For faster navigation, this Iframe is preloading the Wikiwand page for ಗುಬ್ಬಚ್ಚಿ.

ಗುಬ್ಬಚ್ಚಿ

ಗುಬ್ಬಚ್ಚಿ (ಪ್ಯಾಸರ್ ಡೊಮೆಸ್ಟಿಕಸ್) ಪ್ಯಾಸೆರಿಡೆ ಕುಟುಂಬದ ಒಂದು ಹಕ್ಕಿ. ಇದು ಭಾರತೀಯ ಉಪಖಂಡ, ಪಶ್ಚಿಮ ಮತ್ತು ಮಧ್ಯ ಏಷಿಯಾ, ಮಧ್ಯ ಪ್ರಾಚ್ಯ, ಯೂರೋಪ್‌ದಲ್ಲಿ ಹರಡಿವೆ.  ಇವು ಸುಮಾರು 16 ಸೆಂ. ಮೀ.  (16cm/6.3 inch) ಉದ್ದವಿದ್ದು (ಕೊಕ್ಕಿನ ತುದಿಯಿಂದ ಬಾಲದ ತುದಿಯವರೆಗೆ) ಮತ್ತು 24-39.5 ಗ್ರಾಂ (0.85-1.39 ಔನ್ಸ್) ತೂಕವಿರುವ ಒಂದು ಸಣ್ಣ ಹಕ್ಕಿ. ಹೆಣ್ಣು ಮತ್ತು ಎಳೆಯ ಹಕ್ಕಿಗಳು ತೆಳು ಕಂದು ಮತ್ತು ಬೂದು ಬಣ್ಣವಿದ್ದು, ಗಂಡುಗಳು ಗಾಢವಾದ ಕಪ್ಪು, ಬಿಳಿ ಮತ್ತು ಕಂದು ಬಣ್ಣದ್ದಾಗಿರುತ್ತವೆ.  ಪ್ಯಾಸರ್ ಕುಲದ ಸುಮಾರು 25 ಜಾತಿಗಳಲ್ಲಿ ಒಂದಾದ ಗುಬ್ಬಚ್ಚಿ ಯುರೋಪ್, ಮೆಡಿಟರೇನಿಯನ್ ಮತ್ತು ಏಷ್ಯಾದ ಹೆಚ್ಚಿನ ಅಧಿಕ ಪ್ರದೇಶದಲ್ಲಿ ನೆಲೆಸಿವೆ. ಅಲ್ಲದೆ ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಅಮೆರಿಕದಲ್ಲಿ ಉದ್ದೇಶಪೂರ್ವಕ ವಾಗಿಯೋ ಅಥವಾ ಆಕಸ್ಮಿಕವಾಗಿಯೋ ಪರಿಚಯಿಸಲ್ಪಟ್ಟಿರುವುದರಿಂದ ವಿಶ್ವದಾದ್ಯಂತ ವ್ಯಾಪಕವಾಗಿ ಹರಡಿರುವ  ಕೆಲವೇ ವನ್ಯಹಕ್ಕಿಗಳಲ್ಲಿ ಒಂದನ್ನಾಗಿಸಿದೆ.

ಗುಬ್ಬಚ್ಚಿಯು ಮನುಷ್ಯ ವಾಸಸುವ ಪ್ರದೇಶದ ಜೊತೆ ಅನೋನ್ಯ ಸಂಬಂಧ ಹೊಂದಿದ್ದು, ನಗರ ಅಥವಾ ಗ್ರಾಮೀಣ ಪ್ರದೇಶದೆಲ್ಲೆಡೆ ಕಾಣಸಿಗುತ್ತವೆ.  ಇವು ವೈವಿಧ್ಯಮಯ ನೆಲೆ ಮತ್ತು ಹವಾಮಾನವಿರುವಲ್ಲಿ ವಾಸಿಸುತ್ತಿದ್ದರೂ, ಮಾನವನ ಅಸ್ತಿತ್ವವಿರುವ ಕಾಡು, ಹುಲ್ಲುಗಾವಲು ಮತ್ತು ಮರುಭೂಮಿಗಳಲ್ಲಿ ಕಾಣಸಿಗುವುದಿಲ್ಲ. ಧಾನ್ಯ ಮತ್ತು ಕಳೆ ಬೀಜಗಳು ಇವುಗಳ ಪ್ರಮುಖ ಆಹಾರವಾದರೂ, ಅವಕಾಶ ಸಿಕ್ಕಾಗ ಸಾಮಾನ್ಯವಾಗಿ ಕೀಟ ಮತ್ತಿತರ ಆಹಾರವನ್ನು ತಿನ್ನುತ್ತವೆ. ಗುಬ್ಬಿಗಳನ್ನು ಸಾಕು ಬೆಕ್ಕುಗಳು, ಗಿಡುಗಗಳಂತಹ ಮತ್ತಿತರ ಪರಭಕ್ಷಕ ಹಕ್ಕಿಗಳು ಹಾಗೂ ಸಸ್ತನಿಗಳು ಆಹಾರಕ್ಕಾಗಿ ಬೇಟೆಯಾಡುತ್ತವೆ.  

ಅಧಿಕ ಸಂಖ್ಯೆ, ವ್ಯಾಪಕವಾಗಿ ಹರಡಿರುವುದು ಮತ್ತು ಮಾನವನೊಡಗಿನ ಸಹಜೀವನದಿಂದಾಗಿ, ಗುಬ್ಬಚ್ಚಿಯು ಸಾಂಸ್ಕೃತಿಕ ಪ್ರಾಮುಖ್ಯತೆ ಪಡೆದಿದೆ.  ಇವು ಬೆಳೆದ ಫಸಲನ್ನು ಅಧಿಕ ಸಂಖ್ಯೆಯಲ್ಲಿ ಬಂದು ತಿನ್ನುವುದರಿಂದ ಕೃಷಿಗೆ ಹಾನಿಕಾರಕವೆಂದು ನಿರ್ಮೂಲನೆ ಮಾಡಲು ಪ್ರಯತ್ನಿಸಿ, ಪ್ರತಿಕೂಲವಾಗಿ ಫಸಲೇ ಇಳಿಮುಖವಾದ್ದರಿಂದ ಇವುಗಳ ಹರಣ ನಿಂತಿತು. ಇವನ್ನು ಮುದ್ದಿನಹಕ್ಕಿಯನ್ನಾಗಿಯೂ ಬಳಸುತ್ತಾರೆ. ಜೊತೆಗೆ ಆಹಾರವಾಗಿಯೂ, ಲೈಂಗಿಕ ಸಾಮರ್ಥ್ಯ ವರ್ಧಕವನ್ನಾಗಿಯೂ ಬಳಕೆಯಲ್ಲಿದೆ. ಇವು ವ್ಯಾಪಕವಾಗಿ ಹರಡಿದ್ದರೂ ಮತ್ತು ಸಂಖ್ಯೆಯಲ್ಲಿ ಹೇರಳವಾಗಿದ್ದರೂ, ಕೆಲವು ಪ್ರದೇಶಗಳಲ್ಲಿ ಇವುಗಳ ಸಂಖ್ಯೆಯು ಇಳಿಮುಖವಾಗಿದೆ. ಅಪಾಯ ಅಂಚಿನಲ್ಲಿರುವ ಜೀವಿಗಳನ್ನು ಗುರುತಿಸಿ ಸಂರಕ್ಷಣಾ ಕಾರ್ಯಸೂಚಿಯನ್ನು ನಡೆಸಲೋಸುಗ ಇರುವ IUCN ಕೆಂಪು ಪಟ್ಟಿಯಲ್ಲಿ ಗುಬ್ಬಚ್ಚಿಗಳನ್ನು ಕನಿಷ್ಠ ಕಾಳಜಿಯಡಿ ಪಟ್ಟಿ ಮಾಡಲಾಗಿದೆ..

ಗುಬ್ಬಚ್ಚಿಯ ಧ್ವನಿ ಸುರುಳಿ

ವಿವರಣೆ

[ಬದಲಾಯಿಸಿ]

ಅಳತೆ ಮತ್ತು ಆಕಾರ

[ಬದಲಾಯಿಸಿ]

ಗುಬ್ಬಚ್ಚಿಯು 14 ರಿಂದ 18 ಸೆಂ.ಮೀ. (5.5 ರಿಂದ 7.1 ಇಂಚು) ವರೆಗೆ ಉದ್ದವಿದ್ದು, ಸರಾಸರಿ ಸುಮಾರು 16 ಸೆಂ.ಮೀ.  (6.3 ಇಂಚು)ಎಂದು ಹೇಳಬಹುದು .[3] ಗುಬ್ಬಚ್ಚಿಗೆ ಗುಂಡು ಎದೆ ಮತ್ತು ತಲೆ, ಹಾಗೂ ಚಿಕ್ಕ ಬಾಲವಿದೆ. ಇದರ ಮೇಲ್ಕೊಕ್ಕು 1.1–1.5 ಸೆಂ.ಮೀ.  (0.43–0.59 ಇಂಚು) ಉದ್ದವಿದ್ದು ಬೀಜಗಳನ್ನು ತಿನ್ನಲು ಅನುಕೂಲವಾಗುವಂತೆ ಶಂಖಾಕೃತಿಯಲ್ಲಿದ್ದು, ಗಡುಸಿನಿಂದ ಕೂಡಿದೆ. ಬಾಲ ಸಣ್ಣದ್ದಾಗಿದ್ದು 5.2–6.5 ಸೆಂ.ಮೀ.   (2.0–2.6 ಇಂಚು), ಹಾರು ರೆಕ್ಕೆಗಳು 6.7–8.9 ಸೆಂ.ಮೀ.   (2.6–3.5 ಇಂಚು), ಮಂಡಿಯಿಂದ ಪಾದದವರೆಗಿನ ಉದ್ದ(tarsus) 1.6–2.5 ಸೆಂ.ಮೀ.   (0.63–0.98 ಇಂಚು) ಇರುತ್ತದೆ.[4][5] ಎಡಬಲ ರೆಕ್ಕೆಗಳ ತುದಿಯ ಅಂತರ 19–25 ಸೆಂಟಿಮೀಟರ್‌ಗಳು (7.5–9.8 ಇಂಚು).[4]

ಗುಬ್ಬಚ್ಚಿಯ ತೂಕ 24 ರಿಂದ 39.5 ಗ್ರಾಂ (0.85 ರಿಂದ 1.39 ಔನ್ಸ್). ಹೆಣ್ಣು ಹಕ್ಕಿ ಸಾಮಾನ್ಯವಾಗಿ ಗಂಡುಹಕ್ಕಿಗಿಂತ ಸ್ವಲ್ಪ ಚಿಕ್ಕದಾಗಿದೆ. ಯುರೋಪಿಯನ್ ಖಂಡದಲ್ಲಿ ಎರಡೂ ಲಿಂಗಗಳ ಸರಾಸರಿ ತೂಕ ಸುಮಾರು 30 ಗ್ರಾಂ (1.1 ಔನ್ಸ್), ಮತ್ತು ಹೆಚ್ಚು ದಕ್ಷಿಣದ ಉಪಜಾತಿಗಳಲ್ಲಿ ಸುಮಾರು 26 ಗ್ರಾಂ (0.92 ಔನ್ಸ್) ಇರುತ್ತದೆ. ಅವಯಸ್ಕ ಹಕ್ಕಿಗಳು ಆಕಾರದಲ್ಲಿ ಸಣ್ಣದಾಗಿರುತ್ತವೆ, ಗಂಡುಗಳು ಚಳಿಗಾಲದಲ್ಲಿ ದೊಡ್ಡದಾಗಿರುತ್ತವೆ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ ಹೆಣ್ಣು ದೊಡ್ಡದಾಗಿರುತ್ತವೆ. ಉತ್ತರ ಧ್ರುವದತ್ತ ಹೋದಂತೆ ಹೆಚ್ಚುವ ಅಕ್ಷಾಂಶಗಳು (higher latitudes), ತಂಪಾದ ಹವಾಮಾನವಿರುವೆಡೆ ಹಾಗೂ ಅಧಿಕ ಎತ್ತರದಲ್ಲಿ ವಾಸಿಸುವ (ಪರ್ವತವಾಸಿ) ಗುಬ್ಬಿಯ ಜಾತಿ, ಉಪಜಾತಿಗಳಲ್ಲಿ ಗಾತ್ರ ಹಿರಿದಾಗಿರುವುದನ್ನು ಕಾಣಬಹುದು.  (ಬರ್ಗ್‌ಮನ್‌ರ ನಿಯಮದಂತೆ).[6][7][8][9]

ಹೊರರೂಪ

[ಬದಲಾಯಿಸಿ]

ಗುಬ್ಬಚ್ಚಿಯ ಗರಿಗಳು ಹೆಚ್ಚಾಗಿ ಬೂದು ಮತ್ತು ಕಂದು ಬಣ್ಣದ ವಿವಿಧ ಛಾಯೆಗಳನ್ನು ಹೊಂದಿರುತ್ತವೆ. ಹೆಣ್ಣು-ಗಂಡು ಹಕ್ಕಿಗಳಲ್ಲಿ ಪ್ರಬಲವಾದ ಲಿಂಗ ದ್ವಿರೂಪತೆಯನ್ನು ಕಾಣಬಹುದು: ಹೆಚ್ಚಾಗಿ ಹೆಣ್ಣಿನ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಮಾಸಲು ಬಣ್ಣ; ಗಂಡು ಗಾಢ ಬಣ್ಣದ ತಲೆ ಗುರುತುಗಳು, ಕೆಂಗಂದು ಬೆನ್ನು ಮತ್ತು ಬೂದು ಕೆಳಭಾಗವನ್ನು ಹೊಂದಿರುತ್ತದೆ.[8] ಗಂಡು ಗಾಢ ಬೂದು ಬಣ್ಣದ ಕಿರೀಟ, ಎರಡು ಬದಿಯಲ್ಲಿ ಕೆಂಗಂದು ಬಣ್ಣವನ್ನು ಹೊಂದಿದೆ. ಅದರ ಕೊಕ್ಕಿನ ಸುತ್ತ, ಗಂಟಲಿನ ಮೇಲೆ ಮತ್ತು ಕೊಕ್ಕು-ಕಣ್ಣುಗಳ ನಡುವೆ (lores) ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಅಲ್ಲದೆ, ಬೂದು ಕಿರೀಟದ ಅಂಚಿಗೆ ತೆಳು ಬಿಳಿ ಪಟ್ಟಿಯನ್ನು ಹೊಂದಿದೆ ಮತ್ತು ಕಣ್ಣುಗಳ ಹಿಂದೆ ಸಣ್ಣ ಬಿಳಿ ಚುಕ್ಕೆಗಳಿರುತ್ತವೆ (postoculars). ಅವುಗಳ ಕೆಳಗೆ ಮತ್ತು ಮೇಲೆ ಕಪ್ಪು ತೇಪೆಗಳೊಂದಿಗೆ. ಕೆನ್ನೆಗಳು, ಕಿವಿಯ ಹೊದಿಕೆಗಳು ಮತ್ತು ತಲೆಯ ತಳದಲ್ಲಿರುವ ಪಟ್ಟೆಗಳಂತೆ, ಕೆಳಭಾಗವು ತೆಳು ಬೂದು ಅಥವಾ ಬಿಳಿಯಾಗಿರುತ್ತದೆ. ಮೇಲಿನ ಬೆನ್ನು ಮತ್ತು ಹಿಂಗತ್ತಿನ ಕೆಳಭಾಗ ತೆಳುಕಂದು ಬಣ್ಣದ್ದಾಗಿದ್ದು, ಅಗಲದ ಕಪ್ಪು ಗೆರೆಗಳನ್ನು ಹೊಂದಿರುತ್ತದೆ. ಬೆನ್ನಿನ ಕೆಳಭಾಗ ಮತ್ತು ಮೇಲಿನ ಬಾಲದ ಹೊದಿಕೆಗಳು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ.[10]

ಸಂತಾನೋತ್ಪತ್ತಿಯಲ್ಲದ ಸಮಯದಲ್ಲಿ ಗಂಡಿನ ಅನೇಕ ಗರಿಗಳಿಗೆ ಬಿಳಿಯ ತುದಿಗಳಿರುತ್ತದೆ. ಅಲ್ಲದೆ ಪ್ರಖರತೆ ಕಳೆಗುಂದಿ ಗಂಡು ಪೇಲವವಾಗಿರುತ್ತದೆ. "ಬಿಬ್" ಅಥವಾ "ಬ್ಯಾಡ್ಜ್" ಎಂದು ಕರೆಯಲ್ಪಡುವ ಕಪ್ಪು ಗಂಟಲು ಮತ್ತು ಎದೆಯ ಮಚ್ಚೆಗಳು ಇರುವುದನ್ನು ಗುಬ್ಬಿಗಳು ತಮ್ಮ ಗರಿಗಳನ್ನು ಮಾಲೀಸು ಮಾಡಿಕೊಳ್ಳುವಾಗ (preening) ಬಹಿರಂಗಪಡಿಸುತ್ತದೆ.[10][11] ಈ ಮಚ್ಚೆಗಳ ಆಕಾರ ವಯಸ್ಸಿಗನುಗುಣವಾಗಿ ಬದಲಾಗುತ್ತದೆ, ಗುಂಪಿನಲ್ಲಿ ಅವುಗಳ ಯುಕ್ತತೆಯನ್ನು ಸೂಚಿಸಬಹುದು. ಈ ಊಹೆಯನ್ನರಸಿ ನಡೆದ  ಅಧ್ಯಯನಗಳು ವಯಸ್ಸಾದಂತೆ ಮಚ್ಚೆಗಳು ಗಾತ್ರದಲ್ಲಿ ಹೆಚ್ಚಾಗುತ್ತವೆ ಎಂದು ನಿರ್ಣಾಯಕವಾಗಿ ತೋರಿಸಿದೆ.[12] ಗಂಡು ಹಕ್ಕಿಯ ಕೊಕ್ಕು ಕಡು ಬೂದು ಬಣ್ಣದ್ದಾಗಿದ್ದು  ಸಂತಾನೋತ್ಪತ್ತಿ ಕಾಲದಲ್ಲಿ ಕಪ್ಪಾಗಿ ಬದಲಾಗುತ್ತದೆ. [3]

ಗುಬ್ಬಚ್ಚಿಯ ತಲೆಯ ಹೊರರೂಪ -ಗಂಡು (ಎಡಗಡೆಯದು) ಹಾಗೂ ಅವಯಸ್ಕ ಅಥವಾ ಹೆಣ್ಣು (ಬಲಗಡೆಯದು)


ಹೆಣ್ಣಿಗೆ ಕಪ್ಪು ಗುರುತಾಗಲಿ ಅಥವಾ ಬೂದು ಕಿರೀಟವಾಗಲಿ ಇಲ್ಲ. ಇದರ ಮೇಲ್ಭಾಗ ಮತ್ತು ತಲೆ ಪೇಲವ ಕಂದು ಬಣ್ಣದಲ್ಲಿರುತ್ತದೆ, ಹಿಂಗತ್ತು -ಬೆನ್ನಿನ ನಡುವೆ ಗಾಢವಾದ ಗೆರೆಗಳು ಮತ್ತು ತೆಳು ಹುಬ್ಬು. ಹೆಣ್ಣು ಗುಬ್ಬಿಯ ಕೆಳಭಾಗವು ತೆಳು ಬೂದು-ಕಂದು ಬಣ್ಣದ್ದಾಗಿದೆ. ಹೆಣ್ಣಿನ ಕೊಕ್ಕು ಕಂದು-ಬೂದು ಬಣ್ಣದ್ದಾಗಿದ್ದು, ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಕೊಕ್ಕಿನ ಕಪ್ಪು ಬಣ್ಣದ ಸಮೀಪ ಬರುತ್ತದೆ. [3][10]

ಅವಯಸ್ಕ ಗುಬ್ಬಿಗಳ ನೋಡಲು ವಯಸ್ಕ ಹೆಣ್ಣನಂತಿರುತ್ತವೆ, ಆದರೆ ದೇಹದ ಕೆಳಭಾಗದಲ್ಲಿ ಕಂದಿನಂಶ  ಹೆಚ್ಚಿದ್ದರೆ, ಮೇಲ್ಭಾಗದಲ್ಲಿ ತೆಳು ಮತ್ತು ಇದ್ದರೂ ಇಲ್ಲದಂತಿರುವ ತೆಳು ಹುಬ್ಬು. ಅವಯಸ್ಕ ಗುಬ್ಬಿಗಳು ವಿಶಾಲವಾದ ಮಾಸಲು ಹಳದಿ ಅಂಚಿರುವ ಗರಿಗಳನ್ನು, ಒಪ್ಪ ಓರಣವಿಲ್ಲದ ಸಡಿಲವಾದ, ಪುಕ್ಕಗಳನ್ನು ಹೊಂದಿರುತ್ತವೆ, ವಾರ್ಷಿಕ ಗರಿ ಕಳಚುವಿಕೆಯಲ್ಲಿ(moulting) ನಿರತ ಹಕ್ಕಿಗಳಂತೆ . ಅವಯಸ್ಕ ಗಂಡುಗಳು  ಗಾಢ ಬಣ್ಣದ ಗಂಟಲು ಮತ್ತು ವಯಸ್ಕ ಗಂಡುಗಳಂತೆ ಕಣ್ಣುಗಳ ಹಿಂದೆ ಸಣ್ಣ ಬಿಳಿ ಚುಕ್ಕೆಗಳಿರುತ್ತವೆ (postoculars). ಆದರೆ ಅವಯಸ್ಕ ಹೆಣ್ಣುಗಳು ಬಿಳಿ ಗಂಟಲುಗಳನ್ನು ಹೊಂದಿರುತ್ತವೆ. ಆದಾಗ್ಯೂ, ಗರಿಗಳ ಹೊರರೂಪವೊಂದರಿಂದಲೇ ವಿಶ್ವಾಸಾರ್ಹವಾಗಿ ಹೆಣ್ಣು-ಗಂಡನ್ನು ಗುರುತಿಸಲಾಗುವುದಿಲ್ಲ: ಕೆಲವು ಅವಯಸ್ಕ ಗಂಡುಗಳಿಗೆ ವಯಸ್ಕ ಗಂಡುಗಳ ಯಾವುದೇ ಗುರುತುಗಳಿರುವುದಿಲ್ಲ, ಮತ್ತು ಕೆಲವು ಅವಯಸ್ಕ ಹೆಣ್ಣುಗಳು ಗಂಡಿನ ಲಕ್ಷಣಗಳನ್ನು ಹೊಂದಿರುತ್ತವೆ. ಎಳೆಯ ಹಕ್ಕಿಯ ಕೊಕ್ಕು ಬಣ್ಣದಲ್ಲಿ ತಿಳಿ ಹಳದಿಯಿಂದ ಒಣಹುಲ್ಲಿನಂತಿದ್ದು, ಹೆಣ್ಣು ಕೊಕ್ಕಿಗಿಂತ ಪೇಲವ ಬಣ್ಣವಿರುತ್ತದೆ.  ಅವಯಸ್ಕ ಗಂಡುಗಳು ಹೆಚ್ಚು ಕಡಿಮೆ ವಯಸ್ಕ ಗಂಡಿನಂತಿದ್ದರೂ ತಾಜಾ ಗರಿಗಳ ಬಣ್ಣ ಬಹಳ ಅಸ್ಪಷ್ಟವಾಗಿರುತ್ತದೆ. ತಮ್ಮ ಮೊದಲ ಸಂತಾನಕಾಲದಲ್ಲಿ, ಯುವ ಹಕ್ಕಿಗಳನ್ನು ನಿಖರವಾಗಿ ಪ್ರತ್ಯೇಕಿಸಲಾಗುವುದಿಲ್ಲ.[3][10]

ಧ್ವನಿ

[ಬದಲಾಯಿಸಿ]

ಗುಬ್ಬಚ್ಚಿಯ ಧನಿ ಕಡಿಮೆ ಅವಧಿಯದಾಗಿದ್ದು, ಆಗಾಗ್ಗೆ ಚಿಲಿಪಿಲಿಗುಟ್ಟುವ ಕರೆಯಲ್ಲಿ ಏರಿಳಿತವಿರುತ್ತದೆ. ಧನಿಯನ್ನು ಚಿರಪ್, ಟಿಶಿಲ್ಪ್ ಅಥವಾ ಫಿಲಿಪ್ ಎಂದು ಅಕ್ಷರದಲ್ಲಿ ಹಿಡಿದಿರಬಹುದು.  ಗುಬ್ಬಿಗಳು ಗುಂಪಿನಲ್ಲಿ ಇಲ್ಲವೇ ವಿಶ್ರಮಿಸುವ ಹೊತ್ತಿನಲ್ಲಿ ಸಂಪರ್ಕಿಸಲು ಈ ರೀತಿಯ ಕರೆಮಾಡುತ್ತವೆ.

ಗಂಡು ಸಂತಾನಸಮಯದಲ್ಲಿ ಗೂಡು ತನ್ನದೆಂದು ಸಾರಲು, ಹೆಣ್ಣನ್ನು ಆಹ್ವಾನಿಸಲು ಈ ರೀತಿಯ ಕರೆಯನ್ನು ಲಯವಿಲ್ಲದೆ, ಪದೇಪದೇ ವೇಗವಾಗಿ ಮಾಡುತ್ತಿರುತ್ತದೆ.  ಇದನ್ನು ಹಾಡು ಅಥವಾ ಮೋಹಕ ಕರೆ ಎಂದೆನ್ನಬಹುದು.[13][14] ಪಂಜರದಲ್ಲಿ ಯುವ ಗುಬ್ಬಿಗಳು ಸಹಜವಾದ  ಚಿಲಿಪಿಲಿಯನ್ನು ಯುರೋಪಿಯನ್ ಗ್ರೀನ್‌ಫಿಂಚ್‌ನಂತೆಯೇ ಮಾಡುತ್ತವೆ.[15]

ಆಕ್ರಮಣಕಾರಿ ಗಂಡುಗುಬ್ಬಿಗಳ "ಚುರ್-ಚುರ್-ರ್-ರ್-ಟ್-ಟ್-ಟ್-ಟ್" ಈ ಕರೆಯನ್ನು ಹೆಣ್ಣುಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡುಗಳಿಂದ ಮರಿಗಳಿಗೆ ಆಹಾರ ಕೊಡಿಸಲು ಅಥವಾ ಮೊಟ್ಟೆಗಳಿಗೆ ಕಾವುಕೊಡಲು ಉಪಯೋಗಿಸುತ್ತವೆ. [16] ಗುಬ್ಬಚ್ಚಿಗಳು ಮೂಗಿನಿಂದ ಹೊರಟಂತಿರುವ ಎಚ್ಚರಿಕೆಯ ಕರೆಯನ್ನು ನೀಡುತ್ತವೆ, ಕ್ವೆರ್ …. ಚ್ರೀ… ಎಂಬಂತಿರುವ ಕರೆ  ಯಾತನೆಯನ್ನು ತಿಳಿಸುತ್ತದೆ. [17] ಮತ್ತೊಂದು ಸಮಾಧಾನದ ಕರೆ, ಇದು ಸಾಮಾನ್ಯವಾಗಿ ಜೋಡಿಯಾದ ಹಕ್ಕಿಗಳು ಮೃದುವಾದ ಧನಿಯಲ್ಲಿ ಒಪ್ಪಿಗೆ ಕೊಟ್ಟಂತೆ ಇರುತ್ತದೆ.[16] ಈ ಕರೆ, ಧನಿಗಳು ಕೇವಲ ಗುಬ್ಬಚ್ಚಿಗಷ್ಟೇ ಸೀಮಿತವಾಗಿಲ್ಲ, ಅಲ್ಪ ಬದಲಾವಣೆ ಇದ್ದು ವಿವಿಧ ಗುಬ್ಬಿ ಜಾತಿಯಲ್ಲಿ ಉಪಯೋಗಿಸಲ್ಪಡುತ್ತದೆ.[18]

ವ್ಯವಸ್ಥಾಶಾಸ್ತ್ರ ಮತ್ತು ವರ್ಗೀಕರಣಶಾಸ್ತ್ರ

[ಬದಲಾಯಿಸಿ]

ನಡವಳಿಕೆ

[ಬದಲಾಯಿಸಿ]
ಗುಬ್ಬಿಗಳು ಗರಿ ಮತ್ತು ದೇಹವನ್ನುಸ್ವಚ್ಛವಾಗಿಟ್ಟುಕೊಳ್ಳಲು ಸಸಾಮಾನ್ಯವಾಗಿ ನೀರಿನಲ್ಲಿ (ಎಡ ಚಿತ್ರ), ಧೂಳಿನಲ್ಲಿ ಸ್ನಾನ ಮಾಡುತ್ತದೆ (ಬಲ ಚಿತ್ರ).

ಸಾಮಾಜಿಕ ನಡವಳಿಕೆ

[ಬದಲಾಯಿಸಿ]

ಗುಬ್ಬಚ್ಚಿ ಸಂಘ ಜೀವಿ. ಆಹಾರ ಸಂಪಾದಿಸುವಾಗ ಎಲ್ಲಾ ಋತುವಿನಲ್ಲೂ ತಮ್ಮದೇ ಆದ ಗುಂಪಿನಲ್ಲಿರುತ್ತವೆ, ಹಾಗೆಯೇ ಬೇರೆ ಹಕ್ಕಿಗಳೊಡನೆ ಕೂಡಿ ಸಹ ಆಹಾರ ಸಂಪಾದಿಸುತ್ತವೆ. [102] ರಾತ್ರಿ ತಂಗಲು ಇಲ್ಲವೇ ವಿಶ್ರಾಂತಿ ಪಡೆಯಲು ಗುಂಪುಗೂಡಿ ನೆಲೆಸುತ್ತದೆ ಮತ್ತು ಸಂತಾನವೃದ್ಧಿ ಸಮಯದಲ್ಲೂ ಅಕ್ಕಪಕ್ಕದಲ್ಲೇ ಗೂಡುಗಳ ಗುಂಪಿರುತ್ತವೆ. ಧೂಳು ಅಥವಾ ನೀರಿನಲ್ಲಿ ಸ್ನಾನದ ಮಾಡುವಾಗ ಸಹ ಗುಂಪಿನಲ್ಲಿರುತ್ತವೆ, ಪೊದೆಗಳಲ್ಲಿ ಗುಂಪುಗಟ್ಟಿ ಚಿಲಿಪಿಲಿಗುಟ್ಟುತ್ತಿರುತ್ತವೆ.[103][104] ಗುಬ್ಬಿಗಳ ಆಹಾರ ಸಂಪಾದನೆ ಹಾಗೂ ಸೇವನೆ ನೆಲದ ಮೇಲೆಯೇ,  ಆದರೆ ಅದು ಮರಗಳು ಮತ್ತು ಪೊದೆಗಳಲ್ಲಿ ಹಿಂಡಿನಲ್ಲಿರುತ್ತವೆ. [103] ಆಹಾರ ಸಂಪಾದಿಸುವಲ್ಲಿ ಮತ್ತು ಸಂತಾನೋತ್ಪತ್ತಿ ಅವಧಿಯಲ್ಲಿ, ಹೆಣ್ಣು ಗುಬ್ಬಿಗಳು ಗಾತ್ರದಲ್ಲಿ ಗಂಡುಗಳಿಗಿಂತ ಚಿಕ್ಕದಾದರೂ ಶಕ್ತಿಶಾಲಿಯಾಗಿದ್ದು ಮತ್ತು ಗಂಡುಗಳಿಗಾಗಿ ಹೋರಾಡಬಹುದು.[105][106]

ನಿದ್ದೆ ಮತ್ತು ವಿಶ್ರಾಂತಿ

[ಬದಲಾಯಿಸಿ]

ಗುಬ್ಬಿಗಳು ಭುಜದ ಭಾಗದ ಗರಿಗಳ (scapular) ಕೆಳಗೆ ಕೊಕ್ಕನ್ನು ಇಟ್ಟುಕೊಂಡು ಮಲಗುತ್ತವೆ.[107] ಸಂತಾನ ಸಮಯದ ಹೊರತು ಮರಗಳು ಅಥವಾ ಪೊದೆಗಳಲ್ಲಿ ಗುಂಪಿನಲ್ಲಿ ವಿಶ್ರಾಂತಿ ಪಡೆಯುತ್ತವೆ.  ಮುಸ್ಸಂಜೆ ಸಾಮೂಹಿಕ ವಿಶ್ರಾಂತಿ ಪಡೆಯಲು ಸೇರುವ ಮೊದಲು, ತದನಂತರ ಚಿಲಿಪಿಲಿಗುಟ್ಟುತ್ತಿರುತ್ತವೆ, ಹಾಗೆಯೇ ಮುಂಜಾನೆ ಚದುರುವ ಮೊದಲು ಸಹ.[103] ಮೊದಲು ಎಲ್ಲ ಗುಬ್ಬಿಗಳು ಒಂದು ಸ್ಥಳದಲ್ಲಿ ಬಂದು ಗುಂಪುಗೂಡಿ ಆ ನಂತರ ಸುರಕ್ಷಿತವಾಗಿ ರಾತ್ರಿ ಕಳೆಯಲು ಗುರುತಿಸಲ್ಪಟ್ಟ ಸಾಮೂಹಿಕ ವಿಶ್ರಾಂತಿ ಸ್ಥಳದತ್ತ ಹೊರಡುತ್ತವೆ.[108]

ದೇಹ ನಿರ್ವಹಣೆ

[ಬದಲಾಯಿಸಿ]

ಸಾಮಾನ್ಯವಾಗಿ ಧೂಳು ಅಥವಾ ನೀರಿನ ಸ್ನಾನ ಮಾಡುತ್ತವೆ, ಯಾವಾಗಲೂ ಗುಂಪಿನಲ್ಲಿ.  ಇರುವೆಗಳಿರುವೆಡೆ ರೆಕ್ಕೆಯನ್ನಗಲಿಸಿ ಒಂದೊಂದೇ ಇರುವೆಯನ್ನು ಹೆಕ್ಕಿ ಉಜ್ಜಿಕೊಳ್ಳುವುದೋ;  ಇಲ್ಲವೇ ಧೂಳಿನಲ್ಲಿ ಒಡ್ಡಾಡುವಂತೆ ಇರುವೆಗಳಿರುವೆಡೆ ಮಾಡಿದಾಗ ದೇಹದ ಮೇಲೆಲ್ಲಾ ಇರುವೆಗಳು ಹರಡುವಂತಾಗಿ, ಇರುವೆಗಳು ಸ್ರವಿಸಿದ ರಾಸಾಯನಿಕದಿಂದ  ಸ್ವಚ್ಛವಾಗುತ್ತದೆ ಇಲ್ಲವೇ ದೇಹದ ಕೊಳಕು ಇರುವೆಗಳಿಗೆ ಆಹಾರವಾಗ ಬಹುದು (Anting)- ಇಂತಹ ಚಟುವಟಿಕೆ ಅಪರೂಪ.[109] ಕಾಲಿನಿಂದ ತಲೆಯನ್ನು ಕೆರೆದುಕೊಳ್ಳುತ್ತದೆ. [108]

ಅಕ್ಕಿಯನ್ನು ತಿನ್ನುತ್ತಿರುವ ಹೆಣ್ಣು ಗುಬ್ಬಿ.

ಹೆಚ್ಚಿನಂಶ ವಯಸ್ಕ ಗುಬ್ಬಿ ಕಳೆ ಸಸ್ಯಗಳ ಹಾಗು ಧಾನ್ಯಗಳ ಬೀಜಗಳನ್ನು ಸೇವಿಸುತ್ತವೆ,  ಅವಕಾಶ ಸಿಕ್ಕಾಗ ಮತ್ತು ಅವಶ್ಯಕತೆಗೆ ಹೊಂದಿಕೊಳ್ಳಲು ಸಿಕ್ಕಿದ್ದೆಲ್ಲವನ್ನೂ ತಿನ್ನುತ್ತದೆ. ಗುಂಪಿನಲ್ಲಿ ಪಟ್ಟಣ ಮತ್ತು ನಗರಗಳ ಕಸದ ರಾಶಿಯಲ್ಲಿ; ಹೊಟೇಲ್‌ ಮತ್ತಿತರ ತಿನಿಸು ಮಾರಾಟ ಪ್ರದೇಶಗಳಲ್ಲಿ ಎಸೆದ, ಅಳಿದುಳಿದ ಆಹಾರವನ್ನುಗುಂಪಿನಲ್ಲಿ ಸಂಪಾದಿಸುತ್ತವೆ.  ಅಲ್ಲದೆ ಈ ಕೆಳಗಿನ ಸಂಕೀರ್ಣ ಚಟುವಟಿಕೆಯನ್ನೂ ರೂಢಿಸಿಕೊಂಡಿವೆ - ಸೂಪರ್‌ ಮಾರುಕಟ್ಟೆಯಿಂದ ಆಹಾರ ಪದಾರ್ಥವನ್ನು ಸಂಪಾದಿಸಲು ಸ್ವಯಂಚಾಲಿತ ಬಾಗಿಲನ್ನು ತೆರೆಯುತ್ತವೆ.  ಬಹು ಮಹಡಿ ಕಟ್ಟಡದ ಬಾಲ್ಕನಿಯಲ್ಲಿರುವ ಪ್ರವಾಸಿಗಳ ಚಟುವಟಿಕೆಯನ್ನು ಗೋಡೆಗೆ ಅಂಟಿದಂತೆ ಕುಳಿತು ವೀಕ್ಷಿಸಿ ಸಮಯೋಚಿತವಾಗಿ ಬಿದ್ದ, ಉಳಿದ ಆಹಾರವನ್ನು ತಿನ್ನುತ್ತವೆ. ನ್ಯೂಜಿಲೆಂಡಿನಲ್ಲಿ ಕೊಫೈ ಮರದ ಉದ್ದ ನಳಿಕೆಯಲ್ಲಿನ ಹೂವಿನ ಮಕರಂದವನ್ನು ತೂತು ಕೊರೆದು ಕದಿಯುವುದು.  ಇತರೆ ಹಕ್ಕಿಗಳಂತೆ, ಗುಬ್ಬಿಗಳಿಗೆ ಸಹ ತಿಂದ ಕೆಲ ಗಟ್ಟಿ ಆಹಾರವನ್ನು ಜೀರ್ಣಿಸಿಕೊಳ್ಳಲು ಜಠರದಲ್ಲಿ ಒರಟಾದ ಸಣ್ಣನೆಯ ಗಡುಸಾದ ಕಲ್ಲು (ಜಠರ ಕಲ್ಲು) ಅಥವಾ ಮೊಟ್ಟೆ ಅಥವಾ ಬಸವನಹುಳುವಿನಂತಹ ಕಠಿಣಚರ್ಮಿಗಳ ಕವಚದಂತಹ ಒರಟಾದ ಸಣ್ಣನೆಯ ಗಡುಸಾದ ಪದಾರ್ಥಗಳು ಬೇಕಾಗುತ್ತದೆ.

ಹಲವು ಅಧ್ಯಯನಗಳು ಸಮಶೀತೋಷ್ಣ ಪ್ರದೇಶದಲ್ಲಿ ಗುಬ್ಬಚ್ಚಿಯ ಆಹಾರದಲ್ಲಿ ಸುಮಾರು 90% ರಷ್ಟು ಬೀಜಗಳ ಪ್ರಮಾಣವಿರುತ್ತದೆ ಎಂದು ಹೇಳುತ್ತವೆ.[110][116][117] ಇವು ಬಹುತೇಕ ಯಾವುದೇ ಬೀಜಗಳನ್ನು ತಿನ್ನುತ್ತವೆ, ಆದರೆ ಆಯ್ಕೆ ಕೊಟ್ಟರೆ ಜೋಳಕ್ಕೆ ಪ್ರಥಮ ಆದ್ಯತೆ ಆ ನಂತರ ಓಟ್ಸ್, ಗೋಧಿ ಅಥವಾ ಮೆಕ್ಕೆಜೋಳ.[118] ಹಳ್ಳಿಗಾಡಿನ ಗುಬ್ಬಿಗಳು ಸಗಣಿಯಲ್ಲಿ ಜೀರ್ಣವಾಗದೆ ಉಳಿದ ಹಾಗೂ  ಹೊಲಗಳಲ್ಲಿನ ಬೀಜಗಳ ಮೇಲೆ ಹೆಚ್ಚು ಅವಲಂಬಿತ. ಆದರೆ ನಗರದ ಗುಬ್ಬಿಗಳು ಜನರು ಮನೆಯಂಗಳದಲ್ಲಿ ಇವುಗಳಿಗಾಗಿಯೇ ನೀಡುವ ವಾಣಿಜ್ಯ ಬೀಜ ಮತ್ತು ಕಳೆ ಬೀಜಗಳನ್ನು ತಿನ್ನುತ್ತವೆ.[119] ನಗರ ಪ್ರದೇಶಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಜನರು ಒದಗಿಸುವ ಆಹಾರವನ್ನು ಹೆಚ್ಚಾಗಿ ತಿನ್ನುತ್ತದೆ, ಉದಾಹರಣೆಗೆ ಬ್ರೆಡ್, ಕಚ್ಚಾ ಬೀಜಗಳಿಗೆ ಆದ್ಯತೆ ನೀಡುತ್ತದೆ.[117][120] ಬೀಜಗಳನ್ನು ಸೇರಿದಂತೆ ಸಸ್ಯಜನ್ಯ ಪದಾರ್ಥ, ಮೊಗ್ಗು, ದ್ರಾಕ್ಷಿ ಮತ್ತು ಚೆರ್ರಿಗಳಂತಹ ಹಣ್ಣುಗಳನ್ನು ಗುಬ್ಬಚ್ಚಿ ತಿನ್ನುತ್ತವೆ.[99][117] ಗುಬ್ಬಚ್ಚಿಯು ವಸಂತಕಾಲದಲ್ಲಿ ಹೂವುಗಳನ್ನು, ವಿಶೇಷವಾಗಿ ಹಳದಿ ಹೂಗಳನ್ನು ಹರಿದು ಹಾಕುವ ಅಸಾಮಾನ್ಯ ಅಭ್ಯಾಸವನ್ನು  ಸಮಶೀತೋಷ್ಣ ಪ್ರದೇಶಗಳಲ್ಲಿ ದಾಖಲಿಸಿಲಾಗಿದೆ.[121]

ಗುಬ್ಬಚ್ಚಿಯು ಮೇಲೆ ವಿವರಿಸಿದ ಸಸ್ಯ ಜನ್ಯ ಆಹಾರವಲ್ಲದೆ, ಪ್ರಾಣಿಯಾಧಾರಿತ ಕೀಟಗಳು, ಅವುಗಳಲ್ಲಿ ಜೀರುಂಡೆಗಳು, ಮರಿಹುಳುಗಳು, ಡಿ ನೊಣಗಳು ಮತ್ತು ಗಿಡಹೇನುಗಳು ಪ್ರಮುಖವಾಗಿವೆ. ವಿವಿಧ ಸಂಧಿಪದಿಗಳಲ್ಲದ ಕೀಟಗಳನ್ನು (ಉದಾ: ಜೇಡ, ಚಿಗಟ, ಹೇನು, ಚೇಳು) ಸಹ ತಿನ್ನುತ್ತವೆ. ದೊರೆತರೆ ಮೃದ್ವಂಗಿ ಮತ್ತು ಕಠಿಣಚರ್ಮಿ, ಎರೆಹುಳು,  ಹಲ್ಲಿ ಮತ್ತು ಕಪ್ಪೆಗಳಂತಹ ಕಶೇರುಕಗಳನ್ನು ಸಹ ತಿನ್ನುತ್ತವೆ. [110] ಮೊಟ್ಟೆಯೊಡೆದು ಹೊರಬಂದ ಸುಮಾರು 15 ದಿನಗಳ ನಂತರದ ಮರಿ ಗುಬ್ಬಚ್ಚಿಗಳು ಆಹಾರಕ್ಕಾಗಿ ಕೀಟಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ.[122] ಇವುಗಳಿಗೆ ಸಣ್ಣ ಪ್ರಮಾಣದ ಬೀಜಗಳು, ಜೇಡಗಳು ಮತ್ತು ಜಠರಕಲ್ಲನ್ನೂ ಸಹ ಪೋಷಕಗುಬ್ಬಿಗಳು ನೀಡುತ್ತವೆ. ಹೆಚ್ಚಿನೆಡೆ  ಮಿಡತೆಗಳು ಮತ್ತು ಅವುಗಳ ಕುಟುಂಬದ ಇತರೆ ಕೀಟಗಳು ಮರಿಗುಬ್ಬಿಗಳಿಗೆ ದೊರೆಯುವ ಹೇರಳವಾದ ಆಹಾರವಾಗಿದೆ.[123] ಸಸ್ಯ ಹೇನು -ತಿಗಣೆ, ಇರುವೆ, ಮತ್ತು ಜೀರುಂಡೆಗಳು ಅಷ್ಟೇ ಪ್ರಮುಖ ಆಹಾರವಾಗಿದೆ, ಅಲ್ಲದೆ  ಗುಬ್ಬಚ್ಚಿಗಳು ತಮ್ಮ ಮರಿಗಳಿಗೆ ಉಣಿಸಲು ಹೇರಳವಾಗಿರುವ ದೊರೆಯುವ ಯಾವುದನ್ನಾದರೂ ಉಪಯೋಗಿಸುತ್ತವೆ.[123][124][125] ಗುಬ್ಬಚ್ಚಿಗಳು ಅಮೇರಿಕನ್ ರಾಬಿನ್‌ಗಳನ್ನೂ ಒಳಗೊಂಡಂತೆ ಇತರ ಹಕ್ಕಿಗಳಿಂದ ಆಹಾರ ಕದಿಯುವುದನ್ನು ಗಮನಿಸಲಾಗಿದೆ.[4]

ಗುಬ್ಬಿ ಮತ್ತು ಮರಿಗುಬ್ಬಿಯಲ್ಲಿನ ಜೀರ್ಣಾಂಗದಲ್ಲಿರುವ ಸೂಕ್ಷ್ಮಜೀವಿಗಳಲ್ಲಿ ಭಿನ್ನತೆ ಕಂಡುಬರುತ್ತದೆ, ಮರಿಗಳಿಗೆ 9 ದಿನಗಳಾದಂತೆ ಸ್ಯೂಡೋಮೊನಾಡೋಟಾ (Pseudomonadota) ಕಡಿಮೆಯಾಗುತ್ತಾ ಹೋಗುತ್ತದೆ, ಅದೇ ಸಮಯದಲ್ಲಿ ಬ್ಯಾಸಿಲೋಟಾದ (Bacillota) ಸಮೃದ್ಧತೆ ಹೆಚ್ಚಾಗುತ್ತದೆ.[126]

ಬದುಕುಳಿಯುವಿಕೆ

[ಬದಲಾಯಿಸಿ]

ವಯಸ್ಕ ಗುಬ್ಬಚ್ಚಿಗಳಲ್ಲಿ ವಾರ್ಷಿಕ ಬದುಕುಳಿಯುವ ಪ್ರಮಾಣ 45-65%.[170] ಪೋಷಕರ ಆರೈಕೆಯ ನಂತರ ಸ್ವತಂತ್ರವಾಗಿ ಬಾಳಲು ತೊಡಗಿದಾಗ ಗುಬ್ಬಚ್ಚಿಗಳಲ್ಲಿ ಹೆಚ್ಚಿನ ಮರಣ ಪ್ರಮಾಣವನ್ನು ಗುರುತಿಸಲಾಗಿದೆ. ವಯಸ್ಸಾದಂತೆ, ಹೆಚ್ಚು ಅನುಭವಿಗಳಾದಂತೆ ಮರಣ ಪ್ರಮಾಣ ತಗ್ಗುತ್ತದೆ. ಮೊಟ್ಟೆಯಿಂದ ಹೊರಬಂದ ಸುಮಾರು 20-25% ಗುಬ್ಬಿಗಳು ಮಾತ್ರ ಮೊದಲ ಸಂತಾನ ಋತುವನ್ನು ಕಾಣುತ್ತವೆ.[171]  ಹಳೆಯ ದಾಖಲೆಗಳ ಪ್ರಕಾರ ವನ್ಯ ಗುಬ್ಬಚ್ಚಿಯ ಆಯಸ್ಸು ಸುಮಾರು ಇಪ್ಪತ್ತು ವರ್ಷ; ಡೆನ್ಮಾರ್ಕ್‌ನಲ್ಲಿ ವೈಜ್ಞಾನಿಕ ಅಧ್ಯಯನಕ್ಕಾಗಿ ಉಂಗುರ ತೊಡಿಸಿದ  ಗುಬ್ಬಿಯೊಂದು 19 ವರ್ಷ 9 ತಿಂಗಳು ಬದುಕಿದ ಉದಾಹರಣೆಯಿದೆ.[172]  ಸಾಕಿದ್ದ ಗುಬ್ಬಿಯೊಂದು 23 ವರ್ಷಗಳ ಬದುಕಿದ ದಾಖಲೆಯಿದೆ. [173] ಅಂಕಿಅಂಶಗಳ ಕೊರತೆಯಿಂದಾಗಿ ಗಂಡು ಮತ್ತು ಹೆಣ್ಣುಗಳ ಅನುಪಾತವನ್ನು ನಿಶ್ಚಿತವಾಗಿ ಹೇಳಲಾಗುವುದಿಲ್ಲ, ಆದರೆ ಎಲ್ಲಾ ವಯಸ್ಸಿನ ಗುಬ್ಬಿಗಳಲ್ಲಿ ಗಂಡುಗಳ ಸಂಖ್ಯೆ ಸ್ವಲ್ಪ ಅಧಿಕವೆಂದೆನ್ನಬಹುಸು.[174]

ಬೇಟೆಯಾಡುವಿಕೆ

[ಬದಲಾಯಿಸಿ]
ಗಂಡು ಗುಬ್ಬಿಯನ್ನು ತಿನ್ನುತ್ತಿರುವ ಸಾಕು ಬೆಕ್ಕು. ಗುಬ್ಬಿಗಳನ್ನು ಹಿಡಿದು ತಿನ್ನುವ ಭಕ್ಷಕಗಳಲ್ಲಿ ಸಾಕು ಬೆಕ್ಕುಗಳಿಗೆ ಪ್ರಮುಖ ಸ್ಥಾನ.

ಗುಬ್ಬಿಗಳನ್ನು ಬೇಟೆಯಾಡುವುದರಲ್ಲಿ ಪ್ರಮುಖವೆಂದರೆ  ಸಾಕು ಬೆಕ್ಕುಗಳು ಮತ್ತು ಗುಬ್ಬಿಗಿಡುಗದಂತಹ ಬೇಟೆಗಾರ ಹಕ್ಕಿಗಳು, ಹಾಗೆಯೇ  ಕಾಗೆ ಕುಟುಂಬದ ಹಕ್ಕಿಗಳು, ಅಳಿಲುಗಳು ಮತ್ತು ಮನುಷ್ಯರೂ ಸಹ- ಬಹಳ ಹಿಂದಿನಿಂದಲೂ ಗುಬ್ಬಿಯನ್ನು ಪ್ರಪಂಚದಾದ್ಯಂತ ಆಹಾರವಾಗಿ ಉಪಯೋಗಿಸುತ್ತಿದ್ದರು, ಇಂದಿಗೂ ಮೆಡಿಟರೇನಿಯನ್‌ ಪ್ರದೇಶದಲ್ಲಿ ಚಾಲನೆಯಲ್ಲಿದೆ.. ಗುಬ್ಬಿಗಳನ್ನುವಿವಿಧ  ಬೇಟೆಗಾರ ಹಕ್ಕಿಗಳು ಬೇಟೆಯಾಡುತ್ತವೆಂದು ಸಂಶೋಧನಾ ಅಂಕಿಅಂಶಗಳು ಅಧಿಕವಿರುವ ಪ್ರದೇಶದಿಂದ ತಿಳಿದುಬಂದಿದೆ.  ಪ್ರಮುಖವಾಗಿ ಗಿಡುಗ, ಬಿಜ್ಜು ಮತ್ತು ಚಾಣಗಳು ಹೆಚ್ಚು ಗುಬ್ಬಿಗಳನ್ನು ಬೇಟೆಯಾಡುತ್ತವೆ, ಆದರೆ ಸಾಕು ಬೆಕ್ಕಿನಿಂದ ಗುಬ್ಬಿಗಳಿಗೆ ಅಧಿಕ ಹಾನಿಯಾದ ಸಾಧ್ಯತೆ ಇದೆ.  ಸಾಮಾನ್ಯವಾಗಿ ರಸ್ತೆ ಅಪಘಾತದಲ್ಲಿ ಬಲಿಯಾಗುವ ಹಕ್ಕಿ ಎಂದರೆ ಗುಬ್ಬಿ; ಗುಬ್ಬಿ ಯೂರೋಪಿನ ರಸ್ತೆ ಅಪಘಾತಗಳಲ್ಲಿ ಹೆಚ್ಚಾಗಿ ಬಲಿಯಾಗುತ್ತದೆ.

ಪರಾವಲಂಬಿಗಳು ಮತ್ತು ರೋಗಗಳು

[ಬದಲಾಯಿಸಿ]

ಗುಬ್ಬಚ್ಚಿಯು ಅಪಾರ ಸಂಖ್ಯೆಯ ಪರಾವಲಂಬಿಗಳು ಮತ್ತು ರೋಗಗಳಿಗೆ ಆಸರೆ ನೀಡುತ್ತದೆ ಮತ್ತು ಹೆಚ್ಚಿನವುಗಳ ಸಂಪೂರ್ಣ ಪರಿಣಾಮ ಇನ್ನೂ ನಮ್ಮ ಅರಿವಿಗೆ ಬಂದಿಲ್ಲ. ಹಕ್ಕಿವಿಜ್ಞಾನಿ ಟೆಡ್ ಆರ್. ಆಂಡರ್ಸನ್ ಇಂತಹ ಸಾವಿರಾರನ್ನು ದಾಖಲಿಸಿದ್ದಾರೆ, ಹಾಗೂ ಈ ಪಟ್ಟಿ ಇನ್ನೂ ಅಪೂರ್ಣವೆನ್ನುತ್ತಾರೆ.[178] ಸಾಮಾನ್ಯವಾಗಿ ಗುಬ್ಬಚ್ಚಿಯಲ್ಲಿ ದಾಖಲಾದ ಬ್ಯಾಕ್ಟೀರಿಯಾದ ರೋಗಕಾರಕಗಳು ಮನುಷ್ಯನಲ್ಲೂ ಇರುತ್ತವೆ, ಇವುಗಳಲ್ಲಿ ಸಾಲ್ಮೊನೆಲ್ಲಾ ಮತ್ತು ಎಸ್ಚೆರಿಚಿಯಾ ಕೋಲಿಗಳನ್ನು ಒಳಗೊಂಡಿವೆ.[179] ಸಾಲ್ಮೊನೆಲ್ಲಾ ಗುಬ್ಬಚ್ಚಿಯಲ್ಲಿ ಸರ್ವೆಸಾಮಾನ್ಯವಾಗಿದೆ ಹಾಗೂ ಸಮಗ್ರ ಅಧ್ಯಯನದಲ್ಲಿ ಪರೀಕ್ಷಿಸಿದ 13% ಗುಬ್ಬಚ್ಚಿಗಳಲ್ಲಿ ಕಂಡುಬಂದಿದೆ. ವಸಂತ ಮತ್ತು ಚಳಿಗಾಲದಲ್ಲಿ ಸಾಲ್ಮೊನೆಲ್ಲಾ ಸಾಂಕ್ರಾಮಿಕ ರೋಗಗಳು ಹೆಚ್ಚಿನ ಸಂಖ್ಯೆಯ ಗುಬ್ಬಚ್ಚಿಗಳನ್ನು ಕೊಲ್ಲುತ್ತವೆ.[178] ಗುಬ್ಬಚ್ಚಿ ಏವಿಯನ್ ಪಾಕ್ಸ್ ಮತ್ತು ಏವಿಯನ್ ಮಲೇರಿಯಾಗಳಿಗೂ ಆಸರೆ ನೀಡುತ್ತವೆ. ಗುಬ್ಬಿಗಳಿಂದ ಹವಾಯಿಯ ಸ್ಥಳೀಯ ಅರಣ್ಯ ಪಕ್ಷಿಗಳಿಗೆ ಈ ಖಾಯಿಲೆ ಹರಡಿತು.[180] ಗುಬ್ಬಚ್ಚಿಯಲ್ಲಿ ನೆಲೆಸಿರುವ ಅನೇಕ ರೋಗಗಳು ಮನುಷ್ಯರು ಮತ್ತು ಸಾಕು ಪ್ರಾಣಿಗಳಲ್ಲಿಯೂ ಇರುತ್ತವೆ, ಹೀಗಾಗಿ ಗುಬ್ಬಚ್ಚಿಯು ʼಪರಾವಲಂಬಿ ಅತಿಥೇಯಗಳ ಜಲಾಶಯʼವೆಂದು ಪರಿಗಣಿಸಿಬಹುದು. 181] ವೆಸ್ಟ್ ನೈಲ್ ವೈರಸ್‌ನಂತಹ ಆರ್ಬೋವೈರಸ್‌ಗಳು, ಸಾಮಾನ್ಯವಾಗಿ ಕೀಟ ಮತ್ತು ಸಸ್ತನಿಗಳಿಗೆ ಸೋಂಕು  ತಗುಲಿಸುತ್ತವೆ, ಈ ವೈರಸ್‌ಗಳು ಸಮಶೀತೋಷ್ಣ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಗುಬ್ಬಿಯಂತಹ ಹಕ್ಕಿಗಳ ದೇಹ ಸೇರಿ ಸುಪ್ತವಾಗಿರುವ ಮೂಲಕ ಚಳಿಗಾಲದಲ್ಲಿ ಬದುಕುಳಿಯುತ್ತವೆ.[178][182] ರೋಗದ ಕಾರಣದಿಂದಾಗಿ ವಿಶೇಷವಾಗಿ ಸ್ಕಾಟಿಷ್ ದ್ವೀಪಗಳಿಂದ ಗುಬ್ಬಚ್ಚಿಯನ್ನು ನಿರ್ನಾಮ ಮಾಡಿದ ದಾಖಲೆಗಳಿವೆ. ಆದರೆ ಇದು ಅಪರೂಪ.[183] ಗುಬ್ಬಚ್ಚಿಗಳು ಹೆಮೋಸ್ಪೊರಿಡಿಯನ್ ಪರಾವಲಂಬಿಗಳಿಂದ ಸೋಂಕಿಗೆ ಒಳಗಾಗುತ್ತವೆ, ಸೋಂಕು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದೆರೆ ನಗರಗಳಲ್ಲಿ ಕಡಿಮೆ[184] ಮತ್ತೊಂದು ಪರಾವಲಂಬಿ, ಟೊಕ್ಸೊಪ್ಲಾಸ್ಮಾ ಗೊಂಡಿಯು ವಾಯುವ್ಯ ಚೀನಾದ ಗುಬ್ಬಚ್ಚಿಗಳಲ್ಲಿ ಪತ್ತೆಯಾಗಿದೆ, ಸೋಂಕು ತಗುಲಿದ ಗುಬ್ಬಿಗಳ ಮಾಂಸವನ್ನು ಸೇವಿಸುವುದರಿಂದ ಅಪಾಯದ ಸಂಭವವಿದೆ.[185]

ಗುಬ್ಬಿಯನ್ನು ವಿವಿಧ ಬಾಹ್ಯ ಪರಾವಲಂಬಿಗಳು ಆವರಿಸಿದ್ದರೂ ವಯಸ್ಕ ಹಕ್ಕಿಗಳಿಗೆ ಹಾನಿಯನ್ನುಂಟುಮಾಡುವುದು ಅಲ್ಪವೇ.  ಯುರೋಪ್‌ನಲ್ಲಿ ಗುಬ್ಬಚ್ಚಿಗಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ಪರಾವಲಂಬಿ - ಪ್ರೊಕ್ಟೊಫಿಲೋಡ್ಸ್ (Proctophyllodes), ಅತ್ಯಂತ ಸಾಮಾನ್ಯವಾದ ಉಣ್ಣಿ ಅರ್ಗಾಸ್ ರಿಫ್ಲೆಕ್ಸಸ್ (Argas reflexus) ಮತ್ತು ಐಕ್ಸೋಡ್ಸ್ ಅರ್ಬೊರಿಕೋಲಾ (Ixodes arboricola), ಹಾಗೂ ಅತ್ಯಂತ ಸಾಮಾನ್ಯವಾದ ಚಿಗಟ ಸೆರಾಟೊಫಿಲಸ್ ಗ್ಯಾಲಿನೇ (Ceratophyllus gallinae).[147] ಡರ್ಮನೈಸಸ್ (Dermanyssus) ರಕ್ತವನ್ನವಲಂಬಿಸಿರುವ ಬಾಹ್ಯ ಪರಾವಲಂಬಿಗಳು,[186] ಗುಬ್ಬಿಗಳಿಂದ ಮಾನವನ ವಸತಿ ಪ್ರದೇಶವನ್ನು ಪ್ರವೇಶಿಸಿ, ಕಚ್ಚುವುದರಿಂದ ಅಲರ್ಜಿ ಉಂಟಾಗಿ ಅತಿರೇಕಕ್ಕೆ ಹೋಗಿ - ಗಮಸಾಯ್ಡೋಸಿಸ್ (gamasoidosis) ಸ್ಥಿತಿಯನ್ನು ಉಂಟುಮಾಡುತ್ತದೆ.[187] ಹಲವಾರು ಕಚ್ಚುವ ಪರೋಪಜೀವಿಗಳು (chewing lice) ಗುಬ್ಬಿಯ ದೇಹದ ವಿವಿಧ ಸ್ತರಗಳನ್ನು ಆಕ್ರಮಿಸುತ್ತವೆ. ಮೆನಕಾಂಥಸ್ (Menacanthus) ಹೇನುಗಳು ಗುಬ್ಬಿ ದೇಹದ ಮೇಲೆಲ್ಲಾ ಆವರಿಸಿ  ರಕ್ತ ಮತ್ತು ಗರಿಗಳನ್ನು ತಿನ್ನುತ್ತವೆ. ಬ್ರೂಯೆಲಿಯಾ ಹೇನುಗಳು ಗರಿಗಳನ್ನು ತಿಂದರೆ, ಮತ್ತು ಫಿಲೋಪ್ಟೆರಸ್ ಫ್ರಿಂಗಿಲ್ಲಾ ತಲೆಯ ಮೇಲಷ್ಟೆ ಕಂಡು ಬರುತ್ತವೆ. [147]

ವಿಶ್ವದಾದ್ಯಂತ ಗುಬ್ಬಿ ಅತ್ಯಂತ ಪರಿಚಿತ ಹಕ್ಕಿ ಮತ್ತು ಮನುಷ್ಯರೊಡಗಿನ ಸಹಜೀವನ ಮತ್ತು ಪರಿಚಯದಿಂದಾಗಿ ಸಾಮಾನ್ಯವಾಗಿ ಅಸಭ್ಯ ಅಥವಾ ಅಶ್ಲೀಲತೆಯನ್ನು ಪ್ರತಿನಿಧಿಸಲು ಬಳಸಲಾಗುತ್ತದೆ.[244] ಅಧಿಕ ವಲಸಿಗರಿದ್ದ ಯೂರೋಪಿಯನ್ನರಿಗೆ ಗುಬ್ಬಿಯ ಒಡನಾಟವಿದ್ದುದು ವಿಶ್ವದಾದ್ಯಂತ ಗುಬ್ಬಿಗಳನ್ನು ಪರಿಚಯಿಸಲು ನಾಂದಿಯಾಯಿತು. [82] ಮುಂದೆ ಗುಬ್ಬಿ ಎಂದು ಹೆಸರಿಸಲ್ಪಟ್ಟ ಹಕ್ಕಿಯ ಬಗ್ಗೆ ಯೂರೋಪು ಮತ್ತು ಪಶ್ಚಿಮ ಏಷ್ಯಾದ ಪ್ರಾಚೀನ ಸಾಹಿತ್ಯ ಮತ್ತು ಧಾರ್ಮೀಕ ಗ್ರಂಥಗಳಲ್ಲಿ ಉಲ್ಲೇಖವಿದೆ. ಇಲ್ಲಿನ ಉಲ್ಲೇಖ ಖಚಿತವಾಗಿ ಗುಬ್ಬಿಗೆ ಅಥವಾ ಬೀಜ ತಿನ್ನುವ ಸಣ್ಣ ಹಕ್ಕಿಗೆ ಹೋಲಿಕೆಯಾಗದಿದ್ದರೂ, ಇದರಿಂದ ಸ್ಫೂರ್ತಿ ಪಡೆದ ಮುಂದಿನ ಪೀಳಿಗೆಯ ಬರಹಗಾರರು ಮನಸ್ಸಿನಲ್ಲಿ ಗುಬ್ಬಿಯನ್ನೇ ಗುರುತಿಸಿಕೊಂಡಿದ್ದರು.ನಿರ್ದಿಷ್ಟವಾಗಿ ಹೇಳುವುದಾದರೆ, ಗುಬ್ಬಚ್ಚಿಗಳನ್ನು ಪ್ರಾಚೀನ ಗ್ರೀಕರು ಪ್ರೇಮ ದೇವತೆಯಾದ ಅಫ್ರೋಡೈಟ್‌ನೊಂದಿಗೆ (Aphrodite) ಹೋಲಿಸಿದ್ದಾರೆ, ಇದೇ ಗ್ರಹಿಕೆ ನಂತರದ ಬರಹಗಾರರಾದ ಚೌಸರ್ ಮತ್ತು ಷೇಕ್ಸ್‌ಪಿಯರ್‌ರಿಂದ ಕಾಮೋತ್ತೇಜಕತೆಯನ್ನು ಪ್ರತಿಬಿಂಬಿಸಿತು.[39][201][244][246] ಏಸುವಿನ ಗಾಸ್ಪೆಲ್ ಆಫ್ ಮ್ಯಾಥ್ಯೂ[247] ನಲ್ಲಿ ಗುಬ್ಬಿಯನ್ನು ದೈವಿಕ ಮುನ್ನೋಟದ  ಉದಾಹರಣೆಯಾಗಿ ಬಳಸಿದ್ದು, ಶೇಕ್ಸ್‌ಪಿಯರ್‌ನ ಹ್ಯಾಮ್ಲೆಟ್[244] ಮತ್ತು ಸುವಾರ್ತೆ ಸ್ತೋತ್ರವಾದ ಹಿಸ್ ಐ ಈಸ್ ಆನ್ ದಿ ಸ್ಪ್ಯಾರೋ ದಲ್ಲಿ ಸಹ ಉಪಯೋಗಿಸಲಾಗಿದೆ.[24

G37
ಪ್ರಾಚೀನ ಈಜಿಪ್ಟಿನ ಕಲೆ ಗುಬ್ಬಿಯನ್ನು ಬಹಳ ವಿರಳವಾಗಿ ಪ್ರತಿನಿಧಿಸಿದೆ, ಆದರೆ ಈಜಿಪ್ಟಿನ ಚಿತ್ರಲಿಪಿಯು ಗುಬ್ಬಿಯನ್ನು ಆಧರಿಸಿದೆ. ಗುಬ್ಬಿಯ ಚಿತ್ರಲಿಪಿ ಯಾವುದೇ ಧ್ವನಿ ಮೌಲ್ಯವನ್ನು ಹೊಂದಿಲ್ಲವಾದರೂ ಸಣ್ಣ, ಕಿರಿದಾದ ಅಥವಾ ಚೆನ್ನಾಗಿಲ್ಲವೆಂಬುದನ್ನು ಸೂಚಿಸಲು ನಿರ್ಣಾಯಕವಾಗಿ ಬಳಸಲಾಗಿದೆ.[249] ಗುಬ್ಬಿಯನ್ನು ಚಿತ್ರಲಿಪಿ ಪರ್ಯಾಯವಾಗಿ “ಒಬ್ಬ ಸಮೃದ್ಧ ಮನುಷ್ಯ" ಅಥವಾ "ಒಂದು ವರ್ಷದ ಕ್ರಾಂತಿ" ಅಭಿಪ್ರಾಯ ಪಟ್ಟಿದೆ.[250]
{{bottomLinkPreText}} {{bottomLinkText}}
ಗುಬ್ಬಚ್ಚಿ
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?