For faster navigation, this Iframe is preloading the Wikiwand page for ಕೆ.ಜೆ.ಜೇಸುದಾಸ್.

ಕೆ.ಜೆ.ಜೇಸುದಾಸ್

ಕೆ.ಜೆ.ಏ/ಜೇಸುದಾಸ್
K. J. Yesudas
ಹಿನ್ನೆಲೆ ಮಾಹಿತಿ
ಹೆಸರುകട്ടാശേരി ജോസഫ് യേശുദാസ്
ಜನ್ಮನಾಮKattassery Joseph Yesudas
ಅಡ್ಡಹೆಸರುGana Gandharvan, Dasettan
ಜನನ1940 (ವಯಸ್ಸು 83–84)
Fort Kochi, Cochin, Indian Empire
ಮೂಲಸ್ಥಳKochi, Kerala, India
ಸಂಗೀತ ಶೈಲಿIndian classical music, playback singing, Filmi
ವೃತ್ತಿSinger, composer
ಸಕ್ರಿಯ ವರ್ಷಗಳು1961–present
ಅಧೀಕೃತ ಜಾಲತಾಣK.J. Yesudas Official site
ಕೆ.ಜೆ.ಜೇಸುದಾಸ್
Signature
K. J. Yesudas signature
ಕೆ.ಜೆ. ಯೇಸುದಾಸ್

ಡಾ. ಕಾಟ್ಟಶೇರಿ ಜೋಸೆಫ್ ಯೇಶುದಾಸ್ (ಟೆಂಪ್ಲೇಟು:ಮಲಯಾಳಂ: കാട്ടാശേരി ജോസഫ് യേശുദാസ്)(ಜನನ: ೧೦ ಜನವರಿ, ೧೯೪೦) ಅವರು ಭಾರತದ ಖ್ಯಾತ ಸಂಗೀತ ವಿದ್ವಾಂಸರಲ್ಲೊಬ್ಬರು ಹಾಗೂ ಅನೇಕ ಭಾರತೀಯ ಭಾಷೆಗಳ ಚಿತ್ರರಂಗದಲ್ಲಿನ ಹಿನ್ನೆಲೆ ಗಾಯಕರು. ಯೇಸುದಾಸ್ ಕರ್ನಾಟಕ ಸಂಗೀತದ ಪ್ರಮುಖ ಗಾಯಕರು.

ಜನನ, ಜೀವನ

[ಬದಲಾಯಿಸಿ]

ಕೇರಳದ ಕೊಚ್ಚಿಯಲ್ಲಿ ಜನನ. ಇವರು ಪ್ರಸಿದ್ಧ ಗಾಯಕ ಚೆಂಬೈ ವೈದ್ಯನಾಥ ಬಾಗವತರ ಶಿಷ್ಯರು. ಇವರು ಚಲನಚಿತ್ರ ಹಿನ್ನಲೆಗಾಯಕರಾಗಿಯೂ ಪ್ರಸಿದ್ಧರಾಗಿದ್ದಾರೆ. ಮಲೆಯಾಳಂ, ಕನ್ನಡ,ತಮಿಳು,ತೆಲುಗು ಹಾಗೂ ಹಿಂದಿ ಚಲನಚಿತ್ರಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುತ್ತಾರೆ. ಶ್ರೀಮಂತ ಕಂಠದ ಗಾಯಕರಾಗಿರುವ ಇವರು, ಭಾರತದ ಅಗ್ರಪಂಕ್ತಿಯ ಸಂಗೀತ ಕಲಾವಿದರಾಗಿದ್ದು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬಾಲ್ಯ ಹಾಗು ಸಂಗೀತಭ್ಯಾಸ

[ಬದಲಾಯಿಸಿ]
  • ಏಶುದಾಸ್ ಅವರು ಕೇರಳ ರಾಜ್ಯದ ಫೋರ್ಟ್ ಕೊಚ್ಚಿಯಲ್ಲಿ ಜನವರಿ ೧೦ ೧೯೪೦ರಂದು ಜನಿಸಿದರು. ಇವರ ತಂದೆ ಆಗಸ್ಟೈನ್ ಜೋಸೆಫ್ ಹಾಗು ತಾಯಿ ಎಲಿಜಬೆತ್ ಜೋಸೆಫ್. ಯೇಶುದಾಸ್ ಅವರಿಗೆ ಮೊದಲ ಸಂಗೀತ ಗುರುವಾಗಿದ್ದ ಅವರ ತಂದೆ, ಹೆಸರಾಂತ ಮಲೆಯಾಳಂ ಶಾಸ್ತ್ರೀಯ ಸಂಗೀತಕಾರರಾಗಿದ್ದರಲ್ಲದೇ, ರಂಗಭೂಮಿ ಕಲಾವಿದರಾಗಿದ್ದರು.
  • ಕೇರಳದ ತಿರುಪುನಿತುರ ಊರಿನಲ್ಲಿನ ಸಂಗೀತ ಅಕಾಡೆಮಿಯನ್ನು ಸೇರಿದ ಬಾಲಕ ಯೇಸುದಾಸ್, ತಮ್ಮ ಏಳನೆಯ ವಸ್ಸಿನಲ್ಲಿಯೇ ಫೋರ್ಟ್ ಕೊಚ್ಚಿಯಲ್ಲಿ ನಡೆದ ಸ್ಥಳೀಯ ಸಂಗೀತ ಸ್ಪರ್ಧೆಯಲ್ಲಿ ಜಯಗಳಿಸಿ, ಚಿನ್ನದ ಪದಕವನ್ನು ಪಡೆದಿದ್ದರು.

ನಂತರ ಇವರು ಸಂಗೀತ ವಿದ್ವಾಂಸ ಚೆಂಬೈ ವೈದ್ಯನಾಥ ಭಾಗವತರು ಅವರ ಬಳಿ ಶಾಸ್ತ್ರೀಯ ಸಂಗೀತಾಭ್ಯಾಸ ನಡೆಸುತ್ತಿದ್ದರು. ಆದರೆ, ೧೯೭೪ರಲ್ಲಿ ಗುರುಗಳ ಮರಣದಿಂದ ಈ ವಿದ್ಯಾಭ್ಯಾಸ ಅಕಾಲಿಕವಾಗಿ ನಿಂತಿತು.

ಸಂಗೀತ ಜೀವನ

[ಬದಲಾಯಿಸಿ]
  • ಹಿನ್ನೆಲೆಗಾಯಕರಾಗಿ ಯೇಸುದಾಸ್ ಅವರ ಮೊದಲ ಹಾಡು ೧೯೬೧ರಲ್ಲಿ ಬಿಡುಗಡೆಯಾದ ಮಲೆಯಾಳಂ ಭಾಷೆಯ 'ಕಾಲ್ಪಾಡುಕಲ್' ಚಿತ್ರದ್ದು.ಇಲ್ಲಿಯವರೆಗೂ (ವರ್ಷ ೨೦೦೬) ಇವರು ಐವತ್ತು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ವಿವಿಧ ಭಾರತೀಯ ಭಾಷೆಗಳ ಚಲನಚಿತ್ರಗಳಲ್ಲಿ ಹಾಡಿದ್ದಾರೆ.
  • ಇವುಗಳಲ್ಲಿ ಪ್ರಮುಖವಾಗಿ ಅವರ ಮಾತೃಭಾಷೆಯಾದ ಮಲೆಯಾಳಂ, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗು ಬಂಗಾಳಿ ಗುಜರಾತಿ, ಒಡಿಶಾ, ಮರಾಠಿ, ಪಂಜಾಬಿ, ಸಂಸ್ಕೃತ, ತುಳು ಮತ್ತು ವಿದೇಶಿ ಭಾಷೆಗಳಾದ ರಷ್ಯನ್, ಅರೇಬಿಕ್, ಲ್ಯಾಟಿನ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಹಾಡಿದ್ದಾರೆ.
  • ಸಂಗೀತದಲ್ಲಿ ವಿಜ್ಞಾನ ಅಡಗಿದೆ,ಅದನ್ನು ಅರಿತು ಯುವಪೀಳಿಗೆ ಅಧ್ಯಯನ ನಿರತರಾಗಬೇಕು. ಪ್ರತಿಯೊಂದು ರಾಗದಲ್ಲೂ ವಿಜ್ಞಾನದ ಹಿನ್ನೆಲೆಯಿದೆ ಅದನ್ನು ತಿಳಿಯದೆ ಕೇವಲ ಸಂಗೀತಾಧ್ಯಯನ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಸಾಂಸ್ಕೃತಿಕ ಪ್ರಾಮುಖ್ಯತೆಯನ್ನರಿತು ಸಂಗೀತಾಭ್ಯಾಸದಲ್ಲಿ ತೊಡಗಬೇಕು ,ಸಂಸ್ಕೃತ ಎಲ್ಲ ಭಾಷೆಗೂ ಮಾತೃ ಭಾಷೆಯಾದ ಕಾರಣ ಕೇವಲ ಮಲೆಯಾಳಿ ಬಲ್ಲ ತನಗೆ ಎಲ್ಲ ಭಾಷೆಯಲ್ಲೂ ಹಾಡಲು ಸಾಧ್ಯವಾಯಿತು.
  • ಕರ್ನಾಟಕ ಸಂಗೀತ ಎನ್ನುವಂತದ್ದು ಒಂದು ಸಾಗರವಿದ್ದಂತೆ. ನಾನು ಅದರ ಮೊದಲ ತೆರೆಯಲ್ಲಿದ್ದೇನೆ. ಸಂಗೀತದ ಪೂರ್ತಿ ಭಾಷೆ ಅರಿವಾಗಲು ಅದೆಷ್ಟೋ ಜನ್ಮ ಬೇಕು. ನಾನು ವಿದ್ವಾನ್ ಅಲ್ಲ. ನಾನು ಸಂಗೀತ ಕ್ಷೇತ್ರದಲ್ಲಿ ಇನ್ನೂ ವಿದ್ಯಾರ್ಥಿ ಎಂದು ಮೇರು ಗಾಯಕನ ಹಿನ್ನೆಲೆ ಗಾಯನ ವೃತ್ತಿಯ ಸುವರ್ಣ ಸಂಬ್ರಮದ ಮಾತು. ೧೯೬೫ರಲ್ಲಿ ಆಗಿನ ಸೋವಿಯತ್ ಒಕ್ಕೂಟದ ಸರಕಾರವು ಯೇಸುದಾಸ್ ಅವರನ್ನು ಸೋವಿಯತ್ ಒಕ್ಕೂಟದಲ್ಲಿನ ವಿವಿಧ ಸ್ಥಳಗಳಲ್ಲಿನ ಸಂಗೀತ ಕಛೇರಿಗಳಲ್ಲಿ ಭಾಗವಹಿಸಲು ಆಮಂತ್ರಿಸಿತ್ತು.

ವೈಯುಕ್ತಿಕ ಜೀವನ

[ಬದಲಾಯಿಸಿ]

ಯೇಶುದಾಸ್ ಅವರ ಪತ್ನಿಯ ಹೆಸರು ಪ್ರಭಾ. ಈ ದಂಪತಿಗಳಿಗೆ ಮೂರು ಪುತ್ರರಿದ್ದಾರೆ, ವಿನೋದ್, ವಿಜಯ್ ಹಾಗು ವಿಶಾಲ್. ಈ ಕುಟುಂಬವು ತಮಿಳುನಾಡಿನ ಚೆನ್ನೈ ನಗರದಲ್ಲಿ ವಾಸವಿದೆ.

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  1. ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ಏಳು ಬಾರಿ ರಾಷ್ಟ್ರ ಪ್ರಶಸ್ತಿ .
  2. ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ೧೬ ಬಾರಿ ಕೇರಳ ರಾಜ್ಯ ಪ್ರಶಸ್ತಿ.
  3. ೧೯೭೩ರಲ್ಲಿ ಭಾರತದ ರಾಷ್ಟ್ರಪತಿಯವರಿಂದ ಪದ್ಮಶ್ರೀ ಪ್ರಶಸ್ತಿ.
  4. ೧೯೭೪ರಲ್ಲಿ ಸಂಗೀತ ರಾಜ ಬಿರುದು - ಕೊಡುಗೆ ಚೆಂಬೈ
  5. ಅತ್ಯುತ್ತಮ ಹಿನ್ನೆಲೆ ಗಾಯಕ ಎಂದು ೧೯೮೮ರಲ್ಲಿ ತಮಿಳುನಾಡು ಹಾಗು ಆಂಧ್ರ ಪ್ರದೇಶ ಸರ್ಕಾರಗಳಿಂದ ರಾಜ್ಯ ಪ್ರಶಸ್ತಿ.
  6. ೧೯೮೯ರಲ್ಲಿ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪದವಿ.
  7. ೨೦೧೭ರಲ್ಲಿ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿ ಘೋಷಣೆ[]

ಯೇಶುದಾಸ್ ಅವರು ಹಾಡಿರುವ ಕೆಲವು ಕನ್ನಡ ಚಲನಚಿತ್ರಗೀತೆಗಳು

[ಬದಲಾಯಿಸಿ]
  • ಟು ಟು ಟು ಬೇಡಪ್ಪ, ಓಡಿ ಬಂದು ನನ್ನ ಸಂಗ ಕಟ್ಟಪ್ಪ -ಪ್ರೇಮಮಯಿ
    - ಕೆ.ಜೆ.ಯೇಶುದಾಸ್ ಕನ್ನಡದಲ್ಲಿ ಹಾಡಿದ ಪ್ರಥಮ ಗೀತೆ, ಹಾಗೆಯೇ ಈ ಚಿತ್ರ ಡಾ.ರಾಜ್‍ಕುಮಾರ್‍ರಿಗೆ ಯೇಸುದಾಸ್ ಹಿನ್ನೆಲೆ ಗಾಯನ ನೀಡಿದ ಏಕೈಕ ಚಿತ್ರ.
  • ಹೆಣ್ಣೆ ನಿನ್ನ ಕಣ್ಣ ನೋಟ ಮಿಂಚು ಮಿಂಚು - ಪ್ರೇಮಮಯಿ
  • ಪ್ರೇಮ ಲೊಕದಿಂದ ಬಂದ ಪ್ರೇಮದ ಸಂದೇಶ- ಪ್ರೇಮಲೋಕ
  • ಹೂವಂತೆ ಹೆಣ್ಣು ನಗುತಿರಬೇಕು -ಕಿಲಾಡಿ ಕಟ್ಟು
  • ಮನೆಯೇ ಮಂತ್ರಾಲಯ ಮನಸೇ ದೇವಾಲಯ-ಮನೆಯೇ ಮಂತ್ರಾಲಯ
  • ಈ ಸುಂದರ ಚಂದಿರನಿಂದ, ಆನಂದದ ಜೀವನ ರಂಗ - ಮುಯ್ಯಿಗೆ ಮುಯ್ಯಿ
  • ಕಿಲಾಡಿ ಜೋಡಿ,ಕಿಲಾಡಿ ಜೋಡಿ, ಸಮಯವ ನೋಡಿ ಸಂಚನು ಮಾಡಿ -ಕಿಲಾಡಿ ಜೋಡಿ
  • ಆ ಕರ್ಣನಂತೆ ನೀ ತ್ಯಾಗಿಯಾದೆ -ಕರ್ಣ
  • ಎಲ್ಲೆಲ್ಲು ಸಂಗೀತವೆ, ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು - ಮಲಯ ಮಾರುತ
  • ನಟನ ವಿಶಾರದ ನಟ ಶೇಖರ - ಮಲಯ ಮಾರುತ
  • ಶಾರದೆ, ದಯೆ ತೋರಿದೆ-ಮಲಯ ಮಾರುತ
  • ಶ್ರೀನಿವಾಸ, ಎನ್ನ ಬಿಟ್ಟು ನೀ ಹೊಗಬಲ್ಲದೆ?-ಮಲಯ ಮಾರುತ
  • ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ-ಮಲಯ ಮಾರುತ
  • ಮಲಯ ಮಾರುತ ಗಾನ, ಈ ಪ್ರಣಯ ಜೀನನ ರಾಗ-ಮಲಯ ಮಾರುತ
  • ಹಿಂಡನಗಲಿ ಹಿಡಿವೆಡೆವ-ಮಲಯ ಮಾರುತ
  • ನಗುಮೊಮು ಗನಲೇನಿ - ರಾಯರು ಬಂದರು ಮಾವನ ಮನೆಗೆ
  • ಯಾರೇ ನೀನು ಚೆಲುವೆ, ನಿನ್ನಷ್ಟಕ್ಕೆ ನೀನೆ ಏಕೆ ನಗುವೆ -ನಾನು ನನ್ನ ಹೆಂಡ್ತಿ
  • ನಾನು ಕನ್ನಡದ ಕಂದ, ಬಂದೆ ಶಾಂತಿಯ ನೆಲದಿಂದ -ಎ ಕೆ 47
  • ಯಾರೊ ಯಾರೊ -ಹುಚ್ಚ
  • ಮಾತು ತಪ್ಪಿದಳು -ಹುಚ್ಚ
  • ತಾಯಿ ಎಂದಲ್ಲಿ -ನಂಜಂಡಿ
  • ರಾಮಚಾರಿ ಹಾಡುವ ಲಾಲಿ ಹಾಡು ಕೇಳವ್ವ -ರಾಮಚಾರಿ
  • ನಮ್ಮೂರ ಯುವರಾಣಿ ಕಲ್ಯಾಣವಂತೆ -ರಾಮಚಾರಿ
  • ಲಾಲಿ ಲಾಲಿ ಮಲಗಿರುವ -ಸ್ವಾತಿ ಮುತ್ತು
  • ಮಧುರ ಬಲು ಮಧುರ ಬಾಳು ಜೇನಾದಾಗ - ಬಾಳು ಜೇನು
  • ಈ ಸುಂದರ ಚಂದಿರನಿಂದ - ಕುದುರೆಮುಖ
  • ಓಹೋ ವಸಂತ ಹೃದಯ ಅರಳೋ ಕಾಲ - ಗೋಪಿಕೃಷ್ಣ

ಉಲ್ಲೇಖಗಳು

[ಬದಲಾಯಿಸಿ]
  1. "Padma Awards 2017 List: From Dhoni to Pawar, who will win?".

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
{{bottomLinkPreText}} {{bottomLinkText}}
ಕೆ.ಜೆ.ಜೇಸುದಾಸ್
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?