For faster navigation, this Iframe is preloading the Wikiwand page for ಚಟ್ನಿ.

ಚಟ್ನಿ

Lua error in package.lua at line 80: module 'Module:Pagetype/setindex' not found.

Chutney
ಮೂಲ
ಪರ್ಯಾಯ ಹೆಸರು(ಗಳು)Chatni
ಮೂಲ ಸ್ಥಳIndia, ಪಾಕಿಸ್ತಾನ
ಪ್ರಾಂತ್ಯ ಅಥವಾ ರಾಜ್ಯSouth Asia
ವಿವರಗಳು
ಮುಖ್ಯ ಘಟಕಾಂಶ(ಗಳು)salt, chillies, tamarind, coriander leaves, tomatoes
ದಕ್ಷಿಣದ ಚಟ್ನಿಗಳು
ಚಟ್ನಿಗಳು
ಮಾವಿನ ಚಟ್ನಿ
ಸರಳ ಟೊಮೆಟೊ ಚಟ್ನಿ
ಗೋವಾಕ್ಕೆ ಸೇರಿದ ಬಿಳಿಬದನೆ ಮತ್ತು ನಿಂಬೆಹಣ್ಣು ಚಟ್ನಿಗಳು
ಭಾರತದಲ್ಲಿ ಚಟ್ನಿಯನ್ನು ತಯಾರಿಸುವುದಕ್ಕಾಗಿ ಬಳಸಲಾಗುವ ಸಾಂಪ್ರದಾಯಿಕ ರುಬ್ಬುವ ಕಲ್ಲು

ಚಟ್ನಿ (ಹಿಂದಿ:चटनी) ಎಂಬುದು ಹಿಂದಿ-ಉರ್ದುವಿನಿಂದ ಪಡೆದು ಇಂಗ್ಲಿಷ್‌ನೊಳಗೆ ಸಂಯೋಜಿಸಲ್ಪಟ್ಟಿರುವ ಒಂದು ಎರವಲು ಪದವಾಗಿದ್ದು, ದಕ್ಷಿಣ ಏಷ್ಯಾ[೧] ಮತ್ತು ಇತರ ದಕ್ಷಿಣ ಏಷ್ಯಾದ ಪಾಕಪದ್ಧತಿಗಳಲ್ಲಿನ ಜಲಪಿಷ್ಟದಂಥ (ಪೇಸ್ಟ್‌ನಂಥ) ಒಂದು ವ್ಯಂಜನವನ್ನು ಇದು ವಿವರಿಸುತ್ತದೆ. caṭnī ಎಂಬುದರಿಂದ (ಮರಾಠಿ:चटणी, ತಮಿಳು:சட்னி, ಕನ್ನಡ:ಚಟ್ನಿ, ಹಿಂದಿ:चटनी, ಉರ್ದು: چٹنی, ಮಲಯಾಳಂ:ചമ്മന്തി, ತೆಲುಗು:పచ్చడి) ಇದು ಜನ್ಯವಾಗಿದ್ದು, ಇದು ಮುಖ್ಯ ಭಕ್ಷ್ಯವೊಂದರ ಒಂದು ಜೊತೆಯ ಪದಾರ್ಥವಾಗಿ ಬಳಸಲ್ಪಡುವ ಮಸಾಲೆಭರಿತ ತಯಾರಿಕೆಗಳ ಒಂದು ವರ್ಗಕ್ಕೆ ಸಂಬಂಧಿಸಿದ ಶಬ್ದವಾಗಿದೆ. ಚಟ್ನಿಗಳು ಸಾಮಾನ್ಯವಾಗಿ ಒಂದು ವಿಲಕ್ಷಣವಾದ ಆದರೆ ಪೂರಕವಾದ ಮಸಾಲೆ ಮತ್ತು ತರಕಾರಿಯ ಮಿಶ್ರಣವನ್ನು ಒಳಗೊಂಡಿರುತ್ತವೆ.

ಚಟ್ನಿಗಳು ಹಸಿಯಾಗಿ ಅಥವಾ ಶುಷ್ಕವಾಗಿದ್ದು, ದಪ್ಪನಾಗಿರುವುದರಿಂದ ಮೊದಲ್ಗೊಂಡು ನವಿರಾಗಿರುವುದರವರೆಗಿನ ಒಂದು ಸ್ವರೂಪವನ್ನು ಹೊಂದಿರುತ್ತವೆ. ಮುರಬ್ಬಗಳು ಅನೇಕವೇಳೆ ಸಿಹೀಕರಿಸಲ್ಪಡುವ ಕಾರಣದಿಂದ, ಆಂಗ್ಲ-ಭಾರತೀಯ ಎರವಲು ಪದವು ತಾಜಾ ಮತ್ತು ಊರಿಟ್ಟ ವ್ಯಂಜನ ಪದಾರ್ಥಗಳಿಗೆ ಮನಸೋ ಇಚ್ಛೆಯಾಗಿ ಉಲ್ಲೇಖಿಸಲ್ಪಡುತ್ತದೆ. ಕನಿಷ್ಟಪಕ್ಷ ಉತ್ತರ ಭಾರತದ ಹಲವಾರು ಭಾಷೆಗಳು ಸದರಿ ಪದವನ್ನು ತಾಜಾ ತಯಾರಿಕೆಗಳಿಗಾಗಿ ಮಾತ್ರವೇ ಬಳಸುತ್ತವೆ. ಪಾಕಿಸ್ತಾನಿ ಉಪ್ಪಿನಕಾಯಿ/ಅಚಾರ್‌ (ಹಿಂದಿ:अचार) ಎಂಬ ಒಂದು ವಿಭಿನ್ನ ಪದವು, ಎಣ್ಣೆಯನ್ನು ಒಳಗೊಂಡಿರುವ ಆದರೆ ಅಪರೂಪವಾಗಿ ಸಿಹಿಯಾಗಿರುವ ಮುರಬ್ಬಗಳಿಗೆ ಅನ್ವಯಿಸುತ್ತದೆ. ವಿನೆಗರ್‌ ಅಥವಾ ನಿಂಬೆಯ ರಸವನ್ನು ಸಂರಕ್ಷಣಕಾರಿಗಳಾಗಿ ಸೇರಿಸಬಹುದು, ಅಥವಾ ಆಮ್ಲವನ್ನು ಸೃಷ್ಟಿಸುವುದಕ್ಕಾಗಿ ಉಪ್ಪಿನ ಸಮ್ಮುಖದಲ್ಲಿ ಹುದುಗನ್ನು ಬಳಸಬಹುದು.

ಹಿಂದಿನ ಕಾಲದಲ್ಲಿ, ಕಲ್ಲಿನಿಂದ ಮಾಡಲಾದ ಒಂದು ಒರಳು ಮತ್ತು ಕುಟ್ಟಣಿಯನ್ನು ಅಥವಾ ಒಂದು ಅಮ್ಮಿಕ್ಕಲ್‌‌ ನ್ನು (ತಮಿಳು) ಬಳಸಿಕೊಂಡು ಚಟ್ನಿಗಳನ್ನು ರುಬ್ಬಲಾಗುತ್ತಿತ್ತು. ಈ ಆಧುನಿಕ ಕಾಲದಲ್ಲಿ, ಕಲ್ಲಿನ ಅಳವಡಿಕೆಗಳ ಜಾಗವನ್ನು ವಿದ್ಯುತ್ತಿನ ಮಿಶ್ರಣ ಯಂತ್ರಗಳು ಆಕ್ರಮಿಸಿಕೊಂಡಿವೆ. ವಾಡಿಕೆಯಂತೆ, ಒಂದು ನಿರ್ದಿಷ್ಟ ಕ್ರಮದಲ್ಲಿ ನಾನಾಬಗೆಯ ಮಸಾಲೆಗಳನ್ನು ಸೇರಿಸಲಾಗುತ್ತದೆ ಮತ್ತು ರುಬ್ಬಲಾಗುತ್ತದೆ; ಈ ರೀತಿಯಲ್ಲಿ ತಯಾರಾದ ಹಸಿಯಾದ ಜಲಪಿಷ್ಟವನ್ನು (ಪೇಸ್ಟ್‌ನ್ನು) ಸಸ್ಯಜನ್ಯ ತೈಲದಲ್ಲಿ, ಅಂದರೆ ಸಾಮಾನ್ಯವಾಗಿ ಎಳ್ಳೆಣ್ಣೆ ಅಥವಾ ಕಡಲೇಕಾಯಿ ಎಣ್ಣೆಯಲ್ಲಿ ಬೇಗನೆ ಹುರಿಯಲಾಗುತ್ತದೆ.

ಚಟ್ನಿಯ ಬಗೆಗಳು

[ಬದಲಾಯಿಸಿ]

ಚಟ್ನಿಯನ್ನು ಕಾರ್ಯತಃ ಯಾವುದೇ ತರಕಾರಿ/ಹಣ್ಣು/ಗಿಡಮೂಲಿಕೆ/ಮಸಾಲೆಗಳಿಂದ ಅಥವಾ ಅವುಗಳ ಒಂದು ಸಂಯೋಜನೆಯಿಂದ ತಯಾರಿಸಲು ಸಾಧ್ಯವಿರುವುದರಿಂದ, ಚಟ್ನಿಗಳ ಸಂಖ್ಯೆಗೆ ಮಿತಿಯೆಂಬುದೇ ಇಲ್ಲ. ಸಿಹಿ ಮತ್ತು ಖಾರವೆಂಬ ಎರಡು ಪ್ರಮುಖ ಗುಂಪುಗಳನ್ನು ಚಟ್ನಿಗಳು ಹೊಂದಿವೆ; ಎರಡೂ ಸ್ವರೂಪಗಳು ಮೆಣಸಿನಕಾಯಿಯನ್ನು ಒಳಗೊಂಡಂತೆ ನಾನಾಬಗೆಯ ಮಸಾಲೆಗಳನ್ನು ಸಾಮಾನ್ಯವಾಗಿ ಹೊಂದಿರುತ್ತವೆಯಾದರೂ, ಅವುಗಳ ಮುಖ್ಯ ಪರಿಮಳವು ಭಿನ್ನವಾಗುತ್ತಾ ಹೋಗುತ್ತದೆ. ಚಟ್ನಿಯ ಬಗೆಗಳು ಮತ್ತು ಅವುಗಳ ತಯಾರಿಕೆಗಳು ಪಾಕಿಸ್ತಾನ ಮತ್ತು ಭಾರತದಾದ್ಯಂತ ವ್ಯಾಪಕವಾಗಿ ಭಿನ್ನವಾಗುತ್ತಾ ಹೋಗುತ್ತದೆ.

ಚಟ್ನಿಗಳ ಬಗೆಗಳು:

  • ಕೊತ್ತಂಬರಿ (ಧನಿಯಾ)
  • ಪುದೀನ ಚಟ್ನಿ (ಕೊತ್ತಂಬರಿ ಮತ್ತು ಪುದೀನ ಚಟ್ನಿಗಳನ್ನು ಅನೇಕವೇಳೆ 'ಹರಿ ಚಟ್ನಿ' ಎಂದು ಕರೆಯಲಾಗುತ್ತದೆ, ಇಲ್ಲಿ 'ಹರಿ' ಎಂಬುದು 'ಹಸಿರು' ಎಂಬುದಕ್ಕಿರುವ ಉರ್ದು/ಹಿಂದಿ ಶಬ್ದವಾಗಿದೆ)
  • ಹುಣಿಸೇಹಣ್ಣಿನ ಚಟ್ನಿ (ಇಮ್ಲಿ ಚಟ್ನಿ) (ಉರ್ದು/ಹಿಂದಿಯಲ್ಲಿ 'ಮೀಠಿ' ಎಂದರೆ 'ಸಿಹಿ' ಎಂಬ ಅರ್ಥವಿರುವುದರಿಂದ, ಇದನ್ನು ಅನೇಕವೇಳೆ ಮೀಠಿ ಚಟ್ನಿ ಎಂದು ಕರೆಯಲಾಗುತ್ತದೆ)
  • ಸೂತ್‌‌ (ಅಥವಾ ಸೌಂತ್‌) ಚಟ್ನಿ; ಇದನ್ನು ಖರ್ಜೂರಗಳು ಮತ್ತು ಶುಂಠಿಯಿಂದ ತಯಾರಿಸಲಾಗುತ್ತದೆ
  • ತೆಂಗಿನಕಾಯಿಯ ಚಟ್ನಿ
  • ಈರುಳ್ಳಿಯ ಚಟ್ನಿ
  • ಒಣಗಿಸಿದ ಪ್ಲಮ್‌ ಹಣ್ಣಿನ ಚಟ್ನಿ
  • ಟೊಮೆಟೊ ಚಟ್ನಿ
  • ಕೆಂಪು ಮೆಣಸಿನಕಾಯಿಯ ಚಟ್ನಿ
  • ಹಸಿರು ಮೆಣಸಿನಕಾಯಿಯ ಚಟ್ನಿ
  • ಮಾವಿನಕಾಯಿಯ ಚಟ್ನಿ (ಕಚ್ಚಾ, ಹಸಿರು ಮಾವಿನಕಾಯಿಗಳಿಂದ ಇದನ್ನು ತಯಾರಿಸಲಾಗುತ್ತದೆ)
  • ನಿಂಬೆ ಚಟ್ನಿ (ಇಡಿಯಾದ, ಹಣ್ಣಾಗಿರದ ನಿಂಬೆಗಳಿಂದ ಇದನ್ನು ತಯಾರಿಸಲಾಗುತ್ತದೆ)
  • ಬೆಳ್ಳುಳ್ಳಿ ಚಟ್ನಿ; ಇದನ್ನು ತಾಜಾ ಬೆಳ್ಳುಳ್ಳಿ, ತೆಂಗಿನಕಾಯಿ ಮತ್ತು ಕಡಲೇಕಾಯಿಗಳಿಂದ ತಯಾರಿಸಲಾಗುತ್ತದೆ
  • ಹಸಿರು ಟೊಮೆಟೊ ಚಟ್ನಿ. ಹಣ್ಣಾಗಿರದ ಟೊಮೆಟೊಗಳನ್ನು ಇದಕ್ಕೆ ಬಳಸಿಕೊಳ್ಳುವುದು ಸಾಮಾನ್ಯ ಇಂಗ್ಲಿಷ್‌ ಪಾಕಸೂತ್ರವಾಗಿದೆ
  • ಕಡಲೇಕಾಯಿ ಚಟ್ನಿ (ಮರಾಠಿಯಲ್ಲಿ ಇದನ್ನು ಶೇಂಗ್‌ದಾನಾ ಚಟ್ನಿ ಎಂದು ಕರೆಯಲಾಗುತ್ತದೆ)
  • ಶುಂಠಿ ಚಟ್ನಿ; ದೋಸೆಯೊಂದಿಗೆ ತಿನ್ನಲು ಇದನ್ನು ಬಹುತೇಕವಾಗಿ ತಮಿಳು ಪಾಕಪದ್ಧತಿ ಮತ್ತು ಉಡುಪಿ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ
  • ಮೊಸರು ಚಟ್ನಿ; ಇದನ್ನು ತಯಾರಿಸುವುದು ತುಂಬಾ ಸರಳ. ಮೊಸರು, ಕೆಂಪು ಮೆಣಸಿನಕಾಯಿ ಪುಡಿ, ಮತ್ತು ಉಪ್ಪನ್ನು ಬೆರೆಸಿದರೆ ಮೊಸರು ಚಟ್ನಿಯು ತಯಾರಾಗುತ್ತದೆ ಹಾಗೂ ಇದನ್ನು ವೈವಿಧ್ಯಮಯವಾದ ಆಹಾರಗಳೊಂದಿಗೆ ತಿನ್ನಲಾಗುತ್ತದೆ
  • ಟೊಮೆಟೊ ಈರುಳ್ಳಿ ಚಟ್ನಿ[೨]
  • ಧನಿಯಾ ಪುದೀನ ತೆಂಗಿನಕಾಯಿಯ ಚಟ್ನಿ[೩]
  • ಬಟಾಣಿ ಬೆರೆಸಿದ ಚಟ್ನಿ (ನರಘಾಕ್‌ನಲ್ಲಿ ಇದನ್ನು ಲೈಂಡಿ ಚಟ್ನಿ ಎಂದು ಕರೆಯಲಾಗುತ್ತದೆ‌)
  • ಬ್ಲಾಟ್‌ಜಂಗ್‌; ಇದನ್ನು ದಕ್ಷಿಣ ಆಫ್ರಿಕಾದ ಪಾಕಪದ್ಧತಿಯಲ್ಲಿ ಬಳಸಲಾಗುತ್ತದೆ. ಇದೊಂದು ಸಿಹಿ ಚಟ್ನಿಯಾಗಿದ್ದು,
ಜರದಾಳು ಹಣ್ಣುಗಳಿಂದ ಇದನ್ನು ಸಾಮಾನ್ಯವಾಗಿ ತಯಾರಿಸಲಾಗುತ್ತದೆ.[೪]

ಅಮೆರಿಕಾದ ಮತ್ತು ಯುರೋಪಿನ ಶೈಲಿಯ ಚಟ್ನಿಗಳನ್ನು ತಯಾರಿಸುವಾಗ ಹಣ್ಣು, ವಿನೆಗರ್‌ ಮತ್ತು ಸಕ್ಕರೆಯನ್ನು ಬೇಯಿಸಿ, ಒಂದು ಇಳಿಸಿದ ಪ್ರಮಾಣ ಅಥವಾ ಮಟ್ಟಕ್ಕೆ ಸಾಮಾನ್ಯವಾಗಿ ತರಲಾಗುತ್ತದೆ. ಸದರಿ ಮಿಶ್ರಣಕ್ಕೆ ಯಾವಾಗಲೂ ರುಚಿಕಾರಕಗಳನ್ನು ಸೇರಿಸಲಾಗುತ್ತದೆ. ಇಂಥ ರುಚಿಕಾರಕಗಳಲ್ಲಿ ಸಕ್ಕರೆ, ಉಪ್ಪು, ಬೆಳ್ಳುಳ್ಳಿ, ಹುಣಿಸೇಹಣ್ಣು, ಈರುಳ್ಳಿ, ಅಥವಾ ಶುಂಠಿ ಸೇರಿರಬಹುದು.

ಮಸಾಲೆಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಮೆಂತ್ಯ, ಕೊತ್ತಂಬರಿ, ಜೀರಿಗೆ ಮತ್ತು ಇಂಗು (ಹಿಂಗ್‌ ) ಸೇರಿರುತ್ತವೆ.

ವ್ಯುತ್ಪತ್ತಿ

[ಬದಲಾಯಿಸಿ]
This section is empty. You can help by adding to it. (December 2009)

ಇತಿಹಾಸ

[ಬದಲಾಯಿಸಿ]
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. (December 2009)

೧೭ನೇ ಶತಮಾನದಲ್ಲಿ ಆರಂಭಗೊಂಡ ಚಟ್ನಿಗಳು, ಸುಖಭೋಗ ಸರಕುಗಳ ರೂಪದಲ್ಲಿ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌‌ನಂಥ ಐರೋಪ್ಯ ದೇಶಗಳಿಗೆ ಹಡಗಿನ ಮೂಲಕ ಸಾಗಿಸಲ್ಪಟ್ಟವು. ಪಾಶ್ಚಾತ್ಯ ಅನುಕರಣೆಗಳನ್ನು "ಮಾವಾಗಿಸಿದ" ಹಣ್ಣುಗಳು ಅಥವಾ ತರಕಾರಿಗಳು ಎಂದು ಕರೆಯಲಾಯಿತು. ೧೯ನೇ ಶತಮಾನದಲ್ಲಿ, ಪಾಶ್ಚಾತ್ಯರ ರುಚಿಗಳಿಗಾಗಿಯೇ ಸೃಷ್ಟಿಸಲ್ಪಟ್ಟ ಮೇಜರ್‌ ಗ್ರೇ'ಸ್‌ ಅಥವಾ ಬೆಂಗಾಲ್‌ ಕ್ಲಬ್‌ ಅಥವಾ ನೇಚರ್‌ ಐಸಲ್‌ ಟ್ರಾಪಿಕಲ್‌ ಗೌರ್ಮೆಟ್‌‌ನಂಥ ಚಟ್ನಿಯ ಬ್ರಾಂಡ್‌ಗಳನ್ನು ಯುರೋಪ್‌ಗೆ ಹಡಗಿನ ಮೂಲಕ ಸಾಗಿಸಲಾಯಿತು.

ಸಾಮಾನ್ಯವಾಗಿ ಈ ಚಟ್ನಿಗಳನ್ನು ತಯಾರಿಸುವಾಗ ಹಣ್ಣು, ವಿನೆಗರ್‌, ಮತ್ತು ಸಕ್ಕರೆಯನ್ನು ಬೇಯಿಸಿ ಒಂದು ಇಳಿಸಿದ ಪ್ರಮಾಣ ಅಥವಾ ಮಟ್ಟಕ್ಕೆ ತರಲಾಗುತ್ತದೆ.

ಚಟ್ನಿ ತಯಾರಿಸುವಿಕೆಯ ಸಂಪ್ರದಾಯವು ಬ್ರಿಟಿಷ್‌ ಸಾಮ್ರಾಜ್ಯದ ಉದ್ದಗಲಕ್ಕೂ ಹರಡಿತು; ಅದರಲ್ಲೂ ವಿಶೇಷವಾಗಿ, ಕೆರಿಬಿಯನ್‌ ಮತ್ತು ಅಮೆರಿಕಾದ ದಕ್ಷಿಣ ಭಾಗದಲ್ಲಿನ ಬ್ರಿಟಿಷ್‌ ವಲಯದಲ್ಲಿ ಇದು ವ್ಯಾಪಕವಾಗಿ ಹಬ್ಬಿತೆಂದೇ ಹೇಳಬೇಕು; ಈ ವಲಯದಲ್ಲಿ ಹಂದಿಯ ತೊಡೆಮಾಂಸ, ಹಂದಿಮಾಂಸ, ಮತ್ತು ಮೀನಿನ ಭಕ್ಷ್ಯಕ್ಕೆ ಸಂಬಂಧಿಸಿದ ಒಂದು ಜನಪ್ರಿಯ ಆರೋಚಕ ಅಥವಾ ವ್ಯಂಜನವಾಗಿ ಚಟ್ನಿಯು ಈಗಲೂ ಬಳಸಲ್ಪಡುತ್ತಿದೆ.

ಭಾರತದ ಪ್ರದೇಶಗಳ ಆಧಾರದ ಮೇಲೆ ಚಟ್ನಿಯ ಪ್ರಭೇದಗಳು

[ಬದಲಾಯಿಸಿ]

ಇವನ್ನೂ ಗಮನಿಸಿ‌

[ಬದಲಾಯಿಸಿ]

ಭಾರತದ ಉಪ್ಪಿನಕಾಯಿ

ಟಿಪ್ಪಣಿಗಳು

[ಬದಲಾಯಿಸಿ]
  1. ಡಿಕ್ಷ್‌ನರಿ ಮೀನಿಂಗ್‌‌: ಚಟ್ನಿ ; ದಿ ಫ್ರೀಡಿಕ್ಷ್‌ನರಿ; ಫ್ರೀ ಆನ್‌ಲೈನ್‌ ಡಿಕ್ಷ್‌ನರಿ, ಥೆಸರಸ್‌, ಅಂಡ್‌ ಎನ್‌ಸೈಕ್ಲೋಪೀಡಿಯಾ
  2. ""ಸಿನ್‌ಫುಲ್‌ ಕರಿ: ಟೊಮೆಟೊ ಆನಿಯನ್‌ ಚಟ್ನಿ ರಿಸೈಪ್‌"". Archived from the original on 2010-11-25. Retrieved 2011-04-26.
  3. ""ಸಿನ್‌ಫುಲ್‌ ಕರಿ: ಸಿಲಾಂಟ್ರೊ ಮಿಂಟ್‌ ಕೋಕೋನಟ್‌ ಚಟ್ನಿ ರಿಸೈಪ್‌"". Archived from the original on 2011-02-11. Retrieved 2011-04-26.
  4. ಏಪ್ರಿಕಾಟ್‌ ಬ್ಲಾಟ್‌ಜಂಗ್‌ ರಿಸೈಪ್‌

ಉಲ್ಲೇಖಗಳು‌

[ಬದಲಾಯಿಸಿ]
  • ವೀವರ್‌, ವಿಲಿಯಮ್ ವೊಯ್ಸ್‌. "ಚಟ್ನಿ." ಎನ್‌ಸೈಕ್ಲೋಪೀಡಿಯಾ ಆಫ್‌ ಫುಡ್‌ ಅಂಡ್‌ ಕಲ್ಚರ್‌‌. ಸಂಪಾದಕ: ಸಾಲೊಮನ್‌ H. ಕಟ್ಜ್‌. ಸಂಪುಟ. 1. ನ್ಯೂಯಾರ್ಕ್‌: ಚಾರ್ಲ್ಸ್‌ ಸ್ಕ್ರಿಬ್ನರ್‌‌'ಸ್‌ ಸನ್ಸ್‌, 2003. 417-418. 3 ಸಂಪುಟಗಳು. ISBN 0684805685
{{bottomLinkPreText}} {{bottomLinkText}}
ಚಟ್ನಿ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?