For faster navigation, this Iframe is preloading the Wikiwand page for ಅಪ್ಪು (ಚಲನಚಿತ್ರ).

ಅಪ್ಪು (ಚಲನಚಿತ್ರ)

ಅಪ್ಪು
ನಿರ್ದೇಶನಪುರಿ ಜಗನ್ನಾಥ್
ನಿರ್ಮಾಪಕಪಾರ್ವತಮ್ಮ ರಾಜ್‌ಕುಮಾರ್
ಲೇಖಕಎಮ್.ಎಸ್‌.ರಮೇಶ್‌, ಆರ್‌. ರಾಜಶೇಖರ್‌ (ಸಂಭಾಷಣೆ)
ಚಿತ್ರಕಥೆಪುರಿ ಜಗನ್ನಾಥ್
ಕಥೆಪುರಿ ಜಗನ್ನಾಥ್
ಸಂಭಾಷಣೆಶಿವ ರಾಜ್‌ಕುಮಾರ್
ಪಾತ್ರವರ್ಗ
Avinash madala
ಸಂಗೀತಗುರು ಕಿರಣ್
ಛಾಯಾಗ್ರಹಣಕೆ. ದತ್ತು
ಸಂಕಲನಎಸ್‌. ಮನೋಹರ್
ಸ್ಟುಡಿಯೋಪೂರ್ಣಿಮಾ ಎಂಟರ್‌ಪ್ರೈಸಸ್
ವಿತರಕರುಶ್ರೀ ವಜ್ರೇಶ್ವರಿ ಕಂಬೈನ್ಸ್
ಬಿಡುಗಡೆಯಾಗಿದ್ದುಏಪ್ರಿಲ್‌ ೨೬, ೨೦೦೨
ಅವಧಿ‌೧೪೦ ನಿಮಿಷಗಳು
ದೇಶಭಾರತ
ಭಾಷೆಕನ್ನಡ

"ಅಪ್ಪು" ೨೦೦೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಈ ಚಲನಚಿತ್ರದಲ್ಲಿ ಪುನಿತ್ ರಾಜಕುಮಾರ್ ಹಾಗೂ ರಕ್ಷಿತಾ ಮುಖ್ಯ ಪಾತ್ರದಲ್ಲಿದ್ದಾರೆ ಜೊತೆಗೆ ಅವಿನಾಶ್‌,ಶ್ರೀನಿವಾಸ ಮೂರ್ತಿ, ಸುಮಿತ್ರಾ ಮುಂತಾದವರು ನಟಿಸಿದ್ದಾರೆ. "ಪೂರ್ಣಿಮಾ ಎಂಟರ್‌ಪ್ರೈಸಸ್"‌ ಸಂಸ್ಥೆಯ ಲಾಂಛನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಿಸಿದ್ದ ಈ ಚಿತ್ರಕ್ಕೆ ಪುರಿ ಜಗನ್ನಾಥ್‌ ನಿರ್ದೇಶಕರಾಗಿದ್ದಾರೆ. ಪುನಿತ್ ರಾಜಕುಮಾರ್ ಅವರು ಈ ಹಿಂದೆ ಹಲವಾರು ಚಿತ್ರಗಳಲ್ಲಿ ಬಾಲನಟರಾಗಿ ನಟಿಸಿದ್ದರೂ, ಯುವ ನಾಯಕ ನಟರಾಗಿ ಅಭಿನಯಿಸಿದ ಮೊದಲ ಚಿತ್ರವಾಗಿದೆ. "ಅಪ್ಪು" ಚಲನಚಿತ್ರದಲ್ಲಿ ಅವಿನಾಶ್‌,ಶ್ರೀನಿವಾಸ ಮೂರ್ತಿ, ಸುಮಿತ್ರಾ ಮುಂತಾದವರು ನಟಿಸಿದ್ದಾರೆ.[][]

ವಿಶೇಷತೆಗಳು

[ಬದಲಾಯಿಸಿ]

ಅಪ್ಪು ಚಲನಚಿತ್ರವು ಏಪ್ರಿಲ್‌ ೨೬, ೨೦೦೨ರಲ್ಲಿ ಬಿಡುಗಡೆಯಾಗಿ, ಚಲನಚಿತ್ರ ಮಂದಿರಗಳಲ್ಲಿ ೨೦೦ ದಿನಗಳ ಸತತ ಪ್ರದರ್ಶನ ಕಂಡಿತು.[]

ಈ ಚಿತ್ರವು ತೆಲುಗಿನಲ್ಲಿ "ಈಡಿಯಟ್"‌ ಹಾಗೂ ತಮಿಳಿನಲ್ಲಿ‌ "ದಮ್" ಎಂಬ ಹೆಸರುಗಳಲ್ಲಿ ನಿರ್ಮಾಣಗೊಂಡು, ಕ್ರಮವಾಗಿ ೨೦೦೨ ಹಾಗೂ ೨೦೦೩ರಲ್ಲಿ ಬಿಡುಗಡೆಗೊಂಡರೆ,[] ಬಂಗಾಳಿ ಭಾಷೆಯಲ್ಲಿ "ಹಿರೋ" ಎಂಬ ಹೆಸರಿನೊಂದಿಗೆ ೨೦೦೬ರಲ್ಲಿ ಮರು ನಿರ್ಮಾಣಗೊಂಡು ಬಿಡುಗಡೆಯಾಯಿತು. ಜೊತೆಗೆ ಬಾಂಗ್ಲಾ ದೇಶಿ ಬಂಗಾಳಿ ಭಾಷೆಯಲ್ಲಿ "ಪ್ರೇಮ್‌ ಅಮರ್‌ ಪ್ರೆಮ್"‌ ಎಂಬ ಶೀರ್ಷಿಕೆಯೊಂದಿಗೆ ೨೦೦೮ರಲ್ಲಿ.ಬಿಡುಗಡೆಯಾಯಿತು. ೧೯೮೬ರಲ್ಲಿ ಬಿಡುಗಡೆಗೊಂಡ "ಅನುರಾಗ ಅರಳಿತು" ಚಿತ್ರದ ಬಳಿಕ ಹೀಗೆ ಬಂಗಾಳಿ ಭಾಷೆ ಹಾಗೂ ಬಾಂಗ್ಲಾ ದೇಶೀ ಬೆಂಗಾಳಿ ಭಾಷೆಯಲ್ಲಿ ಮರುನಿರ್ಮಾಣಗೊಂಡ ಕನ್ನಡದ ಎರಡನೇಯ ಚಲನಚಿತ್ರವಾಗಿದೆ.[][][]


ಕಥಾ ಸಾರಾಂಶ

[ಬದಲಾಯಿಸಿ]

ಅಪ್ಪು, ಹೆಡ್ ಕಾನ್ ಸ್ಟೇಬಲ್ ವೆಂಕಟ ಸ್ವಾಮಿ ಅವರ ಪುತ್ರ. ಅಪ್ಪು, ಯಾವುದೇ ಒತ್ತಡಗಳನ್ನು ತೆಗೆದುಕೊಳ್ಳದೇ ನಿರಾತಂಕವಾಗಿ ಇರುವ ವ್ಯಕ್ತಿ. ಒಂದು ರಾತ್ರಿ ಆತ ತನ್ನ ಎದುರಾಳಿಗಳಿಂದ ಥಳಿಸಲ್ಪಡುತ್ತಾನೆ ಮತ್ತು ಪ್ರಜ್ಞೆ ತಪ್ಪುತ್ತಾನೆ. ಆ ಸಂದರ್ಭದಲ್ಲಿ ಸುಚಿತ್ರಾ ಎಂಬ ಸುಂದರ ಹುಡುಗಿ ಆತನನ್ನು ಆಸ್ಪತ್ರೆಗೆ ಸೇರಿಸಿ, ರಕ್ತವನ್ನೂ ನೀಡಿ ಕಾಪಾಡುತ್ತಾಳೆ. ಆಸ್ಪತ್ರೆಯ ವೆಚ್ಚವನ್ನೂ ಕೂಡ ಅವಳೇ ಭರಿಸುತ್ತಾಳೆ. ಆದರೆ ಅಪ್ಪುಗೆ ಪ್ರಜ್ಞೆ ಬರುವಷ್ಟರಲ್ಲಿ ಅವಳು ಆಸ್ಪತ್ರೆಯಿಂದ ಹೋಗಿರುತ್ತಾಳೆ. ಅಪ್ಪುವಿನ ಗೆಳೆಯರು, ಒಬ್ಬ ಹುಡುಗಿ ಆತನನ್ನು ಕಾಪಾಡಿದ ವಿಚಾರವನ್ನು ತಿಳಿಸುತ್ತಾರೆ. ಆಗ ಅಪ್ಪು, ಆಕೆನ್ನು ನೋಡದಿದ್ದರೂ ಕೂಡ ಆಕೆ ಒಳ್ಳೆಯತನಕ್ಕೆ ಮಾರು ಹೋಗಿ ಆಕೆಯತ್ತ ಆಕರ್ಶಿತನಾಗುತ್ತಾನೆ. ಆದರೆ ನಂತರ ಆಕೆ ನಗರ ಪೊಲೀಸ್ ಕಮಿಷನರ್ ರಾಜಶೇಖರ್ ಅವರ ಮಗಳು ಎಂದು ತಿಳಿದುಬರುತ್ತದೆ. ಅಪ್ಪು ಸುಚಿಯನ್ನು ಮೊದಲ ಬಾರಿಗೆ ಕಾಲೇಜಿನಲ್ಲಿ ಭೇಟಿಯಾಗಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಾನೆ. ಅವಳು ಒಪ್ಪದಿದ್ದಾಗ, ಅವನು ಅವಳನ್ನು ಕೆಣುಕುತ್ತಾನೆ. ಇದು ಸುಚಿ ತನ್ನ ತಂದೆಗೆ ಅಪ್ಪು ಬಗ್ಗೆ ದೂರು ನೀಡಲು ಕಾರಣವಾಗುತ್ತದೆ ರಾಜಶೇಖರ್ ಅಪ್ಪುವನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವನನ್ನು ತೀವ್ರವಾಗಿ ಥಳಿಸುತ್ತಾನೆ. ಆದರೆ ವೆಂಕಟಸ್ವಾಮಿ ಮತ್ತು ಆತನ ಮೇಲಧಿಕಾರಿ ನ ಎಸ್‌ಐ ಸುದರ್ಶನ್ ಅಪ್ಪುವನ್ನು ರಕ್ಷಿಸುತ್ತಾರೆ. ಅಪ್ಪು ರಾಜಶೇಖರ್‌ನಿಂದ ಸೋಲಿಸಲ್ಪಟ್ಟರೂ, ಅವನು ತನ್ನ ಪ್ರೀತಿಯನ್ನ ಗೆಲ್ಲುವ ಹಠ ಹಿಡಿಯುತ್ತಾನೆ. ಕಾಲೇಜಿನಲ್ಲಿ ಮತ್ತೆ ಸುಚಿಗೆ ಪ್ರಪೋಸ್ ಮಾಡುತ್ತಾನೆ. ಅವಳು ಅವನನ್ನು ಕಟ್ಟಡದಿಂದ ಜಿಗಿಯಲು ಕೇಳುತ್ತಾಳೆ. ಅವನು ಹಾಗೆ ಮಾಡಲು ಸಿದ್ಧವಾದಾಗ, ಸುಚಿ ಅಪ್ಪುವಿನ ಪ್ರೀತಿಗೆ ಒಪ್ಪುತ್ತಾಳೆ. ರಾಜಶೇಖರ್‌ಗೆ ಈ ಪ್ರೀತಿ ಒಪ್ಪಿಗೆ ಇರುವುದಿಲ್ಲ. ಆತ ಇವರಿಗೆ ಹಲವಾರು ತಡೆಗಳನ್ನು ಒಡ್ಡುತ್ತಾನೆ. ಆ ತಡೆಗಳನ್ನು ಮೀರಿ ಅಪ್ಪು ಮತ್ತು ಸುಚಿತ್ರ ಹೇಗೆ ಒಂದಾಗುತ್ತಾರೆ ಎಂಬುದೇ ಈ ಚಿತ್ರದ ಒಟ್ಟಾರೆ ಕಥಾ ಹಂದರವಾಗಿದೆ.

ಪಾತ್ರ ವರ್ಗ

[ಬದಲಾಯಿಸಿ]
  • ಅಪ್ಪು ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್
  • ಸುಚಿತ್ರಾ ಪಾತ್ರದಲ್ಲಿ ರಕ್ಷಿತಾ
  • ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ವೆಂಕಟ ಸ್ವಾಮಿಯಾಗಿ ಶ್ರೀನಿವಾಸ ಮೂರ್ತಿ
  • ಅಪ್ಪು ತಾಯಿಯಾಗಿ ಸುಮಿತ್ರಾ
  • ಸಬ್ ಇನ್ಸ್‌ಪೆಕ್ಟರ್ ಸುದರ್ಶನ್ ಆಗಿ ಅಶೋಕ್
  • ಎಸ್‌ಐ ಆಗಿ ಸತ್ಯಜಿತ್
  • ಪೃಥ್ವಿರಾಜ್
  • ನಗರ ಪೊಲೀಸ್ ಆಯುಕ್ತ ರಾಜಶೇಖರ್ ಆಗಿ ಅವಿನಾಶ್
  • ನಿತಿನ್ ಗೋಪಿ
  • ಹೊನ್ನವಳ್ಳಿ ಶ್ರೀಕಾಂತ್
  • ಅಪ್ಪು ವೆಂಕಟೇಶ್
  • ಯೋಗಿ
  • ಎಸ್ಕಾರ್ಟ್ ಶ್ರೀನಿವಾಸ್
  • ಹುಲಿವಾನ ಗಂಗಾಧರಯ್ಯ
  • ಶಂಕರ್ ರಾವ್
  • ರಾಜೀವ್ ರಾಥೋಡ್
  • ಬದ್ರಿ ನಾರಾಯಣ
  • ಯಾದವ್ ಆಗಿ ತುಮಕೂರು ಮೋಹನ್
  • ಫಯಾಜ್ ಖಾನ್
  • ವಿ.ಕೆ.ಮೋಹನ್
  • ಎನ್‌ಜಿಇಎಫ್ ರಾಮಮೂರ್ತಿ
  • ತೀರ್ಥ ಪ್ರಸಾದ್
  • ಚನ್ನ
  • ಕಮಲಾ ಶ್ರೀ
  • ಗುಂಡನಾಗಿ ವಿನಾಯಕ ಜೋಶಿ
  • ಕೀರ್ತಿ
  • ಕಾನ್‌ಸ್ಟೆಬಲ್ ಆಗಿ ಹೊನ್ನವಳ್ಳಿ ಕೃಷ್ಣ
  • ಬುಲೆಟ್ ಪ್ರಕಾಶ್
  • ಹೇಮಶ್ರೀ[]


ಗುರುಕಿರಣ್ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಉಪೇಂದ್ರ, ಶ್ರೀರಂಗ ಮತ್ತು ಹಂಸಲೇಖ ಸಾಹಿತ್ಯವನ್ನು ರಚಿಸಿದ್ದಾರೆ. "ಅಪ್ಪು" ಚಲನಚಿತ್ರವು ಒಟ್ಟು ಆರು ಹಾಡುಗಳನ್ನು ಒಳಗೊಂಡಿದೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡಿದವರುಸಮಯ
1."ತಾಲಿಬಾನ್‌ ಅಲ್ಲ.. ಅಲ್ಲ.."ಉಪೇಂದ್ರಪುನೀತ್‌ ರಾಜ್‌ಕುಮಾರ್ 
2."ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ.."ಶ್ರೀ ರಂಗಉದಿತ್‌ ನಾರಾಯಣ್, ಕೆ.ಎಸ್‌.ಚಿತ್ರ 
3."ಪಣವಿಡು..ಪಣವಿಡು"ಹಂಸಲೇಖಡಾ.ರಾಜ್‌ಕುಮಾರ್ 
4."ಎಲ್ಲಿಂದ ಆರಂಭವೋ"ಶ್ರೀ ರಂಗಉದಿತ್‌ ನಾರಾಯಣ್, ಕೆ.ಎಸ್‌.ಚಿತ್ರ 
5."ಜಾಲೀ ಗೋ.. ಜಾಲಿ ಗೋ.."ಹಂಸಲೇಖಶಂಕರ್ ಮಹದೇವನ್ 
6."ಆ ದೇವರ ಹಾಡಿದು"ಕೆ.ಕಲ್ಯಾಣ್ಡಾ. ರಾಜ್‌ಕುಮಾರ್ 

ಉಲ್ಲೇಖಗಳು

[ಬದಲಾಯಿಸಿ]
  1. "Puneet Rajakumar beats the heat". rediff.com. 20 April 2002. Retrieved 17 April 2015.
  2. "ಆರ್ಕೈವ್ ನಕಲು". Archived from the original on 2022-12-14. Retrieved 2022-06-30.
  3. "Appu at 100 days". viggy.com. Retrieved 17 April 2015.
  4. "Rakshita Prem had acted in all versions of Appu". The Times of India. Retrieved 2015-07-17.
  5. "From 'School Master' to 'U Turn': A look at Kannada films remade in other Indian languages - Times of India". The Times of India.
  6. Megha Shenoy (29 November 2009). "Inspiration for Remakes". Deccan Herald.
  7. "ಅತೀ ಹೆಚ್ಚು ಭಾಷೆಗೆ 'ರಿಮೇಕ್‌' ಆದ ಕನ್ನಡ ಸಿನಿಮಾಗಳ ಮಾಹಿತಿ ಇಲ್ಲಿದೆ!".
  8. "Hemashri | Appu | Surendra Babu | Kannada Seriel Actress | ಹೇಮಾಶ್ರೀ ಅಸಹಜ ಸಾವು: ಕೊಲೆಯೋ, ಆತ್ಮಹತ್ಯೆಯೋ?". m.kannada.webdunia.com. Retrieved 3 September 2018.
{{bottomLinkPreText}} {{bottomLinkText}}
ಅಪ್ಪು (ಚಲನಚಿತ್ರ)
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?