For faster navigation, this Iframe is preloading the Wikiwand page for ಅನಂತ್ ನಾಗ್.

ಅನಂತ್ ನಾಗ್

ಅನಂತ್ ನಾಗ್
ಜನನ
ಅನಂತ್ ನಾಗರಕಟ್ಟೆ

ಸೆಪ್ಟೆಂಬರ್-೦೪-೧೯೪೮
ಶಿರಾಲಿ, ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ)
ರಾಷ್ಟ್ರೀಯತೆಭಾರತೀಯ
ವೃತ್ತಿನಟ/ರಾಜಕಾರಣಿ
ಸಂಗಾತಿಗಾಯತ್ರಿ (m. ೧೯೮೭)
ಮಕ್ಕಳುಅದಿತಿ ಅನಂತ್ ನಾಗ್

ಅನಂತನಾಗ್ (ಅನಂತ್ ನಾಗರಕಟ್ಟೆ) - ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕ ನಟರಲ್ಲೊಬ್ಬರು. ಇವರು ಕರ್ನಾಟಕ ರಾಜ್ಯ ಸರಕಾರದಲ್ಲಿ ಹಿಂದೆ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಮತ್ತು ಬಿಜೆಪಿ ಪಕ್ಷದ ಪ್ರಚಾರಕರಾಗಿದ್ದಾರೆ.[]

ಅನಂತನಾಗ್ ಜನಿಸಿದ್ದು ಸೆಪ್ಟೆಂಬರ್ ೪, ೧೯೪೮ರಲ್ಲಿ. ಅಮ್ಮ ಆನಂದಿ, ತಂದೆ ಸದಾನಂದ ನಾಗರಕಟ್ಟೆ. ಪ್ರಾರಂಭಿಕ ಓದು ದಕ್ಷಿಣ ಕನ್ನಡದ ಆನಂದ ಆಶ್ರಮದಲ್ಲಿ. ಆ ನಂತರದಲ್ಲಿ ಉತ್ತರ ಕನ್ನಡದ ಚಿತ್ರಾಪುರ ಮಠದಲ್ಲಿ ನೆರವೇರಿತು. ಹೆಚ್ಚಿನ ಓದಿಗೆ ಮುಂಬೈನಲ್ಲಿ ನೆಲೆಸಿದ್ದ ಅನಂತ್, ಕನ್ನಡ, ಕೊಂಕಣಿ ಮತ್ತು ಮರಾಠಿ ರಂಗಭೂಮಿಗಳಲ್ಲಿ ಎಂಟು ವರ್ಷಗಳ ಕಾಲ ತೊಡಗಿಸಿಕೊಂಡರು. ಅನಂತನಾಗ್ ಅವರ ಸಹೋದರ ಶಂಕರನಾಗ್ ಮತ್ತು ಪತ್ನಿ ಗಾಯತ್ರಿ ಅನಂತನಾಗ್ ಅವರೂ ಸಹ ಖ್ಯಾತ ಚಿತ್ರ ಕಲಾವಿದರು. []

ನಟನಾಗಿ

[ಬದಲಾಯಿಸಿ]

ನಟನಾಗಿ ಅನಂತ್ ಅವರು ಕನ್ನಡ, ಹಿಂದಿ, ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸ್ಮರಣೀಯ ಪಾತ್ರಗಳಲ್ಲಿ ನಟಿಸಿದ್ದಾರೆ. []

ಶ್ಯಾಂ ಬೆನೆಗಲ್ ನಿರ್ದೇಶನದ ಹಿಂದಿ ಭಾಷೆಯ ‘ಅಂಕುರ್’ ಅನಂತ್ ಅವರ ಮೊದಲ ಚಿತ್ರ. ಮುಂದೆ "ನಿಶಾಂತ್", "ಕಲಿಯುಗ್", "ಗೆಹ್ರಾಯಿ", "ಭೂಮಿಕಾ", "ಮಂಗಳಸೂತ್ರ್", "ಕೊಂಡುರಾ" ಮತ್ತು "ರಾತ್" ಸೇರಿದಂತೆ ಹಲವಾರು ಹಿಂದಿ ಚಿತ್ರಗಳಲ್ಲಿ ಅನಂತ್ ನಟಿಸಿದ್ದಾರೆ.

ಮರಾಠಿಯ ಅಮೋಲ್ ಪಾಲೇಕರ್ ನಿರ್ದೇಶನದ ‘ಅನಾಹತ್’, ಮಲಯಾಳಂನ ‘ಸ್ವಾತಿ ತಿರುನಾಳ್’, ತೆಲುಗಿನ ‘ಅನುಗ್ರಹಂ’, ಇಂಗ್ಲಿಷಿನ ‘ಸ್ಟಂಬಲ್’ ಮುಂತಾದ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ

[ಬದಲಾಯಿಸಿ]

ಅನಂತನಾಗ್ ಅವರು ಕನ್ನಡ ಚಿತ್ರರಂಗಕ್ಕೆ ಬಂದದ್ದು ೧೯೭೩ರಲ್ಲಿ ಮೂಡಿಬಂದ ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ ಚಿತ್ರದಿಂದ. ‘ಸಂಕಲ್ಪ’ ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಅವರ ‘ಹಂಸಗೀತೆ’ ಚಿತ್ರದಲ್ಲಿ ಸಂಗೀತಗಾರ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿದರು. ೧೯೭೭ರ ದೊರೈ ಭಗವಾನರಬಯಲುದಾರಿ’ ಚಿತ್ರ ಜನಪ್ರಿಯವಾಯಿತು. ‘ಹಂಸಗೀತೆ’, ‘ಕನ್ನೇಶ್ವರ ರಾಮ’, ‘ಬರ’, ‘ಅವಸ್ಥೆ’, ‘ಉದ್ಭವ’, ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬೆಳದಿಂಗಳ ಬಾಲೆ’, ‘ಮತದಾನ’, ‘ಮೌನಿ’, ‘ಅನುರೂಪ’, ‘ರಾಮಾಪುರದ ರಾವಣ’, ‘ಸಿಂಹಾಸನ’, ‘ಅನ್ವೇಷಣೆ’, ‘ಮಾಲ್ಗುಡಿ ಡೇಸ್’ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.

ಅನಂತನಾಗ್ – ಲಕ್ಷ್ಮೀ ತಾರಾಜೋಡಿ ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದೆ. ಅವುಗಳಲ್ಲಿ ‘ಬೆಂಕಿಯ ಬಲೆ’, ‘ಚಂದನದ ಗೊಂಬೆ’, ‘ಇಬ್ಬನಿ ಕರಗಿತು’, ಮುದುಡಿದ ತಾವರೆ ಅರಳಿತು’, ‘ಮಕ್ಕಳಿರಲವ್ವ ಮನೆತುಂಬ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ನಾ ನಿನ್ನ ಬಿಡಲಾರೆ’, ‘ಧೈರ್ಯಲಕ್ಷ್ಮಿ’, ‘ಬಿಡುಗಡೆಯ ಬೇಡಿ’ ಮುಂತಾದ 25ಕ್ಕೂ ಹೆಚ್ಚಿನ ಚಿತ್ರಗಳಿವೆ.

ಅರುಣರಾಗ’, ‘ಅನುಪಮ’, ‘ಮುಳ್ಳಿನಗುಲಾಬಿ’, ‘ಹೊಸ ನೀರು’ , ‘ಬಾಡದ ಹೂ’, ‘ಜನ್ಮಜನ್ಮದ ಅನುಬಂಧ’, ಮುಂತಾದವು ಅನಂತ್ ಇತರ ನಟಿಯರೊಂದಿಗೆ ನಟಿಸಿದ ಪ್ರಮುಖ ಚಿತ್ರಗಳು. ನಾಯಕನಾಗಿ ಹಾಸ್ಯಪಾತ್ರಗಳಲ್ಲಿ ಯಶಸ್ವಿಯಾದ ಕನ್ನಡದ ನಟರಲ್ಲಿ ಅನಂತ್ ನಾಗ್ ಮೊದಲಿಗರು. ‘ಚಾಲೆಂಜ್ ಗೋಪಾಲಕೃಷ್ಣ’, ‘ಗೋಲ್ ಮಾಲ್ ರಾಧಾಕೃಷ್ಣ’, ‘ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳು’, ‘ಹೆಂಡ್ತೀಗ್ಹೇಳ್ಬೇಡಿ’, ‘ಗೌರಿ ಗಣೇಶ’, ‘ಗಣೇಶ ಸುಬ್ರಮಣ್ಯ’, ‘ಮನೇಲಿ ಇಲಿ ಬೀದೀಲಿ ಹುಲಿ’, ‘ಧೈರ್ಯಲಕ್ಷ್ಮಿ’, ‘ನಾರದ ವಿಜಯ’, ‘ಹಾಸ್ಯರತ್ನ ರಾಮಕೃಷ್ಣ’, ‘ಯಾರಿಗೂ ಹೇಳ್ಬೇಡಿ’, ‘ಗಾಯತ್ರಿ ಮದುವೆ’, ‘ಇನ್ನೊಂದು ಮದುವೆ’, ‘ಯಾರಿಗೆ ಸಾಲುತ್ತೆ ಸಂಬಳ’, ‘ಉಂಡು ಹೋದ ಕೊಂಡುಹೋದ’, ‘ಉದ್ಭವ’, ‘ಹೆಂಡ್ತಿ ಬೇಕು ಹೆಂಡ್ತಿ’, ‘ಸಮಯಕ್ಕೊಂದು ಸುಳ್ಳು’ ಸೇರಿದಂತೆ ಹಲವಾರು ಚಿತ್ರಗಳನ್ನು ಈ ಪಟ್ಟಿಗೆ ಸೇರಿದವು.

ಅನಂತ್ ನಾಗ್ ಅವರು ಇತರ ನಟರೊಂದಿಗೆ ನಟಿಸಿರುವ ಚಿತ್ರಗಳಲ್ಲಿ ರಾಜ್ ಕುಮಾರ್ ಜೊತೆಗಿನ ‘ಕಾಮನಬಿಲ್ಲು’,ವಿಷ್ಣುವರ್ಧನ್ ಜೊತೆಗಿನ ‘ನಿಷ್ಕರ್ಷ’, ‘ಮತ್ತೆ ಹಾಡಿತು ಕೋಗಿಲೆ’, ‘ಜೀವನದಿ’, ರವಿಚಂದ್ರನ್ ಅವರ ‘ರಣಧೀರ’, ಶಾಂತಿಕ್ರಾಂತಿ’ ಪ್ರಮುಖವಾದವು. ‘ಮುಂಗಾರುಮಳೆ’, ‘ಗಾಳಿಪಟ’ ಮುಂತಾದ ಚಿತ್ರಗಳಲ್ಲಿ ಅವರು ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಾರತದ ಜನಪ್ರಿಯ ಧಾರಾವಾಹಿಗಳಲ್ಲೊಂದಾದ, ಶಂಕರನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ಅಭಿನಯಿಸಿದ್ದಲ್ಲದೆ ಕನ್ನಡದಲ್ಲಿಯೂ ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ.

ರಾಜಕಾರಣಿಯಾಗಿ

[ಬದಲಾಯಿಸಿ]

ಬೆಂಗಳೂರಿನ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾದ ಅನಂತನಾಗ್, ನಂತರ ಜೆ.ಹೆಚ್.ಪಟೇಲ್ ಅವರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದರು.

ಚಿತ್ರಗಳ ಪಟ್ಟಿ

[ಬದಲಾಯಿಸಿ]

ಕನ್ನಡ ಚಿತ್ರಗಳು

[ಬದಲಾಯಿಸಿ]
ಸಂಖ್ಯೆ ವರ್ಷ ಚಿತ್ರದ ಹೆಸರು ಚಿತ್ರ ನಿರ್ಮಾಣ ಸಂಸ್ಥೆ ನಿರ್ದೇಶನ ನಿರ್ಮಾಪಕರು ಸಂಗೀತ ಛಾಯಗ್ರಹಣ
1973 ಸಂಕಲ್ಪ ಪಿ. ವಿ. ನಂಜರಾಜ್ ಅರಸ್ ಪಿ. ವಿ. ನಂಜರಾಜ್ ಅರಸ್
1975 ದೇವರ ಕಣ್ಣು ಭಗವತಿ ಪ್ರೊಡಕ್ಷನ್ಸ್ ವೈ.ಆರ್.ಸ್ವಾಮಿ ಎಸ್.ಎನ್.ಪಾಲ್ ಟಿ.ಜಿ.ಲಿಂಗಪ್ಪ ಚಿಟ್ಟಿಬಾಬು
1975 ಹಂಸಗೀತೆ ಅನಂತಲಕ್ಷ್ಮಿ ಫಿಲಂಸ್ ಜಿ.ವಿ.ಐಯ್ಯರ್ ಜಿ.ವಿ.ಐಯ್ಯರ್ ಬಾಲಮುರಳಿ ಕೃಷ್ಣ ನಿಮಾಯ್ ಘೋಶ್
1976 ಬಯಲು ದಾರಿ ಅನುಪಮ ಮೂವೀಸ್ ದೊರೈ-ಭಗವಾನ್ ದೊರೆ-ಭಗವಾನ್ ರಾಜನ್-ನಾಗೇಂದ್ರ
1977 ಕನ್ನೇಶ್ವರ ರಾಮ ಶಾರದ ಮೂವೀಸ್ ಎಂ.ಎಸ್.ಸತ್ಯು ಎಂ.ಭಕ್ತವತ್ಸಲ ಬಿ.ವಿ.ಕಾರಾಂತ್ ಇಶಾನ್ ಆರ್ಯ
1977 ಅನುರೂಪ ಲಂಕೇಶ್ ಫಿಲಂಸ್ ಲಂಕೇಶ್ ಪಿ.ಲಂಕೇಶ್ ರಾಜೀವ್ ತಾರನಾಥ್ ಬಿ.ಸಿ.ಗೌರಿಶಂಕರ್
1978 ಕುದುರೆಮುಖ ಶ್ರೀ ಭಗವತಿ ಪ್ರೊಡಕ್ಷನ್ಸ್ ವೈ.ಆರ್.ಸ್ವಾಮಿ ವೈ.ಆರ್.ಸ್ವಾಮಿ ಟಿ.ಜಿ.ಲಿಂಗಪ್ಪ ಆರ್.ಚಿಟ್ಟಿಬಾಬು
1978 ಮಾತು ತಪ್ಪದ ಮಗ ಭರತ ಸಿನಿ ಆರ್ಟ್ಸ್ ಪೇಕೇಟಿ ಶಿವರಾಂ ಕೆ.ಆರ್.ಬಲಾನಿ ಇಳಯರಾಜ ಜೆ.ಸತ್ಯನಾರಾಯಣ
1978 ಪ್ರೇಮಾಯಣ ರೂಪಯನ್ ಗೀತಪ್ರಿಯ ಎಂ.ಪ್ರಭಾಕರ್ ವಿಜಯಭಾಸ್ಕರ್ ಯು.ಎಮ್.ಎನ್.ಶರೀಫ್
೧೦ 1978 ಮಧುರ ಸಂಗಮ ಡಿ.ವಿ.ಆರ್.ಮೂವೀಸ್ ಟಿ.ಪಿ.ವೇಣುಗೋಪಾಲ್ ವಿ.ವಿಜಯಚಂದರ್ ರಾಜನ್-ನಾಗೇಂದ್ರ ಎಮ್.ಎ.ರೆಹಮಾನ್
೧೧ 1979 ನಾ ನಿನ್ನ ಬಿಡಲಾರೆ ಸಪ್ತಸ್ವರ ಮೂವಿ ಮೇಕರ್ಸ್ ವಿಜಯ್ ಸಿ.ಜಯರಾಮ್ ರಾಜನ್-ನಾಗೇಂದ್ರ ಎಸ್.ವಿ.ಶ್ರೀಕಾಂತ್
೧೨ ೧೯೭೯ ಮುತ್ತು ಒಂದು ಮುತ್ತು ಆರ್. ಎನ್. ಜಯಗೋಪಾಲ್ ಆರ್. ಎನ್. ಜಯಗೋಪಾಲ್
೧೩ 1979 ಚಂದನದ ಗೊಂಬೆ ಮಂತ್ರಾಲಯ ಆರ್ಟ್ ಮೂವೀಸ್ ದೊರೈ-ಭಗವಾನ್ ಎನ್.ಭಕ್ತವತ್ಸಲಂ ರಾಜನ್-ನಾಗೇಂದ್ರ
೧೪ 1980 ಮಿಂಚಿನ ಓಟ ಸಂಕೇತ್ ಶಂಕರನಾಗ್ ಅನಂತನಾಗ್ ಎಲ್.ವೈದ್ಯನಾಥನ್ ಬಿ.ಸಿ.ಗೌರಿಶಂಕರ್
೧೫ 1980 ಧೈರ್ಯ ಲಕ್ಷ್ಮಿ ವಿಜಯವಾಣಿ ಕಂಬೈನ್ಸ್ ಗೋಪು ಕೆ.ಎಸ್.ಅಶೋಕ್ ಜಿ.ಕೆ.ವೆಂಕಟೇಶ್ ಎಮ್.ಜಿ.ಬೆಂಜಮಿನ್
೧೬ 1980 ಒಂದು ಹೆಣ್ಣು ಆರು ಕಣ್ಣು ಮಹಿಜಾ ಫಿಲಂಸ್ ವಿ.ಮಧುಸೂದನರಾವ್ ಸಿ.ಹೆಚ್.ಪ್ರಕಾಶರಾವ್ ಎಸ್.ರಾಜೇಶ್ವರ ರಾವ್ ಎಸ್.ಎಸ್.ಲಾಲ್
೧೭ 1980 ನಾರದ ವಿಜಯ ಜೈನ್ ಕಂಬೈನ್ಸ್ ಸಿದ್ದಲಿಂಗಯ್ಯ ಎನ್.ವೀರಸ್ವಾಮಿ ಅಶ್ವತ್-ವೈದಿ ಆರ್.ಮಧುಸೂದನ್
೧೮ 1980 ಜನ್ಮ ಜನ್ಮದ ಅನುಬಂಧ ಪುಷ್ಪ ಪ್ರೊಡಕ್ಷನ್ಸ್ ಶಂಕರನಾಗ್ ಎನ್.ಭಕ್ತವತ್ಸಲಂ ಇಳಯರಾಜ ಬಿ.ಸಿ.ಗೌರಿಶಂಕರ್
೧೯ 1980 ಪ್ರೇಮಜ್ವಾಲೆ ತುಮಕೂರು ಚಿತ್ರಾಲಯ ಗೀತಪ್ರಿಯ ಸಿ.ಪಿ.ಮೂಡಲಗಿರಿಯಪ್ಪ ಎಮ್.ರಂಗರಾವ್ ಅಣ್ಣಯ್ಯ
೨೦ 1981 ಅನುಪಮ ವಿಜಯ ವಿನಾಯಕ ಮೂವಿ ಮೇಕರ್ಸ್ ರೇಣುಕಾಶರ್ಮ ಜೆ.ಜಯಮ್ಮ ಅಶ್ವತ್-ವೈದಿ
೨೧ 1981 ಮರೆಯದ ಹಾಡು ಕೆ.ವಿ.ಎಸ್.ಮೂವೀಸ್ ಆರ್.ಎನ್.ಜಯಗೋಪಾಲ್ ಕೆ.ವಿ.ಎಸ್.ಮೂವೀಸ್ ಜಿ.ಕೆ.ವೆಂಕಟೇಶ್ ಆರ್.ಎನ್.ಕೆ.ಪ್ರಸಾದ್
೨೨ 1981 ಶ್ರೀಮಾನ್ ಗುರುಕರ್ ಫಿಲಂಸ್ ಗೀತಪ್ರಿಯ ಮಂಜುಳ ಶಂಕರ್ ಉಪೇಂದ್ರಕುಮಾರ್ ಚಿಟ್ಟಿಬಾಬು
೨೩ 1982 ಅಂದದ ಅರಮನೆ ವರ್ಣಶ್ರೀ ಫಿಲಂಸ್ ವಿ.ಸೋಮಶೇಖರ್ ಪ್ರಮಿಳ ಶಂಕರ್ ಉಪೇಂದ್ರಕುಮಾರ್ ಬಿ.ಎಸ್.ಬಸವರಾಜ್
೨೪ 1982 ಬಾಡದ ಹೂವು ಕೆ.ಎಸ್.ಎನ್.ಮೂವೀಸ್ ಕೆ.ವಿ.ಜಯರಾಮ್ ಕೆ.ಎಸ್.ನಾರಾಯಣ್ ಅಶ್ವತ್-ವೈದಿ ಬಿ.ಎಸ್.ಬಸವರಾಜ್
೨೫ 1982 ಮುಳ್ಳಿನ ಗುಲಾಬಿ ನವದುರ್ಗ ಪ್ರೊಡಕ್ಷನ್ಸ್ ವಿಜಯ್ ವಿಜಯರೆಡ್ಡಿ ಸತ್ಯಂ ಸಾಯಿ ಪ್ರಸಾದ್
೨೬ 1982 ಬರ ಎಂ.ಎಸ್.ಸತ್ಯು ಪ್ರೊಡಕ್ಷನ್ಸ್ ಎಂ.ಎಸ್.ಸತ್ಯು ಎಂ.ಎಸ್.ಸತ್ಯು ಅಶೋಕ್ ಗುಂಜಾಲ್
೨೭ 1982 ನನ್ನ ದೇವರು ರಾಜೇಶ್ವರಿ ಭಾಗ್ಯ ಕಲಾಮಂದಿರ ಬಿ.ಮಲ್ಲೇಶ್ ಕೆ.ಎಸ್.ಅಶೋಕ್ ರಾಜನ್-ನಾಗೇಂದ್ರ ಗೌರಿಶಂಕರ್
೨೮ 1982 ಹಾಸ್ಯರತ್ನ ರಾಮಕೃಷ್ಣ ವರ್ಣ ಪ್ರೊಡಕ್ಷನ್ಸ್ ಬಿ.ಎಸ್.ರಂಗ ಬಿ.ಎಸ್.ರಂಗ ಟಿ.ಜಿ.ಲಿಂಗಪ್ಪ ಬಿ.ಎಸ್.ಹರಿದಾಸ್
೨೯ 1982 ಬೆತ್ತಲೆ ಸೇವೆ ಜನಪ್ರಿಯ ಮೂವೀಸ್ ಕೆ.ವಿ.ಜಯರಾಮ್ ಡಿ.ಟಿ.ಜಯಕುಮಾರ್ ರಾಜನ್-ನಾಗೇಂದ್ರ ಬಿ.ಸಿ.ಗೌರಿಶಂಕರ್
೩೦ 1983 ಸಿಂಹಾಸನ ಅಜಂತ ಕಂಬೈನ್ಸ್ ಸಿ.ಆರ್.ಸಿಂಹ ಎ.ಆರ್.ರಾಜು ಅಶ್ವತ್-ವೈದಿ ಎಸ್.ಯಾದವ್
೩೧ 1983 ಅನ್ವೇಷಣೆ ಸೌಮ್ಯ ಆರ್ಟ್ಸ್ ಟಿ.ಎಸ್.ನಾಗಾಭರಣ ರಾಜಾ ವಿಜಯಭಾಸ್ಕರ್ ಎಸ್.ರಾಮಚಂದ್ರ
೩೨ 1983 ಬೆಂಕಿಯ ಬಲೆ ಮಂತ್ರಾಲಯ ಆರ್ಟ್ಸ್ ಕಂಬೈನ್ಸ್ ದೊರೈ-ಭಗವಾನ್ ರಮೇಶ್ ರಾಜನ್-ನಾಗೇಂದ್ರ
೩೩ 1983 ಕಾಮನಬಿಲ್ಲು ಪದ್ಮಾವತಿ ಸಿನಿ ಆರ್ಟ್ಸ್ ಫಿಲಂಸ್ ಚಿ.ದತ್ತರಾಜ್ ಜೆ.ಜಯಮ್ಮ ಉಪೇಂದ್ರಕುಮಾರ್ ಬಿ.ಸಿ.ಗೌರಿಶಂಕರ್
೩೪ 1983 ಭಕ್ತಪ್ರಹ್ಲಾದ ವೈಷ್ಣವಿ ಮೂವೀಸ್ ವಿಜಯ್ ಎಸ್.ಎ.ಗೋವಿಂದರಾಜ್ ಟಿ.ಜಿ.ಲಿಂಗಪ್ಪ
೩೫ 1983 ಇಬ್ಬನಿ ಕರಗಿತು ವರಲಕ್ಷ್ಮಿ ಮೂವೀಸ್ ಕೆ.ವಿ.ಜಯರಾಮ್ ಮೋಹನ್ ರಾಜನ್-ನಾಗೇಂದ್ರ ಚಿಟ್ಟಿಬಾಬು
೩೫ 1983 ಮುದುಡಿದ ತಾವರೆ ಅರಳಿತು ಕಲಾನಿಕೇತನ್ ಕೆ.ವಿ.ಜಯರಾಮ್ ಹೆಚ್.ಎಸ್.ಅನಂತ ಎಮ್.ರಂಗರಾವ್ ಎಸ್.ರಾಮಚಂದ್ರ
೩೬ 1983 ಗಾಯತ್ರಿ ಮದುವೆ ಗಾಯತ್ರಿ ಆರ್ಟ್ಸ್ ಫಿಲಂಸ್ ಬಿ.ಮಲ್ಲೇಶ್ ಲಕ್ಷ್ಮಣ್ ರಾಜನ್-ನಾಗೇಂದ್ರ ಬಿ.ಸಿ.ಗೌರಿಶಂಕರ್
೩೭ 1983 ಮಕ್ಕಳೇ ದೇವರು ಬಾಲ ತ್ರಿಪುರ ಸುಂದರಿ ಕಂಬೈನ್ಸ್ ಆರ್.ಎನ್.ಜಯಗೋಪಾಲ್ ವೈ.ಯಶೋದಮ್ಮ ಸತ್ಯಂ ಪಿ.ಭಾಸ್ಕರರಾವ್
೩೮ 1983 ಚಲಿಸದ ಸಾಗರ ನವದುರ್ಗ ಪ್ರೊಡಕ್ಷನ್ಸ್ ವಿಜಯ್ ವಿಜಯರೆಡ್ಡಿ ಸತ್ಯಂ ಅಣ್ಣಯ್ಯ
೩೯ 1983 ನೋಡಿ ಸ್ವಾಮಿ ನಾವಿರೋದು ಹೀಗೆ ಗಾಯತ್ರಿ ಚಿತ್ರಾಲಯ ಶಂಕರನಾಗ್ ರಮೇಶ್ ಭಟ್ ಜಿ.ಕೆ.ವೆಂಕಟೇಶ್ ಕುಲಶೇಖರ್
೪೦ 1984 ಸುಖ ಸಂಸಾರಕ್ಕೆ ೧೨ ಸೂತ್ರಗಳು ರಾಜಾಚಂದ್ರ ಹೆಚ್.ಆರ್.ಪ್ರಭಾಕರ್ ಚಕ್ರವರ್ತಿ ಚಂಗಯ್ಯ
೪೧ 1984 ಪ್ರೇಮವೆ ಬಾಳಿನ ಬೆಳಕು ಭುವನೇಶ್ವರಿ ಆರ್ಟ್ಸ್ ಪ್ರೊಡಕ್ಷನ್ಸ್ ಎ.ವಿ.ಶೇಷಗಿರರಾವ್ ಅಂಕಲಗಿ ಬ್ರದರ್ಸ್ ಎಮ್.ರಂಗರಾವ್
೪೨ 1984 ಪ್ರೇಮಸಾಕ್ಷಿ ಪ್ರಭಾತ್ ಪಿಚ್ಚರ್ಸ್ ಮಲ್ಲೇಶ್ ಹೆಚ್.ವಿ.ನಾಗೇಂದ್ರಪ್ಪ ರಾಜನ್-ನಾಗೇಂದ್ರ ಬಿ.ಸಿ.ಗೌರಿಶಂಕರ್
೪೩ 1984 ರಾಮಾಪುರದ ರಾವಣ ಶ್ರೀ ದುರ್ಗಾಪರಮೇಶ್ವರಿ ಪ್ರೊಡಕ್ಷನ್ಸ್ ರಾಜಾಚಂದ್ರ ಸಿ.ಜಯರಾಮ್ ಉಪೇಂದ್ರಕುಮಾರ್ ಗೌರಿಶಂಕರ್
೪೪ 1984 ಒಲವೇ ಬದುಕು ದುರ್ಗ ದತ್ತ ಎಂಟರ್‌ಪ್ರೈಸಸ್ ಕೆ.ವಿ.ಜಯರಾಮ್ ಕೆ.ವಿ.ಜಯರಾಮ್ ಎಮ್.ರಂಗರಾವ್ ಎಸ್.ರಾಮಚಂದ್ರ
೪೫ 1984 ಆಕ್ಸಿಡೆಂಟ್ ಸಂಕೇತ್ ಶಂಕರನಾಗ್ ಸಂಕೇತ್ ಇಳಯರಾಜ ಶಂಕರ್
೪೬ 1984 ಮಕ್ಕಳಿರಲವ್ವ ಮನೆತುಂಬ ದುರ್ಗ ದತ್ತ ಎಂಟರ್‌ಪ್ರೈಸಸ್ ಟಿ.ಎಸ್.ನಾಗಾಭರಣ ಶಿವಾನಂದ್ ಸವಣೂರ್ ಜಿ.ಕೆ.ವೆಂಕಟೇಶ್ ಕುಲಶೇಖರ್
೪೭ 1985 ಬಿಡುಗಡೆಯ ಬೇಡಿ ಶ್ರೀ ಮಂತ್ರಾಲಯ ಎಂಟರ್‌ಪ್ರೈಸಸ್ ದೊರೈ-ಭಗವಾನ್ ರಮೇಶ್ ರಿಜ್ವಿ ರಾಜನ್-ನಾಗೇಂದ್ರ
೪೮ 1985 ಪರಮೇಶಿ ಪ್ರೇಮ ಪ್ರಸಂಗ ಗಾಯತ್ರಿ ಚಿತ್ರಾಲಯ ರಮೇಶ್ ಭಟ್ ರಮೇಶ್ ಭಟ್ ಜಿ.ಕೆ.ವೆಂಕಟೇಶ್ ಕುಲಶೇಖರ್
೪೯ 1985 ಶ್ವೇತಗುಲಾಬಿ ಜಯದುರ್ಗ ಕಂಬೈನ್ಸ್ ಕೆ.ವಿ.ಜಯರಾಮ್ ಕೆ.ವಿ.ಜಯರಾಮ್ ಕಲ್ಯಾಣ್ ವೆಂಕಟೇಶ್ ಎಸ್.ರಾಮಚಂದ್ರ
೫೦ 1985 ಹಾವು ಏಣಿಯಾಟ ಶ್ರೀ ಸಾಯಿ ಗುರು ಫಿಲಂಸ್ ವಿ.ಆರ್.ಕೆ.ಪ್ರಸಾದ್ ಎಂ.ಎಸ್.ಎಸ್.ಮೂರ್ತಿ ವಿಜಯಭಾಸ್ಕರ್ ಮಧು ಅಂಬಟ್
೫೧ 1985 ಸೇಡಿನ ಹಕ್ಕಿ ವರಲಕ್ಷ್ಮಿ ಮೂವೀಸ್ ದೊರೈ-ಭಗವಾನ್ ವರಲಕ್ಷ್ಮಿ ರಾಜನ್-ನಾಗೇಂದ್ರ ಚಿಟ್ಟಿಬಾಬು
೫೨ 1985 ಶಬ್ದಗಳು ಶ್ರೀ ಬಹದ್ದೂರ್ ಆರ್ಟ್ಸ್ ಸುರೇಶ್ ದಾವಣಗೆರೆ ಎಂ.ಸುರೇಶ್ ರಾಜನ್-ನಾಗೇಂದ್ರ ನಿಮಯ್ ಘೋಶ್
೫೩ 1985 ಹೆಂಡ್ತಿ ಬೇಕು ಹೆಂಡ್ತಿ ಪ್ರಭಾತ್ ಪಿಚ್ಚರ್ಸ್ ಅನಿಲ್ ಆನಂದ್ ಹೆಚ್.ವಿ.ನಾಗೇಂದ್ರಪ್ಪ ಎಮ್.ರಂಗರಾವ್ ದೇವಧರ್
೫೪ 1986 ಹೊಸ ನೀರು ಪಂಚಮ್ ಮೂವಿ ಮೇಕರ್ಸ್ ಕೆ.ವಿ.ಜಯರಾಮ್ ಕೆ.ಎಸ್.ಸಚಿದಾನಂದ್ ಜಿ.ಕೆ.ವೆಂಕಟೇಶ್ ಬಿ.ಎಸ್.ಬಸವರಾಜ್
೫೫ 1986 ನೆನಪಿನ ದೋಣಿ ಸಂತೋಷ್ ಕಂಬೈನ್ಸ್ ಟಿ.ಎಸ್.ನಾಗಾಭರಣ ವಿ.ವರ್ಗೀಸ್ ವಿಜಯಭಾಸ್ಕರ್ ಬಿ.ಸಿ.ಗೌರಿಶಂಕರ್
೫೬ 1986 ಅರುಣರಾಗ ಜಯದುರ್ಗ ಫಿಲಂಸ್ ಕೆ.ವಿ.ಜಯರಾಮ್ ಮೀನಾಕ್ಷಿ ಜಯರಾಮ್ ಎಮ್.ರಂಗರಾವ್ ಮಾಪಾಕ್ಷಿ
೫೭ 1986 ಮನೆಯೇ ಮಂತ್ರಾಲಯ ರೋಹಿಣಿ ಪಿಚ್ಚರ್ಸ್ ಭಾರ್ಗವ ರೋಹಿಣಿ ಪಿಚ್ಚರ್ಸ್ ಎಮ್.ರಂಗರಾವ್ ಡಿ.ವಿ.ರಾಜಾರಾಮ್
೫೮ 1987 ತಾಯಿ ಪ್ರಗತಿ ಎಂಟರ್‌ಪ್ರೈಸಸ್ ಪೇರಾಲ ಕೆ.ಸಿ.ಎನ್.ಚಂದ್ರ ಸತ್ಯಂ ಸುಂದರನಾಥ್ ಸುವರ್ಣ
೫೯ 1987 ಅಗ್ನಿಪರ್ವ ಶ್ರೀ ತುಳಸಿ ಪ್ರೊಡಕ್ಷನ್ಸ್ ಕೆ.ಸುಂದರನಾಥ ಸುವರ್ಣ ಸುಂದರನಾಥ್ ಸುವರ್ಣ ವೈದ್ಯನಾಥನ್ ಸುಂದರನಾಥ್ ಸುವರ್ಣ
೬೦ 1987 ಅವಸ್ಥೆ ಚಿಗುರು ಮೂವೀಸ್ ಕೃಷ್ಣ ಮಸಡಿ ಮಹಿಮಾ ಪಟೇಲ್ ವಿಜಯಭಾಸ್ಕರ್ ಎಸ್.ರಾಮಚಂದ್ರ
೬೧ 1987 ಕುರುಕ್ಷೇತ್ರ ರೋಹಿಣಿ ಪಿಚ್ಚರ್ಸ್ ಭಾರ್ಗವ ಅನುರಾಧ ಎಮ್.ರಂಗರಾವ್ ಆರ್.ಮಧುಸೂದನ್
೬೨ 1987 ಅತಿರಥ ಮಹಾರಥ ಜ್ಯೋತಿ ಆರ್ಟ್ ಮೂವೀಸ್ ಪೇರಾಲ ಭೀಮವರಪು ಚಕ್ರವರ್ತಿ ಕಬೀರ್ ಲಾಲ್
೬೩ 1987 ದೈವಶಕ್ತಿ ಎ.ಎನ್.ಎಸ್.ಪ್ರೊಡಕ್ಷನ್ಸ್ ರೇಣುಕಾಶರ್ಮ ಬಿ.ಎನ್.ಗಂಗಾಧರ್ ಹಂಸಲೇಖ ಪ್ರಸಾದ್ ಬಾಬು
೬೪ 1988 ಬ್ರಹ್ಮ ವಿಷ್ಣು ಮಹೇಶ್ವರ ರೋಹಿಣಿ ಪಿಚ್ಚರ್ಸ್ ರಾಜಾಚಂದ್ರ ಅಮ್ರತ್ ಸಿಂಗ್ ವಿಜಯಾನಂದ್
೬೫ 1988 ರಣಧೀರ ಈಶ್ವರಿ ಪ್ರೊಡಕ್ಷನ್ಸ್ ವಿ.ರವಿಚಂದ್ರನ್ ವಿ.ರವಿಚಂದ್ರನ್ ಹಂಸಲೇಖ ಆರ್.ಮಧುಸೂದನ್
೬೬ 1988 ಶಾಂತಿನಿವಾಸ ವಿಜಯ ಸಿನಿ ಪ್ರೊಡಕ್ಷನ್ಸ್ ಭಾರ್ಗವ ಆರ್.ಎಫ್.ಮಾಣಿಕ್ ಚಂದ್ ಎಮ್.ರಂಗರಾವ್ ಡಿ.ವಿ.ರಾಜಾರಾಮ್
೬೭ 1988 ವರ್ಣಚಕ್ರ ನಾಗೇಶ್ ಇಂಟರ್ನಾಷನಲ್ ಕೆ.ವಿ.ಜಯರಾಮ್ ಕೆ.ಟಿ.ವೆಂಕಟಗಿರಿ ಕಲ್ಯಾಣ್ ವೆಂಕಟೇಶ್ ಎಸ್.ರಾಮಚಂದ್ರ
೬೮ 1988 ಶ್ರೀ.ವೆಂಕಟೇಶ್ವರ ಮಹಿಮೆ ಎಸ್.ಆರ್.ಸಿನಿ ಅಸೋಷಿಯೇಟ್ಸ್ ಅನಿಲ್ ಬೈಂದೂರು ಎಸ್.ಆರ್.ಸಿನಿ ಎಮ್.ಎಸ್.ವಿಶ್ವನಾಥನ್ ಬಿ.ಎಸ್.ಬಸವರಾಜ್
೬೯ 1988 ಬಾಳೊಂದು ಭಾವಗೀತೆ ವಿಜಯೇಶ್ವರಿ ಗೀತಪ್ರಿಯ ಗೀತ ಶ್ರೀನಾಥ್ ಹಂಸಲೇಖ ಬಿ.ಎನ್.ಹರಿದಾಸ್
೭೦ 1988 ಮುತ್ತೈದೆ ಚಿತ್ರ ಪ್ರೊಡಕ್ಷನ್ಸ್ ರೇಣುಕಾಶರ್ಮ ಕೆ.ಚಿದಂಬರಶೆಟ್ಟಿ ಎಮ್.ರಂಗರಾವ್ ವಿ.ಪ್ರಭಾಕರ್
೭೧ 1989 ಅಮಾನುಷ ಪೃಥ್ವಿ ಕ್ರಿಯೇಷನ್ಸ್ ನಂಜುಂಡೇಗೌಡ ಪಾಂಡುರಂಗವಿಠಲ ಹಂಸಲೇಖ ಸುಂದರನಾಥ್ ಸುವರ್ಣ
೭೨ 1989 ಹೆಂಡ್ತಿಗೇಳ್ಬೇಡಿ ರಕ್ಷಿತಾ ಫಿಲಂಸ್ ದಿನೇಶ್ ಬಾಬು ಶೋಭಪ್ರಕಾಶ್ ವಿಜಯಾನಂದ್ ದಿನೇಶ್ ಬಾಬು
೭೩ 1989 ಇದು ಸಾಧ್ಯ ಜೈನ್ ಮೂವೀಸ್ ದಿನೇಶ್ ಬಾಬು ದಿನೇಶ್ ಬಾಬು ವಿಜಯಾನಂದ್ ದಿನೇಶ್ ಬಾಬು
೭೪ 1989 ಗಗನ ರವಿಕಿರಣ್ ಕಂಬೈನ್ಸ್ ದೊರೈ-ಭಗವಾನ್ ಎಸ್.ಆರ್.ಕೃಷ್ಣನ್ ರಾಜನ್-ನಾಗೇಂದ್ರ ಕೃಷ್ಣ
೭೫ 1990 ಗೋಲ್‍ಮಾಲ್ ರಾಧಾಕೃಷ್ಣ ಚಿತ್ರ ಪ್ರೊಡಕ್ಷನ್ಸ್ ಸಾಯಿಪ್ರಕಾಶ್ ಕೆ.ಚಿದಂಬರಶೆಟ್ಟಿ ಎಮ್.ರಂಗರಾವ್ ಜೆ.ಜಿ.ಕೃಷ್ಣ
೭೬ 1990 ರಾಮರಾಜ್ಯದಲ್ಲಿ ರಾಕ್ಷಸರು ಪ್ರಗತಿ ಎಂಟರ್‌ಪ್ರೈಸಸ್ ಡಿ.ರಾಜೇಂದ್ರಬಾಬು ಕೆ.ಸಿ.ಎನ್.ಮೋಹನ್ ಎಮ್.ರಂಗರಾವ್ ಬಿ.ಎಸ್.ಬಸವರಾಜ್
೭೭ 1990 ಸ್ವರ್ಣ ಸಂಸಾರ ಶ್ರೀ ದೇವಿ ಪಿಚ್ಚರ್ಸ್ ಸಾಯಿಪ್ರಕಾಶ್ ಸಾಯಿಪ್ರಕಾಶ್ ಉಪೇಂದ್ರಕುಮಾರ್ ಕೃಷ್ಣ
೭೮ 1990 ಚಾಲೆಂಜ್ ಗೋಪಾಲಕೃಷ್ಣ ಚಿತ್ರ ಪ್ರೊಡಕ್ಷನ್ಸ್ ಸಾಯಿಪ್ರಕಾಶ್ ಕೆ.ಚಿದಂಬರಶೆಟ್ಟಿ ಉಪೇಂದ್ರಕುಮಾರ್ ಆರ್.ಎನ್.ಕೆ.ಪ್ರಸಾದ್
೭೯ 1990 ಉದ್ಭವ ಸ್ಪಂದನ ಕ್ರಿಯೇಷನ್ಸ್ ಕೋಡ್ಲು ರಾಮಕೃಷ್ಣ ಕೋಡ್ಲು ರಾಮಕೃಷ್ಣ ಮೈಸೂರು ಗೋಪಿ ಬಿ.ಎಸ್.ಬಸವರಾಜ್
೮೦ 1990 ಅಭಿಮನ್ಯು ಶ್ರೀ ಸುದರ್ಶನ್ ಪ್ರೊಡಕ್ಷನ್ಸ್ ರವಿರಾಜ ಬಾಬು ಹಂಸಲೇಖ ಲೋಕಸಿಂಗ್
೮೧ 1990 ಮತ್ತೆ ಹಾಡಿತು ಕೋಗಿಲೆ ಶ್ರೀ ಶಂಕರಿ ಪ್ರೊಡಕ್ಷನ್ಸ್ ಭಾರ್ಗವ ಎಸ್.ಶಂಕರ್ ರಾಜನ್-ನಾಗೇಂದ್ರ ಡಿ.ವಿ.ರಾಜಾರಾಮ್
೮೨ 1990 ಅನಂತ ಪ್ರೇಮ ನೂರ್ ಜಹಾನ್ ಫಿಲಂಸ್ ಜನಾರ್ಧನ್ ನೂರ್ ಜಹಾನ್ ಹಂಸಲೇಖ ಟಿ.ಜನಾರ್ಧನ್
೮೩ 1990 ಗಣೇಶನ ಮದುವೆ ಕಲಾಪ್ರಿಯ ಫಣಿರಾಮಚಂದ್ರ ಪದ್ಮ ಸುದೀಂದ್ರ ರಾಜನ್-ನಾಗೇಂದ್ರ ಆರ್.ಮಂಜುನಾಥ್
೮೪ 1990 ಇವಳೆಂಥಾ ಹೆಂಡ್ತಿ ರೋಹನ್ ಫಿಲಂ ಕಂಬೈನ್ಸ್ ಮುದ್ದುರಾಜ್ ಶ್ಯಾಮ್ ಎನ್.ಶೆಟ್ಟಿ ಉಪೇಂದ್ರಕುಮಾರ್ ಶ್ರೀರಂಗ
೮೫ 1991 ಮನೇಲಿ ಇಲಿ ಬೀದೀಲಿ ಹುಲಿ ಮಂತ್ರಾಲಯ ಎಂಟರ್‌ಪ್ರೈಸಸ್ ಸಾಯಿಪ್ರಕಾಶ್ ಬಿ.ಹೆಚ್.ಬುಚ್ಚಿರೆಡ್ಡಿ ಶಂಕರ್-ಗಣೇಶ್ ಜಾನಿಲಾಲ್
೮೬ 1991 ಗೋಲ್‍ಮಾಲ್ ಭಾಗ-೨ ಬಿ.ಆರ್.ಪ್ರೊಡಕ್ಷನ್ಸ್ ಸಾಯಿಪ್ರಕಾಶ್ ಕೆ.ಎಸ್.ರಾಮನ್ ಉಪೇಂದ್ರಕುಮಾರ್ ಕಬೀರ್ ಲಾಲ್
೮೭ 1991 ರೋಲ್‌ಕಾಲ್ ರಾಮಕೃಷ್ಣ ಸಂಮೃದ್ದ ಎಂಟರ್‌ಪ್ರೈಸಸ್ ಬಿ.ರಾಮಮೂರ್ತಿ ಎಸ್.ಆರ್.ರಾಜೇಶ್ವರಿ ಉಪೇಂದ್ರಕುಮಾರ್ ಕೃಷ್ಣ
೮೮ 1991 ಗೌರಿ ಗಣೇಶ ಕಲಾಸಿಂಧು ಫಣಿರಾಮಚಂದ್ರ ಜಿ.ವಿಶ್ವನಾಥ ರಾಜನ್-ನಾಗೇಂದ್ರ ಆರ್.ಮಂಜುನಾಥ್
೮೯ 1991 ಹೊಸಮನೆ ಅಳಿಯ ಯಶಸ್ವಿ ಎಂಟರ್‌ಪ್ರೈಸಸ್ ಬಿ.ರಾಮಮೂರ್ತಿ ಪುಷ್ಪ ಎಸ್.ಮೂರ್ತಿ ಮನೋರಂಜನ್ ಪ್ರಭಾಕರ್ ಬಿ.ಎಸ್.ಶಾಸ್ತ್ರಿ
೯೦ 1991 ನಾಗಿಣಿ ಶ್ರೀ ಲಕ್ಷ್ಮಿ ಪ್ರೊಡಕ್ಷನ್ಸ್ ಶ್ರೀಪ್ರಿಯ ಬಿ.ಎನ್.ಗಂಗಾಧರ್ ಶಂಕರ್-ಗಣೇಶ್ ಪ್ರಸಾದ್ ಬಾಬು
೯೧ 1992 ಉಂಡು ಹೋದ ಕೊಂಡು ಹೋದ ಪದ್ಮಾಂಬ ಕಂಬೈನ್ಸ್ ನಾಗತಿಹಳ್ಳಿ ಚಂದ್ರಶೇಖರ್ ಜಿ.ಕುಮಾರಸ್ವಾಮಿ ವಿಜಯಭಾಸ್ಕರ್ ಎಸ್.ರಾಮಚಂದ್ರ
೯೨ 1992 ವಜ್ರಾಯುಧ ಸಂಮೃದ್ದ ಎಂಟರ್‌ಪ್ರೈಸಸ್ ಬಿ.ರಾಮಮೂರ್ತಿ ಎಸ್.ಆರ್.ರಾಜೇಶ್ವರಿ ಹಂಸಲೇಖ ವಿ.ಕೆ.ಕಣ್ಣನ್
೯೩ 1992 ಗಣೇಶ ಸುಬ್ರಹ್ಮಣ್ಯ ಕಲಾಪ್ರೇಮಿ ಫಣಿರಾಮಚಂದ್ರ ವಿಶ್ವಸಾಗರ್ ವಿ.ಮನೋಹರ್ ಆರ್.ಮಂಜುನಾಥ್
೯೪ 1992 ಒಂದು ಸಿನಿಮಾ ಕಥೆ ಗಾಯತ್ರಿ ಸಿನಿ ಕ್ರಿಯೇಷನ್ಸ್ ಫಣಿರಾಮಚಂದ್ರ ಕೃಷ್ಣ ರಾಜನ್-ನಾಗೇಂದ್ರ ಬಿ.ಎಸ್.ಸಿಂಗ್
೯೫ 1992 ಶಕ್ತಿ ಯುಕ್ತಿ ಸಿ.ಕೆ.ಪ್ರೊಡಕ್ಷನ್ಸ್ ಬಿ.ರಾಮಮೂರ್ತಿ ಎಲ್.ಎನ್.ಚಕ್ರವರ್ತಿ ಮನೋರಂಜನ್ ಪ್ರಭಾಕರ್ ಬಿ.ಎಸ್.ಶಾಸ್ತ್ರಿ
೯೬ 1992 ಮರಣ ಮೃದಂಗ ಶ್ರೀ ಚಿತ್ರ ಕ್ರಿಯೇಷನ್ಸ್ ಬಿ.ರಾಮಮೂರ್ತಿ ಕೆ.ಚಿದಂಬರಶೆಟ್ಟಿ ಹಂಸಲೇಖ ಮಲ್ಲಿಕಾರ್ಜುನ್
೯೭ 1992 ಝೇಂಕಾರ ತ್ರೀಮೂರ್ತಿ ಎಂಟರ್‌ಪ್ರೈಸಸ್ ರಘುರಾಮ್ ದಿನೇಶ್ ಪಟೇಲ್ ಹಂಸಲೇಖ ಜೆ.ರಾಬರ್ಟ್
೯೮ 1993 ರಾಜಕೀಯ ಮುತ್ಯಾಲಮ್ಮನ್ ಕ್ರಿಯೇಷನ್ಸ್ ಶಿವಮಣಿ ಪಿ.ಪಿ.ವರದರಾಜನ್ ಹಂಸಲೇಖ ಸುಂದರನಾಥ್ ಸುವರ್ಣ
೯೯ 1993 ಆತಂಕ ಎಸ್.ಎಸ್.ಪ್ರೊಡಕ್ಷನ್ಸ್ ಸಾಯಿಪ್ರಕಾಶ್ ಶಾರದ ಶಾಸ್ತ್ರಿ ಹಂಸಲೇಖ ಜಾನಿಲಾಲ್
೧೦೦ 1993 ಮಾಂಗಲ್ಯ ಬಂಧನ ಅನುಪಮ ಆರ್ಟ್ಸ್ ದೊರೈ-ಭಗವಾನ್ ಎಸ್.ಕೆ.ಭಗವಾನ್ ಹಂಸಲೇಖ ಜೆ.ಜಿ.ಕೃಷ್ಣ
೧೦೧ 1993 ಕಾದಂಬರಿ ಕಲಸಂಗಮ ಕೋಡ್ಲು ರಾಮಕೃಷ್ಣ ಸಾವಿತ್ರಿ ಹಂಸಲೇಖ ಎಸ್.ರಾಮಚಂದ್ರ
೧೦೨ 1993 ನಿಷ್ಕರ್ಷ ಸೃಷ್ಟಿ ಫಿಲಂಸ್ ಸುನಿಲ್ ಕುಮಾರ್ ದೇಸಾಯಿ ದೊಡ್ಡಬಸವನ ಗುಣಸಿಂಗ್ ಪಿ.ರಾಜನ್
೧೦೩ 1994 ತೂಗುವೆ ಕೃಷ್ಣನ ಗಾಯತ್ರಿ ಸಿನಿ ಕ್ರಿಯೇಷನ್ಸ್ ವಸಂತ ಕುಣಿಗಲ್ ಬಿ.ಎಸ್.ಕೃಷ್ಣ ಮನೋರಂಜನ್ ಪ್ರಭಾಕರ್ ಬಿ.ಸತ್ಯನಾರಾಯಣ
೧೦೪ 1994 ಯಾರಿಗೂ ಹೇಳ್ಬೇಡಿ ಶ್ರೀ ಬನಶಂಕರಿ ಕಂಬೈನ್ಸ್ ಕೋಡ್ಲು ರಾಮಕೃಷ್ಣ ಆಶ ಗುಣಶೇಖರ್ ರಾಜನ್-ನಾಗೇಂದ್ರ ಎಸ್.ರಾಮಚಂದ್ರ
೧೦೫ 1995 ಬೆಳದಿಂಗಳ ಬಾಲೆ ಸಹನ ಪ್ರೊಡಕ್ಷನ್ಸ್ ಸುನಿಲ್ ಕುಮಾರ್ ದೇಸಾಯಿ ಬಿ.ಎಸ್.ಮುರಳಿ ಗುಣಸಿಂಗ್ ಪಿ.ರಾಜನ್
೧೦೬ 1995 ನಿಲುಕದ ನಕ್ಷತ್ರ ಮುಕ್ತ ಮೂವೀಸ್ ಕೋಡ್ಲು ರಾಮಕೃಷ್ಣ ಎಸ್.ನಾಗರಾಜ್ ಸಂಗೀತ ರಾಜ ಎಸ್.ರಾಮಚಂದ್ರ
೧೦೭ 1996 ಸಮಕ್ಕೊಂದು ಸುಳ್ಳು ಬಿ.ಆರ್.ಪ್ರೊಡಕ್ಷನ್ಸ್ ಸಾಯಿಪ್ರಕಾಶ್ ಕೆ.ಎಸ್.ರಾಮನ್ ಉಪೇಂದ್ರಕುಮಾರ್ ಭಾಷಲಾಲ್
೧೦೮ 1996 ತಾಳಿ ಪೂಜೆ ವಿಷ್ಣು ಪ್ರೊಡಕ್ಷನ್ಸ್ ವಿ.ಚಂದ್ರಹಾಸ ಎಸ್.ಎಸ್.ಹೆಗ್ಡೆ ಹಂಸಲೇಖ ಸಿ.ಡಿ.ರಾಜು
೧೦೯ 1996 ನಿರ್ಬಂಧ ಸೃಷ್ಟಿ ಫಿಲಂಸ್ ಹೆಚ್.ಎಸ್.ರಾಜಶೇಖರ್ ದೊಡ್ಡಗೌಡ ಪಾಟೀಲ್ ರಾಜೇಶ್ ರಾಮನಾಥ್ ಸುಂದರನಾಥ್ ಸುವರ್ಣ
೧೧೦ 1996 ಜೀವನದಿ ಶ್ರೀ ಧನಲಕ್ಷ್ಮಿ ಕ್ರಿಯೇಷನ್ಸ್ ಡಿ.ರಾಜೇಂದ್ರಬಾಬು ಪಿ.ಧನರಾಜ್ ಕೋಟಿ ಪ್ರಸಾದ್ ಬಾಬು
೧೧೧ 1997 ಗಣೇಶ ಐ ಲವ್ ಯು ಜಿ.ಆರ್.ಕೆ.ಕ್ರಿಯೇಷನ್ಸ್ ಹೆಚ್.ಎಸ್.ಫಣಿರಾಮಚಂದ್ರ ಜಿ.ಆರ್.ಕೆ.ಕ್ರಿಯೇಷನ್ಸ್ ರಾಜೇಶ್ ರಾಮನಾಥ್ ಆರ್.ಮಂಜುನಾಥ್
೧೧೨ 1999 ವಿಶ್ವ ಶಿವಮಣಿ ಪಿ.ಧನರಾಜ್ ಹಂಸಲೇಖ ರಮೇಶ್ ಬಾಬು
೧೧೩ 1999 ನಾನೇನು ಮಾಡಿಲ್ಲ ದಿನೇಶ್ ಬಾಬು ಎನ್.ಚಂದ್ರಕುಮಾರ್ ಕೆ.ಕಲ್ಯಾಣ್ ಪಿ.ಕೆ.ಹೆಚ್.ದಾಸ್
೧೧೪ 2000 ಟೈಗರ್ ಪದ್ಮಿನಿ ರೇಣುಕ ಮೂವೀಸ್ ಬಿ.ಮಲ್ಲೇಶ್ ರೇಣುಕಾದೇವಿ ಹಂಸಲೇಖ ಕಣ್ಣನ್
೧೧೫ 2000 ಚಾಮುಂಡಿ ರಾಮು ಎಂಟರ್‌ಪ್ರೈಸಸ್ ಎ.ಮೋಹನ್ ಗಾಂಧಿ ರಾಮು ಹಂಸಲೇಖ ಪ್ರತಾಪ್
೧೧೬ 2000 ಕೃಷ್ಣಲೀಲಾ ರಾಕ್‌ಲೈನ್ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ರಾಕಲೈನ್ ವೆಂಕಟೇಶ್ ವಿ.ಮನೋಹರ್ ಬಿ.ಸಿ.ಗೌರಿಶಂಕರ್
೧೧೭ 2000 ನನ್ನ್ ಹೆಂಡ್ತಿ ಚೆನ್ನಾಗಿದ್ದಾಳೆ ಭವಾನಿ ಫಿಲಂಸ್ ದಿನೇಶ್ ಬಾಬು ದಿನೇಶ್ ಬಾಬು ರಾಜೇಶ್ ರಾಮನಾಥ್ ಪಿ.ಕೆ.ಹೆಚ್.ದಾಸ್
೧೧೮ 2000 ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಶ್ರೀ ಮಂಜುನಾಥ ಎಂಟರ್‌ಪ್ರೈಸಸ್ ಕೋಡ್ಲು ರಾಮಕೃಷ್ಣ ಕೆ.ಟಿ.ವೀರೇಶ್ ಸಾಧುಕೋಕಿಲ ಸುಂದರನಾಥ್ ಸುವರ್ಣ
೧೧೯ 2001 ಮತದಾನ ಟಿ.ಎನ್.ಸೀತಾರಾಮ್ ಸಿ.ಅಶ್ವತ್, ವಿ.ಮನೋಹರ್
೧೨೦ 2001 ಕುರಿಗಳು ಸಾರ್ ಕುರಿಗಳು ಎಸ್.ವಿ.ರಾಜೇಂದ್ರಸಿಂಗ್ ಬಾಬು
೧೨೧ 2001 ಅಸುರ ಎಸ್.ಮಹೇಂದರ್ ಗುರುಕಿರಣ್
೧೨೨ 2001 ಆಂಟಿಪ್ರೀತ್ಸೆ ಹೆಚ್.ವಾಸು ಮುನಿರತ್ನ ಚೈತನ್ಯ (ಎಲ್.ಎನ್.ಶಾಸ್ತ್ರಿ)
೧೨೩ 2001 ಚಿತ್ರ ಉಷಾಕಿರಣ್ ಮೂವೀಸ್ ದಿನೇಶ್ ಬಾಬು ರಾಮೋಜಿ ರಾವ್ ಗುರುಕಿರಣ್ ಪಿ.ಆರ್.ಸೌಂದರ್ ರಾಜ್
೧೨೪ 2001 ಅಮ್ಮ ಶ್ರೀ ಸಂಗಮೇಶ್ವರ ಪ್ರೊಡಕ್ಷನ್ಸ್ ಡಿ.ರಾಜೇಂದ್ರಬಾಬು ಕೆ.ವೆಂಕಟೇಶ್, ಎಸ್.ಸಿ.ಅಂಬರೀಶ್ ಎಮ್.ಎಮ್.ಕೀರವಾಣಿ ಪ್ರಸಾದ್ ಬಾಬು
೧೨೫ 2001 ನೀಲ ದೃಷ್ಟಿ ಸೃಷ್ಟಿ ಟಿ.ಎಸ್.ನಾಗಾಭರಣ ಡಾ.ಅಜಯಕುಮಾರ್, ಟಿ.ಎಸ್.ನಾಗಾಭರಣ ವಿಜಯಭಾಸ್ಕರ್ ಜಿ.ಎಸ್.ಭಾಸ್ಕರ್
೧೨೬ 2002 ಭೂತಯ್ಯನ ಮಕ್ಕಳು ಶ್ರೀ ರಾಜಮಾತ ಪ್ರೊಡಕ್ಷನ್ಸ್ ಜಿ.ಕೆ.ಮುದ್ದುರಾಜ್ ಆರ್.ಗಿರಿ
೧೨೭ 2002 ಮನಸೇ ಓ ಮನಸೇ ಎಂ.ಎಸ್.ರಾಜಶೇಖರ್ ರಾಮೋಜಿ ರಾವ್ ವಿ.ಮನೋಹರ್ ಪ್ರಸಾದ್ ಬಾಬು
೧೨೮ 2002 ನಾನು ನಾನೇ ಡಿ.ರಾಜೇಂದ್ರಬಾಬು ಮಡಿಕೊಂಡ ಮುರಳಿಕೃಷ್ಣ ದೇವ ಪ್ರಸಾದ್ ಬಾಬು
೧೨೯ 2002 ಹಾಲಿವುಡ್ ರಾಮು ಎಂಟರ್‌ಪ್ರೈಸಸ್ ದಿನೇಶ್ ಬಾಬು ರಾಮು ಗುರುಕಿರಣ್ ಪಿ.ಕೆ.ಹೆಚ್.ದಾಸ್
೧೩೦ 2003 ಆನಂದ ಉಷಾಕಿರಣ್ ಮೂವೀಸ್ ಮುಳ್ಳಪೂಡಿ ರಾಮೋಜಿ ರಾವ್ ರಾಜೇಶ್ ರಾಮನಾಥ್ ಪಿ.ಕೆ.ಹೆಚ್.ದಾಸ್
೧೩೧ 2003 ಬೆಂಗಳೂರು ಬಂದ್ ಓಂ ಶಕ್ತಿ ಸಿನಿ ಕಂಬೈನ್ಸ್ ತೇಸಿ ವೆಂಕಟೇಶ್ ಎಂ.ವೆಂಕಟೇಶ್, ಆರ್.ಮಂಜುನಾಥ್, ಹಂಸಲೇಖ
೧೩೨ 2003 ಲಂಕೇಶ್ ಪತ್ರಿಕೆ ಲಕ್ಷ್ಮಿಶ್ರೀ ಕಂಬೈನ್ಸ್ ಇಂದ್ರಜಿತ್ ಲಂಕೇಶ್ ಕೆ.ಮಂಜು ಬಬ್ಡಿ ಸುಂದರನಾಥ್ ಸುವರ್ಣ
೧೩೩ 2003 ಪ್ರೀತಿ ಪ್ರೇಮ ಪ್ರಣಯ ಇಂಡೋ-ಹಾಲಿವುಡ್ ಫಿಲಂಸ್ ಕವಿತಾ ಲಂಕೇಶ್ ಮನೋಮೂರ್ತಿ, ರಾಮಪ್ರಸಾದ್, ಸೋಮಶೇಖರ್, ಮನೋಮೂರ್ತಿ
೧೩೪ 2003 ಖುಷಿ ಶ್ರೀ ಜೈಮಾತ ಕಂಬೈನ್ಸ್ ಪ್ರಕಾಶ್ ಜೆ.ಜಯಮ್ಮ ಗುರುಕಿರಣ್ ಹೆಚ್.ಸಿ.ಸುರೇಶ್
೧೩೫ 2004 ಸಾಗರಿ ಸ್ನೇಹ ಎಂಟರ್‌ಪ್ರೈಸಸ್ ವಿಕ್ಟರಿ ವಾಸು ಸಂಜಯ್ ಸಾಧುಕೋಕಿಲ ಸಿ.ಡಿ.ರಾಜು
೧೩೬ 2004 ಬಿಡಲಾರೆ ಶ್ರೀ ಶಕ್ತಿ ಪ್ರೊಡಕ್ಷನ್ಸ್ ರಮಣ ಆರ್.ಎಫ್.ಮಾಣಿಕ್ ಚಂದ್, ಕೆ.ಪಿ.ಪ್ರಭುಶಂಕರ್ ಇಂದ್ರ ಸತೀಶ್ ಬಾಬು
೧೩೭ 2004 ಪಕ್ಕದಮನೆ ಹುಡುಗಿ ಶಿವಕುಮಾರ್ ಪ್ರೊಡಕ್ಷನ್ಸ್ ಎಂ.ಎಸ್.ರಾಜಶೇಖರ್ ರಾಜೇಶ್ ರಾಮನಾಥ್
೧೩೮ 2005 ನೆನಪಿರಲಿ ಕಲ್ಪನ ಶಕ್ತಿ ರತ್ನಜ ಅಜಯ್ ಆರ್.ಗೌಡ ಹಂಸಲೇಖ ರಾಮಚಂದ್ರ
೧೩೯ 2005 ವಿಷ್ಣುಸೇನಾ ಶ್ರೀ ಹೃದಯೇಶ್ವರಿ ಫಿಲಂಸ್ ಬಿ.ನಾಗಣ್ಣ ಎಂ.ಗೋವಿಂದ್ ದೇವ ರಮೇಶ್ ಬಾಬು
೧೪೦ 2006 ಶ್ರೀ ಶ್ರೀ ಚೌಡೇಶ್ವರಿ ಸಿನಿ ಕ್ರಿಯೇಷನ್ಸ್ ಪ್ರಕಾಶ್ ಕೆ.ಎಸ್.ದುಶ್ಯಂತ್, ಕೆ.ಎಸ್.ಸಂತೋಷಕುಮಾರ್ ವಾಲಿಸ ಸಂದೀಪ್ ಕೃಷ್ಣಕುಮಾರ್
೧೪೧ 2006 ಉಪ್ಪಿದಾದಾ ಎಂ.ಬಿ.ಬಿ.ಎಸ್ ಜೆಮಿನಿ ಫಿಲಂ ಸರ್ಕ್ಯೂಟ್ ಡಿ.ರಾಜೇಂದ್ರ ಬಾಬು ಕೆ.ಭೂಪಯ್ಯ ಆರ್.ಪಿ.ಪಟ್ನಾಯಕ್ ಹೆಚ್.ಎಮ್.ರಾಮಚಂದ್ರ
೧೪೨ 2006 ರವಿಶಾಸ್ತ್ರಿ ಸಂದೇಶ್ ಕಂಬೈನ್ಸ್ ಎಂ.ಎಸ್.ರಾಜಶೇಖರ್ ಸಂದೇಶ್ ನಾಗರಾಜ್ ರಾಜೇಶ್ ರಾಮನಾಥ್ ಸುಂದರನಾಥ್ ಸುವರ್ಣ

ಹಿಂದಿ ಚಿತ್ರಗಳು

[ಬದಲಾಯಿಸಿ]
  • ಅಂಕುರ (1974)
  • ನಿಶಾಂತ (1975)
  • ಭೂಮಿಕಾ (1977)
  • ಮಂಥನ್ (1977)
  • ಕೊಂಡುರಾ (1978)
  • ಕಲಿಯುಗ್ (1980)
  • ಮಂಗಲಸೂತ್ರ (1981)
  • ಗೆಹ್ರಾಯಿ (1982)
  • ಸೂಖಾ/ಬರ (1983)
  • ರಾತ್ (1990)
  • ಯುವಾ (2002)

ಧಾರಾವಾಹಿಗಳು

[ಬದಲಾಯಿಸಿ]

ಪ್ರಶಸ್ತಿ - ಪುರಸ್ಕಾರ

[ಬದಲಾಯಿಸಿ]

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

  • ಅತ್ಯುತ್ತಮ ನಟ - ಮಿಂಚಿನ ಓಟ (1979-80)
  • ಅತ್ಯುತ್ತಮ ನಟ - ಹೊಸ ನೀರು (1985-86)
  • ಅತ್ಯುತ್ತಮ ನಟ - ಅವಸ್ಥೆ (1987-88)
  • ಅತ್ಯುತ್ತಮ ನಟ - ಗಂಗವ್ವ ಗಂಗಾಮಾಯಿ (1994-95)
  • ಎರಡನೆಯ ಅತ್ಯುತ್ತಮ ಚಲನಚಿತ್ರ - ಮಿಂಚಿನ ಓಟ (1979-80) [ಶಂಕರ ನಾಗ್ ಜೊತೆ]
  • ವಿಷ್ಣುವರ್ಧನ ಪ್ರಶಸ್ತಿ (2010)

ಫಿಲಂಫೇರ್ ಅವಾರ್ಡ ಕನ್ನಡ

  • ಅತ್ಯುತ್ತಮ ನಟ - ನಾ ನಿನ್ನ ಬಿಡಲಾರೆ (1979)
  • ಅತ್ಯುತ್ತಮ ನಟ - ಬರ (1982)
  • ಅತ್ಯುತ್ತಮ ನಟ - ಹೆಂಡ್ತಿಹೇಳ್ಬೇಡಿ (1989)
  • ಅತ್ಯುತ್ತಮ ನಟ - ಉದ್ಭವ (1990)
  • ಅತ್ಯುತ್ತಮ ನಟ - ಗೌರಿ ಗಣೇಶ (1991)
  • ಅತ್ಯುತ್ತಮ ನಟ - ಗೋದಿ ಬಣ್ಣ ಸಾಧಾರಣ ಮೈಕಟ್ಟು (2016)
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ - "ನನ್ನ ತಮ್ಮ ಶಂಕರ"
  • ರಾಜ್ಯೋತ್ಸವ ಪ್ರಶಸ್ತಿ (2007)

ಉಲ್ಲೇಖ

[ಬದಲಾಯಿಸಿ]
  1. http://www.frontline.in/arts-and-culture/cinema/films-were-bolder-in-the-past/article5184996.ece
  2. http://kannada.filmibeat.com/celebs/ananth-nag/biography.html
  3. http://timesofindia.indiatimes.com/city/bangalore/About-real-life-and-reel-lives/articleshow/6765949.cms



{{bottomLinkPreText}} {{bottomLinkText}}
ಅನಂತ್ ನಾಗ್
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?