For faster navigation, this Iframe is preloading the Wikiwand page for ಜಾಮಾ ಮಸೀದಿ, ದೆಹಲಿ.

ಜಾಮಾ ಮಸೀದಿ, ದೆಹಲಿ

28°39′04″N 77°14′02″E / 28.651°N 77.234°E / 28.651; 77.234

Jama Masjid
Location Delhi, India
Branch/tradition Barelvi Hanafi
Architectural information
Style Islamic
Capacity 85,000
Length 80 m
Width 27 m
Dome(s) 3
Minaret(s) 2
Minaret height 41 m
ಮುಖ್ಯ ಮುಂಭಾಗದ ನೋಟ
ಜಾಮಾ ಮಸೀದಿ, ದೆಹಲಿ, 1852.
ಜಾಮಾ ಮಸೀದಿಯ ಗುಮ್ಮಟ
ಚೌಕದ ದೃಶ್ಯಾವಳಿ

ಮಸ್ಜಿದ್-ಐ ಜಹಾನ್-ನುಮಾ (ಪರ್ಸಿಯನ್: مسجد جھان نما, ವಿಶ್ವದ ಪ್ರತಿಧ್ವನಿಸುವ ಮಸೀದಿ), ಇದನ್ನು ಸಾಮಾನ್ಯವಾಗಿ ದಿಲ್ಲಿಯ ಜಾಮಾ ಮಸೀದಿ ಎಂದು ಹೇಳಲಾಗುತ್ತದೆ. ಇದು ಭಾರತದ ಹಳೆ ದೆಹಲಿಯ ದೊಡ್ಡ ಮಸೀದಿ ಎಂದು ಕರೆಯಲ್ಪಡುತ್ತದೆ. ಇದು ತಾಜ್ ಮಹಲ್ ನಿರ್ಮಾತೃ ಮೊಘಲ್ ಸಾಮ್ರಾಟ ಶಹ ಜಹಾನ್ ಒಡೆತನದಲ್ಲಿತ್ತು. ಮತ್ತು ಇದನ್ನು ಕ್ರಿ.ಪೂ. 1656ರಲ್ಲಿ ಮಸೀದಿ ಕಟ್ಟಡ ಕಾಮಗಾರಿಯನ್ನು ಪೂರೈಸಲಾಯಿತು. ಇದು ಭಾರತದಲ್ಲಿಯೇ ಅತಿದೊಡ್ಡ ಮತ್ತು ಉತ್ತಮವಾಗಿ ಮೂಡಿಬಂದ ಮಸೀದಿಯಾಗಿದೆ. ಇದು ಹಳೆ ದೆಹಲಿಯ ಅತಿ ಜನಸಂದಣಿ ಇರುವ ಹಾಗೂ ಮಧ್ಯಭಾಗದಲ್ಲಿರುವ ಚವಾರಿ ಬಜಾರ್ ರಸ್ತೆಯ ಮಾರ್ಗದಲ್ಲಿ ಬರುತ್ತದೆ.

ಜಾಮಾ ಮಸೀದಿ ಎಂಬುದು ನಂತರದ ಹೆಸರಾಗಿದ್ದು, ಇಲ್ಲಿ ವಾರದ ಪ್ರತಿ ಶುಕ್ರವಾರ ಮಧ್ಯಾಹ್ನ ಮುಸ್ಲಿಂರು ಪ್ರಾರ್ಥನೆಗಾಗಿ ಜುಮ್ಮಾದಲ್ಲಿ ಸೇರುತ್ತಾರೆ. ಮಸೀದಿಗಳಲ್ಲಿ ಸಾಮಾನ್ಯವಾಗಿ ಪ್ರಾರ್ಥನೆ ನಡೆಯುತ್ತದೆ. ಇದನ್ನು ಪ್ರಾರ್ಥನಾ ಮಸೀದಿ ಅಥವಾ ಜಾಮಿ ಮಸೀದಿ ಎಂದು ಕರೆಯುತ್ತಾರೆ. ಮಸೀದಿಯ ಆವರಣದೊಳಗೆ ಸುಮಾರು 25 ಸಾವಿರ ಮಂದಿ ಭಕ್ತರು ಒಟ್ಟಿಗೆ ಸೇರುವ ಸ್ಥಳಾವಕಾಶವಿದೆ. ಈ ಮಸೀದಿಯ ಉತ್ತರ ಗೇಟ್ ಬಳಿ ಕೆಲ ಮಹಾತ್ಮರ ಅವೇಶಷಗಳು ಪತ್ತೆಯಾಗಿವೆ. ಇದರಲ್ಲಿ ಕುರಾನ್‌ (Qur'an) ಜಿಂಕೆ ಚರ್ಮದ ಮೇಲೆ ಬರೆದ ಪುರತಾನ ಪ್ರತಿ ಲಭ್ಯವಾಗಿದೆ.

ನಿರ್ಮಾಣ

[ಬದಲಾಯಿಸಿ]

ಐತಿಹಾಸಿಕ ಜಾಮಾ ಮಸೀದಿಯನ್ನು (ಶುಕ್ರವಾರದ ಮಸೀದಿ) ಶಹಜಹಾನಾಬಾದ್ ದಿಬ್ಬ (ಸಣ್ಣ ಗುಡ್ಡ)ದಲ್ಲಿ ನಿರ್ಮಿಸಲಾಯಿತು. ಇದನ್ನು ಭಾರತದ ಮೊಘಲ್ ಸಾಮ್ರಾಜ್ಯದ 5ನೇ ರಾಜ ಷಹಜಹಾನ್ ಕ್ರಿ.ಪೂ. 1650 ಅಕ್ಟೋಬರ್ 6ರಂದು ಕಟ್ಟಿಸಿದನು. (10th Shawwal 1060 AH). ಈ ಮಸೀದಿಯನ್ನು ನಿರ್ಮಾಣ ಮಾಡಲು ಸುಮಾರು 6 ವರ್ಷಕ್ಕಿಂತ ಹೆಚ್ಚು ಕಾಲ ತೆಗೆದುಕೊಳ್ಳಲಾಯಿತು. ಇದಕ್ಕಾಗಿ ಸುಮಾರು 5,000ಕ್ಕೂ ಹೆಚ್ಚು ಕಾರ್ಮಿಕರು ದುಡಿದಿದ್ದಾರೆ.[] ಇದಕ್ಕೆ ತಗುಲಿದ ಒಟ್ಟು ವೆಚ್ಚ ಆಗಿನ ಕಾಲದಲ್ಲಿ 10 ಲಕ್ಷ (ಒಂದು ಮಿಲಿಯನ್) ರುಪಾಯಿ ಆಗಿದ್ದು. ಇದೇ ರಾಜ ಆಗ್ರಾದಲ್ಲಿ ತಾಜ್ ಮಹಲ್ ಅನ್ನು ನಿರ್ಮಿಸಿದ್ದಾನೆ. ಮತ್ತು ಜಾಮಾ ಮಸೀದಿ ಎದುರಿಕೆ ಕೆಂಪುಕೋಟೆಯನ್ನು ಸಹ ಈತ ನಿರ್ಮಿಸಿದ್ದಾನೆ. ಇದನ್ನು ಕ್ರಿ.ಪೂ. 1656ರಲ್ಲಿ ಅಂತಿಮವಾಗಿ ನಿರ್ಮಾಣ ಮಾಡಲಾಯಿತು. ಇದು 3 ದೊಡ್ಡ ಗೇಟ್ (ಬಾಗಿಲು) ಅನ್ನು ಹೊಂದಿದ್ದು, ನಾಲ್ಕು ಗೋಪುರಗಳಿವೆ. ಮತ್ತು ಎರಡು 40 ಮೀಟರ್ ಉದ್ದದ ಮಸೀದಿಯ ಸ್ತಂಭಗೋಪುರವನ್ನು ಕೆಂಪು ಕಲ್ಲು ಮತ್ತು ಬಿಳಿ ಬಣ್ಣದ ಮಾರ್ಬಲ್ಸ್ ನಿಂದ ನಿರ್ಮಿಸಲಾಗಿದೆ.[]

ದೆಹಲಿ, ಆಗ್ರಾ, ಅಜ್ಮೀರ್ ಮತ್ತು ಲಾಹೋರ್‌‍ಗಳಲ್ಲಿ ಶಹಜಹಾನ್ ಹಲವಾರು ಮುಖ್ಯವಾದ ಮಸೀದಿಗಳನ್ನು ನಿರ್ಮಿಸಿದ್ದಾನೆ. ಜಾಮಾ ಮಸೀದಿಯ ಮಹಡಿ ಯೋಜನೆಯು ಆಗ್ರಾ ಸಮೀಪದ ಫಾತೇಪುರ್ ಸಿಕ್ರಿ, ಜಾಮಾ ಮಸೀದಿಯನ್ನು ಹೋಲುತ್ತದೆ. ಆದರೆ ದೆಹಲಿಯಲ್ಲಿರುವ ಜಾಮಾ ಮಸೀದಿಯು ಈ ಎರಡಕ್ಕಿಂತಲೂ ಎರಡುಪಟ್ಟು ದೊಡ್ಡದಾಗಿ ನಿರ್ಮಾಣವಾಗಿದೆ. ನಂತರದಲ್ಲಿ ಇದರ ಮಹತ್ವವೂ ಕೂಡ ಹೆಚ್ಚುತ್ತಾ ಹೋಯಿತು. ಏಕೆಂದರೆ ಈತ ಈ ಮಸೀದಿಯನ್ನು ನಿರ್ಮಾಣ ಮಾಡಲು ವಿಸ್ತಾರವಾದ ಪ್ರದೇಶವನ್ನು ಆಯ್ಕೆಮಾಡಿದ್ದ. ಸ್ವಲ್ಪಮಟ್ಟಿಗೆ ದೊಡ್ಡದಾಗಿ ಕಾಣುವ ಲಾಹೋರ್ ನ ಬಾದಶಾಹಿ ಮಸೀದಿಯನ್ನು ಶಹಜಹಾನ್ ಮಗನಾದ ಔರಂಗಾಜೇಬ್ 1673ರಲ್ಲಿ ಕಟ್ಟಿಸಿದ. ಇದು ನೋಡಲು ದೆಹಲಿಯಲ್ಲಿರುವ ಜಾಮಾ ಸಮೀದಿಯನ್ನು ಹೋಲುತ್ತದೆ.

ವಾಸ್ತುಶಿಲ್ಪ

[ಬದಲಾಯಿಸಿ]

ಮಸೀದಿಯ ಆವರಣವು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಮೂರು ಹಂತವಾಗಿ ನಿರ್ಮಾಣವಾಗಿದೆ. ಎಲ್ಲವನ್ನೂ ಕೆಂಪು ಮರಳುಶಿಲೆಯಿಂದ ನಿರ್ಮಿಸಲಾಗಿದೆ. ಉತ್ತರ ಭಾಗದ ಬಾಗಿಲು (ಗೇಟ್) ಮೂವತ್ತೊಂಬತ್ತು ಹಂತಗಳನ್ನು (ಸ್ಟೆಪ್ಸ್) ಹೊಂದಿದೆ. ಮಸೀದಿಯ ದಕ್ಷಿಣ ಭಾಗವು ಮೂವತ್ತಮೂರು ಹಂತಗಳನ್ನು ಹೊಂದಿದೆ. ಪೂರ್ವ ಭಾಗದ ಬಾಗಿಲು ಪ್ರಧಾನ ಬಾಗಿಲಾಗಿದ್ದು ಇದು 35 ಹಂತಗಳನ್ನು ಹೊಂದಿದೆ. ಈ ಹಂತಗಳನ್ನು ಮನೆಗಳ ಆಹಾರ ಮಳಿಗೆಗಳು, ಅಂಗಡಿಗಳು ಮತ್ತು ಬೀದಿ ಕಲಾವಿದರಿಗೆ ಬಳಸಲಾಗುತ್ತಿತ್ತು. ಮಸೀದಿಯ ಪೂರ್ವ ಭಾಗವು ಸಂಜೆ ವೇಳೆಗೆ ವ್ಯಾಪಾರ ಮಳಿಗೆಗಳಾಗಿ ಬದಲಾವಣೆಯಾಗುತ್ತಿದ್ದವು. ಇಲ್ಲಿ ಕೋಳಿ ಹಾಗೂ ಹಕ್ಕಿಗಳನ್ನು ಮಾರಾಟ ಮಾಡಲಾಗುತ್ತಿತ್ತು. 1857ರ ಭಾರತ ಸ್ವಾತಂತ್ರ್ಯ ಹೋರಾಟಕ್ಕಿಂತ ಮುಂಚಿತವಾಗಿ ಉತ್ತರ ಭಾಗದ ಸಮೀಪ ಮದರಸಾವನ್ನು ಸ್ಥಾಪಿಸಲಾಗಿತ್ತು. ಈ ದಂಗೆಯ ನಂತರ ಇದನ್ನು ಕೆಡವಲಾಯಿತು.

ಮಸೀದಿಯು ಪಶ್ಚಿಮ ದಿಕ್ಕಿಗೆ ಮುಖವನ್ನು ಮಾಡಿದೆ. ಇದರ ಮೂರು ಭಾಗಗಳು ಕಮಾನಿನಾಕಾರದ ಸಾಲುಮರಗಳಿಂದ ಆವೃತವಾಗಿವೆ. ಈ ಎಲ್ಲವೂ ಉತ್ತುಂಗ ಶಿಖರದ ಗೋಪುರಗಳಂತೆ ಬಾಗಿಲಿನ ದಾರಿಯ ಮಧ್ಯಭಾಗದಲ್ಲಿ ಕಾಣಸಿಗುತ್ತದೆ. ಈ ಮಸೀದಿಯು 261 ಅಡಿ (80 ಮೀ) ಉದ್ದ ಹಾಗೂ 90 ಅಡಿ (27 ಮೀ) ಅಗಲವನ್ನು ಹೊಂದಿದೆ. ಮತ್ತು ಇದರ ಮೇಲ್ಚಾವಣಿಯು ಮಹಲುಗಳನ್ನು ಹೊಂದಿದ್ದು, ಜತೆಗೆ ಇದಕ್ಕೆ ಬದಲೀ ವ್ಯವಸ್ಥೆಯಾಗಿ ಬಿಳಿ ಮತ್ತು ಕಪ್ಪು ಬಣ್ಣದ ಮಾರ್ಬಲ್ಸ್ ಪಟ್ಟೆಯನ್ನು ನೀಡಲಾಗಿತ್ತು. ಇದರ ತುತ್ತತುದಿಗಿರುವ ಭಾಗವು ಬಂಗಾರದಿಂದ ಆವೃತವಾಗಿತ್ತು. ಎರಡು ಉತ್ತುಂಗದ ಮಸೀದಿಯ ಸ್ತಂಭಗೋಪುರವು 130 ಅಡಿ (41ಮೀ) ಉದ್ದ, ಮತ್ತು 130 ಹಂತಗಳನ್ನು ಹೊಂದಿದ್ದು, ಇದರುದ್ದಕ್ಕೂ ಬಿಳಿ ಮಾರ್ಬಲ್ ಮತ್ತು ಕೆಂಪು ಉಸುಕುಶಿಲೆಯ ಪಟ್ಟಿಯನ್ನು ಬಳಸಲಾಗಿದೆ. ಇದನ್ನು ಮಹಲಿನ ಪಾರ್ಶ್ವ ಭಾಗದಲ್ಲಿ ಕಾಣಬಹುದಾಗಿದೆ. ಮಸೀದಿಯ ಸ್ತಂಭಗೋಪುರ ಮೂರು ಗ್ಯಾಲರಿಗಳಿಂದ ವಿಭಾಗಿಸಲ್ಪಟ್ಟಿದೆ. ಮತ್ತು ಮೇಲೆ 12 ಬದಿಗಳಲ್ಲಿ ತೆರೆದ ಮಹಲುಗಳ ಪ್ರದೇಶಗಳನ್ನು ಕಾಣಬಹುದಾಗಿದೆ. ಮಸೀದಿಯ ಹಿಂಭಾಗದಲ್ಲಿ ಪೂರ್ಣಗೊಂಡಿರುವ ನಾಲ್ಕು ಸಣ್ಣ ಮಸೀದಿಯ ಸ್ತಂಭಗೋಪುರವು ಮುಂಭಾಗದಲ್ಲಿರುವ ಸ್ತಂಭಗೋಪುರದಂತೆ ಕಾಣುತ್ತವೆ.

ಮಸೀದಿಯ ಒಳಗಿರುವ ಮಹಲುಗಳ ಕೆಳಗೆ ಇರುವ ಸಭಾಂಗಣದಲ್ಲಿ ಏಳು ಕಮಾನುಗಳುಳ್ಳ ಬಾಗಿಲುಗಳು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ನಿಂತಿವೆ. ಮತ್ತು ಮಸೀದಿಯ ಗೋಡೆಗಳು ಅದರ ಉದ್ದದ ನಡುವಿನ ಭಾಗವು ಮಾರ್ಬಲ್ ಗಳಿಂದ ಆವೃತವಾಗಿವೆ. ಇದರ ಆಚೆ ಪ್ರಾರ್ಥನಾ ಸಭಾಂಗಣವಿದ್ದು, ಇದು 61 ಮೀಟರ್ X 27.5 ಮೀಟರ್ ಸುತ್ತಳತೆಯನ್ನು ಹೊಂದಿದೆ. ಜತೆಗೆ ಹನ್ನೊಂದು ಕಮಾನುಗುಳುಳ್ಳ ದ್ವಾರಬಾಗಿಲನ್ನು ಹೊಂದಿದ್ದು, ಇದರ ಮಧ್ಯವಿರುವ ಕಮಾನು ಬಾಗಿಲು ಅಗಲವಾಗಿ ಮತ್ತು ಎತ್ತರವಾಗಿ ನಿರ್ಮಾಣ ಹೊಂದಿದೆ. ಮತ್ತು ದಪ್ಪವೂ ಸ್ಥೂಲವೂ ಆದ (ಘನವಾದ) ಮುಂಬಾಗಿಲನ್ನು ಹೊಂದಿದೆ. ಎಲ್ಲ ಬದಿಗಳಲ್ಲೂ ತೆಳ್ಳಗಿನ ಸ್ತಂಭಗೋಪುರವನ್ನು ನಿರ್ಮಾಣ ಮಾಡಲಾಗಿದೆ. ಜತೆಗೆ ಅಷ್ಟಭುಜಾಕೃತಿಯಲ್ಲಿ ಮೇಲ್ಭಾಗದ ಪ್ರದೇಶವನ್ನು ನಿರ್ಮಿಸಲಾಗಿದೆ. ಈ ಎಲ್ಲ ಕಮಾನು ಪ್ರವೇಶ ದ್ವಾರಗಳು ಬಿಳಿ ಮಾರ್ಬಲ್ ನ ಫಲಕವನ್ನು ಹೊಂದಿದ್ದು, 4 ಅಡಿ (1.2 ಮೀ) ಉದ್ದ 2.5 ಅಡಿ (760 ಮಿ.ಮೀ) ಅಗಲವನ್ನು ಹೊಂದಿದ್ದು, ಕಪ್ಪು ಮಾರ್ಬಲ್ ಅಕ್ಷರಗಳಿಂದ ಕೆತ್ತಲಾಗಿದೆ. ಇದರಲ್ಲಿ ಮಸೀದಿ ನಿರ್ಮಾಣದ ಇತಿಹಾಸವನ್ನು ಬರೆಯಲಾಗಿದೆ. ಮತ್ತು ಶಹಜಹಾನ್ ನ ಆಳ್ವಿಕೆ ಮತ್ತು ಸಾಮರ್ಥ್ಯವನ್ನು ಇದರಲ್ಲಿ ವೈಭವೀಕರಿಸಲಾಗಿದೆ. ಮಧ್ಯಭಾಗದ ಕಮಾನಿನ ಮೇಲೆ ‘ದಿ ಗೈಡ್’ (ದಾರಿತೋರಿಸುವಾತ) ಎಂದು ಬರೆಯಲಾಗಿದೆ.

ಮಸೀದಿಯ ಜಗಲಿಯನ್ನು 5 ಅಡಿ (1.5 ಮೀ) ಹಾಸುಗಲ್ಲಿನಿಂದ ಟೆರಾಸ್ ವರೆಗೆ ನಿರ್ಮಿಸಲಾಗಿದೆ. ಮಸೀದಿಯ ಒಳಗೆ ಮೂರು ಹಂತಗಳನ್ನು ಮುಖ್ಯವಾಗಿ ನಿರ್ಮಿಸಲಾಗಿದೆ. ಇದನ್ನು ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ರಚಿಸಲಾಗಿದೆ. ಮಸೀದಿಯ ಮಹಡಿಯು ಬಿಳಿ ಮತ್ತು ಕಪ್ಪು ಮಾರ್ಬಲ್ ಗಳಿಂದ ಆವೃತವಾಗಿದ್ದು, ಇದರ ಅಲಂಕಾರಿಕಾ ವಸ್ತುಗಳು ಮುಸ್ಲಿಂ ರ ಪ್ರಾರ್ಥನಾ ಮ್ಯಾಟ್ ಅನ್ನು ಹೋಲುವಂತಿದೆ. ತೆಳುವಾದ ಕಪ್ಪು ಮಾರ್ಬಲ್ ಪಟ್ಟಿಯನ್ನು ಭಕ್ತರ ಅನುಕೂಲಕ್ಕಾಗಿ ಗುರುತಿಸಲಾಗಿದೆ. ಇದು 3 ಅಡಿ ಉದ್ದ ಹಾಗೂ ಒಂದೂವರೆ ಅಡಿ ಅಗಲವನ್ನು ಹೊಂದಿದೆ. ಒಟ್ಟಾರೆಯಾಗಿ 899 ಕಡೆಗಳಲ್ಲಿ ಗುರುತುಗಳನ್ನು ಮಸೀದಿಯ ಮಹಡಿಯಲ್ಲಿ ಮಾಡಲಾಗಿದೆ. ಮಸೀದಿಯ ಹಿಂಭಾಗದಲ್ಲಿ ಉದ್ದನೆಯ ಶಿಲೆ ಇದ್ದು, ಮಸೀದಿಯು ಈ ಶಿಲೆಗಲ್ಲುಗಳ ಜತೆ ನಿರ್ಮಿತವಾಗಿದೆ.

ಭಯೋತ್ಪಾದನಾ ಘಟನೆಗಳು

[ಬದಲಾಯಿಸಿ]

2006 ಬಾಂಬ್ ಸ್ಫೋಟ

[ಬದಲಾಯಿಸಿ]

2006 ಏಪ್ರಿಲ್ 14ರಂದು, ಜಾಮಾ ಮಸೀದಿಯಲ್ಲಿ ಎರಡು ಬಾರಿ ಬಾಂಬ್ ಸ್ಫೋಟ ಸಂಭವಿಸಿತು. ಮೊದಲ ಬಾಂಬ್ ಸ್ಫೋಟವು ಸುಮಾರು 5.26 ನಿಮಿಷಕ್ಕೆ ಸಂಭವಿಸಿದರೆ, ಎರಡನೇ ಸ್ಫೋಟ ಸುಮಾರು 5.33ಕ್ಕೆ (ಐಎಸ್ ಟಿ) ಸಂಭವಿಸಿತು. ಇದರಲ್ಲಿ ಕೊನೆಪಕ್ಷ 13 ಮಂದಿ ಗಾಯಗೊಂಡಿದ್ದರು. ಈ ಸ್ಫೋಟವನ್ನು ಶುಕ್ರವಾರದಂದು ಮಾಡಲಾಗಿದ್ದು, ಈ ಸ್ಫೋಟ ಸಂದರ್ಭದಲ್ಲಿ ಮಸೀದಿಯಲ್ಲಿ ಸುಮಾರು 1000 ಜನರು ಪ್ರಾರ್ಥನೆಗಾಗಿ ಜಮಾವಣೆಗೊಂಡಿದ್ದರು. ಇದು ಮುಸ್ಲಿಂರ ಪುಣ್ಯ ದಿನವಾಗಿತ್ತು. ಏಕೆಂದರೆ ಇದು ಮಲಿದ್ ಅನ್ ನಬಿ, ಇಸ್ಲಾಮಿಕ್ ಪ್ರವಾದಿ ಮೊಹಮ್ಮದ್ ಜನ್ಮದಿನವಾಗಿತ್ತು. ಈ ಮಸೀದಿಯ ವಕ್ತಾರ ಹೇಳುವಂತೆ, ಈ ಘಟನೆಯಿಂದ ಮಸೀದಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ.

2010 ಗುಂಡಿನ ದಾಳಿ

[ಬದಲಾಯಿಸಿ]

2010 ಸೆಪ್ಟೆಂಬರ್ 15ರಂದು ಮಸೀದಿಯ 3ನೇ ಬಾಗಿಲಿನ ಸಮೀಪವಿರುವ ಬೈಕ್‌‍ನಿಂದ ಬಂದವರು ಬಸ್‌ ಮೇಲೆ ಬಹಿರಂಗವಾಗಿ ಗುಂಡು ಹಾರಿಸಿದ್ದರಿಂದ ಇಬ್ಬರು ಥೈವಾನಿ ಪ್ರವಾಸಿಗರು ಗಾಯಗೊಂಡಿದ್ದರು.[]

ಚಿತ್ರಸಂಪುಟ

[ಬದಲಾಯಿಸಿ]

ಜಾಮಾ ಮಸೀದಿಯ ಇಮಾಮರುಗಳು

[ಬದಲಾಯಿಸಿ]
  • 1) ಸೈಯದ್ ಅಬ್ದುಲ್ ಗಫೂರ್ ಶಾಹ್ ಬುಕಾರಿ ಶಾಹಿ ಇಮಾಮ್
  • 2) ಸೈಯದ್ ಅಬ್ದುಲ್ ಶಕೂರ್ ಶಾಹ್ ಬುಕಾರಿ ಶಾಹಿ ಇಮಾಮ್
  • 3) ಸೈಯದ್ ಅಬ್ದುಲ್ ರಹೀಮ್ ಶಾಹ್ ಬುಕಾರಿ ಶಾಹಿ ಇಮಾಮ್
  • 4)ಸೈಯದ್ ಅಬ್ದುಲ್ ಗಫೂರ್ ಶಾಹ್ ಬುಕಾರಿ ಥಾನಿ ಶಾಹಿ ಇಮಾಮ್
  • 5) ಸೈಯದ್ ಅಬ್ದುಲ್ ರೆಹಮಾನ್ ಶಾಹ್ ಬುಕಾರಿ ಶಾಹಿ ಇಮಾಮ್
  • 6)ಸೈಯದ್ ಅಬ್ದುಲ್ ಕರೀಮ್ ಶಾಹ್ ಬುಕಾರಿ ಶಾಹಿ ಇಮಾಮ್
  • 7)ಸೈಯದ್ ಮೀರ್ ಜೀವನ್ ಶಾಹ್‌ ಬುಕಾರಿ ಶಾಹಿ ಇಮಾಮ್
  • 8)ಸೈಯದ್ ಮೀರ್ ಅಹಮದ್ ಅಲಿ ಶಾಹ್ ಬುಕಾರಿ ಶಾಹಿ ಇಮಾಮ್
  • 9)ಸೈಯದ್ ಮೊಹಮದ್ ಶಾಹ್ ಬುಕಾರಿ ಶಾಹಿ ಇಮಾಮ್
  • 10)ಮೌಲಾನಾ ಸೈಯದ್ ಅಹಮದ್ ಬುಕಾರಿ ಶಾಹಿ ಇಮಾಮ್
  • 11)ಮೌಲಾನಾ ಸೈಯದ್ ಹಮೀದ್ ಬುಕಾರಿ ಶಾಹಿ ಇಮಾಮ್
  • 12) ಸೈಯದ್ ಅಬ್ದುಲ್ಲಾ ಬುಕಾರಿ [೧] Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.
  • 13) ಸೈಯದ್ ಅಹಮ್ಮದ್ ಬುಕಾರಿ [೨] Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.

ಜಾಮಿಯಾ ಮಸಿದಿಯ ಇಮಾಮ್‌ರ ಇತಿಹಾಸ, ದೆಹಲಿ, ಭಾರತ [೩] Archived 2011-11-17 ವೇಬ್ಯಾಕ್ ಮೆಷಿನ್ ನಲ್ಲಿ.

ಇವನ್ನೂ ನೋಡಿ

[ಬದಲಾಯಿಸಿ]
  • ಇಸ್ಲಾಮಿಕ್‌ ವಾಸ್ತುಶೈಲಿ
  • ಮುಸ್ಲಿಂ ಕಲೆ
  • ಸಾಹ್ನ್‌
  • ಇಸ್ಲಾಮಿಕ್ ಇತಿಹಾಸದ ಕಾಲಘಟ್ಟ

ಟಿಪ್ಪಣಿಗಳು

[ಬದಲಾಯಿಸಿ]
  1. "ಹೆವೆನ್ ಅನ್ ಇರ್ಥ್: ಇಸ್ಲಾಂ", ನೊವೆಂಬರ್ 23, 2004 ವಿಡಿಯೊ ಡೊಕ್ಯುಮೆಂಟರಿ, ಹಿಸ್ಟೊರಿ ಚಾನಲ್. ಪ್ರೊಡ್ಯುಸರ್/ಡೈರೆಕ್ಟರ್, ಸ್ಟೆಫೆನ್ ರೂಕ್. ಸ್ಕ್ರಿಪ್ಟ್‌ರೈಟರ್/ಹೊಸ್ಟ್: ಕ್ರಿಸ್ಟಿ ಕೆನೆಲಿ
  2. "ಶಾರ್ಟ್ ಹಿಸ್ಟೊರಿ ಒಫ್ ಜಾಮಾ ಮಸ್ಜಿದ್ ಡೆಲ್ಹಿ". Archived from the original on 2011-11-17. Retrieved 2011-01-23.
  3. "BBC News: Tourists shot near Delhi mosque".

ಉಲ್ಲೇಖಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಬಿಂಬಗಳು
{{bottomLinkPreText}} {{bottomLinkText}}
ಜಾಮಾ ಮಸೀದಿ, ದೆಹಲಿ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?