For faster navigation, this Iframe is preloading the Wikiwand page for ಅಗಸ್ಟ ಕಾಂಟ್.

ಅಗಸ್ಟ ಕಾಂಟ್

ಅಗಸ್ಟ ಕಾಂಟ್
Auguste Comte by Tony Touillon.
ಜನನ(೧೭೯೮-೦೧-೧೯)೧೯ ಜನವರಿ ೧೭೯೮
Montpellier, France
ಮರಣ5 September 1857(1857-09-05) (aged 59)
Paris, France
ರಾಷ್ಟ್ರೀಯತೆFrench
ಗಮನಾರ್ಹ ಚಿಂತನೆಗಳುPositivism, law of three stages, encyclopedic law, altruism
ಪ್ರಭಾವಕ್ಕೋಳಗಾಗು
  • Bacon, Bichat, Condorcet, Descartes, Saint-Simon
ಪ್ರಭಾವ ಬೀರು
  • Émile Littré, Karl Marx, John Stuart Mill, Friedrich Nietzsche, Herbert Spencer, Émile Durkheim, Charles Maurras,[] Harriet Martineau, Pierre Laffitte

ಅಗಸ್ಟ ಕಾಂಟ್ (Auguste Comte) (19 ಜನವರಿ 1798 – 5 ಸೆಪ್ಟೆಂಬರ್ 1857), ಹೆಸರಾಂತ ಸಮಾಜಶಾಸ್ತ್ರಜ್ಞ.

ಜನನ ಮತ್ತು ಬಾಲ್ಯ

[ಬದಲಾಯಿಸಿ]

1798ರಲ್ಲಿ ಫ್ರಾನ್ಸ್ ದೇಶದ ಮಾಂಟ್ ಪೆಲಿಯರ್ ಎಂಬ ಸ್ಥಳದಲ್ಲಿ ಜನಿಸಿದ. ಇವನ ತಂದೆ-ತಾಯಿ ರೋಮನ್ ಕೆಥೊಲಿಕ್ ಧರ್ಮಕ್ಕೆ ಸೇರಿದವರು. ಚಿಕ್ಕವಯಸ್ಸಿನಿಂದಲೂ ಈತ ಮೇಧಾವಿ, ವಾದಚತುರ, ಪ್ರತಿಭಾವಂತ, ಚುರುಕು ಬುದ್ಧಿಯವ, ಜ್ಞಾನಾರ್ಜನೆಯಲ್ಲಿಯೂ, ಓದಿದ್ದನ್ನು ಗ್ರಹಿಸುವುದರಲ್ಲಿಯೂ, ಇತರರಿಗೆ ಮೇಲ್ಪಂಕ್ತಿಯಾಗಿದ್ದ. ಹದಿನಾರನೆಯ ವಯಸ್ಸಿನಲ್ಲಿಯೇ ಗಣಿತಶಾಸ್ತ್ರವನ್ನು ಅಧ್ಯಯನ ಮಾಡುವುದರಲ್ಲಿ ಹೆಚ್ಚಿನ ಕಾಲವನ್ನು ಉಪಯೋಗಿಸತೊಡಗಿದ. ಬಾಲ್ಯದಲ್ಲಿಯೇ ತನ್ನ ಉಪಾಧ್ಯಾಯನೊಬ್ಬನ ಜೊತೆಯಲ್ಲಿ ವಾದ ಮಾಡಿ ಗೆದ್ದ. ನೆಪೋಲಿಯನ್ನನಂಥ ಪರಾಕ್ರಮಿಯನ್ನೂ ಈತ ಟೀಕಿಸದೆ ಬಿಡಲಿಲ್ಲ. ಸ್ವಮತೀಯರಲ್ಲಿ ಇವನಿಗೆ ಅಷ್ಟೇನೂ ಗೌರವವಿರಲಿಲ್ಲ. ಆಗಷ್ಟ್ ಕಾಮ್ಟೆ ತನ್ನ 19ನೆಯ ವಯಸ್ಸಿನಲ್ಲಿಯೇ ಸೇಂಟ್ ಸೈಮನ್ ಎಂಬ ಸಮಾಜ ಸ್ವಾಮ್ಯವಾದಿಯ ಪರಿಚಯವಾಗಿ ಮನಸ್ಸಿನ ಪರಿವರ್ತನೆಯಾಯಿತು. ಅನಂತರ ಆತ ಸಮಾಜವಿಜ್ಞಾನ ಮತ್ತು ಸಾಮಾಜಿಕ ಸಂಘಗಳ ಉತ್ಕೃಷ್ಟ ರೀತಿಯ ಅಧ್ಯಯನವನ್ನು ನಡೆಸಿದ.

ಕಾಂಟ್ 1822ರಲ್ಲಿ ಎ ಪ್ರಾಸ್ಪೆಕ್ಟಸ್ ಆಫ್ ದಿ ಸೈಂಟಿಫಿಕ್ ವರ್ಕ್ಸ ರಿಕ್ವೈರ್ಡ್ ಫಾರ್ ದಿ ರಿ ಆರ್ಗನೈಸೇಷನ್ ಆಫ್ ದಿ ಸೊಸೈಟಿ ಎಂಬ ಗ್ರಂಥವನ್ನು ಪ್ರಕಟಿಸಿದ. ಈ ಪ್ರಕಟಣೆಯಿಂದ ಕಾಂಟನ ಜೀವನದ ಮೇಲೆ ಮಹತ್ಪರಿಣಾಮವಾಯಿತು. ಅಲ್ಲಿಂದಾಚೆ ದೀರ್ಘವಾಗಿ ಆಲೋಚನೆ ಮಾಡಿ ವಿಷಯಗ್ರಹಣ ಮಾಡಲು ಆತ ಪ್ರಾರಂಭಿಸಿದ. ಈ ಮಧ್ಯೆ ಮದುವೆ ಮಾಡಿಕೊಂಡ. ತನ್ನ ಪುಸ್ತಕದ ಪ್ರಕಟಣೆಗೆ ಯಥಾಶಕ್ತಿ ದುಡಿದಿದ್ದರಿಂದಲೂ ಸಂಸಾರದಲ್ಲಿ ಹೆಚ್ಚಿನ ಹೊಂದಾಣಿಕೆ ಇಲ್ಲದ್ದರಿಂದಲೂ ಅವನ ಮನೋರೋಗ ಪ್ರಬಲವಾಯಿತು. ಅದೇ ಕಾಲದಲ್ಲಿ ಸಾರ್ವಜನಿಕರಿಗಾಗಿ ಪ್ರತಿಮಾನವನೂ ಸತತವೂ ದುಡಿಯಬೇಕೆಂಬ ಧ್ಯೇಯವನ್ನೊಳಗೊಂಡ ಹಲವಾರು ಭಾಷಣಗಳನ್ನು ಮಾಡಿದ. ಈತ ತನ್ನ ಪುಸ್ತಕಗಳಿಂದ ಬರುತ್ತಿದ್ದ ಸಂಭಾವನೆಯನ್ನು ಸ್ವೀಕರಿಸುತ್ತಿರಲಿಲ್ಲವಾಗಿ ಕೊನೆಗಾಲದವರೆಗೂ ಬಡವನಾಗಿಯೇ ಇರಬೇಕಾಯಿತು. ಸನ್ಮಿತ್ರರು ಅವನಿಗೆ ಆಗಾಗ ಹಣವನ್ನು ಕೊಟ್ಟು ಅವನ ಜೀವನಕ್ಕೆ ನೆರವಾಗುತ್ತಿದ್ದರು. ಕಾಂಟನ ಜ್ಞಾಪಕಶಕ್ತಿ ಆತ ಬರೆದ ಎಲ್ಲ ಗ್ರಂಥಗಳಲ್ಲಿಯೂ ವಿಷಯಗಳನ್ನು ಶಾಸ್ತ್ರೋಕ್ತವಾಗಿ ಚಿತ್ರಿಸಲು ಅನುಕೂಲವಾಯಿತು. ಇದರಿಂದಲೇ ಆತ ಮಹಾಜ್ಞಾನಿಯಾಗಲು ಸಾಧ್ಯವಾಯಿತೆಂದು ಅನೇಕ ತಜ್ಞರ ಅಭಿಪ್ರಾಯ. ಪಾಸಿಟಿವ್ ಫಿಲಾಸಫಿ (ಲೋಕಸಿದ್ಧವಾದ, ಪ್ರತ್ಯಕ್ಷ ಪ್ರಮಾಣವಾದ) ಮತ್ತು ಪಾಸಿಟಿವ್ ಪಾಲಿಟಿ (ಲೋಕಸಿದ್ಧ ಆಡಳಿತವಿಧಾನ) ಎಂಬ ಗ್ರಂಥಗಳನ್ನು ಬರೆದು ಕಾಂಟ್ ಜಗತ್ಪ್ರಸಿದ್ಧ ನಾದ. 1830 - 42ರವರೆಗೆ ಪಾಸಿಟಿವ್ ಫಿಲಾಸಫಿಯ ಆರು ಸಂಕ್ಷಿಪ್ತ ಸಂಪುಟಗಳನ್ನು ಪ್ರಕಟಿಸಿದ. ಹೀಗೆಯೇ ಪಾಸಿಟಿವ್ ಪಾಲಿಟಿಯ ನಾಲ್ಕು ಸಂಕ್ಷಿಪ್ತ ಸಂಪುಟಗಳನ್ನು 1851 - 54ರೊಳಗೆ ಪ್ರಕಟಿಸಿದ. ಕಾಂಟನ ಮೇಧಾಶಕ್ತಿಯನ್ನು ಜಾನ್ ಸ್ಟುಅರ್ಟಮಿಲ್ ಮಿಗಿಲಾಗಿ ಕೊಂಡಾಡಿ, ಪ್ರಪಂಚದ ಮೇಧಾವಿಗಳಲ್ಲಿ ಅಗ್ರಗಣ್ಯನೆಂದು ಸಾರಿದ್ದಾನೆ. ಜಾರ್ಜ್ ಹೆನ್ರಿ ಲೂಯಿಸ್ ಎಂಬ ವಿದ್ವಾಂಸ ಆಧುನಿಕ ಸಮಾಜದ ಮಾರ್ಗದರ್ಶಕನೆಂದು ಹೇಳಿದ್ದಾನೆ. ಜಾನ್ಮಾರ್ಲೆ ಎಂಬ ಇಂಗ್ಲೆಂಡ್ ದೇಶದ ರಾಜಕಾರಣಿ, ಕಾಂಟನಂಥ ಮೇಧಾವಿಯನ್ನು ಸರಿದೂಗುವ ಸಮಾಜಶಾಸ್ತ್ರಜ್ಞನೇ ಇಲ್ಲವೆಂದು ಅಭಿಪ್ರಾಯ ಪಟ್ಟಿದ್ದಾನೆ. ಮಾನವ ಬಹುದೇವತಾರಾಧನೆಯನ್ನುಳಿದು ಕ್ರಮೇಣ ಹೇಗೆ ಏಕದೇವೋಪಾಸಕನಾದ ನೆಂಬುದನ್ನು ತನ್ನ ಗ್ರಂಥಗಳಲ್ಲಿ ಕಾಂಟ್ ವಿವರಿಸಿದ್ದಾನೆ. ಕಾಲಕ್ರಮೇಣ ಮನುಷ್ಯನ ಬುದ್ಧಿಶಕ್ತಿ ಚುರುಕುಗೊಂಡು ಅನೇಕ ದೇವತಾರಾಧನೆ ಸುವ್ಯವಸ್ಥಿತ ಮಾರ್ಗವಲ್ಲವೆಂದು ಮನುಷ್ಯ ಮನಗಂಡನೆಂದೂ ಅನಂತರ ಏಕದೇವತಾವಾದವನ್ನು ಅವಲಂಬಿಸಿದನೆಂದೂ ಪ್ರತಿಪಾದಿಸಿದ್ದಾನೆ. ಆಮೇಲೆ ದೇವರು ಮನಸ್ಸಿನ ಹಿಂದಿರುವ ಒಂದು ಶಕ್ತಿಯೆಂದು ದೃಢಪಡಿಸಿ ವಾಸ್ತವಾಂಶಗಳನ್ನೂ ಗೋಚರಸಾಧ್ಯ ವಿಷಯಗಳನ್ನೂ ಮಾತ್ರ ಅಂಗೀಕರಿಸುವ ಮಾನವೋತ್ತಮತಾವಾದವನ್ನು ಮಂಡಿಸಿದ್ದಾನೆ.

ಕಾಂಪ್ಟ್ ನ ಕೊಡುಗೆಗಳು :

1.ಅಗಸ್ಟ್ ಕಾಂಟ್ ತಮ್ಮ" ಪಾಸಿಟಿವ್ ಫಿಲಾಸಫಿ" ಎಂಬ ಕೃತಿಯ ಮೂಲಕ "ಸೋಶಿಯಾಲಜಿ "ಎಂಬ ಪದವನ್ನು 1839ರಲ್ಲಿ ಪರಿಚಯಿಸಿದರು.

2. ಪ್ರಾಕೃತಿಕ ವಿಜ್ಞಾನಗಳು ಭೌತಿಕ ಜಗತ್ತಿನ ಸೂತ್ರ ವಿವರಿಸುವಂತೆ ಸಮಾಜ ವಿಜ್ಞಾನವು ಸಾಮಾಜಿಕ ಜಗತ್ತಿನ ಸೂತ್ರಗಳನ್ನು ವಿವರಿಸಿ ಬೇಕೆಂದು ಅವರ ಇಚ್ಛೆಯಾಗಿತ್ತು .

3. ಸಮಾಜದ ಅಧ್ಯಯನದಲ್ಲಿ ವಸ್ತುನಿಷ್ಠವಾದ ವೈಜ್ಞಾನಿಕ ವಿಧಾನದ ಅವಶ್ಯಕತೆಗೆ ಕಾಂಟ್ ರವರು ಒತ್ತನ್ನು ನೀಡಿದರು.

4. ಸಮಾಜವನ್ನು ಉತ್ತಮಪಡಿಸುವುದಕ್ಕೆ ಸಮಾಜದ ತತ್ವಧಾರಿತ ವಿಜ್ಞಾನ ಹಾಗೂ ನಡಾವಳಿಯ ಕ್ರಮಬದ್ಧವಾದ ಸಂಶೋಧನೆಯ ಅವಶ್ಯಕತೆ ಇದೆ ಎಂಬುದು ಅವರ ನಂಬಿಕೆ ಯಾಗಿತ್ತು.

5. ಅಗಸ್ಟ್ ಕಾಮ್ಟ್ ಸಮಾಜಶಾಸ್ತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು ಅವುಗಳು ಯಾವುದೆಂದರೆ,(ಅ). ಸಾಮಾಜಿಕ ಸ್ಥಿತಿ ಶಾಸ್ತ್ರ , (ಆ) ಸಾಮಾಜಿಕ ಚಲನ ಶಾಸ್ತ್ರ. ಕುಟುಂಬ ,ಅರ್ಥವ್ಯವಸ್ಥೆ, ಧರ್ಮ, ಇನ್ನೂ ಮುಂತಾದ ಪ್ರಮುಖ ಸಂಸ್ಥೆಗಳ ಅಧ್ಯಯನಕ್ಕೆ"ಸಾಮಾಜಿಕ ಸ್ಥಿತಿ ಶಾಸ್ತ್ರ" ಸಂಬಂಧಿಸಿದ್ದರೆ, ಸಾಮಾಜಿಕ ಬದಲಾವಣೆ ಹಾಗೂ ಸಾಮಾಜಿಕ ಪ್ರಗತಿಗೆ "ಸಾಮಾಜಿಕ ಚಲನ ಶಾಸ್ತ್ರ" ಸಂಬಂಧಿಸಿದೆ.



ಕೊಡುಗೆಗಳು

ಕೊಡುಗೆ

[ಬದಲಾಯಿಸಿ]

ಬಾಹ್ಯ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Sutton, Michael (1982). Nationalism, Positivism, and Catholicism. The Politics of Charles Maurras and French Catholics 1890–1914. Cambridge: Cambridge University Press. ISBN 0521228689. esp. Chapters 1 and 2

ಸಂಪರ್ಕಗಳು

[ಬದಲಾಯಿಸಿ]
{{bottomLinkPreText}} {{bottomLinkText}}
ಅಗಸ್ಟ ಕಾಂಟ್
Listen to this article

This browser is not supported by Wikiwand :(
Wikiwand requires a browser with modern capabilities in order to provide you with the best reading experience.
Please download and use one of the following browsers:

This article was just edited, click to reload
This article has been deleted on Wikipedia (Why?)

Back to homepage

Please click Add in the dialog above
Please click Allow in the top-left corner,
then click Install Now in the dialog
Please click Open in the download dialog,
then click Install
Please click the "Downloads" icon in the Safari toolbar, open the first download in the list,
then click Install
{{::$root.activation.text}}

Install Wikiwand

Install on Chrome Install on Firefox
Don't forget to rate us

Tell your friends about Wikiwand!

Gmail Facebook Twitter Link

Enjoying Wikiwand?

Tell your friends and spread the love:
Share on Gmail Share on Facebook Share on Twitter Share on Buffer

Our magic isn't perfect

You can help our automatic cover photo selection by reporting an unsuitable photo.

This photo is visually disturbing This photo is not a good choice

Thank you for helping!


Your input will affect cover photo selection, along with input from other users.

X

Get ready for Wikiwand 2.0 🎉! the new version arrives on September 1st! Don't want to wait?