೆನ್‌ಪ್ಯಾಕ್ಟ್‌ (ಬೈಡು ವಿಶ್ವಕೋಶದಲ್ಲಿರುವುದು) (Chinese)

ಬಾಹ್ಯ ಕೊಂಡಿಗಳು

[ಬದಲಾಯಿಸಿ]
{{bottomLinkPreText}} {{bottomLinkText}}
ಜೆನ್‌ಪ್ಯಾಕ್ಟ್‌
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?